Saturday, April 16, 2011

ರಾಜಸ್ಥಾನದ ಶಿರಡಿ ಸಾಯಿಬಾಬಾ ಮಂದಿರ - ಓಂ ಶ್ರೀ ಶಿರಡಿ ಸಾಯಿಬಾಬಾ ಮಂದಿರ, ಓಂ ಶ್ರೀ ಶಿರಡಿ ಸಾಯಿಬಾಬಾ ದೀನಬಂಧು ಟ್ರಸ್ಟ್, ರಾಟ್ಲಾಂ ರಸ್ತೆ, ಕಗ್ಡಿ ಪಿಕ್ ಅಪ್ ಎದುರು, ಬನ್ಸ್ವಾರ - 327 001, ರಾಜಸ್ಥಾನ 


ದೇವಾಲಯದ ವಿಶೇಷತೆಗಳು: 

ಈ ದೇವಾಲಯವು ಬನ್ಸ್ವಾರದ ಹೆಸರುವಾಸಿಯಾದ ದೇವಾಲಯವಾಗಿದ್ದು ಇದನ್ನು ಗುಡ್ಡದ ಮೇಲೆ ಬಹಳ ಸುಂದರವಾಗಿ ನಿರ್ಮಿಸಲಾಗಿದೆ. 

ಈ ದೇವಾಲಯದ ಭೂಮಿ ಪೂಜೆಯನ್ನು 4ನೇ ಮಾರ್ಚ್ 2004 ರಂದು ನೆರವೇರಿಸಲಾಯಿತು. 

ಈ ದೇವಾಲಯವನ್ನು 13ನೇ ಫೆಬ್ರವರಿ 2005 ರಂದು ಬನ್ಸ್ವಾರದ ಪರಮ ಪೂಜ್ಯ ಸ್ವಾಮೀಜಿ ಶ್ರೀ.ಉತ್ತಮ್ ಸ್ವಾಮೀಜಿಯವರು ನೆರವೇರಿಸಿದರು. 

ದೇವಾಲಯದಲ್ಲಿ ಅಮೃತ ಶಿಲೆಯ ಸಾಯಿಬಾಬಾ, ನಂದಿ, ಕೂರ್ಮದ ವಿಗ್ರಹಗಳು ಮತ್ತು ಕಪ್ಪು ಶಿಲೆಯ ಗಣಪತಿಯ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ.

ದೇವಾಲಯದ ಹೊರನೋಟ
ಸಾಯಿಬಾಬಾರವರ ವಿಗ್ರಹ


ಕಪ್ಪು ಶಿಲೆಯ ಗಣಪತಿಯ ವಿಗ್ರಹ 
ಅಮೃತ ಶಿಲೆಯ ಕೂರ್ಮ  

ಅಮೃತ ಶಿಲೆಯ ನಂದಿಯ ವಿಗ್ರಹ

ದೇವಾಲಯದ ಕಾರ್ಯಚಟುವಟಿಕೆಗಳು: 

ದಿನನಿತ್ಯದ ಕಾರ್ಯಕ್ರಮಗಳು 

ಆರತಿಯ ಸಮಯ 

ಬೆಳಿಗ್ಗೆ : 8 ಘಂಟೆಗೆ 
ಸಂಜೆ: 7 ಘಂಟೆಗೆ 

ವಿಶೇಷ ಉತ್ಸವದ ದಿನಗಳು:
  1. ಪ್ರತಿ ವರ್ಷದ ವಸಂತ ಪಂಚಮಿಯ ದಿನ ದೇವಾಲಯದ ವಾರ್ಷಿಕೋತ್ಸವ. 
  2. ಗುರು ಪೂರ್ಣಿಮಾ. 
ಸಾಮಾಜಿಕ ಕಾರ್ಯಚಟುವಟಿಕೆಗಳು:

ಪ್ರತಿ ವರ್ಷ ಅಂಗವಿಕಲರಿಗಾಗಿ ಉಚಿತ ಶಿಬಿರವನ್ನು ಹಮ್ಮಿಕೊಳ್ಳಲಾಗುತ್ತಿದೆ.

ದೇಣಿಗೆಗಾಗಿ ಮನವಿ:

ದೇವಾಲಯದ ಪಕ್ಕದಲ್ಲಿ ನಿತ್ಯ ಅನ್ನದಾನಕ್ಕಾಗಿ ಪ್ರಸಾದಾಲಯವನ್ನು ನಿರ್ಮಿಸಲಾಗುತ್ತಿದೆ. ಪ್ರಸಾದಾಲಯ ಕಟ್ಟಡದ ನಿರ್ಮಾಣಕ್ಕಾಗಿ ಮತ್ತು ದೇವಾಲಯವನ್ನು ಇನ್ನು ಉತ್ತಮ ರೀತಿಯಲ್ಲಿ ನಡೆಸುವ ಸಲುವಾಗಿ ದೇಣಿಗೆಯನ್ನು ನೀಡಲು ಇಚ್ಚಿಸುವ ಸಾಯಿಭಕ್ತರು ಚೆಕ್ ಅಥವಾ ಡಿಡಿ ರೂಪದಲ್ಲಿ  "ಓಂ ಶ್ರೀ ಶಿರಡಿ ಸಾಯಿಬಾಬಾ ದೀನಬಂಧು ಟ್ರಸ್ಟ್, ಬನ್ಸ್ವಾರ" ಹೆಸರಿನಲ್ಲಿ ಖಾತೆ ಸಂಖ್ಯೆ: 63035910647 ಭಾರತೀಯ ಸ್ಟೇಟ್ ಬ್ಯಾಂಕ್ ಇವರಿಗೆ ಸಂದಾಯವಾಗುವಂತೆ ಹಣವನ್ನು ಕಳುಹಿಸಬಹುದು.

ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ
ಸ್ಥಳ ಕಗ್ಡಿ ಪಿಕ್ ಅಪ್ ಎದುರು, ಬನ್ಸ್ವಾರ
ವಿಳಾಸ ಓಂ ಶ್ರೀ ಶಿರಡಿ ಸಾಯಿಬಾಬಾ ಮಂದಿರ, ಓಂ ಶ್ರೀ ಶಿರಡಿ ಸಾಯಿಬಾಬಾ ದೀನಬಂಧು ಟ್ರಸ್ಟ್, ರಾಟ್ಲಾಂ ರಸ್ತೆ, ಕಗ್ಡಿ ಪಿಕ್ ಅಪ್ ಎದುರು, ಬನ್ಸ್ವಾರ - 327 001, ರಾಜಸ್ಥಾನ
ಸಂಪರ್ಕಿಸಬೇಕಾದ ವ್ಯಕ್ತಿ  ಶ್ರೀ.ಹರ್ಷ್ ಕೊಥಾರಿ
ದೂರವಾಣಿ ಸಂಖ್ಯೆ +91 94141 01210
ಈ ಮೇಲ್ hwkothari@hotmail.com
ಅಂತರ್ಜಾಲ  http://saitemplebanswara.org
http://banswara.nic.in/e_saibaba.htm
ಮಾರ್ಗಸೂಚಿ
ದೇವಾಲಯವು ಕಗ್ಡಿ ಪಿಕ್ ಅಪ್ ನ ಎದುರು ಬನ್ಸ್ವಾರ ರಾಟ್ಲಾಂ ಮುಖ್ಯ ರಸ್ತೆಯಲ್ಲಿದೆ. ಬನ್ಸ್ವಾರದ ನಗರದ ಹೃದಯ ಭಾಗದಿಂದ 1 ಕಿಲೋಮೀಟರ್ ದೂರದಲ್ಲಿ ದೇವಾಲಯವಿರುತ್ತದೆ.

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment