Friday, August 10, 2012

ಶಿರಡಿಯ ಸುತ್ತಮುತ್ತ ನೋಡಬೇಕಾದ ಸ್ಥಳಗಳು: ಶ್ರೀ ರಾಜಾ ವೀರಭದ್ರ ಮಂದಿರ (ವಿರೋಬ ಬನ್ ಕಾಂಚ್ ಮಂದಿರ) - ಕೃಪೆ: ಸಾಯಿಅಮೃತಧಾರಾ.ಕಾಂ

ದೇವಾಲಯದ ವಿಶೇಷತೆಗಳು:

ಶ್ರೀ ಸುಪ್ರಸಿದ್ಧ ರಾಜಾ ವೀರಭದ್ರ ಮಂದಿರ (ವಿರೋಬ ಬನ್ ಕಾಂಚ್ ಮಂದಿರ) ವು ಮಹಾರಾಷ್ಟ್ರದ ಅಹಮದ್ ನಗರ ಜಿಲ್ಲೆಯ, ರಹತಾ ತಾಲ್ಲೂಕಿನ ಬನ್ ಎಂಬ ಹಳ್ಳಿಯಲ್ಲಿದೆ.  ಇದು ಶಿರಡಿ ಸಾಯಿಬಾಬಾ ಸಮಾಧಿ ಮಂದಿರದಿಂದ ಕೇವಲ 5 ಕಿಲೋಮೀಟರ್ ಗಳ ಅಂತರದಲ್ಲಿದೆ. (ಸಾಯಿ ಸಚ್ಚರಿತ್ರೆ ಅಧ್ಯಾಯ 47).

ಈ ಸ್ಥಳದಲ್ಲಿ ಎರಡು ವಿರೋಬ ಮಂದಿರಗಳಿವೆ. ಒಂದು ಮಂದಿರವು ರಹತಾ ಗ್ರಾಮಕ್ಕೂ ಮತ್ತು ಮತ್ತೊಂದು ಮಂದಿರವು ಶಿರಡಿ ಗ್ರಾಮಕ್ಕೂ ಸೇರಿರುತ್ತವೆ. ಈ ಎರಡೂ ಮಂದಿರಗಳನ್ನು ಶ್ರೀ.ವೀರಭದ್ರ ದೇವಸ್ಥಾನ ಮತ್ತು ಉತ್ಸವ ಟ್ರಸ್ಟ್ (ನೋಂದಣಿ) ಯವರು ನೋಡಿಕೊಳ್ಳುತ್ತಾರೆ.

ಈ ದೇವಾಲಯಗಳು ಶಿರಡಿ ಸಾಯಿಬಾಬಾ ಸಮಾಧಿ ಮಂದಿರಕ್ಕೂ ಪುರಾತನದ್ದಾಗಿರುತ್ತದೆ. ದೇವಾಲಯದ ನಿರ್ಮಾಣಕ್ಕೆ ಬೇಕಾದ ಭೂಮಿಯನ್ನು ಬ್ರಿಟಿಷ್ ಸರ್ಕಾರವು ದೇವಾಲಯದ ಟ್ರಸ್ಟ್ ಗೆ ನೀಡಿರುತ್ತದೆ.

ಅತ್ಯಂತ ಹಳೆಯದಾಗಿ ಶಿಥಿಲಗೊಂಡಿದ್ದ ಈ ಮಂದಿರಗಳನ್ನು ಜೀರ್ಣೋದ್ಧಾರ ಮಾಡಲಾಯಿತು. ನವೀಕರಣಗೊಂಡ ಈ ದೇವಾಲಯಗಳನ್ನು 1999 ನೇ ಇಸವಿಯಲ್ಲಿ ಗಂಗಾಗಿರಿಯ ಪರಮಪೂಜ್ಯ ಶ್ರೀ.ರಾಮಗಿರಿ ಮಹಾರಾಜ್ ರವರು ಉದ್ಘಾಟಿಸಿರುತ್ತಾರೆ.

ಶ್ರೀ.ರತೀಲಾಲ್ ಪೂನಂಚಂದ್ ಲೋಧಾರವರು ಈ ದೇವಾಲಯಗಳ ಸಂಸ್ಥಾಪಕ ಅಧ್ಯಕ್ಷರಾಗಿರುತ್ತಾರೆ. ಶ್ರೀ.ವೀರಭದ್ರ ದೇವಸ್ಥಾನ ಮತ್ತು ಉತ್ಸವ ಟ್ರಸ್ಟ್ (ನೋಂದಣಿ) ಯವರು ಈ ದೇವಾಲಯಗಳ ದಿನನಿತ್ಯದ ಆಗುಹೋಗುಗಳನ್ನು ಮತ್ತು ಅಭಿವೃದ್ಧಿ ಕಾರ್ಯಗಳನ್ನು ನೋಡಿಕೊಳ್ಳುತ್ತಿದ್ದಾರೆ.

ಎರಡೂ ದೇವಾಲಯಗಳಲ್ಲಿ ಶ್ರೀ.ವೀರಭದ್ರ ಸ್ವಾಮಿಯ ವಿಗ್ರಹ ಹಾಗೂ ಬೆಳ್ಳಿಯ ಪಾದುಕೆಗಳನ್ನು ಸ್ಥಾಪಿಸಲಾಗಿದೆ.









ದೇವಾಲಯದ ಸಮಯ:

ಬೆಳಿಗ್ಗೆ 7:00 ರಿಂದ ರಾತ್ರಿ 10:00 ರವರೆಗೆ.

ಆರತಿಯ ಸಮಯ:

ಬೆಳಿಗ್ಗೆ 7:00 ಗಂಟೆಗೆ.

ಪ್ರತಿದಿನ ಸಂಜೆ 7:00 ಗಂಟೆಗೆ ಭಜನೆ ಹಾಗೂ ಹರಿಕಥೆಯನ್ನು ಏರ್ಪಡಿಸಲಾಗುತ್ತದೆ.

ಪ್ರತಿ ಬುಧವಾರ ಸಂಜೆ 7:00 ಗಂಟೆಗೆ ಸಂತ ಯೋಗೇಶ್ವರ ಮಹಾರಾಜ್ ರವರ ನಾಮಜಪವನ್ನು ಏರ್ಪಡಿಸಲಾಗುತ್ತದೆ.

ಪ್ರತಿ ಶ್ರಾವಣ ಮಾಸದ ಪಾಡ್ಯದಿಂದ ಸಪ್ತಮಿಯವರೆಗೆ ಶ್ರೀ.ವೀರಭದ್ರ ಸ್ವಾಮಿ ಚರಿತ್ರೆಯ ಸಪ್ತಾಹ ಪಾರಾಯಣ ಏರ್ಪಡಿಸಲಾಗುತ್ತದೆ.

ಪ್ರತಿ ವರ್ಷದ ದಸರಾ ಉತ್ಸವದ ಸಮಯದಲ್ಲಿ ವಿಶೇಷ ನೃತ್ಯ ಹಾಗೂ ನಗಾರಿಯನ್ನು ಬಾರಿಸಲಾಗುತ್ತದೆ.

ಪ್ರತಿ ವರ್ಷದ ಕಾರ್ತೀಕ ಮಾಸದಲ್ಲಿ 3 ದಿನಗಳ ಕಾಲ ಉತ್ಯವವನ್ನು ಹಮ್ಮಿಕೊಳ್ಳಲಾಗುತ್ತದೆ. ಆ ಸಮಯದಲ್ಲಿ ಮಂದಿರದಿಂದ ಶಿರಡಿ ಗ್ರಾಮದವರೆಗೆ ಹಾಗೂ ಪುನಃ ಮಂದಿರಕ್ಕೆ ಪಲ್ಲಕ್ಕಿ ಉತ್ಸವವನ್ನು ನಡೆಸಲಾಗುತ್ತದೆ. ಅಲ್ಲದೇ ಉತ್ಸವದ 3 ದಿನಗಳೂ ಅನ್ನದಾನ ಹಮ್ಮಿಕೊಳ್ಳಲಾಗುತ್ತದೆ.


ದೇವಾಲಯದ ಸಂಪರ್ಕದ ವಿವರಗಳು:

ಶ್ರೀ ರಾಜಾ ವೀರಭದ್ರ ಮಂದಿರ
ವಿರೋಬ ಬನ್ ಕಾಂಚ್ ಮಂದಿರ,
ಶ್ರೀ.ವೀರಭದ್ರ ದೇವಸ್ಥಾನ ಮತ್ತು ಉತ್ಸವ ಟ್ರಸ್ಟ್ (ನೋಂದಣಿ),
ಬನ್ ರಸ್ತೆ, ಬನ್ ಗ್ರಾಮ, ಶಿರಡಿ-423 109
ರಹತಾ ತಾಲ್ಲೂಕು, ಅಹಮದ್ ನಗರ ಜಿಲ್ಲೆ,
ಮಹಾರಾಷ್ಟ್ರ, ಭಾರತ,
ಸಂಪರ್ಕಿಸಬೇಕಾದ ವ್ಯಕ್ತಿಗಳು: ಶ್ರೀ.ರತೀಲಾಲ್ ಪೂನಂಚಂದ್ ಲೋಧಾ / ಶ್ರೀ.ನಾಮದೇವ ದಾದಾ ಬಣಕಾರ್ ಮೊಬೈಲ್ ಸಂಖ್ಯೆಗಳು: + 91 98225 01037 / +91 98819 75964


ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment