Monday, August 6, 2012

ಸಾಯಿ ಸಮರ್ಥ ಟ್ರಸ್ಟ್ (ನೋಂದಣಿ), ಬೆಂಗಳೂರು ವತಿಯಿಂದ ಆಯೋಜಿಸಿದ್ದ ದಕ್ಷಿಣ ಭಾರತದ ಅತಿ ದೊಡ್ದ ಶಿರಡಿ ಸಾಯಿಬಾಬಾ ಕಾರ್ಯಕ್ರಮ "ಸಾಯಿ ಅಮೃತ್ ಧಾರಾ" ದ ಒಂದು ವರದಿ - ಕೃಪೆ: ಸಾಯಿಅಮೃತಧಾರಾ.ಕಾಂ


ಸಾಯಿ ಸಮರ್ಥ ಟ್ರಸ್ಟ್ (ನೋಂದಣಿ), ಕೋರಮಂಗಲ, ಬೆಂಗಳೂರು ವತಿಯಿಂದ ಕಳೆದ ತಿಂಗಳು 15ನೇ ಜುಲೈ 2012, ಭಾನುವಾರ ದಂದು ಮಧ್ಯಾನ್ಹ 2:30 ರಿಂದ ಬೆಂಗಳೂರಿನ ಬಳ್ಳಾರಿ ರಸ್ತೆಯಲ್ಲಿರುವ ಪ್ಯಾಲೇಸ್ ಗ್ರೌಂಡ್ ನಲ್ಲಿ ದಕ್ಷಿಣ ಭಾರತದ ಅತಿ ದೊಡ್ದ ಶಿರಡಿ ಸಾಯಿಬಾಬಾ ಕಾರ್ಯಕ್ರಮ "ಸಾಯಿ ಅಮೃತ್ ಧಾರಾ"  ನಾಮಸಂಕೀರ್ತನೆ ಹಾಗೂ ವಿಶಾಲ ಸಾಯಿ ಭಜನ ಸಂಧ್ಯಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.





ಶಿರಡಿಯಲ್ಲಿರುವ ಸಮಾಧಿ ಮಂದಿರದ ಪ್ರತಿರೂಪವನ್ನು ಮುಂಬೈ ನ ಪ್ರಖ್ಯಾತ ಕಲಾವಿದರ ತಂಡವು ಪುನರ್ ನಿರ್ಮಾಣ ಮಾಡಿದ್ದು ಈ ಬೃಹತ್ ಶಿರಡಿ ಸಾಯಿಬಾಬಾ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ಕಾರ್ಯಕ್ರಮವು 15ನೇ ಜುಲೈ 2012, ಭಾನುವಾರ ದಂದು ಮಧ್ಯಾನ್ಹ 2:30 ಕ್ಕೆ  ತಾವು ಹಾಡಿರುವ ಶಿರಡಿ ಸಾಯಿಬಾಬಾರವರ ಆರತಿ ಹಾಗೂ ಭಜನೆಗಳಿಗೆ ಪ್ರಪಂಚದಾದ್ಯಂತ ಶಿರಡಿ ಸಾಯಿಭಕ್ತರ ಮನೆಮಾತಾಗಿರುವ ಶ್ರೀ.ಪ್ರಮೋದ್ ಮೇಧಿ ಯವರಿಂದ ಸಾಯಿಬಾಬಾರವರ ಪೂಜಾ ವಿಧಿವಿಧಾನಗಳು ಹಾಗೂ ಭಜನೆಯೊಂದಿಗೆ ಪ್ರಾರಂಭವಾಯಿತು. ನಂತರ ಪ್ರಖ್ಯಾತ ಸಾಯಿ ಭಜನ ಗಾಯಕರಾದ ಶ್ರೀ.ಶೈಲೇಂದ್ರ ಭಾರತಿ ಹಾಗೂ ಯುವ ಸಾಯಿ ಭಜನ ಗಾಯಕರಾದ ಶ್ರೀ.ಪಂಕಜ್ ರಾಜ್ ರವರು ಸಾಯಿ ಭಜನ ಸಂಧ್ಯಾ ಕಾರ್ಯಕ್ರಮ ನಡೆಸಿಕೊಟ್ಟರು. 1977 ರಲ್ಲಿ ಬಿಡುಗಡೆಯಾದ ಮನೋಜ್ ಕುಮಾರ್ ರವರ ಸುಪ್ರಸಿದ್ಧ ಹಿಂದಿ ಚಲನಚಿತ್ರವಾದ "ಶಿರಡಿ ಕೇ ಸಾಯಿಬಾಬಾ" ನಲ್ಲಿ ಶಿರಡಿ ಸಾಯಿಬಾಬಾರವರ ಪಾತ್ರವನ್ನು ನಿರ್ವಹಿಸಿದ ಶ್ರೀ.ಸುಧೀರ್ ದಳವಿಯವರು ಈ ಸಂದರ್ಭದಲ್ಲಿ ಮಾತನಾಡಿ ನಾಸ್ತಿಕರಾದ ತಾವು ಹೇಗೆ ಶಿರಡಿ ಸಾಯಿಬಾಬಾರವರ ಭಕ್ತರಾಗಿ ರೂಪುಗೊಂಡರು ಎಂದು ಬಹಳ  ಅರ್ಥಗರ್ಭಿತವಾಗಿ ಮಾತನಾಡಿದರು. ಜಗದ್ವಿಖ್ಯಾತ ಚಿತ್ರಕಾರರಾದ ಹಾಗೂ ಏಷಿಯಾದ ಅತಿ ಎತ್ತರದ ಶಿರಡಿ ಸಾಯಿಬಾಬಾರವರ ಚಿತ್ರವನ್ನು ರಚಿಸಿದ ಹೆಗ್ಗಳಿಕೆಯಿರುವ ಶ್ರೀ.ನವನೀತ್ ಅಗ್ನಿಹೋತ್ರಿಯವರು ಸ್ಥಳದಲ್ಲೇ ಸಾಯಿಬಾಬಾರವರ ಸುಂದರ ಚಿತ್ರವನ್ನು ಬಿಡಿಸಿ ಸಾಯಿಭಕ್ತರನ್ನು ಬೆರಗುಗೊಳಿಸಿದರು. ಮುಂಬೈ ನ "ಕಲಾ ಸಾಧನ ತಂಡ" ವು ರಂಗೋಲಿಯಲ್ಲಿ ಶಿರಡಿ ಸಾಯಿಬಾಬಾರವರ ಚಿತ್ರವನ್ನು ಬಹಳ ಸುಂದರವಾಗಿ ರಚಿಸಿದ್ದು ಈ ಕಾರ್ಯಕ್ರಮದ ಮತ್ತೊಂದು ವಿಶೇಷವಾಗಿತ್ತು.





ಶಿರಡಿಯ ಪ್ರಖ್ಯಾತ ಸಾಯಿಬಾಬಾ ನಾಟಕಗಳ ಕಲಾವಿದರಾದ ಶ್ರೀ.ಬಬ್ಲು ದುಗ್ಗಲ್, ದೆಹಲಿಯಿಂದ ಪ್ರಕಟವಾಗುವ ಜನಪ್ರಿಯ ಮಾಸಪತ್ರಿಕೆಯಾದ "ಸಾಯಿ ಸುಮಿರನ್ ಟೈಮ್ಸ್" ನ ಸಂಪಾದಕಿಯಾದ ಕುಮಾರಿ.ಅಂಜು ಟಂಡನ್ ಮತ್ತು ಶಿರಡಿಯ ಸಾಯಿ ಸಂಗಮ್ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀ.ಸಂದೀಪ್ ಸೋನಾವಾನೆಯವರುಗಳು ಈ ಸುಂದರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 




ದಿನವಿಡೀ ಸುರಿದ ಮಳೆಯನ್ನೂ ಲೆಕ್ಕಿಸದೇ 6000 ಕ್ಕೂ ಹೆಚ್ಚು ಸಾಯಿಭಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದುದು ಒಂದು ವಿಶೇಷವೇ ಸರಿ!







ಈ ಸಂದರ್ಭದಲ್ಲಿ ಸಾಯಿ ಸಮರ್ಥ ಟ್ರಸ್ಟ್ (ನೋಂದಣಿ) ಯ ವತಿಯಿಂದ ಬೆಂಗಳೂರಿನ ಏಂಜಲ್ ಹೋಮ್ಸ್ ಅನಾಥಾಶ್ರಮದ ಅಧ್ಯಕ್ಷೆಯಾದ ಶ್ರೀಮತಿ.ಸಬೀನಾರವರಿಗೆ 21,000/-ರೂಪಾಯಿಗಳ ಸಹಾಯಧನವನ್ನು ನೀಡಲಾಯಿತು.















ಕಾರ್ಯಕ್ರಮವು ಶಿರಡಿ ಸಾಯಿಬಾಬಾರವರಿಗೆ ವಿಶೇಷ ಆರತಿ ಬೆಳಗುವುದರೊಂದಿಗೆ ಮುಕ್ತಾಯವಾಯಿತು. ಕಾರ್ಯಕ್ರಮಕ್ಕೆ ಬಂದ ಎಲ್ಲಾ ಸಾಯಿ ಭಕ್ತರಿಗೂ ಮಹಾಪ್ರಸಾದವನ್ನು ವಿತರಿಸಲಾಯಿತು. 


ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment