Thursday, June 30, 2011

ಶ್ರೀ ದ್ವಾರಕಾಮಾಯಿ ಸೇವಾ ಟ್ರಸ್ಟ್, ರಾಜಾಜಿನಗರ, ಬೆಂಗಳೂರು ವತಿಯಿಂದ ಗುರುಪೂರ್ಣಿಮಾ ಉತ್ಸವ - 30ನೇ ಜೂನ್ 2011 - ಕೃಪೆ: ಸಾಯಿಅಮೃತಧಾರಾ.ಕಾಂ  

ಶ್ರೀ ದ್ವಾರಕಾಮಾಯಿ ಸೇವಾ ಟ್ರಸ್ಟ್, ರಾಜಾಜಿನಗರ, ಬೆಂಗಳೂರು ಮುಂದಿನ ತಿಂಗಳ 15ನೇ ಜುಲೈ 2011, ಶುಕ್ರವಾರದಂದು ರಾಜಾಜಿನಗರದ ರಾಮಮಂದಿರದಲ್ಲಿ ಗುರುಪೂರ್ಣಿಮಾ ಉತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ನಡೆಸಲು ತೀರ್ಮಾನಿಸಿರುತ್ತಾರೆ.  ಕಾರ್ಯಕ್ರಮದ ವಿವರಗಳನ್ನು ಸಾಯಿ ಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಲಗತ್ತಿಸಲಾಗಿದೆ.
ಕನ್ನಡ ಅನುವಾದ: ಶ್ರೀಕಂಠ ಶರ್ಮ

Tuesday, June 28, 2011

ಬೆಂಗಳೂರಿನ ಶಿರಡಿ ಸಾಯಿಬಾಬಾ ಮಂದಿರ -  ಶ್ರೀ ಸಾಯಿ ಮಂದಿರ ಟ್ರಸ್ಟ್ (ನೋಂದಣಿ), 14/ಎ, 2ನೇ ಮುಖ್ಯರಸ್ತೆ, ಕಂಟೀರವ ನಗರ, ನಂದಿನಿ ಬಡಾವಣೆ, ಬೆಂಗಳೂರು -560 096, ಕರ್ನಾಟಕ - ಕೃಪೆ: ಸಾಯಿಅಮೃತಧಾರಾ.ಕಾಂ


ದೇವಾಲಯದ ವಿಶೇಷತೆಗಳು: 

ಈ ಮಂದಿರವು ಬೆಂಗಳೂರಿನ ಕಂಟೀರವ ನಗರದ ಮುಖ್ಯ ರಸ್ತೆಯಲ್ಲಿರುವ ಕಂಟೀರವ ಸ್ಟುಡಿಯೋ ಹತ್ತಿರದಲ್ಲಿರುತ್ತದೆ.

1995ನೇ ಇಸವಿಯ ಪ್ರಾರಂಭದಲ್ಲಿ ಈ ಮಂದಿರವಿರುವ ಸ್ಥಳದಲ್ಲಿ ಒಂದು ತಾತ್ಕಾಲಿಕ ಕಟ್ಟಡದ ನಿರ್ಮಾಣವಾಗಿತ್ತು. ಅದೇ ಸ್ಥಳದಲ್ಲಿ ಸ್ಥಳೀಯ ಸಾಯಿಭಕ್ತರಾದ ಶ್ರೀ.ವೀರೇಗೌಡ ಆವರು ಮುತುವರ್ಜಿವಹಿಸಿ 2005ನೇ ಇಸವಿಯಲ್ಲಿ ಭೂಮಿಪೂಜೆಯನ್ನು ನೆರವೇರಿಸಿ ಕಟ್ಟಡದ ಮೇಲ್ವಿಚಾರಣೆಯನ್ನು ತಾವೇ ವಹಿಸಿಕೊಂಡು ಕಟ್ಟಡ ಪೂರ್ಣವಾಗುವುದರಲ್ಲಿ ಪ್ರಮುಖ ಪಾತ್ರ ವಹಿಸಿದರು. 

ದೇವಾಲಯದಲ್ಲಿರುವ ಅಮೃತ ಶಿಲೆಯ ಸಾಯಿಬಾಬಾರವರ ವಿಗ್ರಹ, ದ್ವಾರಕಾಮಾಯಿ ಸಾಯಿಬಾಬಾ ವಿಗ್ರಹ, ಗಣಪತಿಯ ವಿಗ್ರಹ, ಪವಿತ್ರ ಪಾದುಕೆಗಳು ಮತ್ತು ಪಂಚಲೋಹದ ಸಾಯಿಬಾಬಾ ವಿಗ್ರಹಗಳನ್ನು ಶ್ರೀಮತಿ.ಪದ್ಮ ಸಿಂಗ್, ಶ್ರೀಮತಿ.ವಾಣಿ ಮತ್ತು ಶ್ರೀ.ರಂಗನಾಥ ನಾಯ್ಡುರವರುಗಳು ದಾನವಾಗಿ ನೀಡಿರುತ್ತಾರೆ. 

ಈ ಮಂದಿರದ ಉದ್ಘಾಟನೆಯನ್ನು 27ನೇ ಜುಲೈ 2009 ರಂದು ಬೆಂಗಳೂರಿನ ಜಯ ಸಾಯಿ ಮಂಡಳಿಯ ಶ್ರೀ.ಗೋಪಿನಾಥ್ ರವರು ವಿದ್ಯುಕ್ತವಾಗಿ ಉದ್ಘಾಟಿಸಿದರು. ಆ ಸಂದರ್ಭದಲ್ಲಿ ಬೆಂಗಳೂರಿನ ಸಾಯಿ ಭಕ್ತರಾದ ಶ್ರೀ.ಚಾಂದ್ ಪಾಷಾರವರು ಕೂಡ ಉಪಸ್ಥಿತರಿದ್ದರು. 

ಶ್ರೀ.ನರಸೇಗೌಡರವರು ದೇವಾಲಯದ ಸಂಸ್ಥಾಪಕ ಅಧ್ಯಕ್ಷರು ಮತ್ತು ಅವರೇ ದೇವಾಲಯದ ದಿನನಿತ್ಯದ ಆಗುಹೋಗುಗಳನ್ನು ಮತ್ತು ಅಭಿವೃದ್ದಿ ಕಾರ್ಯಗಳನ್ನು ಬಹಳ ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ.

ದೇವಾಲಯದ ಗರ್ಭಗುಡಿಯಲ್ಲಿ ಸುಮಾರು 3 ಅಡಿ ಎತ್ತರದ ಶಿರಡಿ ಸಾಯಿಬಾಬಾರವರ ಸುಂದರವಾದ ಅಮೃತಶಿಲೆಯ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ. ಅಲ್ಲದೆ, ಅಮೃತ ಶಿಲೆಯ 1 1/2 ಅಡಿಯ ದ್ವಾರಕಾಮಾಯಿ ಸಾಯಿಬಾಬಾ ವಿಗ್ರಹ, ಅಮೃತ ಶಿಲೆಯ ಪಾದುಕೆಗಳು, ಗಣಪತಿಯ ವಿಗ್ರಹ ಮತ್ತು ಪಂಚಲೋಹದ ಸಾಯಿಬಾಬಾರವರ ವಿಗ್ರಹವನ್ನು ಕೂಡ ಮಂದಿರದಲ್ಲಿ ನೋಡಬಹುದು. ಪಂಚಲೋಹದ ಸಾಯಿಬಾಬಾ ವಿಗ್ರಹವನ್ನು ದಿನನಿತ್ಯದ ಅಭಿಷೇಕಕ್ಕೆ ಬಳಸಲಾಗುತ್ತಿದೆ. 









ಮಂದಿರದ ಕಾರ್ಯಚಟುವಟಿಕೆಗಳು:

ದಿನನಿತ್ಯದ ಕಾರ್ಯಕ್ರಮಗಳು:


ಆರತಿಯ ಸಮಯ:
ಆರತಿ
ಪ್ರತಿದಿನ
ಗುರುವಾರ
ಕಾಕಡಾ ಆರತಿ 
6:30 AM
5:30 AM
ಮಧ್ಯಾನ್ಹ ಆರತಿ
10:30 AM
12:30 PM
ಧೂಪಾರತಿ
6:00 PM
5:30 PM
ಶೇಜಾರತಿ
8:00 PM
9:30 PM

ಪ್ರತಿನಿತ್ಯ ಬೆಳಿಗ್ಗೆ 7 ಘಂಟೆಗೆ  ಸಾಯಿಬಾಬಾರವರ ಪಂಚಲೋಹ ವಿಗ್ರಹಕ್ಕೆ ಪಂಚಾಮೃತ ಅಭಿಷೇಕವನ್ನು ಮಾಡಲಾಗುತ್ತದೆ. ಸೇವಾ ಶುಲ್ಕ 101/- ರುಪಾಯಿಗಳು. 

ಪ್ರತಿದಿನ ಬೆಳಿಗ್ಗೆ  7 ಘಂಟೆಗೆ ವಿಶೇಷ ಪೂಜೆಯನ್ನು ಮಾಡಲಾಗುತ್ತದೆ. ಸೇವಾ ಶುಲ್ಕ 600/- ರುಪಾಯಿಗಳು.

ಪ್ರತಿ ಗುರುವಾರ ಬೆಳಿಗ್ಗೆ 7 ಘಂಟೆಗೆ ಸರ್ವ ಸೇವೆಯನ್ನು ಮಾಡಲಾಗುತ್ತದೆ. ಸೇವಾ ಶುಲ್ಕ 2000/- ರುಪಾಯಿಗಳು. 

ವಿಶೇಷ ಉತ್ಸವದ ದಿನಗಳು: 

1. ಮಂದಿರದ ವಾರ್ಷಿಕೋತ್ಸವ ಪ್ರತಿ ವರ್ಷದ ಗುರುಪೂರ್ಣಿಮೆಯಂದು. 
2.ವಿಜಯದಶಮಿ.

ಮಂದಿರದ ವಿಳಾಸ ಮತ್ತು ಮಾರ್ಗಸೂಚಿ: 


ಸ್ಥಳ:
ಸರ್ಕಾರಿ ಶಾಲೆಯ ಎದುರು, ಕಂಟೀರವ ಸ್ಟುಡಿಯೋ ಹತ್ತಿರ, ಕಂಟೀರವ ನಗರ. 

ವಿಳಾಸ:
ಶ್ರೀ ಸಾಯಿ ಮಂದಿರ ಟ್ರಸ್ಟ್ (ನೋಂದಣಿ), 
14/ಎ, 2ನೇ ಮುಖ್ಯರಸ್ತೆ, ಕಂಟೀರವ ನಗರ, 
ನಂದಿನಿ ಬಡಾವಣೆ, ಬೆಂಗಳೂರು -560 096, ಕರ್ನಾಟಕ                                                            

ಸಂಪರ್ಕಿಸಬೇಕಾದ ವ್ಯಕ್ತಿಗಳು:                                                                                                                    ಶ್ರೀ.ನರಸೇಗೌಡ / ಶ್ರೀಮತಿ.ಪದ್ಮ ಸಿಂಗ್                                                             


ದೂರವಾಣಿ ಸಂಖ್ಯೆಗಳು:                                                                                                                                 + 91 98459 61571 / +91 92423 64195


ಮಾರ್ಗಸೂಚಿ: 
ಕಂಟೀರವ ನಗರ ಮುಖ್ಯರಸ್ತೆಯಲ್ಲಿರುವ ಕಂಟೀರವ ಸ್ಟುಡಿಯೋ ಬಸ್ ನಿಲ್ದಾಣದಲ್ಲಿ ಇಳಿದು ಸುಮಾರು 200 ಅಡಿ ದೂರ ಹಿಂದೆ ನಡೆದರೆ ದೇವಾಲಯ ಸಿಗುತ್ತದೆ. ದೇವಾಲಯವು ಸರ್ಕಾರಿ ಶಾಲೆಯ ಎದುರುಗಡೆ ಮತ್ತು ಕಂಟೀರವ ಸ್ಟುಡಿಯೋ ಹತ್ತಿರ ಇರುತ್ತದೆ. ಬೆಂಗಳೂರು ಬಸ್ ನಿಲ್ದಾಣದಿಂದ ಬಸ್ ಸಂಖ್ಯೆಗಳು: 252 ಹೆಚ್, ಎಫ್, 80 ಎಫ್, ಜಿ, ಎ.


ಕನ್ನಡ ಅನುವಾದ: ಶ್ರೀಕಂಠ ಶರ್ಮ
ಶ್ರೀ ದ್ವಾರಕಾಮಾಯಿ ಶಿರಡಿ ಸಾಯಿ ಮಂದಿರ, ನಂಜನಗೂಡು ಪ್ರಥಮ ವಾರ್ಷಿಕೋತ್ಸವ - 28ನೇ ಜೂನ್ 2011 - ಕೃಪೆ: ಸಾಯಿಅಮೃತಧಾರಾ.ಕಾಂ  
 
"ದಕ್ಷಿಣ ಕಾಶಿ" ಎಂದೇ  ಖ್ಯಾತಿಯನ್ನು ಪಡೆದ ನಂಜನಗೂಡಿನ ಶ್ರೀ ದ್ವಾರಕಾಮಾಯಿ ಶಿರಡಿ ಸಾಯಿ ಮಂದಿರ ತನ್ನ ಪ್ರಥಮ ವಾರ್ಷಿಕೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಮುಂದಿನ ತಿಂಗಳ ಅಂದರೆ  2ನೇ ಜುಲೈ 2011 ಮತ್ತು 3ನೇ ಜುಲೈ 2011 ರಂದು ಆಚರಿಸಿಕೊಳ್ಳುತ್ತಿದೆ. 

ಕಾರ್ಯಕ್ರಮದ ವಿವರಗಳನ್ನು ಸಾಯಿ ಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ: 

ಕಾರ್ಯಕ್ರಮ ವಿವರ 
 
ತಾರೀಖು/ದಿನ 
ಸಮಯ 
ಕಾರ್ಯಕ್ರಮ ವಿವರ
02-07-2011/ಶನಿವಾರ 
9 AM
ಗಣಪತಿ ಪೂಜೆ, ಪುಣ್ಯಾಹ, ಮಹಾ  ಗಣಪತಿ ಹೋಮ, ವಿಷ್ಣು  ಸಹಸ್ರನಾಮ ಹೋಮ
12:00 PM
ಪೂರ್ಣಾಹುತಿ, ಅನ್ನದಾನ
5 PM
ಸಾಯಿ ಭಜನೆ
6:30 PM
ಕಲಶ ಸ್ಥಾಪನೆ, ಅಷ್ಟಾವಧಾನ ಸೇವೆ
8:30 PM
ಮಹಾಮಂಗಳಾರತಿ, ತೀರ್ಥ  ಪ್ರಸಾದ ವಿನಿಯೋಗ
03-07-2011/ಭಾನುವಾರ 
6 AM
ಸುಪ್ರಭಾತ, ಕಾಕಡಾ ಆರತಿ
7:30 AM
ಮಹಾಭಿಷೇಕ
10:30 AM
ಶ್ರೀ ಸಾಯಿ ಮುಲಮಂತ್ರ  ಹೋಮ, ನವಗ್ರಹ ಹೋಮ
12:30 PM
ಮಹಾಪೂರ್ಣಾಹುತಿ, ಅನ್ನದಾನ
5:30 PM
ಸಾಯಿ ಭಜನೆ

ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮೇಲಿನ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಶ್ರೀ ಶಿರಡಿ ಸಾಯಿಬಾಬಾರವರ ಕೃಪೆಗೆ ಪಾತ್ರರಾಗಬೇಕೆಂದು ದೇವಾಲಯದ ಆಡಳಿತ ಮಂಡಳಿಯವರು ಈ ಮುಖಾಂತರ ಮನವಿ ಮಾಡಿಕೊಳ್ಳುತ್ತಾರೆ. 

ಹೆಚ್ಚಿನ ಮಾಹಿತಿಗಾಗಿ ಸಾಯಿಭಕ್ತರು ಈ ಕೆಳಕಂಡ ವಿಳಾಸವನ್ನು ಸಂಪರ್ಕಿಸಬಹುದು: 


ವಿಳಾಸ:
ಶ್ರೀ ದ್ವಾರಕಾಮಾಯಿ ಶಿರಡಿ ಸಾಯಿಬಾಬಾ ಮಂದಿರ ಸೇವಾ ಸಮಿತಿ (ನೋಂದಣಿ), 
ಕನ್ನಿಕಾಪರಮೇಶ್ವರಿ ಬಡಾವಣೆ, 
ಜೆ.ಎಸ್.ಎಸ್.ಕಾಲೇಜ್ ಎದುರುಗಡೆ, ಊಟಿ ಮುಖ್ಯರಸ್ತೆ, 
ದೇವಿರಮ್ಮನಹಳ್ಳಿ,ನಂಜನಗೂಡು-571 301, ಮೈಸೂರು ಜಿಲ್ಲೆ, ಕರ್ನಾಟಕ.
ದೂರವಾಣಿ ಸಂಖ್ಯೆ: + 91 98458 28769

ಕನ್ನಡ ಅನುವಾದ: ಶ್ರೀಕಂಠ ಶರ್ಮ

Sunday, June 26, 2011

ಮೈಸೂರು ಜಿಲ್ಲೆಯ ಶಿರಡಿ ಸಾಯಿಬಾಬಾ ಮಂದಿರ -  ಶ್ರೀ ಶಿರಡಿ ಸಾಯಿ ಶಕ್ತಿ ಸನ್ನಿಧಿ, ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದ ಪ್ರಾಂಗಣ, ಈ ಮತ್ತು ಎಫ್ ಬ್ಲಾಕ್, ವಿಶ್ವಮಾನವ ಶಾಲೆಯ ಎದುರು, ರಾಮಕೃಷ್ಣ ನಗರ, ಮೈಸೂರು-570 022, ಕರ್ನಾಟಕ - ಕೃಪೆ: ಸಾಯಿಅಮೃತಧಾರಾ.ಕಾಂ


ದೇವಾಲಯದ ವಿಶೇಷತೆಗಳು: 

ಈ ಮಂದಿರವು ಮೈಸೂರಿನ ರಾಮಕೃಷ್ಣ ನಗರದ ವಿಶ್ವಮಾನವ ಶಾಲೆಯ ಎದುರುಗಡೆ ಇರುತ್ತದೆ.

ಈ ಮಂದಿರದ ಭೂಮಿಪೂಜೆಯನ್ನು 28ನೇ ಸೆಪ್ಟೆಂಬರ್ 2009 ರಂದು ಪವಿತ್ರ ವಿಜಯದಶಮಿಯ ದಿನ ಮಾಡಲಾಯಿತು. 

ಈ ಮಂದಿರದ ಉದ್ಘಾಟನೆಯನ್ನು 18ನೇ ನವೆಂಬರ್ 2010 ರಂದು ಪವಿತ್ರ ತುಳಸಿ ಹಬ್ಬದ ದಿನವಾದ ಉತ್ಥಾನ ದ್ವಾದಶಿಯಂದು  ಶಿರಡಿಯ ಶ್ರೀ.ಸುಲೇಖ ಶಾಸ್ತ್ರೀಜಿ ಮಹಾರಾಜ್ ರವರು ನೆರವೇರಿಸಿದರು. 

ಈ ದೇವಾಲಯವನ್ನು ಶ್ರೀ ಪ್ರಸನ್ನ ಗಣಪತಿ ದೇವಾಲಯ ಟ್ರಸ್ಟ್ (ನೋಂದಣಿ) ಯ ಆಡಳಿತ ಮಂಡಳಿಯವರು  ನಿರ್ಮಿಸಿರುತ್ತಾರೆ. ಡಾ.ಆರ್.ಸೀತಾಲಕ್ಷ್ಮಿಯವರು ದೇವಾಲಯದ ದಿನನಿತ್ಯದ ಆಗುಹೋಗುಗಳನ್ನು ಮತ್ತು ಅಭಿವೃದ್ದಿ ಕಾರ್ಯಗಳನ್ನು ಬಹಳ ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ.

ದೇವಾಲಯದ ರಾಜಗೋಪುರದ ನಾಲ್ಕೂ ದಿಕ್ಕುಗಳಲ್ಲಿ ನಾಲ್ಕು ಸಾಯಿಬಾಬಾರವರ ವಿಗ್ರಹಗಳನ್ನು ಸ್ಥಾಪಿಸಿರುತ್ತಾರೆ.

ದೇವಾಲಯದ ಆವರಣದ ಹೊರಭಾಗದ ಎಡ ಭಾಗದಲ್ಲಿ ಕೃತಕ ಕಾರಂಜಿಯ ಮಧ್ಯಭಾಗದಲ್ಲಿ ಸುಂದರ ಸಾಯಿಬಾಬಾರವರ ವಿಗ್ರಹವನ್ನು ಸ್ಥಾಪಿಸಲಾಗಿದೆ.

ದೇವಾಲಯದಲ್ಲಿ ಸುಮಾರು ನಾಲ್ಕೂವರೆ ಅಡಿ ಎತ್ತರದ ಶಿರಡಿ ಸಾಯಿಬಾಬಾರವರ ಸುಂದರವಾದ ಅಮೃತಶಿಲೆಯ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ. ಸಾಯಿಬಾಬಾರವರ ಅಷ್ಟ ಧಾತುವಿನ ವಿಗ್ರಹ ಮತ್ತು ಪುಟ್ಟ ಅಮೃತ ಶಿಲೆಯ ಗಣಪತಿಯ  ವಿಗ್ರಹವನ್ನು  ಸಾಯಿಬಾಬಾರವರ ವಿಗ್ರಹದ ಬಳಿ ಇರಿಸಲಾಗಿದೆ.  ಅಷ್ಟಧಾತುವಿನ ಸಾಯಿಬಾಬಾರವರ ವಿಗ್ರಹವನ್ನು ದಿನನಿತ್ಯದ ಅಭಿಷೇಕಕ್ಕೆ ಬಳಸಲಾಗುತ್ತಿದೆ. ಸಾಯಿಬಾಬಾರವರ ವಿಗ್ರಹದ ಎದುರುಗಡೆ ಇರುವಂತೆ ಅಮೃತ ಶಿಲೆಯ ಪಾದುಕೆಗಳನ್ನು ಮತ್ತು ಕೂರ್ಮವನ್ನು ಸ್ಥಾಪಿಸಲಾಗಿದೆ.

ಸಾಯಿಬಾಬಾ ವಿಗ್ರಹದ ಎರಡೂ ಬದಿಯಲ್ಲಿ ಅಮೃತ ಶಿಲೆಯ ದತ್ತಾತ್ರೇಯ ಮತ್ತು ಕೃಷ್ಣ ದೇವರುಗಳ ವಿಗ್ರಹವನ್ನು ಸ್ಥಾಪಿಸಲಾಗಿದೆ. 

ಸಾಯಿಬಾಬಾ ಮಂದಿರದ ಹೊರಭಾಗದಲ್ಲಿ ತುಳಸಿ ಬೃಂದಾವನ, ಪವಿತ್ರ ಧುನಿ, ಪವಿತ್ರ ಬೇವಿನ ಮರ ಮತ್ತು ಔದುಂಬರ ವೃಕ್ಷಗಳನ್ನೂ ಸಾಯಿಭಕ್ತರು ಕಾಣಬಹುದು.





























ಮಂದಿರದ ಕಾರ್ಯಚಟುವಟಿಕೆಗಳು:

ದಿನನಿತ್ಯದ ಕಾರ್ಯಕ್ರಮಗಳು:

ಆರತಿಯ ಸಮಯ:

ಪ್ರತಿದಿನ ಬೆಳಿಗ್ಗೆ 7:30 ಘಂಟೆಗೆ, 10 ಘಂಟೆಗೆ ಮತ್ತು ರಾತ್ರಿ 8:30 ಘಂಟೆಗೆ ಛೋಟಾ ಆರತಿ. 
ಪ್ರತಿದಿನ ಮಧ್ಯಾನ್ಹ 12 ಘಂಟೆಗೆ ಮಧ್ಯಾನ್ಹ ಆರತಿ 
ಪ್ರತಿದಿನ ಸಂಜೆ  6:40 ಕ್ಕೆ ಧೂಪಾರತಿ. 
ಪ್ರತಿದಿನ ರಾತ್ರಿ 9 ಘಂಟೆಗೆ ಶೇಜಾರತಿ. 

ಪ್ರತಿದಿನ ಬೆಳಿಗ್ಗೆ 8:30 ಕ್ಕೆ ಸಾಯಿಬಾಬಾರವರ ಅಷ್ಟಧಾತುವಿನ ವಿಗ್ರಹಕ್ಕೆ ಜಲಾಭಿಷೇಕವನ್ನು ಮಾಡಲಾಗುತ್ತದೆ. 

ಪ್ರತಿದಿನ ಸಾಯಿಬಾಬಾರವರಿಗೆ ಅಷ್ಟೋತ್ತರವನ್ನು ಮಾಡಲಾಗುತ್ತದೆ. ಸೇವಾಶುಲ್ಕ 10/- ರುಪಾಯಿಗಳು. 

ಪ್ರತಿ ಗುರುವಾರ, ಭಾನುವಾರ ಮತ್ತು ವಿಶೇಷ ಹಬ್ಬ ಹರಿದಿನಗಳಲ್ಲಿ ಕ್ಷೀರಾಭಿಷೇಕ ಮತ್ತು ಪಂಚಾಮೃತ ಅಭಿಷೇಕವನ್ನು ಮಾಡಲಾಗುತ್ತದೆ. ಸೇವಾ ಶುಲ್ಕ - ಕ್ಷೀರಾಭಿಷೇಕಕ್ಕೆ  51/- ರುಪಾಯಿಗಳು ಮತ್ತು ಪಂಚಾಮೃತ ಅಭಿಷೇಕಕ್ಕೆ 101/- ರುಪಾಯಿಗಳು. 

ವಿಶೇಷ ಉತ್ಸವದ ದಿನಗಳು: 

1. ಮಂದಿರದ ವಾರ್ಷಿಕೋತ್ಸವ ಪ್ರತಿ ವರ್ಷದ ಕಾರ್ತೀಕ ಮಾಸದ ಉತ್ಥಾನ ದ್ವಾದಶಿಯಂದು. 
2. ಶ್ರೀರಾಮನವಮಿ. 
3. ಗುರು ಪೂರ್ಣಿಮೆ.
4 .ವಿಜಯದಶಮಿ.

ದೇವಾಲಯದ ಸಾಮಾಜಿಕ ಕಾರ್ಯಚಟುವಟಿಕೆಗಳು: 

ಮೈಸೂರು ಜಿಲ್ಲೆಯಲ್ಲಿರುವ ಅನೇಕ ಅನಾಥಾಶ್ರಮ ಮತ್ತು ವೃದ್ದಾಶ್ರಮಗಳಲ್ಲಿ ನಿಯಮಿತವಾಗಿ ಅನ್ನದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. 

ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲ್ಲೂಕಿನ ಬನ್ನೂರಿನಲ್ಲಿ ಇರುವ ವಿವೇಕಾನಂದ ಶಿಕ್ಷಣ ಸಂಸ್ಥೆಯ ಅನೇಕ ಬಡ ವಿದ್ಯಾರ್ಥಿಗಳ ಶಿಕ್ಷಣದ ಜವಾಬ್ದಾರಿಯನ್ನು ದೇವಾಲಯ ವಹಿಸಿಕೊಂಡಿದೆ. 

ಮಂದಿರದ ವಿಳಾಸ ಮತ್ತು ಮಾರ್ಗಸೂಚಿ: 


ಸ್ಥಳ:
ವಿಶ್ವಮಾನವ ಶಾಲೆಯ ಎದುರು, ರಾಮಕೃಷ್ಣ ನಗರ, ಮೈಸೂರು. 

ವಿಳಾಸ:
ಶ್ರೀ ಶಿರಡಿ ಸಾಯಿ ಶಕ್ತಿ ಸನ್ನಿಧಿ, 
ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದ ಪ್ರಾಂಗಣ, 
ಈ ಮತ್ತು ಎಫ್ ಬ್ಲಾಕ್, 
ವಿಶ್ವಮಾನವ ಶಾಲೆಯ ಎದುರು, 
ರಾಮಕೃಷ್ಣ ನಗರ, ಮೈಸೂರು-570 022, ಕರ್ನಾಟಕ.                                                   



ಸಂಪರ್ಕಿಸಬೇಕಾದ ವ್ಯಕ್ತಿಗಳು:                                                                                                                    ಡಾ.ಆರ್.ಸೀತಾಲಕ್ಷ್ಮಿ / ಶ್ರೀ.ಪಿ.ಟಿ.ಗಂಗಾಧರಯ್ಯ/ಡಾ.ಆರ್.ಪಿ.ಸಾಯಿನಾಥ್/ಶ್ರೀ.ಹೆಚ್.ಎಸ್.ಶ್ರೀಧರ ರಾವ್/ಶ್ರೀ.ಚನ್ನಬಸವೇ ಗೌಡ/ಶ್ರೀ.ಶ್ಯಾಮ ಪ್ರಸಾದ್ 

ದೂರವಾಣಿ ಸಂಖ್ಯೆಗಳು:                                                                                                                                
+91 96205 67111 / +91 94480 64808 / +91 94486 00456 / +91 98801 00744 / +91 94482 00295 / +91 98453 95953

ಈ ಮೇಲ್ ವಿಳಾಸ:                                                                                                              

ಮಾರ್ಗಸೂಚಿ: 
ಈ ಮತ್ತು ಎಫ್ ಬ್ಲಾಕ್, ರಾಮಕೃಷ್ಣ ನಗರ ಬಸ್ ನಿಲ್ದಾಣದಲ್ಲಿ ಅಥವಾ ರಾಮಕೃಷ್ಣ ವಿದ್ಯಾಶಾಲಾ, ಕುವೆಂಪುನಗರ ಪೋಲಿಸ್ ಠಾಣೆ  ಬಸ್ ನಿಲ್ದಾಣದಲ್ಲಿ ಇಳಿಯುವುದು.ದೇವಾಲಯವು ರಾಮಕೃಷ್ಣ ನಗರದ ವಿಶ್ವಮಾನವ ಶಾಲೆಯ ಎದುರುಗಡೆ ಇರುತ್ತದೆ. ಮೈಸೂರು ಬಸ್ ನಿಲ್ದಾಣದಿಂದ ಬಸ್ ಸಂಖ್ಯೆಗಳು: 62, 71, 61, 135, 95ಎ.

ಕನ್ನಡ ಅನುವಾದ: ಶ್ರೀಕಂಠ ಶರ್ಮ 

Saturday, June 25, 2011

ಮೈಸೂರಿನ ಶಿರಡಿ ಸಾಯಿಬಾಬಾ ಸತ್ಸಂಗ - ಸಾಯಿನಾಥ ಸೇವಾ ಸಂಸ್ಥೆ, ನಂ.438, ಎಲ್.ಐ.ಜಿ.-II,1ನೇ ಅಡ್ಡರಸ್ತೆ, 2ನೇ ಮುಖ್ಯರಸ್ತೆ, ಶಾರದಾದೇವಿ ನಗರ, ಮೈಸೂರು-570 023, ಕರ್ನಾಟಕ - ಕೃಪೆ: ಸಾಯಿಅಮೃತಧಾರಾ.ಕಾಂ  

ಸತ್ಸಂಗದ ವಿಶೇಷತೆಗಳು:

ಶ್ರೀ.ಸಾಯಿನಾಥ ಸೇವಾ ಸಂಸ್ಥೆಯು ಮೈಸೂರಿನ ಶಾರದಾದೇವಿನಗರದ ಚಾಮುಂಡೇಶ್ವರಿ ದೇವಾಲಯದ ಬಳಿ ಇರುತ್ತದೆ. 

ಈ ಸತ್ಸಂಗವನ್ನು 5ನೇ ಮೇ 2010 ರಂದು ಶ್ರೀ ಸಾಯಿ ನಾರಾಯಣ ಸಿಂಗ್ ರವರು ಸಾಯಿಬಾಬಾರವರ ಜೀವನ ಮತ್ತು ಉಪದೇಶಗಳನ್ನು ಪ್ರಚಾರ ಮಾಡುವ ಸಲುವಾಗಿ ಪ್ರಾರಂಭಿಸಿದರು. 

ಸಾಯಿಬಾಬಾರವರ ಅಮೃತ ಶಿಲೆಯ ಪುಟ್ಟ ವಿಗ್ರಹ ಮತ್ತು ದ್ವಾರಕಾಮಾಯಿ ಸಾಯಿಬಾಬಾರವರ ಪುಟ್ಟ ವಿಗ್ರಹವನ್ನು ಸತ್ಸಂಗದಲ್ಲಿ ಪ್ರತಿಷ್ಟಾಪಿಸಲಾಗಿದೆ. 

