Tuesday, May 10, 2011

ಸಾಯಿ ಭಜನ ಗಾಯಕಿ - ಶ್ರೀಮತಿ.ಕುಮುದ್ ಶರ್ಮ - ಕೃಪೆ: ಸಾಯಿಅಮೃತಧಾರಾ.ಕಾಂ



ದೆಹಲಿಯ ಪ್ರಸಿದ್ದ ಸಾಯಿ ಭಜನ ಗಾಯಕಿಯಾದ ಶ್ರೀಮತಿ.ಕುಮುದ್ ಶರ್ಮರವರು 15ನೇ ಜೂನ್ 1966 ರಂದು ಹಿಮಾಚಲ ಪ್ರದೇಶದ ಕುಲುವಿನಲ್ಲಿ ಜನಿಸಿದರು. ಇವರ ತಂದೆ ದಿವಂಗತ ಶ್ರೀ.ಎಫ್.ಸಿ.ಬಾಪಾ ಮತ್ತು ತಾಯಿ ಶ್ರೀಮತಿ.ಯಶೋದಾ ದೇವಿ. ಪ್ರಸ್ತುತ ಇವರು ಖ್ಯಾತ ಸಾಯಿ ಬರಹಗಾರರಾದ ಶ್ರೀ.ದೀಪಕ್ ಶರ್ಮ ಕುಲುವಿಯವರನ್ನು ವಿವಾಹವಾಗಿ, ತಮ್ಮ ಪುತ್ರ  ಉದಯೋನ್ಮುಖ  ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಗಾರ ಶ್ರೀ.ದೀಪಾಂಕರ್ ಶರ್ಮ ಮತ್ತು ಉದಯೋನ್ಮುಖ ಕಥಕ್ ನೃತ್ಯಪಟುವಾದ ಮಗಳು ಕುಮಾರಿ.ದೀಪಾಲಿ ಶರ್ಮರವರೊಂದಿಗೆ ನವದೆಹಲಿಯಲ್ಲಿ ಸುಖೀ ಜೀವನವನ್ನು ನಡೆಸುತ್ತಿದ್ದಾರೆ. 

ಶ್ರೀಮತಿ.ಕುಮುದ್ ಶರ್ಮರವರು ಹಿಮಾಚಲ ಪ್ರದೇಶ ವಿಶ್ವವಿದ್ಯಾನಿಲಯದಿಂದ ಬಿ.ಎ.ಪದವಿಯನ್ನು ಪಡೆದಿದ್ದಾರೆ. ಅಲ್ಲದೆ, ಗಂಧರ್ವ ಮಹಾವಿದ್ಯಾಲಯದಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ತರಬೇತಿಯನ್ನು ಪಡೆದಿದ್ದಾರೆ. ದೆಹಲಿಯ ಸುತ್ತ ಮುತ್ತ ಅನೇಕ ಭಜನ ಸಂಧ್ಯಾ ಕಾರ್ಯಕ್ರಮಗಳನ್ನು ನೀಡುತ್ತಿರುವುದಷ್ಟೇ ಅಲ್ಲದೆ ಶಿಕ್ಷಕಿಯಾಗಿ ಮತ್ತು ಸಂಗೀತ ಶಿಕ್ಷಕಿಯಾಗಿ ಕಳೆದ 25 ವರ್ಷಗಳಿಂದ ಸೇವೆಯನ್ನು ಸಲ್ಲಿಸುತ್ತಿದ್ದಾರೆ. 

ಶ್ರೀಮತಿ.ಕುಮುದ್ ಶರ್ಮ ಅವರು ನೃತ್ಯ, ಬರವಣಿಗೆ ಮತ್ತು ಭಕ್ತಿ ಗೀತೆಗಳ ಗಾಯನದಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ್ದಾರೆ. ಇ.ಟಿ.ಸಿ.ಪಂಜಾಬ್ ವಾಹಿನಿಯಲ್ಲಿ ಪ್ರಸಾರವಾದ "ಕಬಾಬ್ ಕಾರ್ನರ್" ಕಾರ್ಯಕ್ರಮದಲ್ಲಿ ಕೂಡ ಭಾಗವಹಿಸಿದ್ದಾರೆ. 

ಶ್ರೀ.ದೀಪಕ್ ಶರ್ಮ ಕುಲುವಿಯವರು ರಚಿಸಿ, ಸಂಗೀತ ನಿರ್ದೇಶನವನ್ನು ಮಾಡಿರುವ ಶ್ರೀಮತಿ.ಕುಮುದ್ ಶರ್ಮರವರ ಪ್ರಥಮ ಆಲ್ಬಮ್ "ಮಾತಾ ದಿಯಾ ಚುನಿಯಾನ್" ಅತಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. 

ಶ್ರೀಮತಿ.ಕುಮುದ್ ಶರ್ಮರವರ ಸಂಪರ್ಕದ ವಿವರಗಳನ್ನು ಸಾಯಿ ಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ. 

ವಿಳಾಸ: 
ಜೆ-1/385, ಡಿಡಿಎ ಫ್ಲಾಟ್ಸ್, ಕಲ್ಕಾಜಿ, ನವದೆಹಲಿ-110 019.ಭಾರತ.

ದೂರವಾಣಿ ಸಂಖ್ಯೆಗಳು: 
+91 93500 78399 / +91 92101 92800

ಈ ಮೇಲ್ ವಿಳಾಸ: 

ಅಂತರ್ಜಾಲ ತಾಣ: 

ಅಲ್ಬಮ್ ಗಳು: 
ಅಂತರ್ಜಾಲ ತಾಣವಾದ ಫೇಸ್ ಬುಕ್ ನಲ್ಲಿ "ದೀಪಕ್ ಕುಮಾರ್ ಕುಲುವಿ" ಮತ್ತು "ದೀಪ್ಕುಮುದ್ ಸುರ್ ಸಂಗಮ್" ಎಂಬಲ್ಲಿ ಇವರ ಭಜನೆಯ ವೀಡಿಯೋಗಳನ್ನು ನೋಡಬಹುದು. 

ಭಜನೆಗಳು: 
ಇವರ ಭಜನೆಯ ವೀಡಿಯೋಗಳನ್ನು ಫೇಸ್ ಬುಕ್, ಯು ಟ್ಯೂಬ್, ಹಿಂಧಾರಾ ಬ್ಲಾಗ್ ನಲ್ಲಿ ನೋಡಬಹುದು. 

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment