Friday, September 16, 2011

ಶಿರಡಿ ಸಾಯಿಬಾಬಾರವರ 93ನೇ  ಮಹಾಸಮಾಧಿ  ಉತ್ಸವ ಮತ್ತು  ಸಾಯಿಅಮೃತಧಾರಾ.ಕಾಂ ನ 2ನೇ ವಾರ್ಷಿಕೋತ್ಸವದ ಆಚರಣೆ - ಕೃಪೆ: ಸಾಯಿಅಮೃತಧಾರಾ.ಕಾಂ 

ಶಿರಡಿ ಸಾಯಿಬಾಬಾರವರ ಜೀವನ ಮತ್ತು ಉಪದೇಶಗಳನ್ನು ಪ್ರಪಂಚಾದಾದ್ಯಂತ ನೆಲೆಸಿರುವ ಕೋಟ್ಯಾಂತರ ಸಾಯಿಭಕ್ತರಿಗೆ ತಲುಪಿಸುವ ಉದ್ದೇಶದಿಂದ ಪ್ರಾರಂಭಿಸಲಾಗಿರುವ ಅಂತರ್ಜಾಲ ತಾಣವಾದ ಸಾಯಿಅಮೃತಧಾರಾ.ಕಾಂ ಬೆಂಗಳೂರಿನ ಜಯನಗರದಲ್ಲಿರುವ ಶ್ರೀ ಶಿರಡಿ ಸಾಯಿ  ಧನ್ವಂತರಿ ಧ್ಯಾನ ಮಂದಿರದ ಸಹಯೋಗದೊಂದಿಗೆ ಮುಂದಿನ ತಿಂಗಳ 6ನೇ ಅಕ್ಟೋಬರ್ 2011, ಗುರುವಾರದಂದು ಶಿರಡಿ ಸಾಯಿಬಾಬಾರವರ 93ನೇ ಮಹಾಸಮಾಧಿ ಉತ್ಸವ ಮತ್ತು ಅಂತರ್ಜಾಲ ತಾಣದ 2ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. 

ಕಾರ್ಯಕ್ರಮದ ವಿವರ ಈ ಕೆಳಕಂಡಂತೆ ಇದೆ:

ಬೆಳಿಗ್ಗೆ  6:15 ಘಂಟೆ - ಕಾಕಡಾ ಆರತಿ.
ಬೆಳಿಗ್ಗೆ 8:00 ಘಂಟೆಯಿಂದ 8:55 ರವರೆಗೆ  - ಸಾಯಿಬಾಬಾರವರಿಗೆ ರುದ್ರಾಭಿಷೇಕ.
ಬೆಳಿಗ್ಗೆ 9:05 ಕ್ಕೆ - ಲಘು ಆರತಿ.
ಬೆಳಿಗ್ಗೆ 9:30 ಕ್ಕೆ - ಶ್ರೀ ಸಾಯಿ ಸಹಸ್ರನಾಮ ಯಜ್ಞ
ಮಧ್ಯಾನ್ಹ 12:00 ಘಂಟೆಗೆ - ಪೂರ್ಣಾಹುತಿ.
ಮಧ್ಯಾನ್ಹ 12:15 ಕ್ಕೆ - ಮಹಾಮಂಗಳಾರತಿ ಮತ್ತು ನಂತರ ಮಹಾಪ್ರಸಾದ ವಿನಿಯೋಗ.
ಸಂಜೆ 5:55 ಕ್ಕೆ - ಧೂಪಾರತಿ.
ಸಂಜೆ 6:15 ಕ್ಕೆ - ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ.
ಸಂಜೆ 6:30 ರಿಂದ ರಾತ್ರಿ 8:00 ಘಂಟೆಯವರೆಗೆ - ಶ್ರೀ.ಗಂಗಾಧರ ತಿಲಕ್, ಶ್ರೀ. ಕಾರ್ತಿಕ್ ಮತ್ತು  ಶ್ರೀ.ಶಿವಚರಣ್  ರವರಿಂದ  ಸಾಯಿ ಭಜನೆಯ ಕಾರ್ಯಕ್ರಮ. ಭಜನೆಯ ನಂತರ  ಮಹಾಮಂಗಳಾರತಿ  ಮತ್ತು  ಪ್ರಸಾದ ವಿನಿಯೋಗ.

ಸ್ಥಳ:

ಶ್ರೀ ಶಿರಡಿ ಸಾಯಿ ಧನ್ವಂತರಿ ಧ್ಯಾನ ಮಂದಿರ 
ಶ್ರೀ ಸಾಯಿ ಅಮೃತಂ 
3ನೇ ಮಹಡಿ, ಕೆಫೆ ಕಾಫಿ ಡೇ ಮೇಲುಗಡೆ, 
1481, ಸೌತ್ ಎಂಡ್  "ಬಿ" ಅಡ್ಡರಸ್ತೆ, 
28ನೇ ಮುಖ್ಯರಸ್ತೆ, ರಾಗಿಗುಡ್ಡ ದೇವಸ್ಥಾನದ ಹತ್ತಿರ, 
9ನೇ ಬ್ಲಾಕ್, ಜಯನಗರ, 
ಬೆಂಗಳೂರು-560 069. 
ದೂರವಾಣಿ ಸಂಖ್ಯೆ: 93412 64696 




ಸಾಯಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಮೇಲಿನ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಾಯಿಬಾಬಾರವರ ಕೃಪೆಗೆ ಪಾತ್ರರಾಗಬೇಕೆಂದು ಈ ಮುಖಾಂತರ ಧ್ಯಾನಮಂದಿರದ ವ್ಯವಸ್ಥಾಪಕರು ಮನವಿ ಮಾಡಿಕೊಳ್ಳುತ್ತಾರೆ. 


ಕನ್ನಡ ಅನುವಾದ: ಶ್ರೀಕಂಠ ಶರ್ಮ 

No comments:

Post a Comment