Tuesday, November 1, 2011

ಸಾಯಿ ಮಹಾಭಕ್ತ - ಶ್ರೀ.ಗೌಳಿಬುವಾ- ಕೃಪೆ: ಸಾಯಿಅಮೃತಧಾರಾ.ಕಾಂ  

ಶ್ರೀ.ಗೌಳಿಬುವಾ ರವರು ಪಂಡರಾಪುರದ ಪಾಂಡುರಂಗನ ಅನನ್ಯ ಭಕ್ತರಾಗಿದ್ದರು. ಇವರು ಪ್ರತಿ ವರ್ಷ ಶಿರಡಿಯ ಯಾತ್ರೆಯನ್ನು ಕೈಗೊಳ್ಳುತ್ತಿದ್ದರು. ಇವರ ಜೊತೆಯಲ್ಲಿ ಯಾವಾಗಲೂ ಒಬ್ಬ ಶಿಷ್ಯನು ಮತ್ತು ಇವರ ಸಾಮಾನು, ಸರಂಜಾಮುಗಳನ್ನು ಸಾಗಿಸಲು ಒಂದು ಗಾರ್ದಭವು ಇದ್ದಿತು. ಇವರು ಪ್ರತಿ ವರ್ಷದ 8 ತಿಂಗಳನ್ನು ಪಂಡರಾಪುರದಲ್ಲಿ ಮತ್ತು ಉಳಿದ ನಾಲ್ಕು ತಿಂಗಳನ್ನು  (ಆಷಾಢ ಶುದ್ಧ ಏಕಾದಶಿಯಿಂದ ಕಾರ್ತೀಕ ಶುದ್ಧ ಏಕಾದಶಿಯ ವರೆಗಿನ ನಾಲ್ಕು ತಿಂಗಳನ್ನು ಚಾತುರ್ಮಾಸ್ಯ ಎಂದು ಯತಿಗಳು ಆಚರಿಸುವ ಸಂಪ್ರದಾಯ ಬೆಳೆದುಕೊಂಡು ಬಂದಿದೆ) ಗಂಗಾನದಿಯ ತೀರದಲ್ಲಿ ಕಳೆಯುತ್ತಿದ್ದರು. ಆ ಚಾತುರ್ಮಾಸ್ಯದ ಸಮಯದಲ್ಲಿ ಇವರು ಶಿರಡಿಗೆ ಸಾಯಿಬಾಬಾರವರ ದರ್ಶನ ಮಾಡಲು ಬರುತ್ತಿದ್ದರು. ಇವರು ಸಾಯಿಬಾಬಾರವರಲ್ಲಿ ಪಂಡರಾಪುರದ ಪಾಂಡುರಂಗನನ್ನು ಕಾಣುತ್ತಿದ್ದರು. ಸಾಯಿಬಾಬಾರವರನ್ನು ನೋಡಿ ಗೌಳಿಬುವಾರವರು "ಇವರು ದಯಾಳುವಾದ ಆ ಪಾಂಡರಾಪುರದ ಪಾಂಡುರಂಗನ ಅವತಾರ. ಇವರು ನಿರ್ಗತಿಕರನ್ನು ಕಾಪಾಡುವ ಕರುಣಾಶಾಲಿ. ಕೇವಲ ಕಾಷಾಯ ವಸ್ತ್ರವನ್ನು ಧರಿಸುವುದರಿಂದ ಯಾರು ಸಂತರಾಗಲು ಸಾಧ್ಯವಿಲ್ಲ. ಮಹಾನ್ ಸಂತರೆನಿಸಿಕೊಳ್ಳಲು ಬಹಳ ಕಷ್ಟ ಪಡಬೇಕಾಗುತ್ತದೆ. ಈ ಪ್ರಪಂಚವು ಒಂದು ಹುಚ್ಚು ಪ್ರಪಂಚ. ಇಲ್ಲಿ ವಾಸಿಸುವ ಜನರು ಬೇಡದ ವಸ್ತುಗಳ ಮತ್ತು ವಿಷಯಗಳ ಹಿಂದೆ ಓಡುತ್ತಾರೆ ಮತ್ತು ನಂತರ ಭ್ರಮನಿರಸನಗೊಳ್ಳುತ್ತಾರೆ. ಸರಿಯಾದ ಅರ್ಹತೆ ಮತ್ತು ಯೋಗ್ಯತೆ ಇಲ್ಲದೆ ಯಾರು ದೇವರಾಗಲು ಸಾಧ್ಯವಿಲ್ಲ" ಎಂದು ಯಾವಾಗಲೂ  ಹೇಳುತ್ತಿದ್ದರು.  

ಶ್ರೀ.ಗೌಳಿಬುವಾರವರ ಈ ಪ್ರಾಮಾಣಿಕ ಮಾತುಗಳು ಅವರ ಅಂತರಂಗದಿಂದ ಬಂದಿದ್ದು ಅವುಗಳು ಸುಳ್ಳಾಗಳು ಸಾಧ್ಯವೇ? ಇವರು ಶಿರಡಿಯ ಗ್ರಾಮಸ್ಥರಿಗೆ ಸಾಯಿಬಾಬಾರವರನ್ನು ಕುರಿತು   "ಇವರು ಆ  ಪರಬ್ರಹ್ಮನ ಅಪರಾವತಾರ. ಇವರನ್ನು ನಿಮ್ಮ ಕೈತಪ್ಪಿ ಹೋಗದಂತೆ ಬಹಳ ಎಚ್ಚರಿಕೆಯಿಂದ ನೋಡಿಕೊಳ್ಳಿರಿ" ಎಂದು ಸದಾಕಾಲ ಎಚ್ಚರಿಕೆ ನೀಡುತ್ತಿದ್ದರು. ಆಗ ಶ್ರೀ.ಗೌಳಿಬುವಾರವರ ವಯಸ್ಸು ಸರಿ ಸುಮಾರು 95 ವರ್ಷಗಳಾಗಿತ್ತು.
ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment