Monday, July 4, 2011

ತುಮಕೂರು ಜಿಲ್ಲೆಯ ಶಿರಡಿ ಸಾಯಿಬಾಬಾ ಮಂದಿರ - ಮಹಾಯೋಗಿ ಶ್ರೀ ಶಿರಡಿ ಸಾಯಿಬಾಬಾ ಮಂದಿರ, ಮಲ್ಲಸಂದ್ರ ಅಂಚೆ-572 107, ತುಮಕೂರು ಜಿಲ್ಲೆ, ಕರ್ನಾಟಕ - ಕೃಪೆ: ಸಾಯಿಅಮೃತಧಾರಾ.ಕಾಂ  


ದೇವಾಲಯದ ವಿಶೇಷತೆಗಳು: 

ಈ ಮಂದಿರವು ಮಲ್ಲಸಂದ್ರ ರೈಲ್ವೇ ನಿಲ್ದಾಣದ ಬಳಿ ಇರುತ್ತದೆ. ಮಲ್ಲಸಂದ್ರ ರೈಲ್ವೇ ನಿಲ್ದಾಣದಿಂದ ಈ ಮಂದಿರವು ಸರಿ ಸುಮಾರು 2 ಕಿಲೋಮೀಟರ್ ಗಳ  ಅಂತರದಲ್ಲಿರುತ್ತದೆ. 

ಈ ದೇವಾಲಯದ ಭೂಮಿಪೂಜೆಯನ್ನು 11ನೇ ಸೆಪ್ಟೆಂಬರ್ 2007 ರಂದು ಮಾಡಲಾಯಿತು.

ಈ ದೇವಾಲಯದ ಉದ್ಘಾಟನೆಯನ್ನು 11ನೇ ನವೆಂಬರ್ 2007 ರಂದು ಸಾವಿರಾರು ಸಾಯಿಭಕ್ತರ ಸಮ್ಮುಖದಲ್ಲಿ ನೆರವೇರಿಸಲಾಯಿತು.

ಈ ದೇವಾಲಯವನ್ನು ತಮ್ಮ ಸುಮಾರು 4 ಎಕರೆ ತೋಟದ ಜಾಗದಲ್ಲಿ ಶ್ರೀ.ರಾಜೇಶ್ ರಾಮದಾಸ್ ರವರು ನಿರ್ಮಿಸಿರುತ್ತಾರೆ. ಶ್ರೀ.ರಾಜೇಶ್ ರಾಮದಾಸ್ ರವರೇ  ದೇವಾಲಯದ ದಿನನಿತ್ಯದ ಆಗುಹೋಗುಗಳನ್ನು ಮತ್ತು ಅಭಿವೃದ್ದಿ ಕಾರ್ಯಗಳನ್ನು ಬಹಳ ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ.

ದೇವಾಲಯದಲ್ಲಿ ಸುಮಾರು 1 1/2 ಅಡಿಯ  ಶಿರಡಿ ಸಾಯಿಬಾಬಾರವರ ಸುಂದರವಾದ ಅಮೃತಶಿಲೆಯ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ. ಹೈದರಾಬಾದ್ ನ ಸಾಯಿ ಭಕ್ತರಾದ ಶ್ರೀ.ಶ್ರೀವತ್ಸ ಎಂಬುವರು ನೀಡಿರುವ ಸುಂದರವಾದ ದ್ವಾರಕಾಮಾಯಿ ಸಾಯಿಬಾಬಾರವರ ವಿಗ್ರಹವನ್ನು 26ನೇ ಮೇ 2011 ರಂದು ಸ್ಥಾಪಿಸಲಾಗಿದ್ದು, ಅದನ್ನು ಕೂಡ ಸಾಯಿ ಭಕ್ತರು ನೋಡಬಹುದಾಗಿದೆ. ಸಾಯಿಬಾಬಾರವರ ಪುಟ್ಟ ಅಮೃತ ಶಿಲೆಯ ವಿಗ್ರಹ ಮತ್ತು ಅಮೃತ ಶಿಲೆಯ ಪಾದುಕೆಗಳನ್ನು ಕೂಡ ದೇವಾಲಯದಲ್ಲಿ ಪ್ರತಿಷ್ಟಾಪಿಸಲಾಗಿದೆ. 

ಅಲ್ಲದೆ, ಕಪ್ಪು ಶಿಲೆಯ ಭಕ್ತ ಆಂಜನೇಯನ ವಿಗ್ರಹ, ಮಹಾಬಲೇಶ್ವರ, ಪಾರ್ವತೀದೇವಿ, ಅನ್ನ್ನಪೂರ್ಣೇಶ್ವರಿ ದೇವಿ ಮತ್ತು ನಂದಿಯ ವಿಗ್ರಹಗಳನ್ನು ಕೂಡ ದೇವಾಲಯದಲ್ಲಿ ಪ್ರತಿಷ್ಟಾಪಿಸಲಾಗಿದೆ. 

ಸಾಯಿಬಾಬಾರವರ ವಿಗ್ರಹವಿರುವ ಗರ್ಭಗುಡಿಯ ಎರಡೂ ಬದಿಯಲ್ಲಿ ಅಮೃತ ಶಿಲೆಯ ಗಣಪತಿಯ ಮತ್ತು ಅಮೃತ ಶಿಲೆಯ ಸುಬ್ರಮಣ್ಯಸ್ವಾಮಿಯ ವಿಗ್ರಹಗಳನ್ನು ಎರಡು ಪ್ರತ್ಯೇಕ ಗರ್ಭಗುಡಿಗಳಲ್ಲಿ ಸ್ಥಾಪಿಸಲಾಗಿದೆ. ಈ ದೇವಾಲಯದಲ್ಲಿರುವ ಗಣಪತಿಯ ವಿಶೇಷತೆ ಏನೆಂದರೆ ಈ ಗಣಪತಿಯು ತಿಪಟೂರು ಪಟ್ಟಣದ ಪ್ರಪ್ರಥಮ ಬಲಮುರಿ ಗಣಪತಿಯ ದೇವಾಲಯವಾಗಿರುತ್ತದೆ. 

ದೇವಾಲಯದ ಹೊರಭಾಗದ ಎರಡೂ ಇಕ್ಕೆಲಗಳಲ್ಲಿ ಗಣಪತಿ ಮತ್ತು ಸುಬ್ರಮಣ್ಯ ದೇವರುಗಳನ್ನು ಸ್ಥಾಪಿಸಲು ಎರಡು ಪ್ರತ್ಯೇಕ ಮಂದಿರಗಳನ್ನು ನಿರ್ಮಿಸಲಾಗುತ್ತಿದ್ದು ಆಗಸ್ಟ್ 2011 ರಲ್ಲಿ ಉದ್ಘಾಟನೆಗೊಳ್ಳಲಿದೆ.

ದೇವಾಲಯದ ಎದುರುಗಡೆ ಪವಿತ್ರ ಧುನಿ, ಬೇವಿನ ಮರದ ಕೆಳಗಡೆ ನಂದಾದೀಪಗಳನ್ನು ಸ್ಥಾಪಿಸಲಾಗಿದೆ.

ಬೇರೆ ಬೇರೆ ಸ್ಥಳಗಳಿಂದ ಮತ್ತು ದೂರದ ಊರುಗಳಿಂದ ಬರುವ ಸಾಯಿ ಭಕ್ತರ ಅನುಕೂಲಕ್ಕಾಗಿ ದೇವಾಲಯದ ಬಲಭಾಗದಲ್ಲಿ "ಗೌಪಾವಾಡಾ" ಎಂಬ ಭಕ್ತ ನಿವಾಸವನ್ನು ಕಟ್ಟಲಾಗಿದ್ದು ಈ ಕೊಠಡಿಯನ್ನು ಉಚಿತವಾಗಿ ಮೊದಲು ಬಂದವರಿಗೆ ಆದ್ಯತೆಯ ಮೇರೆಗೆ ಉಳಿದುಕೊಳ್ಳಲು ನೀಡಲಾಗುತ್ತದೆ.















ದೇವಾಲಯದ ಕಾರ್ಯಚಟುವಟಿಕೆಗಳು:

ದಿನನಿತ್ಯದ ಕಾರ್ಯಕ್ರಮಗಳು:
 
ಆರತಿಯ ಸಮಯ:
ಆರತಿ 
ಸಮಯ
ಬೆಳಗಿನ ಆರತಿ
8 AM
ಶೇಜಾರತಿ
8 PM
ಪ್ರತಿದಿನ ಬೆಳಿಗ್ಗೆ 7 ಘಂಟೆಗೆ ಕ್ಷೀರಾಭಿಷೇಕ ಕಾರ್ಯಕ್ರಮವಿರುತ್ತದೆ. 
 
ಪ್ರತಿ ತಿಂಗಳ ಹುಣ್ಣಿಮೆಯಂದು ಬೆಳಿಗ್ಗೆ 9 ಘಂಟೆಗೆ  ಸತ್ಯನಾರಾಯಣ ಪೂಜೆಯ ಕಾರ್ಯಕ್ರಮವಿರುತ್ತದೆ. 
 
ಪ್ರತಿ ತಿಂಗಳ ಬಹುಳ ಚತುರ್ಥಿಯಂದು ಬೆಳಿಗ್ಗೆ 9 ಘಂಟೆಗೆ ಗಣೇಶ ಚತುರ್ಥಿಯನ್ನು ಆಚರಿಸಲಾಗುತ್ತದೆ. 
 
ದೇವಾಲಯದಲ್ಲಿ ನಡೆಯುವ ಯಾವುದೇ ಪೂಜೆಗಳಿಗೆ ಮತ್ತು ಸೇವೆಗಳಿಗೆ ಯಾವುದೇ ನಿಗದಿತ ಸೇವಾ ಶುಲ್ಕವನ್ನು ಇಟ್ಟಿರುವುದಿಲ್ಲ ಮತ್ತು ಹುಂಡಿಯನ್ನು ಸಹ ಇಟ್ಟಿರುವುದಿಲ್ಲ ಎಂಬುದು ಈ ಸ್ಥಳದ ಒಂದು ವಿಶೇಷತೆಯಾಗಿರುತ್ತದೆ. 

ವಿಶೇಷ ಉತ್ಸವದ ದಿನಗಳು: 

1. ಮಂದಿರದ ವಾರ್ಷಿಕೋತ್ಸವ ಪ್ರತಿ ವರ್ಷದ ಕಾರ್ತೀಕ ಮಾಸದ 11ನೇ ನವೆಂಬರ್. 
2. ಶ್ರೀರಾಮನವಮಿ. 
3. ಗುರು ಪೂರ್ಣಿಮೆ.
4 .ವಿಜಯದಶಮಿ. 

 
ಮಂದಿರದ ವಿಳಾಸ ಮತ್ತು ಮಾರ್ಗಸೂಚಿ: 


ಸ್ಥಳ:
ಮಲ್ಲಸಂದ್ರ ರೈಲ್ವೇ ನಿಲ್ದಾಣದ ಹತ್ತಿರ, ಮಲ್ಲಸಂದ್ರ.  

ವಿಳಾಸ:
ಮಹಾಯೋಗಿ ಶ್ರೀ ಶಿರಡಿ ಸಾಯಿಬಾಬಾ ಮಂದಿರ, 
ಮಲ್ಲಸಂದ್ರ ಅಂಚೆ-572 107, 
ತುಮಕೂರು ಜಿಲ್ಲೆ, ಕರ್ನಾಟಕ.                                           
 
ಸಂಪರ್ಕಿಸಬೇಕಾದ ವ್ಯಕ್ತಿಗಳು:                                                                                                                    ಶ್ರೀ.ರಾಜೇಶ್ ರಾಮದಾಸ್

ದೂರವಾಣಿ ಸಂಖ್ಯೆಗಳು:                                                                                                                                
+ 91 97415 88031 / +91 93432 91342

ಈ ಮೇಲ್ ವಿಳಾಸ: 

 
ಮಾರ್ಗಸೂಚಿ: 
ಮಲ್ಲಸಂದ್ರ ರೈಲ್ವೇ ನಿಲ್ದಾಣದಲ್ಲಿ ಇಳಿಯುವುದು. ದಕ್ಷಿಣ ದಿಕ್ಕಿಗೆ ಸುಮಾರು ಎರಡು ಕಿಲೋಮೀಟರ್ ನಡೆದರೆ ದೇವಾಲಯ ಸಿಗುತ್ತದೆ. ರೈಲ್ವೇ ನಿಲ್ದಾಣದಿಂದ ಆಟೋ ಸೌಲಭ್ಯವಿರುತ್ತದೆ. 
 
ಕನ್ನಡ ಅನುವಾದ:ಶ್ರೀಕಂಠ ಶರ್ಮ  


No comments:

Post a Comment