Monday, June 2, 2014

ಪರಮ ಪೂಜ್ಯ ಡಾ.ಚಂದ್ರಭಾನು ಸತ್ಪತಿ ಗುರೂಜಿ - ಕೃಪೆ: ಸಾಯಿಅಮೃತಧಾರಾ.ಕಾಂ



ಪರಮ ಪೂಜ್ಯ ಡಾ.ಚಂದ್ರಭಾನು ಸತ್ಪತಿ ಗುರೂಜಿಯವರು ಅನನ್ಯ ಸಾಯಿ ಭಕ್ತರು ಹಾಗೂ ಪ್ರಪಂಚದಾದ್ಯಂತ ಮನೆಮಾತಾಗಿರುವ ಸಾಯಿ ಬಂಧು. ಪ್ರಸ್ತುತ ಇವರು ಸಾಯಿಬಾಬಾರವರ ಬಗ್ಗೆ ಈಗಾಗಲೇ  ಇರುವ ಆಧ್ಯಾತ್ಮಿಕ ಸಾಹಿತ್ಯ ಭಂಡಾರವನ್ನು ಹೆಚ್ಚು  ಕೆಲಸದಲ್ಲಿ ನಿರತರಾಗಿದ್ದಾರೆ. ಗುರೂಜಿಯವರು ಉತ್ತರಪ್ರದೇಶ ರಾಜ್ಯದಲ್ಲಿ ಬಹಳ ವರ್ಷ ಪೋಲಿಸ್ ಇಲಾಖೆಯಲ್ಲಿ  ಸೇವೆ ಸಲ್ಲಿಸಿದ ನಂತರ ಪೋಲಿಸ್ ಮಹಾನಿರ್ದೇಶಕರಾಗಿ ನಿವೃತ್ತರಾದರು.  ಬಾಲ್ಯದಿಂದಲೇ ಸೃಜನಶೀಲ ಬರಹಗಾರರಾದ ಶ್ರೀ.ಸತ್ಪತಿ ಗುರೂಜಿಯವರು ಹಲವಾರು ಹಾಸ್ಯ ಹಾಗೂ ವಿಡಂಬನಾತ್ಮಕ ಸಾಹಿತ್ಯಗಳನ್ನು  ರಚಿಸಿದ್ದು ಅವರ ಸಮಕಾಲೀನ ಹಾಗೂ ಖ್ಯಾತ ಬರಹಗಾರರಾದ ಶ್ರೀ.ಫತುರಾನಂದ್ ರವರು ಬಹಳವೇ ಪ್ರಶಂಸಿಸಿದ್ದಾರೆ.  ಇವರ ಕಥೆಗಳು ಹಾಗೂ ವಿಡಂಬನಾತ್ಮಕ ಸಾಹಿತ್ಯಗಳು ಪ್ರಸಿದ್ಧ ಒರಿಯಾ ಸಾಹಿತ್ಯ  ಪತ್ರಿಕೆಗಳಾದ ಅಸಂತಕಲಿ ಮತ್ತು ಡಗಾರಾಗಳಲ್ಲಿ ನಿಯಮಿತವಾಗಿ ಪ್ರಕಟವಾಗಿವೆ. ಇವರ ಎರಡು ಹಾಸ್ಯ ಹಾಗೂ ಒಂದು ವಿಡಂಬನಾತ್ಮಕ ಕೃತಿಗಳಾದ "ಹಾಸ್ಯಾಂಕುರ", "ಕಿಚ್ಚಿ ಹಾಸಾ ಹಾಗೂ  "ಕಿಚ್ಚಿತ ಬಿದ್ರೂಪ" ಗಳು 1980ನೇ ಇಸವಿಯಲ್ಲಿ ಪ್ರಕಟಗೊಂಡಿವೆ. ಇವರ ಆಯ್ದ ಸಣ್ಣ ಕಥೆಗಳ ಸಂಕಲನವು  "ಏಕ ದಶಕರ ರಮ್ಯ ರಚನ" ಎಂಬ ಹೆಸರಿನಲ್ಲಿ ಪ್ರಕಟವಾಗಿವೆ. ಅಷ್ಟೇ ಅಲ್ಲದೇ ಇವರ ಅನೇಕ ಬರಹಗಳು ಇಂಗ್ಲೀಷ್  ಹಾಗೂ ಹಿಂದಿ ಭಾಷೆಗಳಲ್ಲಿ ಬರೆದ ಲೇಖನಗಳು ಪ್ರತಿಷ್ಟಿತ ನಿಯತಕಾಲಿಕೆಗಳು ಹಾಗೂ ದಿನಪತ್ರಿಕೆಗಳಲ್ಲಿ ಪ್ರಕಟವಾಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿವೆ.  

ಶ್ರೀ ಸತ್ಪತಿ ಗುರೂಜಿಯವರು 1989ನೇ ಇಸವಿಯಲ್ಲಿ ಸಮರ್ಥ ಸದ್ಗುರು ಸಾಯಿಬಾಬಾರವರ ಭಕ್ತರಾಗಿ ರೂಪುಗೊಂಡ ನಂತರ (ಸಾಯಿಬಾಬಾರವರು 1918ನೇ ಇಸವಿಯಲ್ಲಿ ಸಮಾಧಿ ಹೊಂದಿದರು) ಅವರ ಅಂತರಂಗದೊಳಗಿನ  ದೈವಿಕ ಅರಿವು ಪ್ರಕಟಗೊಂಡಿತು. ಈ ರೀತಿಯಾದ ನಂತರದಿಂದ ಶ್ರೀ ಸತ್ಪತಿ ಗುರೂಜಿಯವರು ಶ್ರೀ ಸಾಯಿಬಾಬಾರವರ ಮೇಲೆ ಸಾಹಿತ್ಯ ಹಾಗೂ ಸಂಗೀತ ರಚನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಶ್ರೀ ಸತ್ಪತಿ ಗುರೂಜಿಯವರು ಇನ್ನೂರಕ್ಕೂ ಹೆಚ್ಚು ಶಿರಡಿ ಸಾಯಿಬಾಬಾ ಮಂದಿರಗಳು ಪ್ರಪಂಚದಾದ್ಯಂತ ತಲೆ ಎತ್ತುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಅಲ್ಲದೇ ಈಗಲೂ ಪ್ರಪಂಚದಾದ್ಯಂತ ಹೆಚ್ಚು ಹೆಚ್ಚು ಜನರು ಸಾಯಿ ಭಕ್ತರಾಗಿ ರೂಪುಗೊಳ್ಳುವಂತೆ ಮಾಡುವ ಸಲುವಾಗಿ ನಿರಂತರವಾಗಿ ಸಾಯಿ ಚಳುವಳಿಯನ್ನು ಹಮ್ಮಿಕೊಂಡು  ಲಕ್ಷಾಂತರ ಸಾಯಿ ಭಕ್ತರಿಗೆ ಮಾರ್ಗದರ್ಶಕರಾಗಿ ಕೆಲಸ ಮಾಡುತ್ತಿದ್ದಾರೆ.

ಆಂಗ್ಲ ಭಾಷೆಯಲ್ಲಿ ಇವರು ಬಾಬಾರವರ ಮೇಲೆ ರಚಿಸಿದ "ಶಿರಡಿ ಸಾಯಿಬಾಬಾ ಅಂಡ್ ಅಧರ್ ಪರ್ಫೆಕ್ಟ್ ಮಾಸ್ಟರ್ಸ್", "ಬಾಬಾ ಮೇ ಐ ಆನ್ಸರ್" ಕೃತಿಗಳು ಪ್ರಪಂಚದಾದ್ಯಂತ ವ್ಯಾಪಕವಾಗಿ ಪ್ರಸರಣಗೊಂಡಿವೆ. ಈ ಪುಸ್ತಕಗಳು ಭಾರತೀಯ ಭಾಷೆಗಳಾದ ಹಿಂದಿ, ಮರಾಠಿ, ಗುಜರಾತಿ, ಅಸ್ಸಾಮಿ, ಒಡಿಯಾ, ತೆಲುಗು ಹಾಗೂ ಮತ್ತಿತರ ಭಾಷೆಗಳಿಗೆ ಅನುವಾದಗೊಂಡಿವೆ. ಶ್ರೀ ಶಿರಡಿ ಸಾಯಿಬಾಬಾರವರ ಮರಾಠಿ ಆರತಿಯನ್ನು ಇವರು ಒಡಿಯಾ ಭಾಷೆಗೆ ಅನುವಾದ ಮಾಡಿದ್ದಾರೆ. ಹಿಂದಿ ಭಾಷೆಯಲ್ಲಿ ಇವರು ರಚಿಸಿದ "ನೈವೇದ್ಯ ಶ್ರೀ ಸಾಯಿ ಚರಣರೇ" ಎಂಬ ಭಜನೆ ಹಾಗೂ ಪ್ರಾರ್ಥನೆಯ ಪುಸ್ತಕವು ಹಿಂದಿ ಓದುಗರ ಮೆಚ್ಚುಗೆಗೆ ಪಾತ್ರವಾಗಿದೆ. ಇದಲ್ಲದೇ ಇವರು ಸಾಯಿಬಾಬಾರವರ ಮೇಲೆ ಹಿಂದಿ ಹಾಗೂ ಒಡಿಯಾ ಭಾಷೆಗಳಲ್ಲಿ ಅನೇಕ ಭಜನೆಯ ಸಿಡಿ ಹಾಗೂ ಕ್ಯಾಸೆಟ್ ಗಳನ್ನೂ ಹೊರತಂದಿದ್ದಾರೆ. "ಶ್ರೀ ಜಗನ್ನಾಥ-ಸ್ತಬಕ", "ಶ್ರೀ ಜಗನ್ನಾಥ ಮಹಿಮಾ" ಮತ್ತು "ಶ್ರೀ ಗುರು ಭಾಗವತ" ಎಂಬ ಹೆಸರಿನಲ್ಲಿ 3 ಸಿಡಿಗಳನ್ನು ಹೊರತಂದಿದ್ದಾರೆ. ಈ ಮೂರು ಸಿಡಿ ಗಳಲ್ಲಿನ ಭಜನೆಗಳನ್ನು ಶ್ರೀ ಸತ್ಪತಿ ಗುರೂಜಿಯವರೇ ರಚಿಸಿದ್ದಷ್ಟೇ ಅಲ್ಲದೇ ಸಂಗೀತ ಸಂಯೋಜನೆಯನ್ನೂ ಮಾಡಿರುತ್ತಾರೆ. ಅಲ್ಲದೆ ಶ್ರೀ ಶಿರಡಿ ಸಾಯಿಬಾಬಾರವರ ಮೇಲೆ "ಲಿವಿಂಗ್ ವಿಥ್ ಸಾಯಿ", "ಆವೋ ಸಾಯಿ" ಮತ್ತು "ತುಭ್ಯಂ ನಮಾಮಿ" ಎಂಬ 3 ಸಿಡಿಗಳನ್ನು ಟೈಮ್ಸ್ ಮ್ಯುಸಿಕ್ ನವರು ಹೊರತಂದಿದ್ದಾರೆ. ಇತ್ತೀಚಿಗಷ್ಟೇ ಗುರೂಜಿಯವರೇ ಸಾಹಿತ್ಯ ಹಾಗೂ ಸಂಗೀತ ರಚನೆಯನ್ನು ಮಾಡಿರುವ  "ಶ್ರೀ ಸಾಯಿನಾಥಾಯ ನಮಃ ನಮಃ" ಎಂಬ ಸಿಡಿಯನ್ನು ಸಾರೆಗಾಮ ಸಂಸ್ಥೆಯು ಬಿಡುಗಡೆಗೊಳಿಸಿದೆ. "ತುಭ್ಯಂ ನಮಾಮಿ" ಹಾಗೂ "ಶ್ರೀ ಸಾಯಿನಾಥಾಯ ನಮಃ ನಮಃ" ಸಿಡಿಗಳಿಗೆ ಅವರು ಸಾಹಿತ್ಯ, ಸಂಗೀತ ರಚನೆಯನ್ನು ಮಾಡಿರುವುದಷ್ಟೇ ಅಲ್ಲದೇ ತಮ್ಮ ಧ್ವನಿಯನ್ನು ಸಹ ನೀಡಿದ್ದಾರೆ. ಇದು ಗುರೂಜಿಯವರಲ್ಲಿರುವ  ಸಂಗೀತದ ಮೇಲಿನ ಪ್ರೌಢಿಮೆಯನ್ನು ತೋರಿಸುತ್ತದೆ.

2010ನೇ ಇಸವಿಯಲ್ಲಿ ಇವರು ಒರಿಯಾ ಭಾಷೆಯಲ್ಲಿ ರಚಿಸಿದ ಆಧ್ಯಾತ್ಮಿಕ-ವಿಜ್ಞಾನ ಆಧಾರಿತ ಕೃತಿಯಾದ "ಗೋಪ್ಯರು ಅಗೋಪ್ಯ"  ಹಾಗೂ ಅದರ ಸಂಸ್ಕೃತ ಅವತರಣಿಕೆಯಾದ "ಶ್ರೀ ಸ್ಥಿತತ್ವಾನುಚಿಂತನಮ್" ಕೃತಿಗಳು ಒಡಿಯಾ ಹಾಗೂ ಭಾರತದ ಇತರ ಭಾಷೆಗಳ ಶಿಕ್ಷಣ ತಜ್ಞರು ಹಾಗೂ ಉದ್ಧಾಮ ಪಂಡಿತರ ಹೊಗಳಿಕೆಗೆ ಪಾತ್ರವಾಗಿವೆ. ಈ ಕೃತಿಯಲ್ಲಿ ಶ್ರೀ ಸತ್ಪತಿ ಗುರೂಜಿಯವರು ಬ್ರಹ್ಮಾಂಡದ ಸೃಷ್ಟಿಯ ಬಗ್ಗೆ ಸುಧೀರ್ಘ ವಿವರಣೆಯನ್ನು ನೀಡಿದ್ದಾರೆ. ಈ ಮಹಾನ್ ಗ್ರಂಥವು ಆಧ್ಯಾತ್ಮಿಕ ಅನ್ವೇಷಿಗಳ ಜ್ಞಾನ ಹಾಗೂ ಭಕ್ತಿಯನ್ನು ಬೆಳಗಿಸುವಂತೆ ಮಾಡುವುದರಲ್ಲಿ ಯಾವುದೇ ಸಂದೇಹವಿಲ್ಲ.

ಶ್ರೀ ಸತ್ಪತಿ ಗುರೂಜಿಯವರು 2011ನೇ ಇಸವಿಯಲ್ಲಿ ಒಡಿಯಾ ಭಾಷೆಯಲ್ಲಿ "ಶ್ರೀ ಗುರು ಭಾಗವತ" ಎಂಬ ಮಹೋನ್ನತ ಗ್ರಂಥವನ್ನು ನಾಲ್ಕು ಭಾಗಗಳಲ್ಲಿ ರಚಿಸಿ ಬಿಡುಗಡೆಗೊಳಿಸಿದ್ದಾರೆ. ಈ ಕೃತಿಯನ್ನು ಹಿಂದಿ ಹಾಗೂ ಆಂಗ್ಲ ಭಾಷೆಗಳಿಗೆ ಸಹ ತರ್ಜುಮೆ ಮಾಡಲಾಗಿದೆ.  ಆಂಗ್ಲ ಭಾಷೆಯ ಕೃತಿಯು 2013ನೇ ಇಸವಿಯಲ್ಲಿ ಬಿಡುಗಡೆಗೊಂಡಿರುತ್ತದೆ. ಡಾ. ಸತ್ಪತಿ ಗುರೂಜಿಯವರು ರಚಿಸಿದ ಈ ಕೃತಿಯು  ಆಧ್ಯಾತ್ಮಿಕ ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿರುವುದಷ್ಟೇ ಅಲ್ಲದೇ ಒರಿಸ್ಸಾ ರಾಜ್ಯದಲ್ಲಷ್ಟೇ ಅಲ್ಲದೆ ಭಾರತದಾದ್ಯಂತ ಭಾಗವತ ಸಂಪ್ರದಾಯವನ್ನು ಪುನಃ ಜಾಗೃತಿಗೊಳಿಸುವುದರಲ್ಲಿ ಯಾವುದೇ ಸಂದೇಹವಿಲ್ಲ.

(ಆಧಾರ: ಶ್ರೀ ಗುರು ಭಾಗವತ- ಭಾಗ-1, ಲೇಖಕರು: ಶ್ರೀ ಚಂದ್ರಭಾನು ಸತ್ಪತಿ, ಪ್ರಕಾಶಕರು: ಮೆ.ವಿಶನ್ ಪ್ರಿಂಟರ್ಸ್ ಮತ್ತು ಪಬ್ಲಿಷರ್ಸ್, ಭುವನೇಶ್ವರ್, ಒರಿಸ್ಸಾ) 

ಕನ್ನಡ ಅನುವಾದ: ಶ್ರೀಕಂಠ ಶರ್ಮ 

No comments:

Post a Comment