Wednesday, January 4, 2012

ಸಾಯಿ ಭಜನ ಗಾಯಕ - ಶ್ರೀ.ರವೀಂದ್ರ ರಮಾಕಾಂತ ಬಿಜೂರ್ - ಕೃಪೆ: ಸಾಯಿಅಮೃತಧಾರಾ.ಕಾಂ 



ಬಹುಮುಖ ಪ್ರತಿಭೆಯ ವ್ಯಕ್ತಿತ್ವವನ್ನು ಹೊಂದಿರುವ ಶ್ರೀ.ರವೀಂದ್ರ ಬಿಜೂರ್ ರವರು ಮಹಾರಾಷ್ಟ್ರದ ಮುಂಬೈನಲ್ಲಿ 26ನೇ ಸೆಪ್ಟೆಂಬರ್ 1957 ರಂದು ಜನಿಸಿದರು. ಇವರ ತಂದೆಯವರು ದಿವಂಗತ ಶ್ರೀ.ರಮಾಕಾಂತ ಬಿಜೂರ್ ಮತ್ತು ತಾಯಿಯವರು ಶ್ರೀಮತಿ.ಸಂಧ್ಯಾ. ಇವರು ಎಂಕಾಂ,ಎಲ್.ಎಲ್.ಬಿ.ಪದವೀಧರರಾಗಿರುತ್ತಾರೆ. ಇವರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ತಮ್ಮ ತಂದೆಯವರಾದ ದಿವಂಗತ ಶ್ರೀ.ರಮಾಕಾಂತ ಬಿಜೂರ್, ಶ್ರೀ.ಬಾಬನ್ ಮಂಜ್ರೇಕರ್ ಮತ್ತು ದಿವಂಗತ ಶ್ರೀ.ಅರವಿಂದ ಸಫಾಲ್ಕರ್ ರವರ ಬಳಿ ಕಲಿತರು. ಇವರ ತಂದೆಯವರು ಖ್ಯಾತ ಸಾರಂಗಿ ವಾದಕರಾಗಿದ್ದರು. ಇವರು 1980 ನೇ ಇಸವಿಯಿಂದ ಮುಂಬೈ ಆಕಾಶವಾಣಿ ಮತ್ತು ದೂರದರ್ಶನದಲ್ಲಿ ಲಘು ಶಾಸ್ತ್ರೀಯ ಸಂಗೀತ ವಿಭಾಗದಲ್ಲಿ ಗಾಯಕರಾಗಿ ಅನೇಕ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದಾರೆ. ಇವರು ಅನೇಕ ಮರಾಠಿ ಧಾರಾವಾಹಿಗಳು, ಮರಾಠಿ ಮತ್ತು ಹಿಂದಿ ಚಲನಚಿತ್ರಗಳಲ್ಲಿ ಹಾಡಿರುತ್ತಾರೆ. ಅಷ್ಟೇ ಅಲ್ಲದೆ, ಇವರು ಅನೇಕ ಮರಾಠಿ ರಂಗಭೂಮಿಯ ನಾಟಕಗಳಲ್ಲಿ ಅಭಿನಯಿಸಿರುತ್ತಾರೆ. 

ಶ್ರೀ.ರವೀಂದ್ರ ಬಿಜೂರ್ ರವರ ಸಾಧನೆಯ ಹೆಜ್ಜೆ ಗುರುತುಗಳನ್ನು ಸಾಯಿಭಕ್ತರ ಅವಗಾಹನೆಗಾಗಿ ಈ ಕೆಳಗೆ ಕೊಡಲಾಗಿದೆ: 

ಇವರು ಭಾರತದ ಅನೇಕ ಪ್ರಖ್ಯಾತ ಸಂಗೀತ ನಿರ್ದೇಶಕರ ಗೀತೆಗಳಿಗೆ ತಮ್ಮ ಧ್ವನಿಯನ್ನು ನೀಡಿರುತ್ತಾರೆ. ಅವರಲ್ಲಿ ಪ್ರಮುಖರು ಶ್ರೀ.ಶಂಕರ್ (ಶಂಕರ್-ಜೈಕಿಶನ್ ಜೋಡಿ), ಪ್ರಭಾಕರ ಪಂಡಿತ್, ಕಾನು ಘೋಷ್, ಅಶೋಕ್ ಪಡ್ಕಿ, ರವೀಂದ್ರ ಜೈನ್, ಅನೀಲ್ ಮೋಹಿಲೆ, ರಾಮ್ ಲಕ್ಷ್ಮಣ್, ಅಶೋಕ್ ರಾನಡೆ, ದತ್ತಾ ದವಜೇಕರ್, ಅಭಿಜಿತ್ ಲಿಮಯೆ, ಸ್ನೇಹಾಲ್ ಭಟ್ಕಾರ್, ಉದಯ್ ಮಜುಂದಾರ್, ಭಾಸ್ಕರ್ ಚಂದಾವರಕರ್, ರಾಹುಲ್ ರಾನಡೆ, ಯಶವಂತ್ ದೇವ್ ಮತ್ತು ಉಷಾ ಮಂಗೇಶ್ಕರ್.

ಇವರು ಪ್ರಸಿದ್ಧ ಮರಾಠಿ ಧಾರಾವಾಹಿಗಳಾದ "ಸಾವಲ್ಯಾ" ಮತ್ತು "ತಾರ್ ಕಾಯ್ ಕರಲ್" ಗಳ ಶೀರ್ಷಿಕೆ ಗೀತೆಗಳನ್ನು ಹಾಡಿರುತ್ತಾರೆ.

ಇವರು ಅನೇಕ ಮರಾಠಿ ಚಿತ್ರಗಳಲ್ಲಿ ಹಾಡಿದ್ದಾರೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ: ಚಿಕತ್ ನವ್ರ, ಸುನಾ ಯೇತಿ ಘರಾ, ಕಮಾಲ್ ಮಾಜ್ಯಾ ಬೈಕೋಚಿ, ಸಂಸಾರ್, ಜೈ ಮಲ್ಹಾರ್ ಬೈಕೋ, ಮಾನಸ್, ಕರ್ಮಯೋಗ್, ಲಕ್ಷ್ಮಿ ಚಲಾಯ್ಚಾ, ಕುಣಿ ತರಿ ಕುಥೆ ತರಿ, ಸಂತ ತುಕಾರಾಮ, ಖತರ್ನಾಕ್, ಶೋಧ, ಹೇ ಖೇಲ್ ನಸೀಬಾಚೆ, ಚಲು ನವ್ರಾ ಭೋಲಿ, ಮಿಲನ್, ಧೋಲ್ಕಿ, ಹೇ ಅಪ್ಲಾ ಅಸಾಚ್ ಮತ್ತು ಉತ್ತರಾಯಣ್.

ಇವರು ಅನೇಕ ಹಿಂದಿ ಚಿತ್ರಗಳಲ್ಲಿ ಹಾಡಿರುತ್ತಾರೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ: ಎನ್ಕೌಂಟರ್ - ದಿ ಕಿಲ್ಲಿಂಗ್, ಸಂತ ತುಕಾರಾಮ ಮತ್ತು ರಾಜಶ್ರೀ ಫಿಲಂಸ್ ರವರ ಹಮ್ ಪ್ಯಾರ್ ತುಮ್ಹೀ ಸೇ ಕರ್ ಬೈಟೆ.

ಇವರು ಕಿರುತೆರೆಯಲ್ಲಿ ಪ್ರಸಾರವಾದ ಹಿಂದಿ ಟೆಲಿ ಚಿತ್ರವಾದ "ಏಕ್ ಬೂಂದ್ ಆಸ್ಮಾನ್" ನಲ್ಲಿ ಹಾಡಿರುತ್ತಾರೆ.

ಇವರು ಭಾರತದ ಪ್ರಖ್ಯಾತ ಗಾಯಕ ಗಾಯಕಿಯರೊಂದಿಗೆ ಹಾಡಿರುತ್ತಾರೆ. ಅವರಲ್ಲಿ ಪ್ರಮುಖರಾದವರು: ಉಷಾ ಮಂಗೇಶ್ಕರ್, ಮಹೇಂದ್ರ ಕಪೂರ್, ಅನೂರಾಧಾ ಪೌಡ್ವಾಲ್, ಸುರೇಶ ವಾಡೇಕರ್, ಕವಿತಾ ಕೃಷ್ಣಮುರ್ತಿ, ಅನೂಪ್ ಜಲೋಟಾ, ಸಾಧನಾ ಸರ್ಗಮ್, ಮೊಹಮ್ಮದ್ ಅಜೀಜ್, ಶ್ರೇಯಾ ಗೋಶಾಲ್, ಸೋನು ನಿಗಮ್, ಮಹಾಲಕ್ಷ್ಮಿ ಅಯ್ಯರ್, ಶಂಕರ್ ಮಹಾದೇವನ್, ಉಷಾ ತಿಮೋಥಿ, ಶಾನ್, ರಂಜನಾ ಜೋಗಳೇಕರ್, ಶೈಲೇಂದ್ರ ಸಿಂಗ್, ಉತ್ತರಾ ಕೇಳ್ಕರ್, ಸುದೇಶ್ ಬೋಂಸ್ಲೆ, ಅನುಪಮಾ ದೇಶಪಾಂಡೆ, ಅರುಣ್ ಡಾಟೆ, ಪದ್ಮಜಾ ಫೆನಾನಿ, ಪ್ರಭಾಕರ್ ಕಾರೇಕರ್, ಶೋಭಾ ಜೋಷಿ, ರವೀಂದ್ರ ಸಾಥೆ, ರಾಣಿ ವರ್ಮಾ, ಅಜಿತ್ ಕಡ್ಕಡೆ, ಜ್ಯೋತ್ಸ್ನಾ ಹರ್ಡೀಕರ್, ಶ್ರೀಧರ್ ಪಡ್ಕೆ, ಜಯಶ್ರೀ ಶಿವರಾಂ, ಸ್ವಪ್ನೀಲ್ ಬಂದೊದ್ಕರ್ ಮತ್ತು ವೈಶಾಲಿ ಸಾಮಂತ್.

ಇವರು ಮರಾಠಿ ಮತ್ತು ಹಿಂದಿ ಭಾಷೆಗಳಲ್ಲಿ ಸುಮಾರು 70  ಸೋಲೋ ಗೀತೆಗಳನ್ನು ಹಾಗೂ 250 ಕ್ಕೂ ಹೆಚ್ಚು ಕ್ಯಾಸೆಟ್ ಮತ್ತು ಸಿಡಿಗಳಲ್ಲಿ ಹಾಡಿದ್ದಾರೆ.

ಇವರು ಅನೇಕ ಸಾಯಿ ಭಜನೆಗಳನ್ನು ಹಾಗೂ ಸಾಯಿ ಧುನ್ ಗಳನ್ನು ಹಾಡಿರುತ್ತಾರೆ. ಅವುಗಳಲ್ಲಿ "ಸಾಯಿರಾಮ್ ಸಾಯಿಶ್ಯಾಂ" ಧುನ್ ಅತ್ಯಂತ ಹೆಚ್ಚಿನ ಜನಪ್ರಿಯತೆಯನ್ನು ಇವರಿಗೆ ತಂದುಕೊಟ್ಟಿದೆ.

ಇವರು "ಸಂಶಯಕಲ್ಲೋಲ್" ಮತ್ತು "ಆಯೇನ್ ವಸಂತ್ ಅರ್ಧ್ಯ ರಾತ್ರಿ" ಎಂಬ ಎರಡು ಜನಪ್ರಿಯ ಮರಾಠಿ ರಂಗಭೂಮಿಯ ನಾಟಕಗಳಲ್ಲಿ ಅಭಿನಯಿಸಿರುತ್ತಾರೆ.

ಇವರು ಮರಾಠಿ ಆಕಾಶವಾಣಿಯವರು ಮುಂಬೈನಲ್ಲಿ ಏರ್ಪಡಿಸಿದ್ದ ಮರಾಠಿ ಸುಗಮ ಸಂಗೀತ ಕಾರ್ಯಕ್ರಮದಲ್ಲಿ ಹಾಗೂ ಕೊಲ್ಹಾಪುರ, ಸಾಂಗ್ಲಿ, ಶೋಲಾಪುರ ಮತ್ತು ಜಲಗಾವ್ ನಲ್ಲಿ ನಡೆದ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುತ್ತಾರೆ.

ಇವರು ಭಾರತ ಮತ್ತು ಹೊರದೇಶದ ಅನೇಕ ಕಡೆಗಳಲ್ಲಿ ಮರಾಠಿ ಮತ್ತು ಹಿಂದಿ ಭಾಷೆಗಳಲ್ಲಿ ಗಜಲ್, ಸುಗಮ ಸಂಗೀತ, ಭಜನೆ, ಚಿತ್ರಗೀತೆಗಳ ಅನೇಕ ಕಾರ್ಯಕ್ರಮಗಳನ್ನು ನೀಡಿರುತ್ತಾರೆ.

ಇವರಿಗೆ ಸಂದ ಪ್ರಶಸ್ತಿಗಳು ಮತ್ತು ಗೌರವಗಳು: 

ಇವರು 1996-97 ರಲ್ಲಿ ಬಿಡುಗಡೆಯಾದ ಮರಾಠಿ ಚಲನಚಿತ್ರವಾದ "ಸುನಾ ಯೇತಿ ಘರಾ" ಚಲನಚಿತ್ರದಲ್ಲಿ ಹಾಡಿದ ಗೀತೆಗಾಗಿ ಮಹಾರಾಷ್ಟ ಸರ್ಕಾರದ ಶ್ರೇಷ್ಠ ಹಿನ್ನೆಲೆ ಗಾಯಕ ರಾಜ್ಯ ಪ್ರಶಸ್ತಿಗೆ ಭಾಜನರಾಗಿರುತ್ತಾರೆ.


ಇವರು 2005 ರಲ್ಲಿ ಬಿಡುಗಡೆಯಾದ ಮರಾಠಿ ಅಲ್ಬಮ್ "ಅಪೂರೆ ಚಂದನೆ" ಯಲ್ಲಿ ಹಾಡಿದ ಗೀತೆಗಾಗಿ ಜೀ ಅಲ್ಫಾ ಶ್ರೇಷ್ಠ ಹಿನ್ನೆಲೆ ಗಾಯಕ ಪ್ರಶಸ್ತಿಗೆ ಭಾಜನರಾಗಿರುತ್ತಾರೆ.

ಶ್ರೀ.ರವೀಂದ್ರ ಬಿಜೂರ್ ರವರ ಸಂಪರ್ಕದ ವಿವರಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ನೀಡಲಾಗಿದೆ:


ವಿಳಾಸ: 

ನಂ.32, ಬಿಲ್ಡಿಂಗ್ ಸಂಖ್ಯೆ: 4/6, 4ನೇ ಮಹಡಿ, ತಲ್ಮಕಿವಾಡಿ ಕೋ ಆಪರೇಟಿವ್ ಹೌಸಿಂಗ್ ಸೊಸೈಟಿ, ಜೆ.ಡಿ.ಮಾರ್ಗ, ತಾರಾದೇವ್, ಮುಂಬೈ-400 007, ಮಹಾರಾಷ್ಟ್ರ, ಭಾರತ. 

ದೂರವಾಣಿ ಸಂಖ್ಯೆಗಳು: 

+91 22 2381 1486 / +91 98200 64453 
  

ಈ ಮೇಲ್ ವಿಳಾಸ: 



ಅಲ್ಬಮ್ ಗಳು: 
ಸಾಯಿ ರಾಮ್, ಸಾಯಿ ಶ್ಯಾಮ್, ಓಂ ಸಾಯಿ ನಮಃ, ಯೇ ಸಾಯಿ ಕಾ ದರ್ಬಾರ್ ಹೈ, ಸಾಯಿ ಅಮೃತಧಾರಾ, ಸಾಯಿಬಾಬಾ ಕೀ ಚಾರ್ ಅನ್ಮೋಲ್ ಧುನ್, ವಾರಿ ಶಿರ್ಡೀರ್ಲಾ ಚಾಲ್ಲಿ ಮತ್ತು ಇನ್ನು ಹತ್ತು ಹಲವು ಅಲ್ಬಮ್ ಗಳು.

ಭಜನೆಯ ವೀಡಿಯೋಗಳು: 




ಕನ್ನಡ ಅನುವಾದ: ಶ್ರೀಕಂಠ ಶರ್ಮ



No comments:

Post a Comment