Wednesday, June 15, 2011

ರಾಮನಗರ ಜಿಲ್ಲೆಯ ಶಿರಡಿ ಸಾಯಿಬಾಬಾ ಮಂದಿರ - ಶ್ರೀ ಶಿರಡಿ ಸಾಯಿನಾಥ ಮಂದಿರ, ಶ್ರೀ.ಶಿರಡಿ ಸಾಯಿನಾಥ ಸೇವಾ ಸಮಿತಿ, ಲೇಂಡಿ ಗಾರ್ಡನ್, ಸಾಯಿಬಾಬಾ ಎಸ್ಟೇಟ್, ಸರ್ವೇ ನಂ.71/2, ಸೀಗೇಕೋಟೆ,  ಕಸಬ ಹೋಬಳಿ, ಶಿವನಹಳ್ಳಿ ಪಂಚಾಯತಿ, ಕನಕಪುರ ತಾಲ್ಲೂಕು, ರಾಮನಗರ ಜಿಲ್ಲೆ-562 117, ಕರ್ನಾಟಕ - ಕೃಪೆ: ಸಾಯಿಅಮೃತಧಾರಾ.ಕಾಂ

ದೇವಾಲಯದ ವಿಶೇಷತೆಗಳು: 

ಈ ಮಂದಿರವು ಕನಕಪುರ ಸಾತನೂರು ಮುಖ್ಯರಸ್ತೆಯಲ್ಲಿರುವ ಸೀಗೇಕೋಟೆ ಎಂಬ ಗ್ರಾಮದಲ್ಲಿರುತ್ತದೆ. ಈ ಮಂದಿರವು ಕನಕಪುರ  ಬಸ್ ನಿಲ್ದಾಣದಿಂದ ಕೇವಲ ಐದು ಕಿಲೋಮೀಟರ್ ದೂರದಲ್ಲಿರುತ್ತದೆ. 

ಈ ಮಂದಿರದ ಭೂಮಿಪೂಜೆಯನ್ನು 2006 ನೇ ಇಸವಿಯಲ್ಲಿ ಮಾಡಲಾಯಿತು. 

ಈ ಮಂದಿರದ ಉದ್ಘಾಟನೆಯನ್ನು 23ನೇ ಫೆಬ್ರವರಿ 2008 ರಂದು ಹೈದರಾಬಾದ್ ನ ವೇದ ಬ್ರಹ್ಮ ಶ್ರೀ.ಕೆ.ವಿ.ಬಿ.ಸ್ವಾಮಿಯವರು ನೆರವೇರಿಸಿದರು. 

ಈ ದೇವಾಲಯವನ್ನು ಶ್ರೀ.ಸದಾಶಿವ ರೆಡ್ಡಿಯವರು ತಮ್ಮ ಸಹೋದರರ ನೆರವಿನೊಂದಿಗೆ ತಮ್ಮ ಭವ್ಯವಾದ 20 ಎಕರೆ ಜಮೀನಿನ ಮಧ್ಯದಲ್ಲಿ ನಿರ್ಮಿಸಿರುತ್ತಾರೆ.  ದೇವಾಲಯವು ಸುಂದರವಾದ ಪ್ರಕೃತಿಯ ಮಡಿಲಿನ ಮಧ್ಯದಲ್ಲಿ  ಕಂಗೊಳಿಸುತ್ತಿರುವುದು ಇಲ್ಲಿನ ಒಂದು ವಿಶೇಷ. 

ದೇವಾಲಯವು ಬೆಳಗಿನ ಜಾವ 4:45 ಕ್ಕೆ ಕಾಕಡಾ ಆರತಿಯೊಂದಿಗೆ ತೆರೆಯುತ್ತದೆ ಮತ್ತು ರಾತ್ರಿ 8:15 ಕ್ಕೆ ಶೇಜಾರತಿಯೊಂದಿಗೆ ಮುಚ್ಚುತ್ತದೆ.

ದೇವಾಲಯದಲ್ಲಿ ಸುಮಾರು 4 ಅಡಿ ಎತ್ತರದ ಶಿರಡಿ ಸಾಯಿಬಾಬಾರವರ ಸುಂದರವಾದ ಅಮೃತಶಿಲೆಯ ವಿಗ್ರಹವು ಮಧ್ಯಭಾಗದಲ್ಲಿದೆ. ಸಾಯಿಬಾಬಾರವರ ವಿಗ್ರಹದ ಎಡಭಾಗದಲ್ಲಿ ಕಪ್ಪು ಶಿಲೆಯ ಗಣಪತಿಯ ವಿಗ್ರಹವನ್ನು ಮತ್ತು ಬಲಭಾಗದಲ್ಲಿ ಅಮೃತಶಿಲೆಯ ದತ್ತಾತ್ರೇಯರ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ. ಸಾಯಿಬಾಬಾರವರ ವಿಗ್ರಹದ ಎದುರುಗಡೆ ಪವಿತ್ರ ಪಾದುಕೆಗಳನ್ನು ಸ್ಥಾಪಿಸಲಾಗಿದೆ. ಪಂಚಲೋಹದ ಸಾಯಿಬಾಬಾರವರ ವಿಗ್ರಹ, ಶಿರಡಿಯಲ್ಲಿರುವಂತೆ ಸಾಯಿಬಾಬಾರವರ ಎದುರುಗಡೆ ನಂದಿಯ ವಿಗ್ರಹವನ್ನು ಕೂಡ ಸಾಯಿಭಕ್ತರು ನೋಡಬಹುದು. 

ದೇವಾಲಯದ ಹೊರಭಾಗದಲ್ಲಿ ಶ್ರೀ ಸಾಯಿ ಕೋಟಿ ಸ್ಥೂಪವನ್ನು ಮತ್ತು ಸ್ಥೂಪದ ಮೇಲ್ಭಾಗದಲ್ಲಿ ಪವಿತ್ರ ಅಮೃತ ಶಿಲೆಯ ಪಾದುಕೆಗಳನ್ನೂ ಸ್ಥಾಪಿಸಲಾಗಿದೆ.

ಅಲ್ಲದೆ, ದೇವಾಲಯದ ಹೊರಭಾಗದಲ್ಲಿ ನವಗ್ರಹ ವೃಕ್ಷಗಳನ್ನೂ, ಪವಿತ್ರ ಅರಳಿ ಮರ ಮತ್ತು ಬೇವಿನ ಮರದ ಕೆಳಗಡೆ ಸ್ಥಾಪಿಸಲಾಗಿರುವ ನಾಗದೇವತೆಗಳ ವಿಗ್ರಹ, ಸುಬ್ರಹ್ಮಣ್ಯ ದೇವರ ವಿಗ್ರಹಗಳನ್ನೂ, ಮುನೇಶ್ವರ ದೇವರ ವಿಗ್ರಹಗಳನ್ನೂ ಕೂಡ ಸಾಯಿಭಕ್ತರು ನೋಡಬಹುದು.














ಮಂದಿರದ ಕಾರ್ಯಚಟುವಟಿಕೆಗಳು:

ದಿನನಿತ್ಯದ ಕಾರ್ಯಕ್ರಮಗಳು:

ಆರತಿಯ ಸಮಯ:

ಕಾಕಡಾ ಆರತಿ : ಬೆಳಿಗ್ಗೆ 4:45 ಘಂಟೆಗೆ 
ಮಧ್ಯಾನ್ಹ ಆರತಿ: ಮಧ್ಯಾನ್ಹ 11.45 ಘಂಟೆಗೆ 
ಧೂಪಾರತಿ: ಸಂಜೆ 5:30 ಘಂಟೆಗೆ 
ಶೇಜಾರತಿ: ರಾತ್ರಿ 8:15 ಘಂಟೆಗೆ 

ಪ್ರತಿನಿತ್ಯ ಬೆಳಿಗ್ಗೆ 6 ಘಂಟೆಗೆ  ಸಾಯಿಬಾಬಾರವರ ಪಂಚಲೋಹ ವಿಗ್ರಹಕ್ಕೆ ಕ್ಷೀರಾಭಿಷೇಕ ಮತ್ತು ಪಂಚಾಮೃತ ಅಭಿಷೇಕ ಮಾಡಲಾಗುತ್ತದೆ. 

ಪ್ರತಿ ತಿಂಗಳ ಬಹುಳ ಚತುರ್ಥಿಯಂದು ಸಂಕಷ್ಟ ಚತುರ್ಥಿಯನ್ನು ರಾತ್ರಿ 8:00 ರಿಂದ 9:00 ಘಂಟೆಯವರೆಗೆ ಆಚರಿಸಲಾಗುತ್ತದೆ.

ವಿಶೇಷ ಉತ್ಸವದ ದಿನಗಳು: 



1. ಮಂದಿರದ ವಾರ್ಷಿಕೋತ್ಸವ ಪ್ರತಿ ವರ್ಷದ ಶಿವರಾತ್ರಿಯಂದು. 
2. ಗುರು ಪೂರ್ಣಿಮೆ.
3. ಶ್ರೀರಾಮನವಮಿ. 
4. ವಿಜಯದಶಮಿ.
5 .ಬುದ್ಧ ಪೂರ್ಣಿಮೆ. 
6.ದತ್ತ ಜಯಂತಿ.


ಮಂದಿರದ ವಿಳಾಸ ಮತ್ತು ಮಾರ್ಗಸೂಚಿ: 


ಸ್ಥಳ:
ಸೀಗೇಕೋಟೆ ಗ್ರಾಮ, ಶಿವನಹಳ್ಳಿ ಪಂಚಾಯತಿ, ಕಸಬ ಹೋಬಳಿ, ಕನಕಪುರ ತಾಲ್ಲೂಕು.
ವಿಳಾಸ:
ಶ್ರೀ ಶಿರಡಿ ಸಾಯಿನಾಥ ಮಂದಿರ, 
ಶ್ರೀ.ಶಿರಡಿ ಸಾಯಿನಾಥ ಸೇವಾ ಸಮಿತಿ, 
ಲೇಂಡಿ ಗಾರ್ಡನ್, ಸಾಯಿಬಾಬಾ ಎಸ್ಟೇಟ್, 
ಸರ್ವೇ ನಂ.71/2, ಸೀಗೇಕೋಟೆ,  ಕಸಬ ಹೋಬಳಿ, 
ಶಿವನಹಳ್ಳಿ ಪಂಚಾಯತಿ, ಕನಕಪುರ ತಾಲ್ಲೂಕು,
ರಾಮನಗರ ಜಿಲ್ಲೆ-562 117, ಕರ್ನಾಟಕ                                                                                       
 
ಸಂಪರ್ಕಿಸಬೇಕಾದ ವ್ಯಕ್ತಿಗಳು:                                                                                                                    ಶ್ರೀ.ಸದಾಶಿವ ರೆಡ್ಡಿ - ಅಧ್ಯಕ್ಷರು / ಶ್ರೀ.ಟಿ.ಎಂ.ಪ್ರಸಾದ್  - ಅರ್ಚಕರು.                                                             
 
ದೂರವಾಣಿ ಸಂಖ್ಯೆಗಳು:                                                                                                                                 + 91 93429  06535/+91 93417 03673 / +91 93429 06535 / +91 95388 84111 / +91 95388 84116-ಅರ್ಚಕರು. 

ಮಾರ್ಗಸೂಚಿ: 
ಕನಕಪುರ ಬಸ್ ನಿಲ್ದಾಣದಲ್ಲಿ ಇಳಿದು, ಹೊರಳುಗಲ್ಲು ಗ್ರಾಮಕ್ಕೆ ಹೋಗುವ ಬಸ್ ಅಥವಾ ಸಾತನೂರಿಗೆ ಹೋಗುವ ಬಸ್ಸಿನಲ್ಲಿ ಹೋಗಬೇಕು. ಕನಕಪುರ ಬಸ್ ನಿಲ್ದಾಣದಿಂದ ಸೀಗೇಕೋಟೆ ಗ್ರಾಮವು ಸುಮಾರು 5 ಕಿಲೋಮೀಟರ್ ದೂರದಲ್ಲಿರುತ್ತದೆ. ಸೀಗೇಕೋಟೆ ಬಸ್ ನಿಲ್ದಾಣದಿಂದ ಸುಮಾರು 10 ನಿಮಿಷ ನಡೆದರೆ ದೇವಾಲಯ ಸಿಗುತ್ತದೆ. ಕನಕಪುರ ಬಸ್ ನಿಲ್ದಾಣದಿಂದ ಪ್ರತಿ ಹತ್ತು ನಿಮಿಷಗಳಿಗೊಮ್ಮೆ ಆಟೋ ಸೌಲಭ್ಯ ಸೀಗೇಕೋಟೆ ಗ್ರಾಮಕ್ಕಿರುತ್ತದೆ.

 ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment