Friday, September 2, 2011

ಬೆಂಗಳೂರಿನ ಶಿರಡಿ ಸಾಯಿಬಾಬಾ ಮಂದಿರ - ಶ್ರೀ ಕ್ಷಿಪ್ರ ಫಲ ಪ್ರಸಾದ ಮಹಾಗಣಪತಿ ಮತ್ತು ಶ್ರೀ.ಶಿರಡಿ ಸಾಯಿಬಾಬಾ ಮಂದಿರ, ಶ್ರೀ ಸತ್ಯಸಾಯಿಬಾಬಾ ರೆಸಿಡೆನ್ಶಿಯಲ್ ವೆಲ್ಫೇರ್ ಅಸೋಸಿಯೇಶನ್ (ನೋಂದಣಿ), 2ನೇ ಅಡ್ಡರಸ್ತೆ, ಶ್ರೀ.ಸತ್ಯಸಾಯಿಬಾಬಾ ಲೇಔಟ್, ಕೋಡಿಗೆಹಳ್ಳಿ ಮುಖ್ಯರಸ್ತೆ, ಕೆ.ಆರ್.ಪುರಂ, ಬೆಂಗಳೂರು-560 036, ಕರ್ನಾಟಕ - ಕೃಪೆ: ಸಾಯಿಅಮೃತಧಾರಾ.ಕಾಂ 

ಈ ದೇವಾಲಯವು ಬೆಂಗಳೂರಿನ ಕೋಡಿಗೆಹಳ್ಳಿ ಮುಖ್ಯರಸ್ತೆಯಲ್ಲಿರುವ ಕೆ.ಆರ್.ಪುರಂ ನ ಶ್ರೀ.ಸತ್ಯಸಾಯಿಬಾಬಾ ಲೇಔಟ್ ನಲ್ಲಿ ಇರುತ್ತದೆ.
 
ಈ ದೇವಾಲಯದ ಭೂಮಿ ಪೂಜೆಯನ್ನು  10ನೇ ಅಕ್ಟೋಬರ್  2010 ರಂದು ನೆರವೇರಿಸಲಾಯಿತು. 

ಗಣೇಶ, ಸುಬ್ರಮಣ್ಯ, ಹನುಮಂತ ಮತ್ತು ನವಗ್ರಹಗಳನ್ನು ಹೊಂದಿರುವ ಮೊದಲನೇ ದೇವಸ್ಥಾನವನ್ನು 21ನೇ ಮಾರ್ಚ್ 2011 ರಂದು ಬೆಂಗಳೂರಿನ ವೇದ ಬ್ರಹ್ಮ ಶ್ರೀ.ಶಂಕರನಾರಾಯಣ ರವರು ಉದ್ಘಾಟಿಸಿರುತ್ತಾರೆ. 
 
ನಂತರ ನಿರ್ಮಿಸಲಾದ ಶಿರಡಿ  ಸಾಯಿಬಾಬಾರವರ ದೇವಾಲಯವನ್ನು 12ನೇ ಜೂನ್ 2011 ರಂದು ಬೆಂಗಳೂರಿನ ವೇದ ಬ್ರಹ್ಮ ಶ್ರೀ.ಶ್ರೀಧರ ಶಾಸ್ತ್ರಿಯವರು ಉದ್ಘಾಟಿಸಿರುತ್ತಾರೆ. 

ದೇವಾಲಯದ ನಿರ್ಮಾಣಕ್ಕೆ ಬೇಕಾದ ಭೂಮಿಯನ್ನು ದೇವಾಲಯದ ಟ್ರಸ್ಟಿಗಳಾದ ಶ್ರೀ.ಟಿ.ಗೋಪಾಲ ರೆಡ್ಡಿಯವರು ದಾನವಾಗಿ ನೀಡಿರುತ್ತಾರೆ. ಶ್ರೀ.ಟಿ.ಗೋಪಾಲ ರೆಡ್ಡಿಯವರು  ಈ ಮಂದಿರದ ಸಂಸ್ಥಾಪಕ ಅಧ್ಯಕ್ಷರಾಗಿರುತ್ತಾರೆ. ಶ್ರೀ.ಅರವಿಂದ್ ಜಿ.ರೆಡ್ಡಿಯವರು ದೇವಾಲಯದ ದಿನನಿತ್ಯದ ಆಗುಹೋಗುಗಳನ್ನು ಮತ್ತು ಅಭಿವೃದ್ದಿ ಕಾರ್ಯಗಳನ್ನು ಬಹಳ ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ.

ಮೊದಲನೆಯ ದೇವಾಲಯದಲ್ಲಿ ಕಪ್ಪು ಶಿಲೆಯ ಗಣಪತಿ, ಸುಬ್ರಮಣ್ಯ ದೇವರುಗಳನ್ನು ಪ್ರತಿಷ್ಟಾಪಿಸಲಾಗಿದೆ. ದೇವಾಲಯದ ಹೊರಗಡೆಯಲ್ಲಿ ಬೃಹತ್ ಗರುಡ ಗಂಭ ಮತ್ತು ಕಪ್ಪು ಶಿಲೆಯ ಇಲಿಯ ವಿಗ್ರಹವನ್ನು ಸ್ಥಾಪಿಸಲಾಗಿದೆ.
 
ಮೊದಲನೆಯ ಮಂದಿರದ ಪಕ್ಕದಲ್ಲಿ ನಿರ್ಮಿಸಲಾಗಿರುವ ಎರಡನೆಯ ಮಂದಿರದಲ್ಲಿ  4 ಅಡಿ 6 ಅಂಗುಲ ಎತ್ತರದ ಅಮೃತ ಶಿಲೆಯ ಶಿರಡಿ ಸಾಯಿಬಾಬಾರವರ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ. ಸಾಯಿಬಾಬಾರವರ ವಿಗ್ರಹದ ಎದುರುಗಡೆ ಇರುವಂತೆ ಅಮೃತ ಶಿಲೆಯ ಪಾದುಕೆಗಳನ್ನು ಸ್ಥಾಪಿಸಲಾಗಿದೆ.  ಅಲ್ಲದೆ, ಇನ್ನೊಂದು ಪುಟ್ಟ ಅಮೃತ ಶಿಲೆಯ ವಿಗ್ರಹವನ್ನು ದೊಡ್ಡ ವಿಗ್ರಹದ ಕೆಳಗಡೆ ಇರಿಸಲಾಗಿದೆ. ವಿಗ್ರಹದ ಕೆಳಗಡೆ ನಂದಾದೀಪವನ್ನು ಇರಿಸಲಾಗಿದೆ.
 
ಸಾಯಿಬಾಬಾ ಮಂದಿರದ ಎದುರುಗಡೆ ನಿರ್ಮಿಸಿರುವ ಪ್ರತ್ಯೇಕ ದೇವಾಲಯದಲ್ಲಿ ಕಪ್ಪು ಶಿಲೆಯ ನವಗ್ರಹ ದೇವರುಗಳನ್ನು ಪ್ರತಿಷ್ಟಾಪಿಸಲಾಗಿದೆ. 
 











ದೇವಾಲಯದ ಕಾರ್ಯಚಟುವಟಿಕೆಗಳು: 

ದಿನನಿತ್ಯದ ಕಾರ್ಯಕ್ರಮಗಳು



ಆರತಿಯ ಸಮಯ:
ಕಾಕಡಾ ಆರತಿ : ಬೆಳಿಗ್ಗೆ 7:30 ಕ್ಕೆ 
ಶೇಜಾರತಿ :  ರಾತ್ರಿ 8 ಘಂಟೆಗೆ 
 

ಪ್ರತಿದಿನ ಬೆಳಿಗ್ಗೆ ಸಾಯಿಬಾಬಾರವರ ಅಮೃತ ಶಿಲೆಯ ವಿಗ್ರಹಕ್ಕೆ "ಪಂಚಾಮೃತ ಅಭಿಷೇಕ" ಮಾಡಲಾಗುತ್ತದೆ. ಸೇವಾಶುಲ್ಕ 101/- ರುಪಾಯಿಗಳು. 

ಪ್ರತಿ ಸೋಮವಾರ ಸಾಯಂಕಾಲ 6 ಘಂಟೆಯಿಂದ ವಿಶೇಷ ರುದ್ರಾಭಿಷೇಕವನ್ನು ಮಾಡಲಾಗುತ್ತದೆ. ಸೇವಾಶುಲ್ಕ 5000/- ರುಪಾಯಿಗಳು (ಪೂಜಾ ಸಾಮಗ್ರಿಗಳು ಮತ್ತು ದಿನದ ಮಹಾಪ್ರಸಾದ ಸೇರಿ). 

ಪ್ರತಿ ಶುಕ್ರವಾರ ಸಂಜೆ 5:30 ರಿಂದ ವಿಷ್ಣು ಸಹಸ್ರನಾಮ ಪಾರಾಯಣ ಹಮ್ಮಿಕೊಳ್ಳಲಾಗುತ್ತದೆ. 

ಪ್ರತಿ ತಿಂಗಳ ಹುಣ್ಣಿಮೆಯ ದಿನ ಸಂಜೆ 5:30 ರಿಂದ ಸತ್ಯನಾರಾಯಣ ಪೂಜೆಯನ್ನು ನಡೆಸಲಾಗುತ್ತದೆ. ಸೇವಾ ಶುಲ್ಕ 60/- ರುಪಾಯಿಗಳು.
 
ಪ್ರತಿ  ತಿಂಗಳ ಬಹುಳ ಚತುರ್ಥಿಯಂದು ಸಂಕಷ್ಟ ಗಣಪತಿ ವ್ರತವನ್ನು ಸಂಜೆ 5:30 ರಿಂದ ಆಚರಿಸಲಾಗುತ್ತದೆ.  ಸೇವಾ ಶುಲ್ಕ 60/- ರುಪಾಯಿಗಳು. 
 
ವಿಶೇಷ ಉತ್ಸವದ ದಿನಗಳು: 
ದೇವಾಲಯದ ವಾರ್ಷಿಕೋತ್ಸವ ಪ್ರತಿ ವರ್ಷದ 12ನೇ ಜೂನ್.
ಯುಗಾದಿ.
ಶಿವರಾತ್ರಿ.
ಗುರುಪೂರ್ಣಿಮೆ.
 ಶ್ರೀರಾಮನವಮಿ. 
ವರಮಹಾಲಕ್ಷ್ಮಿ. 
ಗಣೇಶ ಚತುರ್ಥಿ.
ದೀಪಾವಳಿ.
ವಿಜಯದಶಮಿ.
 
ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ: 

ಸ್ಥಳ: 
 
ಅಯ್ಯಪ್ಪ ನಗರ ಬಸ್ ನಿಲ್ದಾಣ,  ಸೀ ಕಾಲೇಜ್ ಹತ್ತಿರ, ಕೋಡಿಗೆಹಳ್ಳಿ ಮುಖ್ಯರಸ್ತೆ.

ವಿಳಾಸ:
ಶ್ರೀ ಕ್ಷಿಪ್ರ ಫಲ ಪ್ರಸಾದ ಮಹಾಗಣಪತಿ ಮತ್ತು ಶ್ರೀ.ಶಿರಡಿ ಸಾಯಿಬಾಬಾ ಮಂದಿರ, 
ಶ್ರೀ ಸತ್ಯಸಾಯಿಬಾಬಾ ರೆಸಿಡೆನ್ಶಿಯಲ್ ವೆಲ್ಫೇರ್ ಅಸೋಸಿಯೇಶನ್ (ನೋಂದಣಿ),
2ನೇ ಅಡ್ಡರಸ್ತೆ, ಶ್ರೀ.ಸತ್ಯಸಾಯಿಬಾಬಾ ಲೇಔಟ್, 
ಕೋಡಿಗೆಹಳ್ಳಿ ಮುಖ್ಯರಸ್ತೆ, ಕೆ.ಆರ್.ಪುರಂ, 
ಬೆಂಗಳೂರು-560 036, ಕರ್ನಾಟಕ.

ಸಂಪರ್ಕಿಸಬೇಕಾದ ವ್ಯಕ್ತಿಗಳು: 
ಶ್ರೀ.ಅರವಿಂದ್ ಜಿ.ರೆಡ್ಡಿ / ಶ್ರೀ.ತುಕಾರಾಂ ಮಾನೆ / ಶ್ರೀ.ಟಿ.ಗೋಪಾಲ ರೆಡ್ಡಿ / ಶ್ರೀ.ಶಂಕರ ನಾರಾಯಣ.

ದೂರವಾಣಿ ಸಂಖ್ಯೆಗಳು: 
 
+ 91 96861 12284 / +91 99006 02909 / +91 94488 27905 / +91 94493 40688
 
ಮಾರ್ಗಸೂಚಿ:
ಸೀ ಕಾಲೇಜಿನ ಹತ್ತಿರ ಇರುವ ಅಯ್ಯಪ್ಪ ನಗರ ಬಸ್ ನಿಲ್ದಾಣದಲ್ಲಿ ಇಳಿಯುವುದು. ಬಸ್ ಸಂಖ್ಯೆಗಳು: 313E, 315E ಮತ್ತು 300K. ದೇವಾಲಯವು ಬಸ್ ನಿಲ್ದಾಣದಿಂದ ಕೇವಲ ಐದು ನಿಮಿಷಗಳ ನಡಿಗೆಯ ಅಂತರದಲ್ಲಿರುತ್ತದೆ.

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment