Saturday, May 21, 2011

ಬೆಂಗಳೂರಿನ ಶಿರಡಿ ಸಾಯಿಬಾಬಾ ಮಂದಿರ - ಶ್ರೀ.ಶಿರಡಿ ಸಾಯಿ ಮಂದಿರ, ಶ್ರೀ ಶಿರಡಿ ಸಾಯಿ ಮಂದಿರ ಸೇವಾ ಟ್ರಸ್ಟ್ (ನೋಂದಣಿ), ಕಾಶಿ ವಿಶ್ವನಾಥ ಬಡಾವಣೆ, ಕೃಷ್ಣರಾಜಪುರಂ, ಬೆಂಗಳೂರು-560 036. ಕರ್ನಾಟಕ - ಕೃಪೆ: ಸಾಯಿಅಮೃತಧಾರಾ.ಕಾಂ 

ದೇವಾಲಯದ ವಿಶೇಷತೆಗಳು:

ಈ ದೇವಾಲಯವು ಬೆಂಗಳೂರಿನ ಕೃಷ್ಣರಾಜಪುರಂ ನ ಕಾಶಿ ವಿಶ್ವನಾಥ ಬಡಾವಣೆಯಲ್ಲಿರುತ್ತದೆ. 

ಈ ದೇವಾಲಯದ ಭೂಮಿಪೂಜೆಯನ್ನು 2004ನೇ ಇಸವಿಯಲ್ಲಿ ಮಾಡಲಾಯಿತು. 

ಈ ದೇವಾಲಯದ ಉದ್ಘಾಟನೆಯನ್ನು ಬೇಲಿ ಮಠದ ಸ್ವಾಮೀಜಿಗಳಾದ ಶ್ರೀ.ಶ್ರೀ.ಶ್ರೀ.ಶಿವಮುರ್ತಿ ಶಿವಾಚಾರ್ಯ ಸ್ವಾಮೀಜಿಯವರು 18ನೇ ಜೂನ್ 2008 ರಂದು ಮಾಡಿದರು. ಆದರೆ, ದೇವಾಲಯದ ಆಡಳಿತ ಮಂಡಳಿಯವರು ವಾರ್ಷಿಕೋತ್ಸವವನ್ನು ಗುರುಪೂರ್ಣಿಮೆಯಂದು ಆಚರುವ ಪರಿಪಾಠ ಇಟ್ಟುಕೊಂಡಿದ್ದಾರೆ. 

ಈ ದೇವಾಲಯದ ನಿರ್ಮಾಣಕ್ಕೆ ಬೇಕಾದ ಭೂಮಿಯನ್ನು ಶ್ರೀ.ಸಿ.ನಾರಾಯಣಪ್ಪರವರು ನೀಡಿರುತ್ತಾರೆ. ದೇವಾಲಯದ ಕಟ್ಟಡ ನಿರ್ಮಾಣಕ್ಕೆ ಬೇಕಾದ ಧನಸಹಾಯವನ್ನು ಶ್ರೀ.ಶ್ರೀನಿವಾಸ್ ರವರು ಮತ್ತು ಸ್ಥಳೀಯ ಸಾಯಿಭಕ್ತರು ಮಾಡಿರುತ್ತಾರೆ. ದೇವಾಲಯದ ಉಸ್ತುವಾರಿಯನ್ನು ಶ್ರೀ.ಹೆಚ್.ಎ.ಪಾರ್ಶ್ವನಾಥ್ ರವರು ವಹಿಸಿಕೊಂಡಿರುತ್ತಾರೆ. 
ದೇವಾಲಯದ ಒಳಗಡೆ ಶಿರಡಿ ಸಾಯಿಬಾಬಾರವರ ಸುಂದರ ಅಮೃತ ಶಿಲೆಯ ವಿಗ್ರಹವನ್ನು, ಪಾದುಕೆಗಳನ್ನು ಮತ್ತು ಸಾಯಿಬಾಬಾರವರ ಎದುರುಗಡೆ ಶಿರಡಿಯಲ್ಲಿ ಇರುವಂತೆ ಅಮೃತ ಶಿಲೆಯ ನಂದಿಯ ವಿಗ್ರಹವನ್ನು ಪ್ರತಿಷ್ಟಾಪನೆ ಮಾಡಿರುವುದನ್ನು ಸಾಯಿ ಭಕ್ತರು ನೋಡಬಹುದು. 

ದೇವಾಲಯದ ಎಡಭಾಗದಲ್ಲಿ ನಿತ್ಯ ಪ್ರಸಾದಕ್ಕೆ ಅನುಕೂಲವಾಗುವಂತೆ ಪಾಕಶಾಲೆಯನ್ನು ನಿರ್ಮಿಸಲಾಗಿದೆ. 