ಅಲ್ಲದೆ, ಭಾರತದ ಪ್ರಸಿದ್ದ ಸಿದ್ದ ಪುರುಷರ ಚಿತ್ರಪಟ, ಸಾಯಿಬಾಬಾರವರ ಸಟಕಾ, ಸಾಯಿಬಾಬಾರವರ ಮರದ ಪಾದುಕೆಗಳು ಮತ್ತು ಆಳೆತ್ತರದ ಕಲ್ಲಿನ ಮೇಲೆ ಕುಳಿತ ಸಾಯಿಬಾಬಾರವರ ಚಿತ್ರಪಟವನ್ನು ಸತ್ಸಂಗದಲ್ಲಿ ಸಾಯಿಭಕ್ತರು ನೋಡಬಹುದು. 





ಸತ್ಸಂಗದ ಕಾರ್ಯಚಟುವಟಿಕೆಗಳು: 

ದಿನನಿತ್ಯದ ಕಾರ್ಯಕ್ರಮಗಳು: 

ಆರತಿಯ ಸಮಯ:

ಗುರುವಾರದ ಆರತಿಯ ಸಮಯ: 

ಕಾಕಡಾ ಆರತಿ - ಬೆಳಿಗ್ಗೆ 4:30 ಕ್ಕೆ 
ಮಧ್ಯಾನ್ಹ ಆರತಿ - ಮಧ್ಯಾನ್ಹ 12 ಘಂಟೆಗೆ 
ಧೂಪಾರತಿ - ಸಂಜೆ 6:30 ಕ್ಕೆ 
ಶೇಜಾರತಿ - ರಾತ್ರಿ 9:15 ಕ್ಕೆ 

ಗುರುವಾರ ಬಿಟ್ಟು ಇತರ ದಿನಗಳಲ್ಲಿ ಸಂಜೆ 6:30 ಕ್ಕೆ ಸಾಯಿಬಾಬಾರವರಿಗೆ ಆರತಿಯನ್ನು ಮಾಡಲಾಗುತ್ತದೆ. 

ಪ್ರತಿ ಗುರುವಾರ ಬೆಳಿಗ್ಗೆ 5 ಘಂಟೆಯಿಂದ 6 ಘಂಟೆಯವರೆಗೆ ಸಾಯಿಬಾಬಾರವರ ವಿಗ್ರಹಕ್ಕೆ ಗುಲಾಬಿ ನೀರಿನ ಅಭಿಷೇಕವನ್ನು ಮಾಡಲಾಗುತ್ತದೆ. 

ಪ್ರತಿ ಗುರುವಾರ ಸಂಜೆ 7 ಘಂಟೆಯಿಂದ ಸಾಯಿ ಭಜನ ಸತ್ಸಂಗದ ಕಾರ್ಯಕ್ರಮವಿರುತ್ತದೆ. ಸಾಯಿಭಜನೆಯು ರಾತ್ರಿ 9:15 ಕ್ಕೆ ಶೇಜಾರತಿಯೊಂದಿಗೆ ಮುಕ್ತಾಯವಾಗುತ್ತದೆ. 

ವಿಶೇಷ ಉತ್ಸವದ ದಿನಗಳು: 

1.ಶ್ರೀರಾಮನವಮಿ. 
2.ಗುರುಪೂರ್ಣಿಮೆ.
3.ವಿಜಯದಶಮಿ. 

ಸತ್ಸಂಗದ ಸಾಮಾಜಿಕ ಕಾರ್ಯಚಟುವಟಿಕೆಗಳು: 

ಶ್ರೀ ಸಾಯಿನಾಥ ಸೇವಾ ಸಂಸ್ಥೆಯು ಮೈಸೂರಿನ ಅನೇಕ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಪುಸ್ತಕ ಮತ್ತು ಲೇಬಲ್ ಗಳನ್ನು ವಿತರಿಸುತ್ತಿದೆ. ಮೈಸೂರಿನ ಅನೇಕ ವಿದ್ಯಾರ್ಥಿಗಳ ಶಿಕ್ಷಣ ವೆಚ್ಚವನ್ನು ಸಂಸ್ಥೆಯು ಭರಿಸುತ್ತಿದೆ. ಹಲವು ಬಡ ರೋಗಿಗಳು ಆಸ್ಪತ್ರೆ ಸೇರಿದಾಗ ಅವರ ಶಸ್ತ್ರಚಿಕಿತ್ಸೆಯ ಸ್ವಲ್ಪ ಭಾಗವನ್ನು ಸಂಸ್ಥೆಯು ನೀಡುತ್ತಾ ಬಂದಿರುತ್ತದೆ. ಅಷ್ಟೇ ಅಲ್ಲದೆ, ಸಂಸ್ಥೆಯು  ಸಾಯಿಬಾಬಾರವರ ಆರತಿ, ಭಜನೆ ಮತ್ತು ಇತರ ಸಾಯಿಬಾಬಾರವರ ಪುಸ್ತಕಗಳನ್ನು ಭಕ್ತರಿಗೆ ಉಚಿತವಾಗಿ ವಿತರಿಸುವುದರ ಮುಖಾಂತರ ಸಾಯಿಬಾಬಾರವರ ಪ್ರಚಾರವನ್ನು ತನ್ನದೇ ಆದ ರೀತಿಯಲ್ಲಿ ಮಾಡುತ್ತಾ ಬಂದಿರುತ್ತದೆ.

ಸತ್ಸಂಗದ ವಿಳಾಸ ಮತ್ತು ಮಾರ್ಗಸೂಚಿ: 

ಸ್ಥಳ: 
ಚಾಮುಂಡೇಶ್ವರಿ ದೇವಾಲಯದ ಹತ್ತಿರ, ಶಾರದಾದೇವಿನಗರ, ಮೈಸೂರು.

ವಿಳಾಸ: 
ಸಾಯಿನಾಥ ಸೇವಾ ಸಂಸ್ಥೆ,
ನಂ.438, ಎಲ್.ಐ.ಜಿ.-II,
1ನೇ ಅಡ್ಡರಸ್ತೆ, 2ನೇ ಮುಖ್ಯರಸ್ತೆ,
ಶಾರದಾದೇವಿ ನಗರ,
ಮೈಸೂರು-570 023, ಕರ್ನಾಟಕ.

ಸಂಪರ್ಕಿಸಬೇಕಾದ ವ್ಯಕ್ತಿ:
ಶ್ರೀ.ಸಾಯಿ ನಾರಾಯಣ್ ಸಿಂಗ್.

ದೂರವಾಣಿ ಸಂಖ್ಯೆಗಳು: 
+91 94485 44389 / +91 80888 84389 / +91 82123 41389

ಈ ಮೇಲ್ ವಿಳಾಸ:
ssssmys@yahoo.in


ಮಾರ್ಗಸೂಚಿ: 
ಶಾರದಾದೇವಿನಗರ ದ ಬಸ್ ನಿಲ್ದಾಣದಲ್ಲಿ ಇಳಿದು ಕೇವಲ 100 ಮೀಟರ್ ದೂರ ನಡೆದರೆ ಸತ್ಸಂಗ ಸಿಗುತ್ತದೆ. ಸತ್ಸಂಗವು ಚಾಮುಂಡೇಶ್ವರಿ ದೇವಾಲಯದ ಬಳಿ ಇರುತ್ತದೆ. ಮೈಸೂರು ಬಸ್ ನಿಲ್ದಾಣದಿಂದ ಬಸ್ ಸಂಖ್ಯೆಗಳು: 91ಎ, 135, 95, 64. 

ಕನ್ನಡ ಅನುವಾದ: ಶ್ರೀಕಂಠ ಶರ್ಮ
ಸಾಯಿಬಾಬಾ ಪುಸ್ತಕಗಳ ಮುದ್ರಕರು ಮತ್ತು ಪ್ರಕಾಶಕರು - ಶ್ರೀಮತಿ.ಸರೋಜಾ ದೊರೈಸ್ವಾಮಿ  - ಕೃಪೆ:ಸಾಯಿಅಮೃತಧಾರಾ .ಕಾಂ  


ಶ್ರೀಮತಿ.ಸರೋಜಾ ದೊರೈಸ್ವಾಮಿಯವರು ಕರ್ನಾಟಕದ ಮೈಸೂರಿನವರು. ಇವರು ಸಾಯಿಬಾಬಾರವರ ಪುಸ್ತಕಗಳು, ಫೋಟೋಗಳು, ಲೇಬಲ್ ಗಳ ಮುದ್ರಕರು ಮತ್ತು ಪ್ರಕಾಶಕರು. ಅಷ್ಟೇ ಅಲ್ಲದೆ, ಇವರು ಸಮಾಜ ಸೇವಕರು ಕೂಡ.  ಇವರು 23ನೇ ಜೂನ್ 1973 ರಂದು ಮೈಸೂರು ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಅರಳುಕುಪ್ಪೆಯಲ್ಲಿ ಜನಿಸಿದರು. ಇವರ ತಂದೆಯವರು ಶ್ರೀ.ಜೆ.ವೆಂಕಟೇಶ್ ಮತ್ತು ತಾಯಿಯವರು ಶ್ರೀಮತಿ.ಪದ್ಮಮ್ಮ. ಇವರು ಮೈಸೂರು ವಿಶ್ವವಿದ್ಯಾಲಯದಿಂದ ಪದವಿಯನ್ನು ಪಡೆದಿರುತ್ತಾರೆ. ಪ್ರಸ್ತುತ ಇವರು ಶ್ರೀ.ದೊರೈಸ್ವಾಮಿಯವರನ್ನು ವಿವಾಹವಾಗಿ ತಮ್ಮ ಇಬ್ಬರು ಗಂಡು ಮಕ್ಕಳೊಂದಿಗೆ ಮೈಸೂರಿನ ತಮ್ಮ ನಿವಾಸದಲ್ಲಿ ಸುಖೀಜೀವನವನ್ನು ನಡೆಸುತ್ತಿದ್ದಾರೆ.

ಶ್ರೀಮತಿ.ಸರೋಜಾ ದೊರೈಸ್ವಾಮಿಯವರು 2010 ರಲ್ಲಿ ಸಾಯಿಬಾಬಾರವರ ಭಕ್ತರಾಗಿ ಸಾಯಿಪಥಕ್ಕೆ ಬಂದರು. ಶಿರಡಿ ಸಾಯಿಬಾಬಾರವರ ಪರಮ ಭಕ್ತೆಯಾದ ಇವರು ಸಾಯಿಬಾಬಾರವರಿಗೆ ಸಂಬಂಧಿಸಿದ ಎಲ್ಲ ಪುಸ್ತಕಗಳ ಬೆರಳಚ್ಚು ಕೆಲಸವನ್ನು ಬಹಳ ಹೆಚ್ಚಿನ ಮುತುವರ್ಜಿಯನ್ನು ವಹಿಸಿ ಮಾಡುತ್ತಾರೆ. ಮೈಸೂರಿನ ಅನೇಕ ಬಡ ವಿದ್ಯಾರ್ಥಿಗಳ ಶಿಕ್ಷಣ ವೆಚ್ಚವನ್ನು ತಾವೇ ಭರಿಸುತ್ತಿದ್ದಾರೆ. ಅಲ್ಲದೆ, ಬಡ ರೋಗಿಗಳ ಆಸ್ಪತ್ರೆಯ ವೆಚ್ಚದ ಸ್ವಲ್ಪ ಭಾಗವನ್ನು ತಾವು ನೀಡುತ್ತಾ ಬಂದಿರುತ್ತಾರೆ. 

ಇವರು ಮುದ್ರಿಸಿ ಪ್ರಕಟಣೆ ಮಾಡಿದ ಕೆಲವು ಪುಸ್ತಕಗಳು ಈ ಕೆಳಕಂಡಂತೆ ಇವೆ: 
1.ಭಜನ ಚರಣಾಮೃತ 2. ಶ್ರೀ ಸದ್ಗುರು ಸಾಯಿನಾಥ ಸಗುಣೋಪಾಸನಾ (ಸಾಯಿಬಾಬಾರವರ ನಾಲ್ಕು ಆರತಿಗಳ ಸಂಗ್ರಹ) 3. ಸಾಯಿಬಾಬಾರವರ ಆರತಿ ಮತ್ತು ಅದರ ವಿವರಣೆ (ಕನ್ನಡದಲ್ಲಿ) (ಮುದ್ರಣ ಹಂತದಲ್ಲಿದೆ). 

ಶ್ರೀಮತಿ.ಸರೋಜಾ ದೊರೈಸ್ವಾಮಿಯವರು ಮಾಡಿರುವ ಒಂದು ವಿಶೇಷ ಕೆಲಸವೆಂದರೆ ಭಾರತದ ಎಲ್ಲಾ ಮಹಿಮಾನ್ವಿತ ಸಿದ್ದಪುರುಷರ ಭಾವಚಿತ್ರಗಳನ್ನು ಒಂದುಗೂಡಿಸಿ ಒಂದು ಸುಂದರವಾದ ಚಿತ್ರಪಟವನ್ನು ಸಿದ್ದಪಡಿಸಿದ್ದಾರೆ. 

ಶ್ರೀಮತಿ.ಸರೋಜಾ ದೊರೈಸ್ವಾಮಿಯವರ ಸಂಪರ್ಕದ ವಿವರಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ: 

ಸಂಪರ್ಕದ ವಿವರಗಳು: 

ವಿಳಾಸ: 
ನಂ.194, ಎಲ್.ಐ.ಜಿ.-II, 
3ನೇ ಅಡ್ಡರಸ್ತೆ, 3ನೇ ಮುಖ್ಯರಸ್ತೆ, 
ಅರಳಿಕಟ್ಟೆ ಉದ್ಯಾನವನದ ಹತ್ತಿರ, 
ನವಗ್ರಹ ದೇವಸ್ಥಾನದ ಎದುರುಗಡೆ, 
ಶಾರದಾದೇವಿ ನಗರ, 
ಮೈಸೂರು-570 023. ಕರ್ನಾಟಕ. 

ದೂರವಾಣಿ ಸಂಖ್ಯೆಗಳು: 
+91 821 4253435 / +91 94801 93435

ಈ ಮೇಲ್ ವಿಳಾಸ: 


ಕನ್ನಡ ಅನುವಾದ: ಶ್ರೀಕಂಠ ಶರ್ಮ
ಸಾಯಿ ಭಜನ ಗಾಯಕ ಮತ್ತು ಸಮಾಜ ಸೇವಕ  - ಶ್ರೀ.ಸಾಯಿ ನಾರಾಯಣ ಸಿಂಗ್ - ಕೃಪೆ: ಸಾಯಿಅಮೃತಧಾರಾ.ಕಾಂ  


ಶ್ರೀ.ಸಾಯಿ ನಾರಾಯಣ್ ಸಿಂಗ್ ರವರು ಕರ್ನಾಟಕ ರಾಜ್ಯದ ಮೈಸೂರಿನ ಖ್ಯಾತ ಸಾಯಿ ಭಜನ ಗಾಯಕ ಹಾಗೂ ಸಮಾಜ ಸೇವಕರು.  ಇವರು 21ನೇ ಏಪ್ರಿಲ್ 1970 ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರ ತಂದೆಯವರು ಶ್ರೀ.ಶ್ಯಾಮ್ ಸಿಂಗ್ ಮತ್ತು ತಾಯಿಯವರು ಶ್ರೀಮತಿ.ಪದ್ಮ ಸಿಂಗ್. ಇವರು ವಿದೇಶದಿಂದ ಭಾರತಕ್ಕೆ ಬರುವ ಪ್ರವಾಸಿಗರಿಗೆ ಮಾರ್ಗದರ್ಶಕರಾಗಿ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. 

ಇವರು 2009 ರಲ್ಲಿ ಸಾಯಿಬಾಬಾರವರ ಭಕ್ತರಾಗಿ ಸಾಯಿಬಾಬಾರವರ ಪಥಕ್ಕೆ ಬಂದರು. ಇವರು ತಮ್ಮ ಸತ್ಸಂಗದ ಮುಖಾಂತರ ಮೈಸೂರಿನ ಮತ್ತು ಬೆಂಗಳೂರಿನ ಅನೇಕ ಸಾಯಿ ಮಂದಿರಗಳಲ್ಲಿ ಮತ್ತು ಸಾಯಿ ಭಕ್ತರ ಮನೆಗಳಲ್ಲಿ ಭಜನ ಸತ್ಸಂಗ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಇವರು ಶಿರಡಿಗೆ ಪ್ಯಾಕೇಜ್ ಟೂರ್ ಗಳನ್ನು ನಡೆಸುತ್ತಿದ್ದಾರೆ. ಮೈಸೂರಿನ ಅನೇಕ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಪುಸ್ತಕ ಮತ್ತು ಲೇಬಲ್ ಗಳನ್ನು ವಿತರಿಸುತ್ತಿದ್ದಾರೆ. ಮೈಸೂರಿನ ಅನೇಕ ವಿದ್ಯಾರ್ಥಿಗಳ ಶಿಕ್ಷಣ ವೆಚ್ಚವನ್ನು ತಾವೇ ಭರಿಸುತ್ತಿದ್ದಾರೆ. ಹಲವು ಬಡ ರೋಗಿಗಳು ಆಸ್ಪತ್ರೆ ಸೇರಿದಾಗ ಅವರ ಶಸ್ತ್ರಚಿಕಿತ್ಸೆಯ ಸ್ವಲ್ಪ ಭಾಗವನ್ನು ತಾವು ನೀಡುತ್ತಾ ಬಂದಿರುತ್ತಾರೆ.ಅಷ್ಟೇ ಅಲ್ಲದೆ, ಇವರು ಸಾಯಿಬಾಬಾರವರ ಆರತಿ, ಭಜನೆ ಮತ್ತು ಇತರ ಸಾಯಿಬಾಬಾರವರ ಪುಸ್ತಕಗಳನ್ನು ಭಕ್ತರಿಗೆ ಉಚಿತವಾಗಿ ವಿತರಿಸುವುದರ ಮುಖಾಂತರ ಸಾಯಿಬಾಬಾರವರ ಪ್ರಚಾರವನ್ನು ತಮ್ಮದೇ ಆದ ರೀತಿಯಲ್ಲಿ ಮಾಡುತ್ತಾ ಬಂದಿರುತ್ತಾರೆ.

ಪ್ರಸ್ತುತ ಇವರು ಮೈಸೂರಿನ ನಿವಾಸದಲ್ಲಿ ತಮ್ಮ ಮಗನೊಂದಿಗೆ ಸುಖೀ ಜೀವನವನ್ನು ನಡೆಸುತ್ತಿದ್ದಾರೆ.  ಇವರ ಸಂಪರ್ಕದ ವಿವರಗಳನ್ನು ಸಾಯಿ ಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ನೀಡಲಾಗಿದೆ:


ಸಂಪರ್ಕದ ವಿವರಗಳು:


ವಿಳಾಸ: 
ಸಾಯಿನಾಥ ಸೇವಾ ಸಂಸ್ಥೆ,
ನಂ.438, ಎಲ್.ಐ.ಜಿ.-II,
1ನೇ ಅಡ್ಡರಸ್ತೆ, 2ನೇ ಮುಖ್ಯರಸ್ತೆ,
ಶಾರದಾದೇವಿ ನಗರ,
ಮೈಸೂರು-570 023, ಕರ್ನಾಟಕ.


ದೂರವಾಣಿ ಸಂಖ್ಯೆಗಳು: 
+91 94485 44389 / +91 80888 84389 / +91 82123 41389

ಈ ಮೇಲ್ ವಿಳಾಸ:
ssssmys@yahoo.in


ಕನ್ನಡ ಅನುವಾದ: ಶ್ರೀಕಂಠ ಶರ್ಮ

Thursday, June 23, 2011

ಹಾಸನ ಜಿಲ್ಲೆಯ ಶಿರಡಿ ಸಾಯಿಬಾಬಾ ಮಂದಿರ -  ಶ್ರೀ ಶಿರಡಿ ಸಾಯಿನಾಥ ಮಂದಿರ, ಸಾಯಿನಾಥ ರಸ್ತೆ, ಅರಸೀಕೆರೆ-573 103, ಹಾಸನ ಜಿಲ್ಲೆ, ಕರ್ನಾಟಕ - ಕೃಪೆ: ಸಾಯಿಅಮೃತಧಾರಾ.ಕಾಂ


ದೇವಾಲಯದ ವಿಶೇಷತೆಗಳು: 

ಈ ಮಂದಿರವು ಹಾಸನ ಜಿಲ್ಲೆಯ ಅರಸೀಕೆರೆಯ ಸಾಯಿನಾಥ ರಸ್ತೆಯಲ್ಲಿರುತ್ತದೆ. ಈ ಮಂದಿರವು ಅರಸೀಕೆರೆ ಬಸ್ ನಿಲ್ದಾಣದಿಂದ ಕೇವಲ 10 ನಿಮಿಷಗಳ ನಡಿಗೆಯ ದೂರದಲ್ಲಿರುತ್ತದೆ. 

ಈ ಮಂದಿರದ ಭೂಮಿಪೂಜೆಯನ್ನು 1961 ನೇ ಇಸವಿಯಲ್ಲಿ ಮಾಡಲಾಯಿತು. 

ಈ ಮಂದಿರದ ಉದ್ಘಾಟನೆಯನ್ನು 14ನೇ ಡಿಸೆಂಬರ್ 1961 ರಂದು ಶ್ರೀಶೈಲದ ಜಗದ್ಗುರು ಸೂರ್ಯ ಸಿಂಹಾಸನಾದೀಶ್ವರ ಶ್ರೀ.ಶ್ರೀ.ಶ್ರೀ.ವಾಗೀಶ್ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರು ನೆರವೇರಿಸಿದರು. 

ಈ ದೇವಾಲಯವನ್ನು ದಿವಂಗತ ಶ್ರೀ.ಬಿ.ಸಿ.ಶಿವಣ್ಣನವರು ನಿರ್ಮಿಸಿರುತ್ತಾರೆ. ಇವರ ಪುತ್ರರಾದ ಶ್ರೀ.ಬಿ.ಎಸ್.ಸಾಯಿಕೃಪ ರವರು ದೇವಾಲಯದ ದಿನನಿತ್ಯದ ಆಗುಹೋಗುಗಳನ್ನು ಮತ್ತು ಅಭಿವೃದ್ದಿ ಕಾರ್ಯಗಳನ್ನು ಬಹಳ ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ.
 
ದೇವಾಲಯದಲ್ಲಿ ಸುಮಾರು 5 ಅಡಿ ಎತ್ತರದ ಶಿರಡಿ ಸಾಯಿಬಾಬಾರವರ ಸುಂದರವಾದ ಅಮೃತಶಿಲೆಯ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ. ಸಾಯಿಬಾಬಾರವರ ಜೆರ್ಮನ್ ಬೆಳ್ಳಿಯ ವಿಗ್ರಹ ಮತ್ತು ಪುಟ್ಟ ಬೆಳ್ಳಿಯ ವಿಗ್ರಹವು ಸಾಯಿಬಾಬಾರವರ ವಿಗ್ರಹದ ಬಳಿ ಇರಿಸಲಾಗಿದ್ದು ಈ ವಿಗ್ರಹಗಳನ್ನು ದಿನನಿತ್ಯದ ಅಭಿಷೇಕಕ್ಕೆ ಬಳಸಲಾಗುತ್ತಿದೆ. 

ಸಾಯಿಬಾಬಾ ದೇವಾಲಯದ ಎಡಭಾಗದಲ್ಲಿ  ವಿಷಪರಿಹಾರೇಶ್ವರ ದೇವಾಲಯವನ್ನು ಸ್ಥಾಪಿಸಲಾಗಿದ್ದು ಇಲ್ಲಿ ಕಪ್ಪು ಶಿಲೆಯ  ವಿಷಪರಿಹಾರೇಶ್ವರ ದೇವರನ್ನು ಪ್ರತಿಷ್ಟಾಪಿಸಲಾಗಿದೆ. ವಿಷಪರಿಹಾರೇಶ್ವರ ದೇವರ ಎದುರುಗಡೆ ಕಪ್ಪು ಶಿಲೆಯ ನಂದಿಯ ವಿಗ್ರಹವನ್ನು ಸ್ಥಾಪಿಸಲಾಗಿದೆ. 

ಸಾಯಿಬಾಬಾ ಮಂದಿರದ ಎದುರುಗಡೆಯಲ್ಲಿರುವಂತೆ ರಂಗಮಂದಿರವನ್ನು ಸ್ಥಾಪಿಸಲಾಗಿದ್ದು ಈ ಸ್ಥಳದಲ್ಲಿ ವಿಶೇಷ ಉತ್ಸವದ ದಿನಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ.














ಮಂದಿರದ ಕಾರ್ಯಚಟುವಟಿಕೆಗಳು:

ದಿನನಿತ್ಯದ ಕಾರ್ಯಕ್ರಮಗಳು:

ಆರತಿಯ ಸಮಯ:

ಪ್ರತಿದಿನ ಬೆಳಿಗ್ಗೆ 11 ಘಂಟೆಗೆ ಮತ್ತು ಗುರುವಾರ ಮಧ್ಯಾನ್ಹ 12:30 ಕ್ಕೆ. 
ಪ್ರತಿದಿನ ರಾತ್ರಿ 7:45 ಕ್ಕೆ ಮತ್ತು ಗುರುವಾರ ರಾತ್ರಿ 9 ಘಂಟೆಗೆ 

ಪ್ರತಿನಿತ್ಯ ಬೆಳಿಗ್ಗೆ 9:45 ಕ್ಕೆ ಸಾಯಿಬಾಬಾರವರ ಬೆಳ್ಳಿಯ ವಿಗ್ರಹಕ್ಕೆ ಮತ್ತು ಪ್ರತಿ ಗುರುವಾರ ಸಾಯಿಬಾಬಾರವರ ಅಮೃತ ಶಿಲೆಯ ವಿಗ್ರಹಕ್ಕೆ  ಕ್ಷೀರಾಭಿಷೇಕವನ್ನು ಮಾಡಲಾಗುತ್ತದೆ. ಸೇವಾ ಶುಲ್ಕ 50/- ರುಪಾಯಿಗಳು. 

ಪ್ರತಿದಿನ ಸಂಜೆ 7 ಘಂಟೆಯಿಂದ 7 ಘಂಟೆ 45 ನಿಮಿಷದವರೆಗೆ ಸಾಯಿ ಭಜನೆಯ ಕಾರ್ಯಕ್ರಮವಿರುತ್ತದೆ.

ವಿಶೇಷ ಉತ್ಸವದ ದಿನಗಳು: 

1. ಮಂದಿರದ ವಾರ್ಷಿಕೋತ್ಸವ ಪ್ರತಿ ವರ್ಷದ ಮಾರ್ಗಶಿರ ಶುದ್ಧ ಸಪ್ತಮಿಯಂದು. 
2. ಶಿವರಾತ್ರಿ -ವಿಷಪರಿಹಾರೇಶ್ವರ ಮತ್ತು ಸಾಯಿಬಾಬಾ ವಿಗ್ರಹಕ್ಕೆ 4 ಯಾಮಗಳ ವಿಶೇಷ ಅಭಿಷೇಕ ಪೂಜೆ.
3. ಶ್ರೀರಾಮನವಮಿ. 
4. ಗುರು ಪೂರ್ಣಿಮೆ.
5 .ವಿಜಯದಶಮಿ.

ವಾರ್ಷಿಕೋತ್ಸವದ ದಿನ ಪಲ್ಲಕ್ಕಿ ಉತ್ಸವ ಮತ್ತು ಮಂದಿರಕ್ಕೆ ಬರುವ ಎಲ್ಲ ಭಕ್ತರಿಗೆ ಅನ್ನದಾನ ಹಮ್ಮಿಕೊಳ್ಳಲಾಗುತ್ತದೆ. ಆ ದಿನ ಸಂಜೆ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮವನ್ನು ಕೂಡ ಹಮ್ಮಿಕೊಳ್ಳಲಾಗುತ್ತದೆ. 

ಕಾರ್ತೀಕ ದೀಪೋತ್ಸವ ಕಾರ್ಯಕ್ರಮವನ್ನು ಕೂಡ ಸಾಯಿ ಮಂದಿರದಲ್ಲಿ ಪ್ರತಿ ವರ್ಷ ತಪ್ಪದೆ ನಡೆಸಿಕೊಂಡು ಬರಲಾಗುತ್ತಿದೆ. 

ಮಂದಿರದ ವಿಳಾಸ ಮತ್ತು ಮಾರ್ಗಸೂಚಿ: 

ಸ್ಥಳ:
ಕೆ.ವಿ.ಪೆಟ್ರೋಲ್ ಬಂಕ್ ವೃತ್ತದ ಎದುರುಗಡೆ ರಸ್ತೆ, ಸಾಯಿನಾಥ ರಸ್ತೆ, ಅರಸೀಕೆರೆ. 
 
ವಿಳಾಸ:
ಶ್ರೀ ಶಿರಡಿ ಸಾಯಿನಾಥ ಮಂದಿರ, 
ಸಾಯಿನಾಥ ರಸ್ತೆ, ಅರಸೀಕೆರೆ-573 103, 
ಹಾಸನ ಜಿಲ್ಲೆ, ಕರ್ನಾಟಕ                                                                      
 
ಸಂಪರ್ಕಿಸಬೇಕಾದ ವ್ಯಕ್ತಿಗಳು:                                                                                                                    ಶ್ರೀ.ಬಿ.ಎಸ್.ಸಾಯಿಕೃಪ / ಶ್ರೀ.ಎಂ.ವಿ.ಸಾಯಿರಾಂ                                                             

ದೂರವಾಣಿ ಸಂಖ್ಯೆಗಳು:                                                                                                                                 + 91 90359 03394 / +91 99643 20985

ಈ ಮೇಲ್ ವಿಳಾಸ:                                                                                                               savithakrupa@gmail.com
 
ಮಾರ್ಗಸೂಚಿ: 
ಅರಸೀಕೆರೆ ಬಸ್ ನಿಲ್ದಾಣದಲ್ಲಿ ಇಳಿಯುವುದು. ಬಸ್ ನಿಲ್ದಾಣದಿಂದ ಪಿ.ಪಿ.ವೃತ್ತದ ಬಳಿಗೆ ತೆರಳಿ ಅಲ್ಲಿ ಎಡಕ್ಕೆ ತಿರುಗಿ ಸ್ವಲ್ಪ ದೂರ ನಡೆದರೆ ಕೆ.ವಿ.ಪೆಟ್ರೋಲ್ ಬಂಕ್ ವೃತ್ತ ಸಿಗುತ್ತದೆ. ಅಲ್ಲಿ ಬಲಕ್ಕೆ ತಿರುಗಿ ಸಾಯಿನಾಥ ರಸ್ತೆಯಲ್ಲಿ 2 ನಿಮಿಷ ನಡೆದರೆ ದೇವಾಲಯ ಸಿಗುತ್ತದೆ. ದೇವಾಲಯವು ಅಯೋಧ್ಯ ಹೋಟೆಲ್ ಪಕ್ಕದಲ್ಲಿರುತ್ತದೆ. ಅರಸೀಕೆರೆ ಬಸ್ ನಿಲ್ದಾಣದಿಂದ 10 ನಿಮಿಷ ನಡೆದರೆ ದೇವಾಲಯ ಸಿಗುತ್ತದೆ.

ಕನ್ನಡ ಅನುವಾದ: ಶ್ರೀಕಂಠ ಶರ್ಮ 

Saturday, June 18, 2011

ಸಾಯಿ ಬರಹಗಾರ ಮತ್ತು  ಪ್ರವಚನಕಾರ ಶ್ರೀ.ವೋರುಗಂಟಿ ರಾಮಕೃಷ್ಣ  ಪ್ರಸಾದ್ - ಕೃಪೆ: ಸಾಯಿ ಅಮೃತಧಾರಾ.ಕಾಂ 


ಶ್ರೀ.ವೋರುಗಂಟಿ ರಾಮಕೃಷ್ಣ  ಪ್ರಸಾದ್ ರವರು ಖ್ಯಾತ ಬರಹಗಾರರು ಮತ್ತು ಪ್ರವಚನಕಾರರು. ಇವರು 24ನೇ ಸೆಪ್ಟೆಂಬರ್ 1942 ರಂದು ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಯೆನುಗುಲಮಹಲ್ ಗ್ರಾಮದಲ್ಲಿ ಜನಿಸಿದರು. ಇವರು ಭಾರತೀಯ ರೈಲ್ವೇ ಇಲಾಖೆಯಲ್ಲಿ ಅನೇಕ ವರ್ಷಗಳ ಕಾಲ ವಿವಿಧ ಪ್ರತಿಷ್ಟಿತ ಹುದ್ದೆಗಳನ್ನು ಅಲಂಕರಿಸಿ 1993 ರಲ್ಲಿ ನಿವೃತ್ತಿ ಹೊಂದಿದರು. ಇವರು 1970ನೇ ಇಸವಿಯಿಂದ ಸಾಯಿಬಾಬಾರವರ ಭಕ್ತರಾಗಿದ್ದು ಇದುವರೆಗೂ ವಿವಿಧ ವಿಷಯಗಳ ಮೇಲೆ ತೆಲುಗು ಭಾಷೆಯಲ್ಲಿ ಸರಿ ಸುಮಾರು 100 ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿರುತ್ತಾರೆ. ಅಲ್ಲದೇ, ಶಿರಡಿ ಸಾಯಿಬಾಬಾರವರ ಮೇಲೆ ಸುಮಾರು 13 ಪುಸ್ತಕಗಳನ್ನೂ ಕೂಡ ಬರೆದಿರುತ್ತಾರೆ. ಇವರು ಆಂಧ್ರಪ್ರದೇಶದ ಬಹುತೇಕ ಸಾಯಿಬಾಬಾ ಮಂದಿರಗಳಲ್ಲಿ ತಮ್ಮ ಪ್ರವಚನವನ್ನು ನೀಡಿದ್ದಾರೆ. ಅಲ್ಲದೇ, ಶಿರಡಿಯ ಸಾಯಿಬಾಬಾ ಸಂಸ್ಥಾನ, ಕರ್ನಾಟಕದ ಗಾಣಗಾಪುರ ದತ್ತಾತ್ರೇಯ ದೇವಸ್ಥಾನ, ಮಹಾರಾಷ್ಟ್ರದ ಅಕ್ಕಲಕೋಟೆಯ ಸ್ವಾಮಿ ಸಮರ್ಥ ಸಂಸ್ಥಾನಗಳಲ್ಲಿ ಕೂಡ ತಮ್ಮ ಪ್ರವಚನವನ್ನು ನೀಡಿದ್ದಾರೆ. ಶಿರಡಿಯಲ್ಲಿ ಸತತವಾಗಿ 120 ದಿನಗಳ ಕಾಲ ಸಾಯಿ ಸತ್ಯನಾರಾಯಣ ವ್ರತವನ್ನು ಆಚರಿಸಿದ ಹೆಗ್ಗಳಿಕೆ ಇವರದು. ಇವರು ನೀಡಿದ ಪ್ರವಚನಗಳಿಗಾಗಿ ಆಂಧ್ರಪ್ರದೇಶದ ಅನೇಕ ಸಾಯಿಬಾಬಾ ಮಂದಿರಗಳಲ್ಲಿ ಇವರು ಸನ್ಮಾನವನ್ನು ಪಡೆದಿರುತ್ತಾರೆ. 

ಶ್ರೀ.ವೋರುಗಂಟಿ ರಾಮಕೃಷ್ಣ ಪ್ರಸಾದ್ ರವರು ವಿಜಯವಾಡದ "ವಿಶ್ವ ಮಾನವತಾ ಗುರುಪೀಠಮ್" ನ ಸಂಸ್ಥಾಪಕ ಅಧ್ಯಕ್ಷರಾಗಿರುತ್ತಾರೆ ಮತ್ತು ಈ ಸಂಸ್ಥೆಯ ಅಡಿಯಲ್ಲಿ "ಸೌಭಾಗ್ಯ ಸಾಯಿ ಮಂದಿರ" ವನ್ನು ಕೂಡ ನಿರ್ಮಾಣ ಮಾಡಿರುತ್ತಾರೆ. 

ಶ್ರೀ.ವೋರುಗಂಟಿ ರಾಮಕೃಷ್ಣ ಪ್ರಸಾದ್ ರವರು ಶ್ರೀಮತಿ.ಸೂರ್ಯಕುಮಾರಿಯವರನ್ನು ವಿವಾಹವಾಗಿರುತ್ತಾರೆ. ಇವರಿಗೆ  ಒಬ್ಬಳು ಹೆಣ್ಣು ಮಗಳು ಮತ್ತು ಇಬ್ಬರು ಗಂಡು ಮಕ್ಕಳು. ಪ್ರಸ್ತುತ, ಇವರು ತಮ್ಮ ಧರ್ಮಪತ್ನಿ ಶ್ರೀಮತಿ.ಸೂರ್ಯಕುಮಾರಿಯವರೊಂದಿಗೆ ತಮ್ಮ ವಿಜಯವಾಡ ನಿವಾಸದಲ್ಲಿ ಸುಖೀಜೀವನವನ್ನು ನಡೆಸುತ್ತಿದ್ದಾರೆ. 

ಇವರ ಸಾಧನೆಯ ಮೈಲಿಗಲ್ಲುಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ: 

ಇವರು ಶಿರಡಿ ಸಾಯಿಬಾಬಾರವರ ಬಗ್ಗೆ ರಚಿಸಿದ 13 ಪುಸ್ತಕಗಳ ವಿವರ ಈ ಕೆಳಕಂಡಂತೆ ಇದೆ: 

1. ಅಡಗಂಡಿ ಚಬುತಾನು ಸಾಯಿಬಾಬಾ.
2. ಶ್ರೀ ಸದ್ಗುರು ಸಾಯಿ ಲೀಲಾಮೃಥಮು. 
3. ಸದ್ಗುರು ಸಾಯಿ - ಶ್ರೀ.ಗುರು ಚರಣಾಲು.
4. ಶ್ರೀ ಸದ್ಗುರು ಸಾಯಿ ಭಕ್ತ ಲೀಲಾಮೃಥಮು.
5. ಶ್ರೀ ಸಾಯಿನಾಥ ಚಾಲೀಸ ಮರಿಯು ನಿತ್ಯ ಪಾರಾಯಣ ಸ್ತೋತ್ರಮುಲು.
6 . ನೀನುಂಡೆ ಭಯಮೆಲ? ಶಿರಡಿ ಸಾಯಿಬಾಬಾ ಆಶಿಸ್ಸುಲು. 
7. ಸದ್ಗುರು ಸಾಯಿ ನಿತ್ಯ ಪ್ರಾರ್ಥನಾ ಸ್ತೋತ್ರಮುಲು. 
8. ಶ್ರೀ ಸಾಯಿ ಚರಣಂ ಮಾಕಿಕ ಶರಣಂ. 
9. ನಾನಾ ಸಾಹೇಬ್ ಚಾನ್ದೋರ್ಕರ್ ಕು ಸಾಯಿಬಾಬಾ ಚಪ್ಪಿನ ಶ್ರೀ ಶಿರಡಿ ಸಾಯಿನಾಥ ಭಗವದ್ಗೀತಾ. 
10.ಸರ್ವಕಾರ್ಯ ಸಿದ್ದಿಕಿ ಶ್ರೀ ಸದ್ಗುರು ಸಾಯಿ ಚರಿತ್ರ. 
11.ಶ್ರೀ ಸಾಯಿ ಸತ್ಯವ್ರತಂ. 
12.ಶ್ರೀ.ಗುರು ಚರಿತ್ರ - ನಿತ್ಯ ಪಾರಾಯಣ ಗ್ರಂಥಮು. 
13.ಶ್ರೀ ಸದ್ಗುರು ಸಾಯಿಬಾಬಾ ನಿತ್ಯ ಪಾರಾಯಣ ಗ್ರಂಥಮು.

ಶ್ರೀ.ವೋರುಗಂಟಿ ರಾಮಕೃಷ್ಣ ಪ್ರಸಾದ್ ರವರ ಪುಸ್ತಕಗಳಿಗಾಗಿ ಮತ್ತು ಪ್ರವಚನಗಳಿಗಾಗಿ ಈ ಕೆಳಕಂಡ ವಿಳಾಸದಲ್ಲಿ ಸಾಯಿಭಕ್ತರು ಸಂಪರ್ಕಿಸಬಹುದು: 

ವಿಳಾಸ: 
ಶ್ರೀ.ಸಾಯಿ ಸುವರ್ಚಲ ಸದನ, ರಾಮಲಿಂಗೇಶ್ವರ ಪೇಟೆ, 
6ನೇ ಬಲ ತಿರುವು, ವಿಜಯವಾಡ-520 003, ಆಂಧ್ರಪ್ರದೇಶ. 

ದೂರವಾಣಿ ಸಂಖ್ಯೆಗಳು:
+91 866 2532139 / +91 93930 07648  

ಈ ಮೇಲ್ ವಿಳಾಸ: 

ಅಂತರ್ಜಾಲ ತಾಣ:   


ಕನ್ನಡ ಅನುವಾದ:ಶ್ರೀಕಂಠ ಶರ್ಮ
ಮಹಾರಾಷ್ಟ್ರ ಪೋಲಿಸ್ ಮಹಾನಿರ್ದೇಶಕರ ಶಿರಡಿ ಭೇಟಿ - 18ನೇ ಜೂನ್ 2011 - ಕೃಪೆ: ಸಾಯಿಅಮೃತಧಾರಾ.ಕಾಂ  

ಮಹಾರಾಷ್ಟ್ರ ರಾಜ್ಯದ  ಪೋಲಿಸ್ ಮಹಾನಿರ್ದೇಶಕ ಶ್ರೀ.ಪಾರ್ಸನಿಸ್ ರವರು ಇದೇ ತಿಂಗಳ 18ನೇ ಜೂನ್ 2011, ಶನಿವಾರ ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿ ದರ್ಶನ ಪಡೆದರು. ದರ್ಶನದ ನಂತರ ಅವರನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷರಾದ ಶ್ರೀ.ಜಯಂತ್ ಸಾಸನೆಯವರು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಯಾದ ಶ್ರೀ.ಕಿಶೋರ್ ಮೋರೆಯವರು ಕೂಡ ಉಪಸ್ಥಿತರಿದ್ದರು. 




ಕನ್ನಡ ಅನುವಾದ:ಶ್ರೀಕಂಠ ಶರ್ಮ

Wednesday, June 15, 2011

ರಾಮನಗರ ಜಿಲ್ಲೆಯ ಶಿರಡಿ ಸಾಯಿಬಾಬಾ ಮಂದಿರ - ಶ್ರೀ ಶಿರಡಿ ಸಾಯಿನಾಥ ಮಂದಿರ, ಶ್ರೀ.ಶಿರಡಿ ಸಾಯಿನಾಥ ಸೇವಾ ಸಮಿತಿ, ಲೇಂಡಿ ಗಾರ್ಡನ್, ಸಾಯಿಬಾಬಾ ಎಸ್ಟೇಟ್, ಸರ್ವೇ ನಂ.71/2, ಸೀಗೇಕೋಟೆ,  ಕಸಬ ಹೋಬಳಿ, ಶಿವನಹಳ್ಳಿ ಪಂಚಾಯತಿ, ಕನಕಪುರ ತಾಲ್ಲೂಕು, ರಾಮನಗರ ಜಿಲ್ಲೆ-562 117, ಕರ್ನಾಟಕ - ಕೃಪೆ: ಸಾಯಿಅಮೃತಧಾರಾ.ಕಾಂ

ದೇವಾಲಯದ ವಿಶೇಷತೆಗಳು: 

ಈ ಮಂದಿರವು ಕನಕಪುರ ಸಾತನೂರು ಮುಖ್ಯರಸ್ತೆಯಲ್ಲಿರುವ ಸೀಗೇಕೋಟೆ ಎಂಬ ಗ್ರಾಮದಲ್ಲಿರುತ್ತದೆ. ಈ ಮಂದಿರವು ಕನಕಪುರ  ಬಸ್ ನಿಲ್ದಾಣದಿಂದ ಕೇವಲ ಐದು ಕಿಲೋಮೀಟರ್ ದೂರದಲ್ಲಿರುತ್ತದೆ. 

ಈ ಮಂದಿರದ ಭೂಮಿಪೂಜೆಯನ್ನು 2006 ನೇ ಇಸವಿಯಲ್ಲಿ ಮಾಡಲಾಯಿತು. 

ಈ ಮಂದಿರದ ಉದ್ಘಾಟನೆಯನ್ನು 23ನೇ ಫೆಬ್ರವರಿ 2008 ರಂದು ಹೈದರಾಬಾದ್ ನ ವೇದ ಬ್ರಹ್ಮ ಶ್ರೀ.ಕೆ.ವಿ.ಬಿ.ಸ್ವಾಮಿಯವರು ನೆರವೇರಿಸಿದರು. 

ಈ ದೇವಾಲಯವನ್ನು ಶ್ರೀ.ಸದಾಶಿವ ರೆಡ್ಡಿಯವರು ತಮ್ಮ ಸಹೋದರರ ನೆರವಿನೊಂದಿಗೆ ತಮ್ಮ ಭವ್ಯವಾದ 20 ಎಕರೆ ಜಮೀನಿನ ಮಧ್ಯದಲ್ಲಿ ನಿರ್ಮಿಸಿರುತ್ತಾರೆ.  ದೇವಾಲಯವು ಸುಂದರವಾದ ಪ್ರಕೃತಿಯ ಮಡಿಲಿನ ಮಧ್ಯದಲ್ಲಿ  ಕಂಗೊಳಿಸುತ್ತಿರುವುದು ಇಲ್ಲಿನ ಒಂದು ವಿಶೇಷ. 

ದೇವಾಲಯವು ಬೆಳಗಿನ ಜಾವ 4:45 ಕ್ಕೆ ಕಾಕಡಾ ಆರತಿಯೊಂದಿಗೆ ತೆರೆಯುತ್ತದೆ ಮತ್ತು ರಾತ್ರಿ 8:15 ಕ್ಕೆ ಶೇಜಾರತಿಯೊಂದಿಗೆ ಮುಚ್ಚುತ್ತದೆ.

ದೇವಾಲಯದಲ್ಲಿ ಸುಮಾರು 4 ಅಡಿ ಎತ್ತರದ ಶಿರಡಿ ಸಾಯಿಬಾಬಾರವರ ಸುಂದರವಾದ ಅಮೃತಶಿಲೆಯ ವಿಗ್ರಹವು ಮಧ್ಯಭಾಗದಲ್ಲಿದೆ. ಸಾಯಿಬಾಬಾರವರ ವಿಗ್ರಹದ ಎಡಭಾಗದಲ್ಲಿ ಕಪ್ಪು ಶಿಲೆಯ ಗಣಪತಿಯ ವಿಗ್ರಹವನ್ನು ಮತ್ತು ಬಲಭಾಗದಲ್ಲಿ ಅಮೃತಶಿಲೆಯ ದತ್ತಾತ್ರೇಯರ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ. ಸಾಯಿಬಾಬಾರವರ ವಿಗ್ರಹದ ಎದುರುಗಡೆ ಪವಿತ್ರ ಪಾದುಕೆಗಳನ್ನು ಸ್ಥಾಪಿಸಲಾಗಿದೆ. ಪಂಚಲೋಹದ ಸಾಯಿಬಾಬಾರವರ ವಿಗ್ರಹ, ಶಿರಡಿಯಲ್ಲಿರುವಂತೆ ಸಾಯಿಬಾಬಾರವರ ಎದುರುಗಡೆ ನಂದಿಯ ವಿಗ್ರಹವನ್ನು ಕೂಡ ಸಾಯಿಭಕ್ತರು ನೋಡಬಹುದು. 

ದೇವಾಲಯದ ಹೊರಭಾಗದಲ್ಲಿ ಶ್ರೀ ಸಾಯಿ ಕೋಟಿ ಸ್ಥೂಪವನ್ನು ಮತ್ತು ಸ್ಥೂಪದ ಮೇಲ್ಭಾಗದಲ್ಲಿ ಪವಿತ್ರ ಅಮೃತ ಶಿಲೆಯ ಪಾದುಕೆಗಳನ್ನೂ ಸ್ಥಾಪಿಸಲಾಗಿದೆ.

ಅಲ್ಲದೆ, ದೇವಾಲಯದ ಹೊರಭಾಗದಲ್ಲಿ ನವಗ್ರಹ ವೃಕ್ಷಗಳನ್ನೂ, ಪವಿತ್ರ ಅರಳಿ ಮರ ಮತ್ತು ಬೇವಿನ ಮರದ ಕೆಳಗಡೆ ಸ್ಥಾಪಿಸಲಾಗಿರುವ ನಾಗದೇವತೆಗಳ ವಿಗ್ರಹ, ಸುಬ್ರಹ್ಮಣ್ಯ ದೇವರ ವಿಗ್ರಹಗಳನ್ನೂ, ಮುನೇಶ್ವರ ದೇವರ ವಿಗ್ರಹಗಳನ್ನೂ ಕೂಡ ಸಾಯಿಭಕ್ತರು ನೋಡಬಹುದು.














ಮಂದಿರದ ಕಾರ್ಯಚಟುವಟಿಕೆಗಳು:

ದಿನನಿತ್ಯದ ಕಾರ್ಯಕ್ರಮಗಳು:

ಆರತಿಯ ಸಮಯ:

ಕಾಕಡಾ ಆರತಿ : ಬೆಳಿಗ್ಗೆ 4:45 ಘಂಟೆಗೆ 
ಮಧ್ಯಾನ್ಹ ಆರತಿ: ಮಧ್ಯಾನ್ಹ 11.45 ಘಂಟೆಗೆ 
ಧೂಪಾರತಿ: ಸಂಜೆ 5:30 ಘಂಟೆಗೆ 
ಶೇಜಾರತಿ: ರಾತ್ರಿ 8:15 ಘಂಟೆಗೆ 

ಪ್ರತಿನಿತ್ಯ ಬೆಳಿಗ್ಗೆ 6 ಘಂಟೆಗೆ  ಸಾಯಿಬಾಬಾರವರ ಪಂಚಲೋಹ ವಿಗ್ರಹಕ್ಕೆ ಕ್ಷೀರಾಭಿಷೇಕ ಮತ್ತು ಪಂಚಾಮೃತ ಅಭಿಷೇಕ ಮಾಡಲಾಗುತ್ತದೆ. 

ಪ್ರತಿ ತಿಂಗಳ ಬಹುಳ ಚತುರ್ಥಿಯಂದು ಸಂಕಷ್ಟ ಚತುರ್ಥಿಯನ್ನು ರಾತ್ರಿ 8:00 ರಿಂದ 9:00 ಘಂಟೆಯವರೆಗೆ ಆಚರಿಸಲಾಗುತ್ತದೆ.

ವಿಶೇಷ ಉತ್ಸವದ ದಿನಗಳು: 



1. ಮಂದಿರದ ವಾರ್ಷಿಕೋತ್ಸವ ಪ್ರತಿ ವರ್ಷದ ಶಿವರಾತ್ರಿಯಂದು. 
2. ಗುರು ಪೂರ್ಣಿಮೆ.
3. ಶ್ರೀರಾಮನವಮಿ. 
4. ವಿಜಯದಶಮಿ.
5 .ಬುದ್ಧ ಪೂರ್ಣಿಮೆ. 
6.ದತ್ತ ಜಯಂತಿ.


ಮಂದಿರದ ವಿಳಾಸ ಮತ್ತು ಮಾರ್ಗಸೂಚಿ: 


ಸ್ಥಳ:
ಸೀಗೇಕೋಟೆ ಗ್ರಾಮ, ಶಿವನಹಳ್ಳಿ ಪಂಚಾಯತಿ, ಕಸಬ ಹೋಬಳಿ, ಕನಕಪುರ ತಾಲ್ಲೂಕು.
ವಿಳಾಸ:
ಶ್ರೀ ಶಿರಡಿ ಸಾಯಿನಾಥ ಮಂದಿರ, 
ಶ್ರೀ.ಶಿರಡಿ ಸಾಯಿನಾಥ ಸೇವಾ ಸಮಿತಿ, 
ಲೇಂಡಿ ಗಾರ್ಡನ್, ಸಾಯಿಬಾಬಾ ಎಸ್ಟೇಟ್, 
ಸರ್ವೇ ನಂ.71/2, ಸೀಗೇಕೋಟೆ,  ಕಸಬ ಹೋಬಳಿ, 
ಶಿವನಹಳ್ಳಿ ಪಂಚಾಯತಿ, ಕನಕಪುರ ತಾಲ್ಲೂಕು,
ರಾಮನಗರ ಜಿಲ್ಲೆ-562 117, ಕರ್ನಾಟಕ                                                                                       
 
ಸಂಪರ್ಕಿಸಬೇಕಾದ ವ್ಯಕ್ತಿಗಳು:                                                                                                                    ಶ್ರೀ.ಸದಾಶಿವ ರೆಡ್ಡಿ - ಅಧ್ಯಕ್ಷರು / ಶ್ರೀ.ಟಿ.ಎಂ.ಪ್ರಸಾದ್  - ಅರ್ಚಕರು.                                                             
 
ದೂರವಾಣಿ ಸಂಖ್ಯೆಗಳು:                                                                                                                                 + 91 93429  06535/+91 93417 03673 / +91 93429 06535 / +91 95388 84111 / +91 95388 84116-ಅರ್ಚಕರು. 

ಮಾರ್ಗಸೂಚಿ: 
ಕನಕಪುರ ಬಸ್ ನಿಲ್ದಾಣದಲ್ಲಿ ಇಳಿದು, ಹೊರಳುಗಲ್ಲು ಗ್ರಾಮಕ್ಕೆ ಹೋಗುವ ಬಸ್ ಅಥವಾ ಸಾತನೂರಿಗೆ ಹೋಗುವ ಬಸ್ಸಿನಲ್ಲಿ ಹೋಗಬೇಕು. ಕನಕಪುರ ಬಸ್ ನಿಲ್ದಾಣದಿಂದ ಸೀಗೇಕೋಟೆ ಗ್ರಾಮವು ಸುಮಾರು 5 ಕಿಲೋಮೀಟರ್ ದೂರದಲ್ಲಿರುತ್ತದೆ. ಸೀಗೇಕೋಟೆ ಬಸ್ ನಿಲ್ದಾಣದಿಂದ ಸುಮಾರು 10 ನಿಮಿಷ ನಡೆದರೆ ದೇವಾಲಯ ಸಿಗುತ್ತದೆ. ಕನಕಪುರ ಬಸ್ ನಿಲ್ದಾಣದಿಂದ ಪ್ರತಿ ಹತ್ತು ನಿಮಿಷಗಳಿಗೊಮ್ಮೆ ಆಟೋ ಸೌಲಭ್ಯ ಸೀಗೇಕೋಟೆ ಗ್ರಾಮಕ್ಕಿರುತ್ತದೆ.

 ಕನ್ನಡ ಅನುವಾದ: ಶ್ರೀಕಂಠ ಶರ್ಮ