Wednesday, January 13, 2010

ಸಾಯಿ ಮಹಾಭಕ್ತ  - ದಾಸಗಣು - ಆಧಾರ - ಪೂಜ್ಯ ಶ್ರೀ ನರಸಿಂಹ ಸ್ವಾಮೀಜಿಯವರ ಲೈಫ್ ಆಫ್ ಸಾಯಿಬಾಬಾ



ದಾಸಗಣುರವರು ನಾನಾ ಸಾಹೇಬ್ ಚಂದೊರ್ಕರ್ ರವರ ಸಹಾಯಕರಾಗಿದ್ದರು. ಇವರು ಒಳ್ಳೆಯ ಕವಿಯಾಗಿದ್ದರು ಮತ್ತು ದೈವ ಸಾಕ್ಷಾತ್ಕಾರ ಹಾಗೂ ಸಾಮಾಜಿಕ ಕಳಕಳಿಯಿಂದ ಕೂಡಿದ ಅನೇಕ ಧಾರ್ಮಿಕ ಕವಿತೆಗಳನ್ನು ರಚಿಸಿದರು. ಮೊದಲು ಇವರು ನಾಸ್ತಿಕರಾಗಿದ್ದರು ಮತ್ತು ಸಾಯಿಬಾಬಾರವರನ್ನು ದೇವರೆಂದು ಶಿರಡಿಯ ಜನರು ಕರೆಯುವುದು ಉತ್ಪ್ರೇಕ್ಷೆಯೆಂದು ತಿಳಿದಿದ್ದರು. ಆದರೆ ಸಾಯಿಬಾಬಾರವರನ್ನು ಭೇಟಿ ಮಾಡಿದ ಸಮಯದಲ್ಲಿ ಅವರು ಮಾಡಿದ ಪವಾಡ ಕಂಡು ಅವರ ಮನೋಭಾವ ಸಂಪೂರ್ಣ ಬದಲಾಯಿತು. ಇದನ್ನು ದಾಸಗಣುರವರೆ ಸ್ವತ: ಹೇಳಿದ್ದಾರೆ. ದಾಸಗಣುರವರು ಒಮ್ಮೆ ಸಾಯಿಬಾಬಾರವರಿಗೆ ತಮ್ಮ ಕುಲದೈವವಾದ ಪಂಡರಾಪುರ ಯಾತ್ರೆಗೆ ಹೋಗುವ ಬಯಕೆ ವ್ಯಕ್ತಪಡಿಸಿದರು ಮತ್ತು ಅಲ್ಲಿ ಹರಿಯುವ ಚಂದ್ರಭಾಗಾ ನದಿಯಲ್ಲಿ ಸ್ನಾನ ಮಾಡಿ ಬರಬೇಕೆಂಬ ತಮ್ಮ ಇಚ್ಚೆಯನ್ನು ತಿಳಿಸಿದರು. ಆಗ ಸಾಯಿಬಾಬಾರವರು ಪಂಡರಾಪುರಕ್ಕೆ ಹೋಗುವ ಅವಶ್ಯಕತೆಯೇನು ಇಲ್ಲವೆಂದು, ತಾವೇ ಪಂಡರಾಪುರ ವಿಠಲನ ಅವತಾರವೆಂದು ಮತ್ತು ಗಂಗೆಯು ತಮ್ಮ ಪಾದಗಳ ಬಳಿಯೇ ಇದೆಯೆಂದು ದಾಸಗಣುವಿಗೆ ತಿಳಿಸಿದರು. ದಾಸಗಣು ಸಾಯಿಬಾಬಾರವರಿಗೆ ನಮಸ್ಕರಿಸಲು ಬಗ್ಗಿದಾಗ ಅವರ ಪಾದಗಳಿಂದ ಗಂಗೆಯು ಹರಿಯುತ್ತಿರುವುದನ್ನು ಕಂಡು ಆನಂದಭರಿತರಾಗಿ ಹಾಡತೊಡಗಿದರು.  ಮುಂದೆ ಅನನ್ಯ ಸಾಯಿ ಭಕ್ತರಾಗಿ ತಮ್ಮ ಭಜನೆ ಮತ್ತು ಕೀರ್ತನೆಗಳ ಮೂಲಕ ಊರೂರು ಅಲೆದು ಸಾಯಿಬಾಬಾರವರ ಪ್ರಚಾರವನ್ನು ಮಾಡಿದರು ಮತ್ತು ಸಾಯಿಬಾಬಾರವರ ಕೀರ್ತಿಯನ್ನು ಕೊಂಡಾಡಿದರು. ಸಾಯಿಬಾಬಾ ಪ್ರಚಾರಕರಲ್ಲಿ ದಾಸಗಣು ರವರು ಮೊದಲಿಗರೆಂದು ಹೆಸರು ಪಡೆದಿದ್ದಾರೆ.

No comments:

Post a Comment