ದೇವಾಲಯದ ಕಾರ್ಯಚಟುವಟಿಕೆಗಳು: 

ದಿನನಿತ್ಯದ ಕಾರ್ಯಕ್ರಮಗಳು: 

ಆರತಿಯ ಸಮಯ: 
ಕಾಕಡಾ ಆರತಿ : ಪ್ರತಿದಿನ ಬೆಳಿಗ್ಗೆ 6 ಘಂಟೆಗೆ 
ಮಧ್ಯಾನ್ಹ ಆರತಿ: ಪ್ರತಿದಿನ ಮಧ್ಯಾನ್ಹ 12 ಘಂಟೆಗೆ 
ಧೂಪಾರತಿ : ಪ್ರತಿದಿನ ಸಂಜೆ 6 ಘಂಟೆಗೆ 
ಶೇಜಾರತಿ: ಪ್ರತಿದಿನ ರಾತ್ರಿ 8 ಘಂಟೆಗೆ ಮತ್ತು ಗುರುವಾರ ರಾತ್ರಿ 9 ಘಂಟೆಗೆ  

ಪ್ರತಿದಿನ ಬೆಳಿಗ್ಗೆ ಕಾಕಡಾ ಆರತಿಯ ನಂತರ ಸಾಯಿಬಾಬಾರವರ ಬೆಳ್ಳಿಯ ವಿಗ್ರಹಕ್ಕೆ ಅಭಿಷೇಕವನ್ನು ಮಾಡಲಾಗುತ್ತದೆ. ಸೇವಾ ಶುಲ್ಕ 150/- ರುಪಾಯಿಗಳು. 
ಪ್ರತಿ ತಿಂಗಳ ಹುಣ್ಣಿಮೆಯ ದಿನ ಸಂಜೆ 6:30 ಕ್ಕೆ ಸತ್ಯನಾರಾಯಣ ಪೂಜೆಯನ್ನು ಆಚರಿಸಲಾಗುತ್ತದೆ. ಸೇವಾ ಶುಲ್ಕ 25/- ರುಪಾಯಿಗಳು. 
ಪ್ರತಿದಿನ ಸಂಜೆ ಧೂಪಾರತಿಯ ನಂತರ 6:30 ಕ್ಕೆ ಸ್ಥಳೀಯ ಸಾಯಿಭಕ್ತರಿಂದ ವಿಷ್ಣು ಸಹಸ್ರನಾಮ ಪಠಣವಿರುತ್ತದೆ. 
ಪ್ರತಿ ಗುರುವಾರ ಸಂಜೆ 6:30 ರಿಂದ 7:30 ರವರೆಗೆ  ಸ್ಥಳೀಯ ಭಕ್ತರಿಂದ ಸಾಯಿ ಭಜನೆಯ ಕಾರ್ಯಕ್ರಮವಿರುತ್ತದೆ. 
ಪ್ರತಿ ಗುರುವಾರ ಬೆಳಿಗ್ಗೆ ಮತ್ತು ಸಂಜೆ ದೇವಾಲಯಕ್ಕೆ ಬರುವ ಎಲ್ಲ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಗುತ್ತದೆ. 

ವಿಶೇಷ ಉತ್ಸವದ ದಿನಗಳು: 
  1. ಶಿವರಾತ್ರಿ. 
  2. ಶ್ರೀರಾಮನವಮಿ. 
  3. ಗುರು ಪೂರ್ಣಿಮೆ - ದೇವಾಲಯದ ವಾರ್ಷಿಕೋತ್ಸವ. 
  4. ವಿಜಯದಶಮಿ. 
  5. ದತ್ತ ಜಯಂತಿ.
ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ: 

ಸ್ಥಳ: 
ಕೃಷ್ಣರಾಜಪುರಂ ಪೋಲಿಸ್ ಠಾಣೆ ಮತ್ತು ಎಂ.ಎಂ.ಕಲ್ಯಾಣ ಮಂಟಪದ ಬಳಿ.


ವಿಳಾಸ: 
ಶ್ರೀ.ಶಿರಡಿ ಸಾಯಿ ಮಂದಿರ                                                                                                                             ಶ್ರೀ ಶಿರಡಿ ಸಾಯಿ ಮಂದಿರ ಸೇವಾ ಟ್ರಸ್ಟ್ (ನೋಂದಣಿ),  
ಕಾಶಿ ವಿಶ್ವನಾಥ ಬಡಾವಣೆ, ಕೃಷ್ಣರಾಜಪುರಂ, 
ಬೆಂಗಳೂರು-560 036. ಕರ್ನಾಟಕ. 

ಸಂಪರ್ಕಿಸಬೇಕಾದ ವ್ಯಕ್ತಿಗಳು: 
ಶ್ರೀ.ಹೆಚ್.ಎ.ಪಾರ್ಶ್ವನಾಥ್ / ಶ್ರೀ.ಶ್ರೀನಿವಾಸ್ / ಶ್ರೀ.ಎ.ಸತ್ಯಮುರ್ತಿ-ಅರ್ಚಕರು. 

ದೂರವಾಣಿ ಸಂಖ್ಯೆಗಳು: 
+ 91 94480 30204 / +91 99800 44009 / +91 89708 00845 – ಅರ್ಚಕರು 

ಮಾರ್ಗಸೂಚಿ: 
ಕೃಷ್ಣರಾಜಪುರಂ ಕೊನೆಯ ಬಸ್ ನಿಲ್ದಾಣದಲ್ಲಿ ಇಳಿದು ಎದುರುಗಡೆಯ ಕೃಷ್ಣರಾಜಪುರಂ ಪೋಲಿಸ್ ಠಾಣೆಯ ರಸ್ತೆಯಲ್ಲಿ 5 ನಿಮಿಷ ನಡೆದರೆ ದೇವಾಲಯ ಸಿಗುತ್ತದೆ. ದೇವಾಲಯವು ಕೃಷ್ಣರಾಜಪುರಂ ಪೋಲಿಸ್ ಠಾಣೆ ಮತ್ತು ಎಂ.ಎಂ.ಕಲ್ಯಾಣ ಮಂಟಪದ ಬಳಿ ಇರುತ್ತದೆ. 

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment