Friday, January 6, 2012

ಶಿರಡಿ ಸಾಯಿಬಾಬಾರವರ ಪಾದಧೂಳಿಯಿಂದ ಪರಮಪವಿತ್ರವಾದ ಸ್ಥಳ - ರೂಯಿಗಾವ್ ಸಂಕಟಮೋಚನ ಹನುಮಾನ್ ಮಂದಿರ  - ಕೃಪೆ: ಸಾಯಿಅಮೃತಧಾರಾ.ಕಾಂ  

ಶಿರಡಿ ಸಾಯಿಬಾಬಾರವರು ಆಗಾಗ್ಗೆ ನೀಂಗಾವ್ ನ ಎದುರು ಸಾಲಿನಲ್ಲಿ ಇರುವ ರೂಯಿಗವ್ ಗೆ ಹೋಗಿ ಬರುತ್ತಿದ್ದರೆಂದು ತಿಳಿದುಬಂದಿರುತ್ತದೆ. ಈ ಪರಮಪವಿತ್ರ ಸ್ಥಳದಲ್ಲಿ ಅತ್ಯಂತ ಪುರಾತನವಾದ ಮತ್ತು ಸಾಯಿಬಾಬಾರವರು ಶಿರಡಿಗೆ ಬರುವುದಕ್ಕೆ ಮುಂಚೆಯೇ ಇದ್ದ ಒಂದು ಬೃಹತ್ "ಔದುಂಬರ ವೃಕ್ಷ" ವಿರುತ್ತದೆ. ಈ ವೃಕ್ಷದ ಕೆಳಗಡೆ ಒಂದು ಭಾಗದಲ್ಲಿ ಕಪ್ಪು ಶಿಲೆಯ "ಶಿವಲಿಂಗ" ಮತ್ತು ಅದರ ಎದುರುಗಡೆ ಇರುವಂತೆ "ನಂದಿ" ಯ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ. ಔದುಂಬರ ವೃಕ್ಷದ ಕೆಳಗಡೆ ಮತ್ತೊಂದು ಭಾಗದಲ್ಲಿ ಶಿವಲಿಂಗದ ಹಿಂಭಾಗದಲ್ಲಿ "ಏಕಮುಖಿ ದತ್ತಾತ್ರೇಯ" ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ. ಔದುಂಬರ ವೃಕ್ಷದ ಮುಂಭಾಗದಲ್ಲಿ ಅತ್ಯಂತ ಪುರಾತನವಾದ  "ಸಂಕಟಮೋಚನ ಹನುಮಾನ್" ಮಂದಿರವನ್ನು ಸ್ಥಾಪಿಸಲಾಗಿದ್ದು ಇದರ ಸ್ಥಾಪನೆಯ ವರ್ಷ ತಿಳಿದುಬಂದಿರುವುದಿಲ್ಲ. ಹನುಮಾನ್ ಮಂದಿರದ ಪಕ್ಕದಲ್ಲಿರುವಂತೆ "ಸಪ್ತಶೃಂಗಿ ದೇವಿ" ಯ ಮಂದಿರವನ್ನು ಸ್ಥಾಪಿಸಲಾಗಿದೆ. 









ಸಂಕಟಮೋಚನ ಹನುಮಾನ್ ಮಂದಿರ ಮತ್ತು ಔದುಂಬರ ವೃಕ್ಷಗಳು ಸಾಯಿಬಾಬಾರವರು ಶಿರಡಿಗೆ ಬರುವುದಕ್ಕೆ ಮುಂಚೆಯೇ ಇದ್ದವೆಂದು ತಿಳಿದುಬಂದಿರುತ್ತದೆ. ಸಪ್ತಶೃಂಗಿ ಮಂದಿರವನ್ನು ಏಪ್ರಿಲ್ 2001 ರಲ್ಲಿ ಪವಿತ್ರ ಶ್ರೀರಾಮನವಮಿಯ ದಿವಸ ಶ್ರೀ.ಓಸ್ವಾಲ್ ರವರು ನೀಡಿದ ದೇಣಿಗೆಯ ಸಹಾಯದಿಂದ ಪ್ರತಿಷ್ಟಾಪಿಸಲಾಯಿತು. ಸಾಯಿ ಮಹಾಭಕ್ತರಾದ ಪರಮ ಪೂಜ್ಯ ಶ್ರೀ.ಶಿವನೇಶನ್ ಸ್ವಾಮೀಜಿಯವರ ನೆನಪಿನಲ್ಲಿ ಶ್ರೀ.ಬ್ರಿಜ್ ರಾವ್ ದಲ್ವೇ ಆಲಿಯಾಸ್ ಶ್ರೀ.ಜೈ ಸಿಯಾರಾಂ ರವರ ದೇಣಿಗೆಯ ಸಹಾಯದಿಂದ ನಿರ್ಮಿಸಲಾದ ಏಕಮುಖಿ ದತ್ತಾತ್ರೇಯ, ಶಿವಲಿಂಗ ಮತ್ತು ನಂದಿಯ ವಿಗ್ರಹಗಳನ್ನು ಏಪ್ರಿಲ್ 2001 ರಲ್ಲಿ ಪವಿತ್ರ ಶ್ರೀರಾಮನವಮಿಯ ದಿವಸ ಪ್ರಾರಂಭಿಸಲಾಯಿತು. 






ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ: 

ಸ್ಥಳ: 

ವೆಟ್ ಏನ್ ಜಾಯ್ ವಾಟರ್ ಪಾರ್ಕ್ ಹತ್ತಿರ, ಸಾಯಿನಗರ ರೈಲ್ವೇ ನಿಲ್ದಾಣದ ಹಿಂಭಾಗ, ರೂಯಿಗಾವ್, ಶಿರಡಿ. 

ವಿಳಾಸ: 

ಶ್ರೀ.ಸಂಕಟಮೋಚನ ಹನುಮಾನ್ ಮಂದಿರ, 
ಗವಾಲೆ ವಸ್ತಿ, ನಿಗೋಜ್ ಗ್ರಾಮ, 
ಚಾರಿ ನಂ.11,  ರೂಯಿಗಾವ್, 
ಶಿರಡಿ, ಮಹಾರಾಷ್ಟ್ರ, ಭಾರತ.

ಸಂಪರ್ಕಿಸಬೇಕಾದ ವ್ಯಕ್ತಿ: 

ಶ್ರೀ.ಸಿಯಾರಾಂ - ದೇವಾಲಯದ ಪುರೋಹಿತರು. 

ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು: 

+91 92261 29081


ಮಾರ್ಗಸೂಚಿ: 

ದೇವಾಲಯವು ಶಿರಡಿಯಿಂದ ಕೇವಲ ಎರಡು ಕಿಲೋಮೀಟರ್ ಗಳ ದೂರದಲ್ಲಿರುತ್ತದೆ. ದೇವಾಲಯವು ವೆಟ್ ಏನ್ ಜಾಯ್ ವಾಟರ್ ಪಾರ್ಕ್ ಹತ್ತಿರ ಮತ್ತು ಸಾಯಿನಗರ ರೈಲ್ವೇ ನಿಲ್ದಾಣದ ಹಿಂಭಾಗದಲ್ಲಿರುವ  ರೂಯಿಗಾವ್ ನಲ್ಲಿರುತ್ತದೆ.ಶಿರಡಿಯಿಂದ ಈ ಸ್ಥಳಕ್ಕೆ ಆಟೋಗಳು ಹೇರಳವಾಗಿ ದೊರೆಯುತ್ತವೆ. 


ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment