Saturday, June 4, 2011

ತುಮಕೂರಿನ ಶಿರಡಿ ಸಾಯಿಬಾಬಾ ಮಂದಿರ - ತುಮಕೂರು ಶಿರಡಿ ಶ್ರೀ ಸಾಯಿಬಾಬಾ ದ್ವಾರಕಾ ಮಂದಿರ, ಶ್ರೀ.ಸಾಯಿ ಶಿಕ್ಷಣ ನಿಕೇತನ ಟ್ರಸ್ಟ್ (ನೋಂದಣಿ), ಯುರೋ ಕಿಡ್ಸ್ ಶಾಲೆ ರಸ್ತೆ, ಶಾರದಾದೇವಿ ನಗರ, 2ನೇ ಹಂತ, ಮಣಿಪಾಲ್ ಆಸ್ಪತ್ರೆ ರಸ್ತೆ ಎದುರುಗಡೆ, ತುಮಕೂರು-3. ಕರ್ನಾಟಕ - ಕೃಪೆ: ಸಾಯಿಅಮೃತಧಾರಾ.ಕಾಂ

ದೇವಾಲಯದ ವಿಶೇಷತೆಗಳು: 

ಈ ಮಂದಿರವು ತುಮಕೂರಿನ ಶಾರದಾದೇವಿ ನಗರ 2ನೇ ಹಂತದಲ್ಲಿರುವ  ಯುರೋ ಕಿಡ್ಸ್ ಶಾಲೆಯ ಆವರಣದಲ್ಲಿ ಇರುತ್ತದೆ. 

ಶಿರಡಿ ಸಾಯಿಬಾಬಾ ಮಂದಿರದ ಉದ್ಘಾಟನೆಯನ್ನು 3ನೇ ಮಾರ್ಚ್ 2009 ರಂದು ತುಮಕೂರು ಜಿಲ್ಲೆಯ ಸಿದ್ದಗಂಗಾ ಮಠದ ಶ್ರೀಗಳಾದ ಮತ್ತು "ನಡೆದಾಡುವ ದೇವರು" ಎಂದೇ ಪ್ರಖ್ಯಾತರಾದ ಡಾ.  ಶ್ರೀ.ಶ್ರೀ.ಶ್ರೀ.ಶಿವಕುಮಾರ ಸ್ವಾಮೀಜಿ ಮತ್ತು ಶ್ರೀ ಸಾಯಿ ಚಂದ್ರಶೇಖರ ರಾವ್ ಬಾಬಾರವರು ಜಂಟಿಯಾಗಿ ನೆರವೇರಿಸಿದರು.

ದೇವಾಲಯವನ್ನು ಶ್ರೀ.ಓಂ ಪ್ರಕಾಶ್ ರಾಜ್ ರವರು ಸ್ಥಳೀಯ ಸಾಯಿ ಭಕ್ತರ ನೆರವಿನೊಂದಿಗೆ ಸ್ಥಾಪಿಸಿರುತ್ತಾರೆ. ದೇವಾಲಯದ ಉಸ್ತುವಾರಿ ಮತ್ತು ಮೇಲ್ವಿಚಾರಣೆಯನ್ನು ಹಾಗೂ ದೇವಾಲಯದ ಅಭಿವೃದ್ದಿ ಕಾರ್ಯಗಳನ್ನು ಶ್ರೀ.ಅಶೋಕ್ ರಾಜ್ ರವರು ನೋಡಿಕೊಳ್ಳುತ್ತಿದ್ದಾರೆ. 

ದೇವಾಲಯವು ಬೆಳಿಗ್ಗೆ 5:೪೫ ಕ್ಕೆ  ಘಂಟೆಗೆ ಕಾಕಡಾ ಆರತಿಯೊಂದಿಗೆ ತೆರೆಯುತ್ತದೆ ಮತ್ತು ರಾತ್ರಿ 8.30 ಘಂಟೆಗೆ ಶೇಜಾರತಿಯೊಂದಿಗೆ ಮುಚ್ಚಲ್ಪಡುತ್ತದೆ. ಆದರೆ ದೇವಾಲಯಕ್ಕೆ ಯಾವುದೇ ಬಾಗಿಲುಗಳನ್ನು ನಿರ್ಮಿಸಿರದ ಕಾರಣ ಸಾಯಿ ಭಕ್ತರು ಅಹರ್ನಿಷೆ ಯಾವುದೇ ಸಮಯದಲ್ಲಿ ಆದರೂ ಬಂದು ಸಾಯಿಬಾಬಾರವರ ದರ್ಶನ ಮಾಡಿಕೊಳ್ಳಬಹುದಾಗಿದೆ.

ದೇವಾಲಯದಲ್ಲಿ 5 ಅಡಿ 6 ಅಂಗುಲ ಎತ್ತರದ ಶಿರಡಿ ಸಾಯಿಬಾಬಾರವರ ಸುಂದರವಾದ ಅಮೃತಶಿಲೆಯ ವಿಗ್ರಹ, ಪಂಚಲೋಹದ ಸಾಯಿಬಾಬಾರವರ ವಿಗ್ರಹ, ಶಿರಡಿಯಲ್ಲಿರುವಂತೆ ಸಾಯಿಬಾಬಾರವರ ಎದುರುಗಡೆ ಇರುವಂತೆ ನಂದಿಯ ವಿಗ್ರಹಗಳನ್ನು ಸಾಯಿಭಕ್ತರು ನೋಡಬಹುದು.  ಪಂಚಲೋಹದ ವಿಗ್ರಹವನ್ನು ದಿನನಿತ್ಯದ ಅಭಿಷೇಕಕ್ಕೆ ಮತ್ತು ಪಲ್ಲಕ್ಕಿ ಉತ್ಸವಕ್ಕೆ ಬಳಸಲಾಗುತ್ತಿದೆ. ಸಾಯಿಬಾಬಾರವರ ವಿಗ್ರಹದ ಮುಂಭಾಗದಲ್ಲಿ ಸಮಾಧಿಯ ಪ್ರತಿರೂಪವನ್ನು ಸ್ಥಾಪಿಸಲಾಗಿದೆ.

ಸಾಯಿಬಾಬಾರವರ ವಿಗ್ರಹದ ಬಲಭಾಗದಲ್ಲಿ ಗಣೇಶನ ಅಮೃತ ಶಿಲೆಯ ವಿಗ್ರಹವನ್ನು ಸ್ಥಾಪಿಸಲಾಗಿದೆ. ಎಡಭಾಗದಲ್ಲಿ ದ್ವಾರಕಮಾಯಿ ಬಾಬಾರವರ ಚಿತ್ರಪಟವನ್ನು ಮತ್ತು ಚಿತ್ರಪಟದ ಎದುರುಗಡೆ ಅಮೃತ ಶಿಲೆಯ ಕೂರ್ಮವನ್ನು ಸ್ಥಾಪಿಸಲಾಗಿದೆ.








ಮಂದಿರದ ಕಾರ್ಯಚಟುವಟಿಕೆಗಳು:

ದಿನನಿತ್ಯದ ಕಾರ್ಯಕ್ರಮಗಳು:

ಆರತಿಯ ಸಮಯ:

ಕಾಕಡಾ ಆರತಿ : ಬೆಳಿಗ್ಗೆ 5:45  ಘಂಟೆಗೆ 
ಮಧ್ಯಾನ್ಹ ಆರತಿ: ಮಧ್ಯಾನ್ಹ 12 ಘಂಟೆಗೆ 
ಧೂಪಾರತಿ: ಸಂಜೆ ಸೂರ್ಯಾಸ್ತ ಸಮಯಕ್ಕೆ.
ಶೇಜಾರತಿ: ರಾತ್ರಿ 8:30 ಕ್ಕೆ 

ವಿಶೇಷ ಪೂಜಾ ಕಾರ್ಯಕ್ರಮ ಮತ್ತು ಸೇವಾ ಶುಲ್ಕ ವಿವರ:

ಸಾಯಿ ಸರ್ವ ಪೂಜಾ ಸೇವಾ - 501 ರುಪಾಯಿಗಳು.
ಸಾಯಿ ಪುಷ್ಪಾಲಂಕಾರ - 251 ರುಪಾಯಿಗಳು.
ಸಾಯಿ ಅಭಿಷೇಕ - 101 ರುಪಾಯಿಗಳು.
ಅನ್ನದಾನ ಪ್ರಸಾದ - 101 ರುಪಾಯಿಗಳು.
ನೈವೇದ್ಯ ಸೇವಾ - 101 ರುಪಾಯಿಗಳು.
ಸಾಯಿ ಪಾದುಕಾ ಪೂಜಾ - 51 ರುಪಾಯಿಗಳು.
ಸಾಯಿ ಸಿದ್ಧಿ ಯಂತ್ರ ಪೂಜಾ - 51 ರುಪಾಯಿಗಳು
ಪೂಜಾ ಸಾಮಗ್ರಿ - 51 ರುಪಾಯಿಗಳು
ವಾಹನ ಪೂಜಾ - 51 ರುಪಾಯಿಗಳು


ವಿಶೇಷ ಉತ್ಸವದ ದಿನಗಳು: 

1. ಮಂದಿರದ ವಾರ್ಷಿಕೋತ್ಸವ ಪ್ರತಿ ವರ್ಷದ 3ನೇ ಮಾರ್ಚ್.
2. ಗುರು ಪೂರ್ಣಿಮೆ.
3. ಶ್ರೀರಾಮನವಮಿ. 
4. ವಿಜಯದಶಮಿ. 
5.ದತ್ತ ಜಯಂತಿ. 

ಮಂದಿರದ ವಿಳಾಸ ಮತ್ತು ಮಾರ್ಗಸೂಚಿ: 


ಸ್ಥಳ:
ಶಾರದಾದೇವಿ ನಗರ 2ನೇ ಹಂತದಲ್ಲಿರುವ  ಯುರೋ ಕಿಡ್ಸ್ ಶಾಲೆಯ ಆವರಣ.

ವಿಳಾಸ:
ತುಮಕೂರು ಶಿರಡಿ ಶ್ರೀ ಸಾಯಿಬಾಬಾ ದ್ವಾರಕಾ ಮಂದಿರ, 
ಶ್ರೀ.ಸಾಯಿ ಶಿಕ್ಷಣ ನಿಕೇತನ ಟ್ರಸ್ಟ್ (ನೋಂದಣಿ), 
ಯುರೋ ಕಿಡ್ಸ್ ಶಾಲೆ ರಸ್ತೆ ಆವರಣ, 
ಶಾರದಾದೇವಿ ನಗರ, 2ನೇ ಹಂತ, 
ಮಣಿಪಾಲ್ ಆಸ್ಪತ್ರೆ ರಸ್ತೆ ಎದುರುಗಡೆ, 
ತುಮಕೂರು-3. ಕರ್ನಾಟಕ

ಸಂಪರ್ಕಿಸಬೇಕಾದ ವ್ಯಕ್ತಿಗಳು: 
ಶ್ರೀ.ಓಂ ಪ್ರಕಾಶ್ ರಾಜ್ / ಶ್ರೀ.ಅಶೋಕ್ ರಾಜ್ 

ದೂರವಾಣಿ ಸಂಖ್ಯೆಗಳು: 

 + 91 94494 97294 / +91 99162 23344 

ಈ ಮೇಲ್ ವಿಳಾಸ:
 
 
ಅಂತರ್ಜಾಲ ತಾಣ:

ಮಾರ್ಗಸೂಚಿ: 
ಸರ್ಕಾರಿ ಕಾಲೇಜು ಬಸ್ ನಿಲ್ದಾಣದಲ್ಲಿ ಇಳಿಯುವುದು. ಇಲ್ಲಿಂದ 5 ನಿಮಿಷದ ನಡಿಗೆ.  ದೇವಾಲಯವು ಬೆಳಗುಂಬ ರಸ್ತೆಯ ಶಾರದಾದೇವಿ ನಗರ 2ನೇ ಹಂತದಲ್ಲಿರುವ ಯುರೋ ಕಿಡ್ಸ್ ಶಾಲೆಯ ಆವರಣದಲ್ಲಿ ಇರುತ್ತದೆ.

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment