Sunday, April 10, 2011

ಶ್ರೀ ಸಾಯಿಪಾದಾನಂದ ಸತ್ಸಂಗದಿಂದ ಶ್ರೀ ವಿಷ್ಣು ಸಹಸ್ರನಾಮ ಹೋಮದ ಆಚರಣೆಯ ಒಂದು ವರದಿ - 10ನೇ ಏಪ್ರಿಲ್ 2011 - ಕೃಪೆ: ಸಾಯಿಅಮೃತಧಾರಾ.ಕಾಂ  

ಸದ್ಗುರುವಿಗೆ ಗುರುದಕ್ಷಿಣೆಯಾಗಿ 20 ಲಕ್ಷಕ್ಕೂ ಹೆಚ್ಚು ಶ್ರೀ.ವಿಷ್ಣು ಸಹಸ್ರನಾಮ ಪಾರಾಯಣಗಳನ್ನು ಅರ್ಪಿಸುವ ಸಲುವಾಗಿ ಶ್ರೀ.ಸಾಯಿಪಾದಾನಂದ ಸತ್ಸಂಗವು ಶ್ರೀ.ವಿಷ್ಣು ಸಹಸ್ರನಾಮ ಹೋಮವನ್ನು ಇದೇ ತಿಂಗಳ 10ನೇ ಏಪ್ರಿಲ್ 2011, ಭಾನುವಾರ, ಬೆಳಿಗ್ಗೆ 9 ರಿಂದ ಸಾಮುಹಿಕ ಶ್ರೀ.ವಿಷ್ಣು ಸಹಸ್ರನಾಮ ಪಾರಾಯಣದೊಡಗೂಡಿ ಆಚರಿಸಿತು. 




ಕಾರ್ಯಕ್ರಮದಲ್ಲಿ ಅನೇಕ ಗಣ್ಯ ವ್ಯಕ್ತಿಗಳು ಆಗಮಿಸಿದ್ದರು. ಖ್ಯಾತ ಪ್ರವಚನಕಾರರಾದ ಡಾ.ಅರಳು ಮಲ್ಲಿಗೆ ಪಾರ್ಥಸಾರಥಿ, ಅಖಿಲ ಭಾರತ ವಿಷ್ಣು ಸಹಸ್ರನಾಮ ಮಂಡಳಿಯ ಅಧ್ಯಕ್ಷ ಶ್ರೀ.ರಾಂಜೀ, ಅಖಿಲ ಭಾರತ ವಿಷ್ಣು ಸಹಸ್ರನಾಮ ಮಂಡಳಿಯ ಉಪಾಧ್ಯಕ್ಷ ಕ್ಯಾಪ್ಟನ್ ಕೆ.ವಿ.ಮಣಿ, ಇಸ್ಕಾನ್ ಬೆಂಗಳೂರಿನ ಶ್ರೀ.ತಿರು ಸ್ವಾಮೀಜಿ, ಬೆಂಗಳೂರಿನ ತ್ಯಾಗರಾಜನಗರದ ಸಾಯಿ ಆಧ್ಯಾತ್ಮಿಕ ಕೇಂದ್ರದ ಅಧ್ಯಕ್ಷ ಶ್ರೀ.ಶೇಷಾದ್ರಿ ಮತ್ತು ಇನ್ನು ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 

ಮಧ್ಯಾನ್ಹ 12 ಘಂಟೆಗೆ ಪೂರ್ಣಾಹುತಿ ಕಾರ್ಯಕ್ರಮದ ನಂತರ ಶ್ರೀ.ವಿಷ್ಣು ಸಹಸ್ರನಾಮದ ಮಹಿಮೆಯ ಬಗ್ಗೆ ವಿದ್ಯಾ ವಾಚಸ್ಪತಿ ಡಾ.ಅರಳು ಮಲ್ಲಿಗೆ ಪಾರ್ಥಸಾರಥಿಯವರು ಪ್ರವಚನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಡಾ.ಅರಳು ಮಲ್ಲಿಗೆ ಪಾರ್ಥಸಾರಥಿಯವರು ಪ್ರತಿನಿತ್ಯ ವಿಷ್ಣು ಸಹಸ್ರನಾಮ ಪಾರಾಯಣ ಮಾಡುವುದರಿಂದ ಉಂಟಾಗುವ ಪ್ರಯೋಜನವನ್ನು ಅಲ್ಲಿ ನೆರೆದಿದ್ದ ಹಲವು ಭಕ್ತರ ಅನುಭವಗಳ ಉಲ್ಲೇಖದೊಂದಿಗೆ ಬಹಳ ಸೊಗಸಾಗಿ ಮತ್ತು ಅರ್ಥಗರ್ಭಿತವಾಗಿ ತಿಳಿಸಿ ಹೇಳಿದರು. 


ಕಾರ್ಯಕ್ರಮದಲ್ಲಿ ಸಾವಿರಾರು ಸಾಯಿಭಕ್ತರು ಭಾಗವಹಿಸಿ ಶ್ರೀ.ಮಹಾವಿಷ್ಣುವಿನ ಮತ್ತು ಶಿರಡಿ ಸಾಯಿಬಾಬಾರವರ ಕೃಪೆಗೆ ಪಾತ್ರರಾದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರಿಗೆ ವಂದನಾರ್ಪಣೆ ಮಾಡುವುದರೊಂದಿಗೆ ದಿನದ ಕಾರ್ಯಕ್ರಮವು ಮುಕ್ತಾಯಗೊಂಡಿತು. 


ಕನ್ನಡ ಅನುವಾದ: ಶ್ರೀಕಂಠ ಶರ್ಮ


No comments:

Post a Comment