Tuesday, August 7, 2012

ಸಾಯಿ ಪರಿವಾರ್ ಟ್ರಸ್ಟ್ (ನೋಂದಣಿ), ಬೆಂಗಳೂರು ವತಿಯಿಂದ ಪ್ರಪ್ರಥಮ ಬಾರಿಗೆ ಆಯೋಜಿಸಿದ್ದ ರಾತ್ರಿ ಪೂರ್ತಿ ಶಿರಡಿ ಸಾಯಿಬಾಬಾ ಕಾರ್ಯಕ್ರಮ "ಏಕ್ ರಾತ್ ಸಾಯಿ ಕೇ ಸಾಥ್" ನ ಒಂದು ವರದಿ - ಕೃಪೆ: ಸಾಯಿಅಮೃತಧಾರಾ.ಕಾಂ

ಶಿರಡಿ ಸಾಯಿ ಪರಿವಾರ್ ಟ್ರಸ್ಟ್ , ಹೆಚ್.ಎಸ್.ಆರ್ ಬಡಾವಣೆ, ಬೆಂಗಳೂರು ವತಿಯಿಂದ 28ನೇ ಜುಲೈ 2012, ಶನಿವಾರ ರಾತ್ರಿ 9:00 ರಿಂದ ಭಾನುವಾರ ಬೆಳಿಗ್ಗೆ 6:00 ರವರೆಗೆ ಬೆಂಗಳೂರಿನ ಬಳ್ಳಾರಿ ರಸ್ತೆಯಲ್ಲಿರುವ ಪ್ಯಾಲೇಸ್ ಗ್ರೌಂಡ್ ನಲ್ಲಿ ಪ್ರಪ್ರಥಮ ಬಾರಿಗೆ ರಾತ್ರಿ ಪೂರ್ತಿ ಶಿರಡಿ ಸಾಯಿಬಾಬಾ ಕಾರ್ಯಕ್ರಮ "ಏಕ್ ರಾತ್ ಸಾಯಿ ಕೇ ಸಾಥ್" ಎಂಬ ಶೀರ್ಷಿಕೆಯಡಿಯಲ್ಲಿ  ಶಿರಡಿಯ ಪ್ರಖ್ಯಾತ ನಾಟಕ ತಂಡವಾದ "ಶ್ರೀ.ಬಬ್ಲು ದುಗ್ಗಾಲ್ ಮತ್ತು ತಂಡ" ದವರಿಂದ ಶ್ರೀ ಸಾಯಿ ಸಚ್ಚರಿತ್ರೆ ಆಧಾರಿತ ನಾಟಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.





ಕಾರ್ಯಕ್ರಮವನ್ನು ಬೆಂಗಳೂರಿನ ಸಂಸತ್ ಸದಸ್ಯರಾದ ಶ್ರೀ.ಅನಂತ ಕುಮಾರ್ ರವರು ಉದ್ಘಾಟಿಸಿದರು.

ಶ್ರೀ.ಬಬ್ಲು ದುಗ್ಗಾಲ್ ರವರು ತಮ್ಮ ಸುಮಧುರ ಸಾಯಿ ಭಜನೆ ಹಾಗೂ ನಿರೂಪಣೆಯ ಮುಖಾಂತರ ನೆರೆದಿದ್ದ ಸಾಯಿ ಭಕ್ತರನ್ನು ರಾತ್ರಿಯಿಡೀ ರಂಜಿಸಿದರು. ಸಾಯಿಭಕ್ತರು ಶ್ರೀ.ಬಬ್ಲು ದುಗ್ಗಾಲ್ ರವರ ಭಜನೆಗಳಿಗೆ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದರು. ಸರಿಯಾಗಿ ಮಧ್ಯರಾತ್ರಿಯ ವೇಳೆಗೆ ಪ್ರಾಂಗಣದಲ್ಲಿದ್ದ ಎಲ್ಲಾ ದೀಪಗಳನ್ನು ನಂದಿಸಲಾಯಿತು ಮತ್ತು ಎಲ್ಲಾ ಸಾಯಿಭಕ್ತರಿಗೂ ಬೆಳಗಿಸಿದ ಕ್ಯಾಂಡಲ್ ಗಳನ್ನು ನೀಡಲಾಯಿತು. ಆ ಸುಂದರ ಕ್ಯಾಂಡಲ್ ನ ಬೆಳಕಿನಲ್ಲಿ ಶ್ರೀ.ಬಬ್ಲು ದುಗ್ಗಾಲ್ ರವರು "Jyoth Se Jyoth Jalathe Chalo….” ಎಂಬ ಸುಮಧುರ ಸಾಯಿ ಭಜನೆಯನ್ನು ಹಾಡುವ ಮುಖಾಂತರ ರಂಜಿಸಿದ್ದುದು ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿತ್ತು.








ಶಿರಡಿಯಲ್ಲಿರುವ ದ್ವಾರಕಾಮಾಯಿಯ ಪ್ರತಿರೂಪವನ್ನು ಮುಂಬೈನ ಪ್ರಖ್ಯಾತ ಕಲಾವಿದರ ತಂಡವು ಪುನರ್ ನಿರ್ಮಾಣ ಮಾಡಿದ್ದು ಈ ಬೃಹತ್ ಶಿರಡಿ ಸಾಯಿಬಾಬಾ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲಾ ಸಾಯಿಭಕ್ತರು ಮಹಾಪ್ರಸಾದವನ್ನು ದ್ವಾರಕಾಮಾಯಿಯ ಪ್ರತಿರೂಪವನ್ನು ನಿರ್ಮಿಸಿದ ಪ್ರಾಂಗಣದ ಒಳಗೇ ಸ್ವೀಕರಿಸುವ ರೀತಿಯಲ್ಲಿ ನಿರ್ಮಾಣ ಮಾಡಲಾಗಿತ್ತು.



ಸಾವಿರಾರು ಸಾಯಿಭಕ್ತರು ಈ ಸುಂದರ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಕಾರ್ಯಕ್ರಮವು ಶಿರಡಿ ಸಾಯಿಬಾಬಾರವರಿಗೆ ವಿಶೇಷ ಆರತಿ ಬೆಳಗುವುದರೊಂದಿಗೆ ಮುಕ್ತಾಯವಾಯಿತು. ಕಾರ್ಯಕ್ರಮಕ್ಕೆ ಬಂದ ಎಲ್ಲಾ ಸಾಯಿ ಭಕ್ತರಿಗೂ ಮಹಾಪ್ರಸಾದವನ್ನು ವಿತರಿಸಲಾಯಿತು.

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment