Wednesday, January 13, 2010

ಸಾಯಿ ಮಹಾಭಕ್ತ - ಮ್ಹಾಳಸಾಪತಿ - ಆಧಾರ - ಪೂಜ್ಯ ಶ್ರೀ ನರಸಿಂಹ ಸ್ವಾಮೀಜಿಯವರ ಲೈಫ್ ಆಫ್ ಸಾಯಿಬಾಬಾ


ಮ್ಹಾಳಸಾಪತಿ ವೃತ್ತಿಯಲ್ಲಿ ಅಕ್ಕಸಾಲಿಗರಾಗಿದ್ದರು. ಇವರು ಬಹಳ ಬಡತನದಲ್ಲಿದ್ದರು ಹಾಗೂ ಇವರ ಕುಲದೈವವಾದ ಖಂಡೋಬ ದೇವರನ್ನು ನಿಷ್ಠೆಯಿಂದ ಪೂಜಿಸುತ್ತಿದ್ದರು. ಮ್ಹಾಳಸಾಪತಿಯವರು ಖಂಡೋಬ ಮಂದಿರದ ಪೂಜಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದರು. ಸಾಯಿಬಾಬಾರವರು ಮೊದಲ ಬಾರಿ ಕುಶಾಲ್ ಚಂದರ  ಮನೆಯವರ ಮಾಡುವೆ ದಿಬ್ಬಣದ ಜೊತೆಯಲ್ಲಿ ಶಿರಡಿಗೆ ಬಂದು  ಖಂಡೋಬ ದೇವಸ್ಥಾನದ ಬಳಿ ಗಾಡಿಯಿಂದ ಇಳಿಯುತ್ತಿದ್ದಾಗ ಮ್ಹಾಳಸಾಪತಿಯವರು ಸಾಯಿಬಾಬಾರವರನ್ನು "ಆವೋ ಸಾಯಿ" ಎಂದು ಸಂಬೋಧಿಸಿದರು. ಅದೇ ಹೆಸರಿನಿಂದ ಶಿರಡಿಯ ಜನರೆಲ್ಲಾ ಬಾಬಾರವರನ್ನು ಕರೆಯಹತ್ತಿದರು. ನಾಮಾತೀತನಾದ ಸಾಯಿಬಾಬಾರವರಿಗೆ "ಸಾಯಿ" ಎಂದು ಮ್ಹಾಳಸಾಪತಿಯವರು ನಾಮಕರಣ ಮಾಡಿದರು. ಇದರ ಬಗ್ಗೆ ಮ್ಹಾಳಸಾಪತಿಯವರನ್ನು ಶಿರಡಿಯ ಜನರು ಪ್ರಶ್ನಿಸಿದಾಗ ಅವರು ಖಂಡೋಬ ದೇವರು ತನ್ನ ಕಿವಿಯಲ್ಲಿ ಬಂದು ಹಾಗೆ ಹೇಳಿದ ಹಾಗಾಯಿತು. ಆದುದರಿಂದ ನಾನು ಹಾಗೆ ಕರೆದೆ ಎಂದು ನುಡಿದರು. ಮ್ಹಾಳಸಾಪತಿಯವರಿಗೆ ಸಾಯಿಬಾಬಾರವರ ಬಳಿ ಹಗಲು ರಾತ್ರಿ ಇರುವ ಸುವರ್ಣಾವಕಾಶ ಒದಗಿ ಬಂದಿತ್ತು.  ಮ್ಹಾಳಸಾಪತಿಯವರು ಸಾಯಿಬಾಬಾರವರೊಂದಿಗೆ ಮತ್ತು ತಾತ್ಯ ಅವರೊಂದಿಗೆ ರಾತ್ರಿ ವೇಳೆ ಮಸೀದಿಯಲ್ಲಿ ನಿದ್ರಿಸುತ್ತಿದ್ದರು. ಸಾಯಿಬಾಬಾರವರು ಮ್ಹಾಳಸಾಪತಿಯವರನ್ನು ಎಲ್ಲ ರೀತಿಯಲ್ಲೂ ಯಾವುದೇ ತೊಂದರೆ ಬರದಂತೆ ಕಾಪಾಡಿದರು. ಆದರೆ, ಮ್ಹಾಳಸಾಪತಿಯವರು ಕಡು ಬಡವರಾಗಿದ್ದರೂ ಕೂಡ ಸಾಯಿಬಾಬಾರವರು ಅವರಿಗೆ ಹಣವನ್ನು ನೀಡುತ್ತಿರಲಿಲ್ಲ ಮತ್ತು ಹಣವನ್ನು ಕೂಡಿಡಲು ಆಸ್ಪದ ನೀಡಲಿಲ್ಲ. ಆದರೆ ಸಾಯಿಬಾಬಾರವರು ಮ್ಹಾಳಸಾಪತಿಯವರು ಆಧ್ಯಾತ್ಮಿಕವಾಗಿ ಪ್ರಗತಿ ಹೊಂದಲು ಸಹಾಯ ಮಾಡಿದರು.

ಮ್ಹಾಳಸಾಪತಿಯವರ ಕುಟೀರ


ಮ್ಹಾಳಸಾಪತಿಯವರ ಕುಟೀರವು ಚಾವಡಿಯಿಂದ ತಾಜೀಮ್ ಖಾನ್ ರವರ ದರ್ಗಾಗೆ ಹೋಗುವ ಮಾರ್ಗದಲ್ಲಿ ಒಂದು ಸಣ್ಣ ಒಣಿಯಲ್ಲಿದೆ. ದರ್ಗಾ ಆದ ನಂತರ ಎಡಕ್ಕೆ ತಿರುಗಿ ಸ್ವಲ್ಪ ದೂರ ಮುಂದೆ ಹೋದರೆ ಬಲಭಾಗಕ್ಕೆ ಮ್ಹಾಳಸಾಪತಿಯವರ ಕುಟೀರ ಸಿಗುತ್ತದೆ. ಮ್ಹಾಳಸಾಪತಿಯವರು ೧೯೨೨ನೆ ಭಾದ್ರಪದ ಮಾಸದ ೬ ನೇಯ ದಿನವಾದ ಮಂಗಳವಾರ ಸಾಯಿ ಪಾದವನ್ನು ಸೇರಿದರು. ಮ್ಹಾಳಸಾಪತಿಯವರ ಸಮಾಧಿಯು ಅವರ ಮನೆಯೊಳಗೆ ಇದೆ. ಸಾಯಿಬಾಬಾರವರು ಈ ಕೆಳಕಂಡ ವಸ್ತುಗಳನ್ನು ಮ್ಹಾಳಸಾಪತಿಯವರಿಗೆ ನೀಡಿರುತ್ತಾರೆ:

೧. ಬಾಬಾರವರ ಕಫ್ನಿ
೨. ಬಾಬಾರವರ ದಂಡ
೩. ಬಾಬಾರವರ ಉಧಿ
೪. ಮೂರು ಬೆಳ್ಳಿ ನಾಣ್ಯಗಳು
೫. ಒಂದು ಜೊತೆ ಸಾಯಿಬಾಬಾ ಪಾದುಕೆಗಳು

ಮ್ಹಾಳಸಾಪತಿಯವರ ಸಮಾಧಿಯಿರುವುದರಿಂದ ಹಾಗೂ ಬಾಬಾರವರು ನೀಡಿರುವ ವಸ್ತುಗಳಿರುವುದರಿಂದ ಮ್ಹಾಳಸಾಪತಿಯವರ ಮನೆಯು ಒಂದು ಯಾತ್ರಾಸ್ಥಳವಾಗಿ ಮಾರ್ಪಟ್ಟಿದೆ.     ಸಾಯಿಬಾಬಾರವರು  ಮಾರ್ಗಶಿರ ಮಾಸದಲ್ಲಿ ೭೨ ಘಂಟೆಗಳ ಕಾಲ ಸಮಾಧಿ ಹೊಂದಿದಾಗ ಬಾಬಾರವರ ದೇಹವನ್ನು ೩ ದಿನಗಳ ಕಾಲ ಅವರ ಆಜ್ಞೆಯ ಮೇರೆಗೆ ಕಾಯ್ದಿಟ್ಟುಕೊಂಡ ಮ್ಹಾಳಸಾಪತಿಯವರಿಗೆ ಸಾಯಿ ಭಕ್ತರಾದ ನಾವುಗಳೆಲ್ಲ ಎಂದೆಂದೂ ಕೃತಜ್ಞರಾಗಿರಬೇಕು.  ಮ್ಹಾಳಸಾಪತಿಯವರ ವಂಶದವರು ಮೇಲೆ ತಿಳಿಸಿದ ಎಲ್ಲ ಬಾಬಾರವರ ಪವಿತ್ರ ವಸ್ತುಗಳನ್ನು ಜೋಪಾನವಾಗಿ ಕಾಪಾಡಿ ಭಕ್ತರ ದರ್ಶನಕ್ಕೆ ಇಟ್ಟಿರುತ್ತಾರೆ.   

No comments:

Post a Comment