Friday, January 6, 2012

ತಮಿಳುನಾಡಿನ ಶಿರಡಿ ಸಾಯಿಬಾಬಾ ಮಂದಿರ - ಶ್ರೀ ಸಾಯಿನಾಥ ಧ್ಯಾನ ಮಂಟಪಂ, ಮಾದಾವರಂ ಮಿಲ್ಕ್ ಕಾಲೋನಿ  ಅಂಚೆ, ಚನ್ನೈ - 600 051, ತಮಿಳುನಾಡು, ಭಾರತ - ಕೃಪೆ:ಸಾಯಿಅಮೃತಧಾರಾ.ಕಾಂ  


ದೇವಾಲಯದ ವಿಶೇಷತೆಗಳು: 

ಈ ದೇವಾಲಯವು ಚನ್ನೈ ಬಳಿಯಿರುವ ಮಾದಾವರಂ ಎಂಬ ಹಳ್ಳಿಯಲ್ಲಿರುವ ಪಾರ್ವತಿನಗರ ಬಸ್ ನಿಲ್ದಾಣದ ಬಳಿ ಇರುತ್ತದೆ. 

ಈ ದೇವಾಲಯದ ಭೂಮಿಪೂಜೆಯನ್ನು 26ನೇ ಜನವರಿ 2008 ರಂದು ನೆರವೇರಿಸಲಾಯಿತು. 

ಈ ದೇವಾಲಯದ ಉದ್ಘಾಟನೆಯನ್ನು 22ನೇ ಆಗಸ್ಟ್ 2008 ರಂದು ಅಂದಿನ ಪಾಂಡಿಚೇರಿಯ ಮುಖ್ಯಮಂತ್ರಿಗಳು ನೆರವೇರಿಸಿದರು. 

ಶ್ರೀ.ಕೆ.ಅರಿವಾಳನ್ ರವರು ಈ ದೇವಾಲಯದ ಸಂಸ್ಥಾಪಕರು ಮತ್ತು ಟ್ರಸ್ಟಿಗಳಾಗಿರುತ್ತಾರೆ. ಇವರು ಮತ್ತು ಇವರ ಪತ್ನಿಯವರಾದ ಶ್ರೀಮತಿ.ಶ್ರೀವಿದ್ಯಾ ಅರಿವಾಳನ್ ರವರುಗಳು ಜಂಟಿಯಾಗಿ ಈ ದೇವಾಲಯದ ದಿನನಿತ್ಯದ ಆಗುಹೋಗುಗಳನ್ನು ಮತ್ತು ಅಭಿವೃದ್ಧಿ ಕಾರ್ಯಗಳನ್ನು ಬಹಳ ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ. 

ದೇವಾಲಯವು ಬೆಳಗಿನ ಜಾವ 6 ಗಂಟೆಗೆ ಕಾಕಡಾ ಆರತಿಯೊಂದಿಗೆ ತೆರೆಯುತ್ತದೆ ಹಾಗೂ ರಾತ್ರಿ 9:45ಕ್ಕೆ ಶೇಜಾರತಿಯ ನಂತರ ಮುಚ್ಚುತ್ತದೆ. 

ದೇವಾಲಯದಲ್ಲಿ ಶಿರಡಿ ಸಾಯಿಬಾಬಾರವರ ಸುಂದರವಾದ ಅಮೃತ ಶಿಲೆಯ ವಿಗ್ರಹ, ದತ್ತಾತ್ರೇಯ, ಕಪ್ಪು ಶಿಲೆಯ ಸಾಯಿ ಸಿದ್ಧಿವಿನಾಯಕ ಹಾಗೂ ನಂದಿಯ ವಿಗ್ರಹಗಳನ್ನು ಪ್ರತಿಷ್ಟಾಪಿಸಲಾಗಿದೆ. 

ದೇವಾಲಯದಲ್ಲಿ ಪವಿತ್ರ ಧುನಿಯನ್ನು ಕೂಡ ಪ್ರತಿಷ್ಟಾಪಿಸಲಾಗಿದೆ. 









ದೇವಾಲಯದ ಕಾರ್ಯಚಟುವಟಿಕೆಗಳು: 

ದಿನನಿತ್ಯದ ಕಾರ್ಯಕ್ರಮಗಳು: 

ಆರತಿಯ ಸಮಯ: 

ಕಾಕಡಾ ಆರತಿ: ಬೆಳಿಗ್ಗೆ 6 ಗಂಟೆಗೆ 
ಮಧ್ಯಾನ್ಹ ಆರತಿ: ಮಧ್ಯಾನ್ಹ 12 ಗಂಟೆಗೆ 
ಧೂಪಾರತಿ: ಸಂಜೆ 6 ಗಂಟೆಗೆ  
ಶೇಜಾರತಿ: ರಾತ್ರಿ 9:45 ಕ್ಕೆ  

ದೇವಾಲಯದಲ್ಲಿ ಪ್ರತಿನಿತ್ಯ ವಿಶೇಷ ಪೂಜೆಗಳು, ಹಾಲಿನ ಅಭಿಷೇಕ ಮತ್ತು ಧುನಿ ಪೂಜೆಯನ್ನು ನೆರವೇರಿಸಲಾಗುತ್ತದೆ. 

ವಿಶೇಷ ಉತ್ಸವದ ದಿನಗಳು: 

ಪ್ರತಿ ವರ್ಷದ 22 ನೇ ಆಗಸ್ಟ್ ದೇವಾಲಯದ ವಾರ್ಷಿಕೋತ್ಸವ. 
ಶ್ರೀರಾಮನವಮಿ. 
ಗುರುಪೂರ್ಣಿಮೆ. 
ವಿಜಯದಶಮಿ. 
ಮಹಾಶಿವರಾತ್ರಿ. 

ಸಾಮಾಜಿಕ ಕಾರ್ಯಚಟುವಟಿಕೆಗಳು: 

ಪ್ರತಿ ಗುರುವಾರ ಮತ್ತು ವಿಶೇಷ ಉತ್ಸವದ ದಿನದಂದು ಅನ್ನದಾನ ಕಾರ್ಯಕ್ರಮ.
ಶಾಲೆಯ ವಿದ್ಯಾರ್ಥಿಗಳಿಗೆ ಬೇಸಿಗೆ ಶಿಬಿರದ ಆಯೋಜನೆ. 
ಸ್ಥಳೀಯ ಸಾರ್ವಜನಿಕರಿಗಾಗಿ ಉಚಿತ ವೈದ್ಯಕೀಯ ಶಿಬಿರ. 
ಶಾಲೆಯ ಮಕ್ಕಳಿಗೆ ಉಚಿತ ನೋಟ್ ಬುಕ್ ಮತ್ತು ಶಾಲಾ ಸಾಮಗ್ರಿಗಳ ವಿತರಣೆ. 
ಸಾಮಾಜಿಕ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಟ್ರಸ್ಟ್ ಗಳಿಗೆ ಧನಸಹಾಯ ಮಾಡುವುದು. 
ದೇವಾಲಯದಲ್ಲಿ ವಿದ್ವಾಂಸರಿಂದ ಪ್ರವಚನಗಳನ್ನು ನಡೆಸುವುದು. 

ದೇಣಿಗೆಗೆ ಮನವಿ: 

ದೇವಾಲಯದ ಅಭಿವೃದ್ಧಿ ಕಾರ್ಯಗಳಿಗೆ ಸಹಾಯ ನೀಡಲು ಇಚ್ಚಿಸುವ ಸಾಯಿಭಕ್ತರು "ಶ್ರೀ ಸಾಯಿ ಯಶೋದ ಅಮ್ಮಾಳ್ ಸ್ಪಿರಿಚ್ಯುಯಲ್ ಅಂಡ್ ಚಾರಿಟಬಲ್ ಟ್ರಸ್ಟ್" ಹೆಸರಿನಲ್ಲಿ ಚೆಕ್ ಅಥವಾ ಡಿಡಿ ಯನ್ನು ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬಹುದು. 

ಶ್ರೀ ಸಾಯಿ ಯಶೋದ ಅಮ್ಮಾಳ್ ಸ್ಪಿರಿಚ್ಯುಯಲ್ ಅಂಡ್ ಚಾರಿಟಬಲ್ ಟ್ರಸ್ಟ್
ಹೊಸ ಸಂಖ್ಯೆ: 44 (ಹಳೆ ಸಂಖ್ಯೆ: 27), ಮೊದಲನೇ ಮುಖ್ಯರಸ್ತೆ, 
ಜವಾಹರ್ ನಗರ, ಚನ್ನೈ- 600 082, ತಮಿಳುನಾಡು, ಭಾರತ. 
ದೂರವಾಣಿ ಸಂಖ್ಯೆ: +91-44-4552 2080
ಬ್ಯಾಂಕ್ ಹೆಸರು: ಆಕ್ಷಿಸ್ ಬ್ಯಾಂಕ್, 
ಶಾಖೆ: ಪುರುಷವಾಕ್ಕಂ
ಖಾತೆ ಸಂಖ್ಯೆ: 189010100101042
ಖಾತೆ: ಉಳಿತಾಯ ಖಾತೆ 

ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ: 

ಸ್ಥಳ: 

ಪಾರ್ವತಿನಗರ ಬಸ್ ನಿಲ್ದಾಣದ ಬಳಿ, ಮಾದಾವರಂ ಮಿಲ್ಕ್ ಕಾಲೋನಿ, ಮುಲಚತ್ರಂ, ಚನ್ನೈ.

ವಿಳಾಸ: 

ಶ್ರೀ ಸಾಯಿನಾಥ ಧ್ಯಾನ ಮಂಟಪಂ, 
ಶ್ರೀ ಸಾಯಿ ಯಶೋದ ಅಮ್ಮಾಳ್ ಸ್ಪಿರಿಚ್ಯುಯಲ್ ಅಂಡ್ ಚಾರಿಟಬಲ್ ಟ್ರಸ್ಟ್ 
ಪ್ಲಾಟ್ ನಂ. ೪೪, ಕೋ-ಆಪರೇಟಿವ್ ನಗರ್,
ಮಾದಾವರಂ ಮಿಲ್ಕ್ ಕಾಲೋನಿ  ಅಂಚೆ, ಚನ್ನೈ - 600 051, ತಮಿಳುನಾಡು, ಭಾರತ

ಸಂಪರ್ಕಿಸಬೇಕಾದ ವ್ಯಕ್ತಿಗಳು: 

ಶ್ರೀ.ಕೆ.ಅರಿವಾಳನ್ - ಸಂಸ್ಥಾಪಕರು ಮತ್ತು ಟ್ರಸ್ಟಿ.

ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು: 
+ 91 44 4552 2080, +91 98416 34879

ಈ ಮೇಲ್ ವಿಳಾಸ: 



ಅಂತರ್ಜಾಲ ತಾಣ:



ಮಾರ್ಗಸೂಚಿ: 

ಈ ದೇವಾಲಯವು ಚನ್ನೈ ಬಳಿಯಿರುವ ಮಾದಾವರಂ ಎಂಬ ಹಳ್ಳಿಯಲ್ಲಿರುವ ಪಾರ್ವತಿನಗರ ಬಸ್ ನಿಲ್ದಾಣದ ಬಳಿ ಇರುತ್ತದೆ. ಮುಲಕುಡಿ ಜಂಕ್ಷನ್ ನಿಂದ ಏನ್.ಹೆಚ್.5 ರಿಂದ ಹೇರಳವಾಗಿ ಆಟೋರಿಕ್ಷಾಗಳು ಮತ್ತು ಬಸ್ ಗಳು ಸಿಗುತ್ತವೆ.  

ಕನ್ನಡ ಅನುವಾದ: ಶ್ರೀಕಂಠ ಶರ್ಮ 

No comments:

Post a Comment