Tuesday, June 28, 2011

ಬೆಂಗಳೂರಿನ ಶಿರಡಿ ಸಾಯಿಬಾಬಾ ಮಂದಿರ -  ಶ್ರೀ ಸಾಯಿ ಮಂದಿರ ಟ್ರಸ್ಟ್ (ನೋಂದಣಿ), 14/ಎ, 2ನೇ ಮುಖ್ಯರಸ್ತೆ, ಕಂಟೀರವ ನಗರ, ನಂದಿನಿ ಬಡಾವಣೆ, ಬೆಂಗಳೂರು -560 096, ಕರ್ನಾಟಕ - ಕೃಪೆ: ಸಾಯಿಅಮೃತಧಾರಾ.ಕಾಂ


ದೇವಾಲಯದ ವಿಶೇಷತೆಗಳು: 

ಈ ಮಂದಿರವು ಬೆಂಗಳೂರಿನ ಕಂಟೀರವ ನಗರದ ಮುಖ್ಯ ರಸ್ತೆಯಲ್ಲಿರುವ ಕಂಟೀರವ ಸ್ಟುಡಿಯೋ ಹತ್ತಿರದಲ್ಲಿರುತ್ತದೆ.

1995ನೇ ಇಸವಿಯ ಪ್ರಾರಂಭದಲ್ಲಿ ಈ ಮಂದಿರವಿರುವ ಸ್ಥಳದಲ್ಲಿ ಒಂದು ತಾತ್ಕಾಲಿಕ ಕಟ್ಟಡದ ನಿರ್ಮಾಣವಾಗಿತ್ತು. ಅದೇ ಸ್ಥಳದಲ್ಲಿ ಸ್ಥಳೀಯ ಸಾಯಿಭಕ್ತರಾದ ಶ್ರೀ.ವೀರೇಗೌಡ ಆವರು ಮುತುವರ್ಜಿವಹಿಸಿ 2005ನೇ ಇಸವಿಯಲ್ಲಿ ಭೂಮಿಪೂಜೆಯನ್ನು ನೆರವೇರಿಸಿ ಕಟ್ಟಡದ ಮೇಲ್ವಿಚಾರಣೆಯನ್ನು ತಾವೇ ವಹಿಸಿಕೊಂಡು ಕಟ್ಟಡ ಪೂರ್ಣವಾಗುವುದರಲ್ಲಿ ಪ್ರಮುಖ ಪಾತ್ರ ವಹಿಸಿದರು. 

ದೇವಾಲಯದಲ್ಲಿರುವ ಅಮೃತ ಶಿಲೆಯ ಸಾಯಿಬಾಬಾರವರ ವಿಗ್ರಹ, ದ್ವಾರಕಾಮಾಯಿ ಸಾಯಿಬಾಬಾ ವಿಗ್ರಹ, ಗಣಪತಿಯ ವಿಗ್ರಹ, ಪವಿತ್ರ ಪಾದುಕೆಗಳು ಮತ್ತು ಪಂಚಲೋಹದ ಸಾಯಿಬಾಬಾ ವಿಗ್ರಹಗಳನ್ನು ಶ್ರೀಮತಿ.ಪದ್ಮ ಸಿಂಗ್, ಶ್ರೀಮತಿ.ವಾಣಿ ಮತ್ತು ಶ್ರೀ.ರಂಗನಾಥ ನಾಯ್ಡುರವರುಗಳು ದಾನವಾಗಿ ನೀಡಿರುತ್ತಾರೆ. 

ಈ ಮಂದಿರದ ಉದ್ಘಾಟನೆಯನ್ನು 27ನೇ ಜುಲೈ 2009 ರಂದು ಬೆಂಗಳೂರಿನ ಜಯ ಸಾಯಿ ಮಂಡಳಿಯ ಶ್ರೀ.ಗೋಪಿನಾಥ್ ರವರು ವಿದ್ಯುಕ್ತವಾಗಿ ಉದ್ಘಾಟಿಸಿದರು. ಆ ಸಂದರ್ಭದಲ್ಲಿ ಬೆಂಗಳೂರಿನ ಸಾಯಿ ಭಕ್ತರಾದ ಶ್ರೀ.ಚಾಂದ್ ಪಾಷಾರವರು ಕೂಡ ಉಪಸ್ಥಿತರಿದ್ದರು. 

ಶ್ರೀ.ನರಸೇಗೌಡರವರು ದೇವಾಲಯದ ಸಂಸ್ಥಾಪಕ ಅಧ್ಯಕ್ಷರು ಮತ್ತು ಅವರೇ ದೇವಾಲಯದ ದಿನನಿತ್ಯದ ಆಗುಹೋಗುಗಳನ್ನು ಮತ್ತು ಅಭಿವೃದ್ದಿ ಕಾರ್ಯಗಳನ್ನು ಬಹಳ ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ.

ದೇವಾಲಯದ ಗರ್ಭಗುಡಿಯಲ್ಲಿ ಸುಮಾರು 3 ಅಡಿ ಎತ್ತರದ ಶಿರಡಿ ಸಾಯಿಬಾಬಾರವರ ಸುಂದರವಾದ ಅಮೃತಶಿಲೆಯ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ. ಅಲ್ಲದೆ, ಅಮೃತ ಶಿಲೆಯ 1 1/2 ಅಡಿಯ ದ್ವಾರಕಾಮಾಯಿ ಸಾಯಿಬಾಬಾ ವಿಗ್ರಹ, ಅಮೃತ ಶಿಲೆಯ ಪಾದುಕೆಗಳು, ಗಣಪತಿಯ ವಿಗ್ರಹ ಮತ್ತು ಪಂಚಲೋಹದ ಸಾಯಿಬಾಬಾರವರ ವಿಗ್ರಹವನ್ನು ಕೂಡ ಮಂದಿರದಲ್ಲಿ ನೋಡಬಹುದು. ಪಂಚಲೋಹದ ಸಾಯಿಬಾಬಾ ವಿಗ್ರಹವನ್ನು ದಿನನಿತ್ಯದ ಅಭಿಷೇಕಕ್ಕೆ ಬಳಸಲಾಗುತ್ತಿದೆ. 









ಮಂದಿರದ ಕಾರ್ಯಚಟುವಟಿಕೆಗಳು:

ದಿನನಿತ್ಯದ ಕಾರ್ಯಕ್ರಮಗಳು:


ಆರತಿಯ ಸಮಯ:
ಆರತಿ
ಪ್ರತಿದಿನ
ಗುರುವಾರ
ಕಾಕಡಾ ಆರತಿ 
6:30 AM
5:30 AM
ಮಧ್ಯಾನ್ಹ ಆರತಿ
10:30 AM
12:30 PM
ಧೂಪಾರತಿ
6:00 PM
5:30 PM
ಶೇಜಾರತಿ
8:00 PM
9:30 PM

ಪ್ರತಿನಿತ್ಯ ಬೆಳಿಗ್ಗೆ 7 ಘಂಟೆಗೆ  ಸಾಯಿಬಾಬಾರವರ ಪಂಚಲೋಹ ವಿಗ್ರಹಕ್ಕೆ ಪಂಚಾಮೃತ ಅಭಿಷೇಕವನ್ನು ಮಾಡಲಾಗುತ್ತದೆ. ಸೇವಾ ಶುಲ್ಕ 101/- ರುಪಾಯಿಗಳು. 

ಪ್ರತಿದಿನ ಬೆಳಿಗ್ಗೆ  7 ಘಂಟೆಗೆ ವಿಶೇಷ ಪೂಜೆಯನ್ನು ಮಾಡಲಾಗುತ್ತದೆ. ಸೇವಾ ಶುಲ್ಕ 600/- ರುಪಾಯಿಗಳು.

ಪ್ರತಿ ಗುರುವಾರ ಬೆಳಿಗ್ಗೆ 7 ಘಂಟೆಗೆ ಸರ್ವ ಸೇವೆಯನ್ನು ಮಾಡಲಾಗುತ್ತದೆ. ಸೇವಾ ಶುಲ್ಕ 2000/- ರುಪಾಯಿಗಳು. 

ವಿಶೇಷ ಉತ್ಸವದ ದಿನಗಳು: 

1. ಮಂದಿರದ ವಾರ್ಷಿಕೋತ್ಸವ ಪ್ರತಿ ವರ್ಷದ ಗುರುಪೂರ್ಣಿಮೆಯಂದು. 
2.ವಿಜಯದಶಮಿ.

ಮಂದಿರದ ವಿಳಾಸ ಮತ್ತು ಮಾರ್ಗಸೂಚಿ: 


ಸ್ಥಳ:
ಸರ್ಕಾರಿ ಶಾಲೆಯ ಎದುರು, ಕಂಟೀರವ ಸ್ಟುಡಿಯೋ ಹತ್ತಿರ, ಕಂಟೀರವ ನಗರ. 

ವಿಳಾಸ:
ಶ್ರೀ ಸಾಯಿ ಮಂದಿರ ಟ್ರಸ್ಟ್ (ನೋಂದಣಿ), 
14/ಎ, 2ನೇ ಮುಖ್ಯರಸ್ತೆ, ಕಂಟೀರವ ನಗರ, 
ನಂದಿನಿ ಬಡಾವಣೆ, ಬೆಂಗಳೂರು -560 096, ಕರ್ನಾಟಕ                                                            

ಸಂಪರ್ಕಿಸಬೇಕಾದ ವ್ಯಕ್ತಿಗಳು:                                                                                                                    ಶ್ರೀ.ನರಸೇಗೌಡ / ಶ್ರೀಮತಿ.ಪದ್ಮ ಸಿಂಗ್                                                             


ದೂರವಾಣಿ ಸಂಖ್ಯೆಗಳು:                                                                                                                                 + 91 98459 61571 / +91 92423 64195


ಮಾರ್ಗಸೂಚಿ: 
ಕಂಟೀರವ ನಗರ ಮುಖ್ಯರಸ್ತೆಯಲ್ಲಿರುವ ಕಂಟೀರವ ಸ್ಟುಡಿಯೋ ಬಸ್ ನಿಲ್ದಾಣದಲ್ಲಿ ಇಳಿದು ಸುಮಾರು 200 ಅಡಿ ದೂರ ಹಿಂದೆ ನಡೆದರೆ ದೇವಾಲಯ ಸಿಗುತ್ತದೆ. ದೇವಾಲಯವು ಸರ್ಕಾರಿ ಶಾಲೆಯ ಎದುರುಗಡೆ ಮತ್ತು ಕಂಟೀರವ ಸ್ಟುಡಿಯೋ ಹತ್ತಿರ ಇರುತ್ತದೆ. ಬೆಂಗಳೂರು ಬಸ್ ನಿಲ್ದಾಣದಿಂದ ಬಸ್ ಸಂಖ್ಯೆಗಳು: 252 ಹೆಚ್, ಎಫ್, 80 ಎಫ್, ಜಿ, ಎ.


ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment