Saturday, June 4, 2011

ತುಮಕೂರಿನ ಶಿರಡಿ ಸಾಯಿಬಾಬಾ ಮಂದಿರ - ಶ್ರೀ ಶಿರಡಿ ಸಾಯಿಬಾಬಾ ಮಂದಿರ, ಶ್ರೀ ಸಾಯಿ ಚೇತನ ಚಾರಿಟಬಲ್ ಟ್ರಸ್ಟ್ (ನೋಂದಣಿ), 11ನೇ ಅಡ್ಡರಸ್ತೆ, ಜಯನಗರ ಪೂರ್ವ, ಶೆಟ್ಟಿಹಳ್ಳಿ ಮುಖ್ಯರಸ್ತೆ, ತುಮಕೂರು-572 102, ಕರ್ನಾಟಕ - ಕೃಪೆ: ಸಾಯಿಅಮೃತಧಾರಾ.ಕಾಂ

ದೇವಾಲಯದ ವಿಶೇಷತೆಗಳು: 

ಈ ಮಂದಿರವು ತುಮಕೂರಿನ ಶೆಟ್ಟಿಹಳ್ಳಿ ಮುಖ್ಯರಸ್ತೆಯಲ್ಲಿರುವ ಜಯನಗರ ಪೂರ್ವ ಬಡಾವಣೆಯಲ್ಲಿ ಇರುತ್ತದೆ. 

ಈ ಮಂದಿರದ ಭೂಮಿಪೂಜೆಯನ್ನು ಆಗಸ್ಟ್ 2001 ರಂದು  ಮಾಡಲಾಯಿತು.

ಈ ಮಂದಿರದ ಉದ್ಘಾಟನೆಯನ್ನು 7ನೇ ಆಗಸ್ಟ್ 2006 ರಂದು ತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ.ಶ್ರೀ.ಶ್ರೀ.ವೀರೇಶಾನಂದ ಸರಸ್ವತಿ ಸ್ವಾಮೀಜಿಯವರು ನೆರವೇರಿಸಿದರು. 

ಈ ದೇವಾಲಯವನ್ನು ಶ್ರೀ.ಕೆ.ಎ.ಶ್ರೀನಿವಾಸ ಬಾಬುರವರು ಸ್ಥಳೀಯ ಸಾಯಿಭಕ್ತರ ನೆರವಿನೊಂದಿಗೆ ನಿರ್ಮಿಸಿರುತ್ತಾರೆ. ದೇವಾಲಯದ ಅಭಿವೃದ್ದಿ ಕಾರ್ಯಗಳನ್ನು ಶ್ರೀ.ಎಸ್.ಮಹಾದೇವಯ್ಯನವರು ನೋಡಿಕೊಳ್ಳುತ್ತಿದ್ದಾರೆ. ದೇವಾಲಯದ ದಿನನಿತ್ಯದ ಆಗುಹೋಗುಗಳನ್ನು ಶ್ರೀ.ಜಿ.ಎಸ್.ಸಿದ್ದಲಿಂಗಪ್ಪನವರು ನೋಡಿಕೊಳ್ಳುತ್ತಿದ್ದಾರೆ. 

ದೇವಾಲಯವು ಬೆಳಿಗ್ಗೆ 6 ಘಂಟೆಗೆ ಕಾಕಡಾ ಆರತಿಯೊಂದಿಗೆ ತೆರೆಯುತ್ತದೆ ಮತ್ತು ರಾತ್ರಿ 8 ಘಂಟೆಗೆ ಶೇಜಾರತಿಯೊಂದಿಗೆ ಮುಚ್ಚಲ್ಪಡುತ್ತದೆ.

ದೇವಾಲಯದಲ್ಲಿ 5 ಅಡಿ 6 ಅಂಗುಲ ಎತ್ತರದ ಶಿರಡಿ ಸಾಯಿಬಾಬಾರವರ ಸುಂದರವಾದ ಅಮೃತಶಿಲೆಯ ವಿಗ್ರಹ, ವಿಗ್ರಹದ ಎದುರುಗಡೆ ಪವಿತ್ರ ಪಾದುಕೆಗಳು, ಪಂಚಲೋಹದ ಸಾಯಿಬಾಬಾರವರ ವಿಗ್ರಹ, ಶಿರಡಿಯಲ್ಲಿರುವಂತೆ ಸಾಯಿಬಾಬಾರವರ ಎದುರುಗಡೆ ನಂದಿಯ ವಿಗ್ರಹ, ಸಾಯಿಬಾಬಾರವರ ವಿಗ್ರಹದ ಇಕ್ಕೆಲಗಳಲ್ಲಿ ಗಣಪತಿ ಮತ್ತು ದತ್ತಾತ್ರೇಯರ ವಿಗ್ರಹಗಳು ಮತ್ತು ಪ್ರತಿ ಗುರುವಾರ ಮತ್ತು ವಿಶೇಷ ಉತ್ಸವದ ದಿನಗಳಲ್ಲಿ ಪಲ್ಲಕ್ಕಿಗೆ ಬಳಸುವ ದ್ವಾರಕಾಮಾಯಿ ಸಾಯಿಬಾಬಾರವರ ಸುಂದರ ಅಮೃತಶಿಲೆಯ ವಿಗ್ರಹಗಳನ್ನು ಸಾಯಿಭಕ್ತರು ನೋಡಬಹುದು. ಅಲ್ಲದೆ, ಸಮಾಧಿಯ ಮಾದರಿಯನ್ನು ಕೂಡ ಸಾಯಿಬಾಬಾ ವಿಗ್ರಹದ ಎದುರುಗಡೆ ಸ್ಥಾಪಿಸಲಾಗಿದೆ.

ದೇವಾಲಯದ ಹೊರಗಡೆ ಬಲಭಾಗದಲ್ಲಿ ಪವಿತ್ರ ಬೇವಿನ ಮರದ ಕೆಳಗಡೆ ಗುರುಸ್ಥಾನವನ್ನು ನಿರ್ಮಿಸಲಾಗಿದ್ದು ಈ ಸ್ಥಳದಲ್ಲಿ ಕಲ್ಲಿನ  ಮೇಲೆ ಕುಳಿತಿರುವ ಸಾಯಿಬಾಬಾರವರ ಚಿತ್ರಪಟವನ್ನು ಮತ್ತು ಅಮೃತ ಶಿಲೆಯ ಪಾದುಕೆಗಳನ್ನು ಸ್ಥಾಪಿಸಲಾಗಿದೆ. 

ಗುರುಸ್ಥಾನದ ಪಕ್ಕದಲ್ಲಿ ದ್ವಾರಕಾಮಾಯಿಯನ್ನು ನಿರ್ಮಿಸಲಾಗಿದ್ದು ಈ ಸ್ಥಳದಲ್ಲಿ ಪವಿತ್ರ ಧುನಿಯನ್ನು ಸ್ಥಾಪಿಸಲಾಗಿದೆ. ಧುನಿಯ ಮುಂಭಾಗದಲ್ಲಿ ಧುನಿಯ ಮುಂದೆ ಕುಳಿತಿರುವ ಸಾಯಿಬಾಬಾರವರ ಚಿತ್ರಪಟವನ್ನು ಮತ್ತು ಅದರ ಪಕ್ಕದ ಗೋಡೆಯಲ್ಲಿ ದ್ವಾರಕಾಮಾಯಿ ಬಾಬಾರವರ ಚಿತ್ರಪಟವನ್ನು ತೂಗು ಹಾಕಲಾಗಿದೆ. ನಂದಾದೀಪ ಮತ್ತು ದತ್ತಾತ್ರೇಯರ ಚಿತ್ರಪಟವನ್ನು ಕೂಡ ದ್ವಾರಕಾಮಾಯಿಯಲ್ಲಿ ಸ್ಥಾಪಿಸಲಾಗಿದೆ. 

ಪವಿತ್ರ ಔದುಂಬರ ವೃಕ್ಷವು ದೇವಾಲಯದ ಹಿಂಭಾಗದಲ್ಲಿ ತನ್ನಷ್ಟಕ್ಕೆ ತಾನೇ ಉದ್ಭವವಾಗಿದೆ. ಅಲ್ಲದೆ, ದೇವಾಲಯದ ಮುಂಭಾಗದಲ್ಲಿ ನಾಗರ ಹುತ್ತವು ಕೂಡ ಇರುತ್ತದೆ. 











ಮಂದಿರದ ಕಾರ್ಯಚಟುವಟಿಕೆಗಳು:

ದಿನನಿತ್ಯದ ಕಾರ್ಯಕ್ರಮಗಳು:

ಆರತಿಯ ಸಮಯ:

ಕಾಕಡಾ ಆರತಿ : ಬೆಳಿಗ್ಗೆ 6 ಘಂಟೆಗೆ 
ಮಧ್ಯಾನ್ಹ ಆರತಿ: ಮಧ್ಯಾನ್ಹ 12.30 ಘಂಟೆಗೆ 
ಧೂಪಾರತಿ: ಸಂಜೆ 6 ಘಂಟೆಗೆ 
ಶೇಜಾರತಿ: ರಾತ್ರಿ 8:00 ಕ್ಕೆ 

ಪ್ರತಿನಿತ್ಯ ಸಾಯಿಬಾಬಾರವರ ಪಂಚಲೋಹ ವಿಗ್ರಹಕ್ಕೆ ಕ್ಷೀರಾಭಿಷೇಕ ಮತ್ತು ಪಂಚಾಮೃತ ಅಭಿಷೇಕವನ್ನು ಮಾಡಲಾಗುತ್ತದೆ. ಸೇವಾ ಶುಲ್ಕ 151/- ರುಪಾಯಿಗಳು. 
ಪ್ರತಿನಿತ್ಯ ಸರ್ವ ಪೂಜಾ ಸೇವೆಯನ್ನು ಮಾಡಲಾಗುತ್ತದೆ. ಸೇವಾಶುಲ್ಕ 501/- ರುಪಾಯಿಗಳು.  

ಶಾಶ್ವತ ಪೂಜೆಯನ್ನು ಮಂದಿರದಲ್ಲಿ ಮಾಡಿಸಲು ಅವಕಾಶವನ್ನು ಕಲ್ಪಿಸಲಾಗಿದ್ದು ಅದರ ಸೇವಾ ಶುಲ್ಕ 1116/- ರುಪಾಯಿಗಳು ಆಗಿರುತ್ತದೆ. 

ಪ್ರತಿ ಗುರುವಾರ ಮತ್ತು ಭಾನುವಾರ ಸಂಜೆ 7 ಘಂಟೆಯಿಂದ 8 ಘಂಟೆಯವರೆಗೆ ಸಾಯಿ ಭಜನೆಯ ಕಾರ್ಯಕ್ರಮವಿರುತ್ತದೆ. 

ಪ್ರತಿ ಗುರುವಾರ 8 ಘಂಟೆಗೆ ದ್ವಾರಕಾಮಾಯಿ ಸಾಯಿಬಾಬಾರವರ ವಿಗ್ರಹವನ್ನು ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಮೆರವಣಿಗೆ ಮಾಡಲಾಗುತ್ತದೆ. 

ದೇವಾಲಯದಲ್ಲಿ ಪ್ರತಿನಿತ್ಯ ಸಾಯಿಭಕ್ತರು ಧುನಿಗೆ ಕಟ್ಟಿಗೆಯನ್ನು ಹಾಕಿ ಹುಂಡಿಗೆ ದಕ್ಷಿಣೆಯನ್ನು ಅರ್ಪಿಸಿ ತಮ್ಮ ಮನದ ಬಯಕೆಗಳನ್ನು ಈಡೇರಿಸಿಕೊಳ್ಳುವ ಪರಿಪಾಟ ಇಟ್ಟುಕೊಂಡಿದ್ದಾರೆ. 

ವಿಶೇಷ ಉತ್ಸವದ ದಿನಗಳು: 

1. ಮಂದಿರದ ವಾರ್ಷಿಕೋತ್ಸವ ಪ್ರತಿ ವರ್ಷದ 7ನೇ ಆಗಸ್ಟ್.
2. ಗುರು ಪೂರ್ಣಿಮೆ.
3. ಶ್ರೀರಾಮನವಮಿ. 
4. ವಿಜಯದಶಮಿ. 
5.ದತ್ತ ಜಯಂತಿ. 
6.ಹೊಸವರ್ಷದ ಆಚರಣೆ. 
7.ಶಿವರಾತ್ರಿ - ರಾತ್ರಿ ಪೂರ್ತಿ ಸಾಯಿ ಭಜನೆಯ ಕಾರ್ಯಕ್ರಮ.
8.ಯುಗಾದಿ ಹಬ್ಬದ ಆಚರಣೆ. 

ಮಂದಿರದ ವಿಳಾಸ ಮತ್ತು ಮಾರ್ಗಸೂಚಿ: 


ಸ್ಥಳ:
ಶೆಟ್ಟಿಹಳ್ಳಿ ಮುಖ್ಯರಸ್ತೆಯಲ್ಲಿರುವ ಜಯನಗರ ಪೂರ್ವ ಬಸ್ ನಿಲ್ದಾಣ.

ವಿಳಾಸ:

ಶ್ರೀ ಶಿರಡಿ ಸಾಯಿಬಾಬಾ ಮಂದಿರ, 
ಶ್ರೀ ಸಾಯಿ ಚೇತನ ಚಾರಿಟಬಲ್ ಟ್ರಸ್ಟ್ (ನೋಂದಣಿ), 
11ನೇ ಅಡ್ಡರಸ್ತೆ, ಜಯನಗರ ಪೂರ್ವ, 
ಶೆಟ್ಟಿಹಳ್ಳಿ ಮುಖ್ಯರಸ್ತೆ, ತುಮಕೂರು-572 102, ಕರ್ನಾಟಕ

ಸಂಪರ್ಕಿಸಬೇಕಾದ ವ್ಯಕ್ತಿಗಳು: 
ಶ್ರೀ.ಕೆ.ಎ.ಶ್ರೀನಿವಾಸ ಬಾಬು / ಶ್ರೀ.ಎಸ್.ಮಹಾದೇವಯ್ಯ / ಶ್ರೀ.ಜಿ.ಎಸ್.ಸಿದ್ದಲಿಂಗಪ್ಪ / ಶ್ರೀ.ವಿನಯ್ ಜಿ.ಶೇಟ್.


ದೂರವಾಣಿ ಸಂಖ್ಯೆಗಳು:  
+ 91 816 6451080 /+91 93411 55610/+91 93421 76630/+91 99861 72373

ಮಾರ್ಗಸೂಚಿ: 
ಶೆಟ್ಟಿಹಳ್ಳಿ ಮುಖ್ಯರಸ್ತೆಯಲ್ಲಿರುವ ಜಯನಗರ ಪೂರ್ವ ಬಸ್ ನಿಲ್ದಾಣದಲ್ಲಿ ಇಳಿಯುವುದು. ಬಸ್ ನಿಲ್ದಾಣದಿಂದ ಕೇವಲ ಎರಡು ನಿಮಿಷದ ನಡಿಗೆ. ಶೆಟ್ಟಿಹಳ್ಳಿ ಮುಖ್ಯರಸ್ತೆಯಲ್ಲಿ ಸಂಚರಿಸುವ ಎಲ್ಲ ಬಸ್ ಗಳು ಜಯನಗರ ಪೂರ್ವ ಬಸ್ ನಿಲ್ದಾಣದಲ್ಲಿ ನಿಲ್ಲುತ್ತವೆ. ಬಸ್ ನಿಲ್ದಾಣದಿಂದ ಬಸ್ ಸಂಖ್ಯೆ 202. 

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment