Tuesday, May 17, 2011

ಬೆಂಗಳೂರು ಗ್ರಾಮಾಂತರದ ಸಾಯಿಬಾಬಾ ಮಂದಿರ-ಶ್ರೀ ಸಾಯಿನಾಥ ಜ್ಞಾನ ಮಂದಿರ, ಭಟ್ರೇನಹಳ್ಳಿ (ಮಳ್ಳೂರು), ವಿಜಯಪುರ ಹೋಬಳಿ, ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ-562 135, ಕರ್ನಾಟಕ - ಕೃಪೆ: ಸಾಯಿಅಮೃತಧಾರಾ.ಕಾಂ  


ದೇವಾಲಯದ ವಿಶೇಷತೆಗಳು:

ಈ ದೇವಾಲಯವು ವಿಜಯಪುರ ಮತ್ತು ಶಿಡ್ಲಘಟ್ಟ ಮುಖ್ಯರಸ್ತೆಯಲ್ಲಿರುವ ಭಟ್ರೇನಹಳ್ಳಿ ಎಂಬ ಸ್ಥಳದಲ್ಲಿದೆ. ಈ ದೇವಾಲಯವು ವಿಜಯಪುರದಿಂದ 5 ಕಿಲೋಮೀಟರ್ ಮತ್ತು ದೇವನಹಳ್ಳಿಯಿಂದ 14 ಕಿಲೋಮೀಟರ್ ಅಂತರದಲ್ಲಿರುತ್ತದೆ.

ಈ ದೇವಾಲಯದ ಭೂಮಿಪೂಜೆಯನ್ನು ಸೆಪ್ಟೆಂಬರ್ 2004 ರಲ್ಲಿ ನೆರವೇರಿಸಲಾಯಿತು.

ಈ ದೇವಾಲಯವನ್ನು 14ನೇ ಸೆಪ್ಟೆಂಬರ್ 2005 ರಂದು ಮತ್ತೂರು ಗ್ರಾಮದ ಖ್ಯಾತ ವೇದ ವಿದ್ವಾನ್ ವೇದ ಬ್ರಹ್ಮಶ್ರೀ.ನಾರಾಯಣಮುರ್ತಿಯವರು ಬೆಂಗಳೂರಿನ ಶ್ರೀ.ನಾರಾಯಣ ಶಾಸ್ತ್ರಿ ಮತ್ತು ಶ್ರೀ.ಸುರೇಶ ಶಾಸ್ತ್ರಿಯವರ ಸಹಯೋಗದೊಂದಿಗೆ ಉದ್ಘಾಟಿಸಿದರು.

ಈ ದೇವಾಲಯವನ್ನು ಸಹೋದರರಾದ ಶ್ರೀ.ಎಂ.ಏನ್.ವೆಂಕಟೇಶಪ್ಪ ಮತ್ತು ಶ್ರೀ.ಎಂ.ಏನ್.ನಾರಾಯಣ ಸ್ವಾಮಿಯವರು ಜಂಟಿಯಾಗಿ ಪ್ರಾರಂಭಿಸಿರುತ್ತಾರೆ. ಶ್ರೀ.ಎಂ.ಏನ್.ನಾರಾಯಣ ಸ್ವಾಮಿಯವರು ದೇವಾಲಯದ ಪೂರ್ಣ ಮೇಲ್ವಿಚಾರಣೆ ಮತ್ತು ಉಸ್ತುವಾರಿಯನ್ನು ವಹಿಸಿಕೊಂಡು ದೇವಾಲಯದ ಎಲ್ಲ ಕಾರ್ಯಕ್ರಮಗಳನ್ನೂ ಬಹಳ ಚೆನ್ನಾಗಿ ನಡೆಸುತ್ತಾ ಬಂದಿದ್ದಾರೆ.

ದೇವಾಲಯದ ಒಳಭಾಗ, ಹೊರಭಾಗ ಮತ್ತು ನೆಲವನ್ನು ಬಿಳಿಯ ಅಮೃತ ಶಿಲೆಯಿಂದ ಶೃಂಗರಿಸಲಾಗಿದೆ. ದೇವಾಲಯದ ಮೇಲ್ಭಾಗದಲ್ಲಿ ಬಣ್ಣ ಬಣ್ಣದ ಹೂಗಳ ವರ್ಣಚಿತ್ರಗಳನ್ನು ಕಾಣಬಹುದು. ದೇವಾಲಯದ ಒಳಭಾಗದ ಗೋಡೆಯ ಸುತ್ತಲೂ ಸಾಯಿಬಾಬಾರವರ ಜೀವನ ಚರಿತ್ರೆಯನ್ನು ಬಿಂಬಿಸುವ ಚಿತ್ರಪಟಗಳನ್ನು ತೂಗುಹಾಕಲಾಗಿದೆ.

ದೇವಾಲಯವು ಬೆಳಗಿನ ಜಾವ 6 ಘಂಟೆಗೆ ಕಾಕಡಾ ಆರತಿಯೊಂದಿಗೆ ತೆರೆಯುತ್ತದೆ ಮತ್ತು ರಾತ್ರಿಯ ಶೇಜಾರತಿಯೊಂದಿಗೆ 8 ಘಂಟೆಗೆ ಮುಚ್ಚುತ್ತದೆ. ಮಧ್ಯೆ ದೇವಾಲಯದ ಬಾಗಿಲನ್ನು ಹಾಕುವುದಿಲ್ಲ. 

ದೇವಾಲಯದ ರಾಜ ಗೋಪುರದ ಮಧ್ಯಭಾಗದಲ್ಲಿ "ಓಂ" ಎಂದು ಬಹಳ ಸುಂದರವಾಗಿ ಕೆತ್ತಲಾಗಿದ್ದು, ಪವಿತ್ರ ಓಂಕಾರವು
 ಸಾಯಿಭಕ್ತರನ್ನು ಸ್ವಾಗತಿಸುತ್ತದೆ.  ಅಮೃತ ಶಿಲೆಯಲ್ಲಿ ಕೆತ್ತಲ್ಪಟ್ಟಿರುವ ಎರಡು ಆನೆಗಳು ಮತ್ತು ಎರಡು ದ್ವಾರಪಾಳಕರುಗಳನ್ನು ದೇವಾಲಯದ ಮುಖ್ಯದ್ವಾರದಲ್ಲಿ ಸ್ಥಾಪಿಸಲಾಗಿದೆ. ದೇವಾಲಯದ ಹೊರಆವರಣದ ಗೋಡೆಯ ಸುತ್ತಲೂ ವಿವಿಧ ದೇವತೆಗಳ ವಿಗ್ರಹಗಳನ್ನು ಬಹಳ ಸುಂದರವಾಗಿ ಕೆತ್ತಲಾಗಿದೆ.

ಅಮೃತ ಶಿಲೆಯ ಸರಿ ಸುಮಾರು 5 ಅಡಿಯ ಸಾಯಿಬಾಬಾರವರ ವಿಗ್ರಹವನ್ನು ದೇವಾಲಯದ ಒಳಗಡೆ ಸಾಯಿಭಕ್ತರು ನೋಡಬಹುದು. ಅಲ್ಲದೆ, 3 ಚಿಕ್ಕ ಅಮೃತ ಶಿಲೆಯ ವಿಗ್ರಹಗಳನ್ನು ಮತ್ತು 1 ಪಂಚಲೋಹದ ವಿಗ್ರಹಗಳನ್ನು ಕೂಡ ಗರ್ಭಗುಡಿಯಲ್ಲಿ ಕಾಣಬಹುದು. ಪಂಚಲೋಹದ ವಿಗ್ರಹವನ್ನು ಪ್ರತಿ ಗುರುವಾರ ಪಲ್ಲಕ್ಕಿಯ ಸಮಯದಲ್ಲಿ ಮತ್ತು ವಿಶೇಷ ಉತ್ಸವದ ದಿನಗಳಲ್ಲಿ ಬಳಸಲಾಗುತ್ತಿದೆ.

ಸಾಯಿಬಾಬಾರರವರ ಗರ್ಭಗುಡಿಯ ಎಡಭಾಗದಲ್ಲಿ ಗಣಪತಿಯ ವಿಗ್ರಹವನ್ನು ಮತ್ತು ಬಲಭಾಗದಲ್ಲಿ ಸುಬ್ರಮಣ್ಯ ಮತ್ತು ಅಯ್ಯಪ್ಪ ದೇವರುಗಳ ವಿಗ್ರಹಗಳನ್ನು ಸ್ಥಾಪಿಸಲಾಗಿದೆ. ಸಾಯಿಬಾಬಾರವರ ಎದುರುಗಡೆ ಶಿರಡಿಯಲ್ಲಿ ಇರುವಂತೆ ನಂದಿಯ ವಿಗ್ರಹವನ್ನು ಸ್ಥಾಪಿಸಲಾಗಿದೆ.

ದೇವಾಲಯದ ಹೊರಆವರಣದಲ್ಲಿ ಪವಿತ್ರ ಬೇವಿನ ಮರದ ಕೆಳಗಡೆ ಗುರುಸ್ಥಾನವಿದ್ದು ಅಲ್ಲಿ ಕಲ್ಲಿನ ಮೇಲೆ ಕುಳಿತಿರುವ ಸಾಯಿಬಾಬಾರವರ ಚಿತ್ರಪಟವನ್ನು ಇರಿಸಲಾಗಿದೆ. ಗುರುಸ್ಥಾನದ ಪಕ್ಕದಲ್ಲಿ ಸ್ವಲ್ಪ ದೂರದಲ್ಲಿ ಕಪ್ಪು ಶಿಲೆಯ ಬಲಮುರಿ ಗಣೇಶನ ವಿಗ್ರಹವನ್ನು ಸ್ಥಾಪಿಸಲಾಗಿದೆ. ಅಲ್ಲಿಂದ ಸ್ವಲ್ಪ ದೂರದಲ್ಲಿಯೇ ಅಮೃತ ಜಲಕಂಠ ಈಶ್ವರನ ಮತ್ತು ಗಂಗಾ ಮಾತೆಯ ವಿಗ್ರಹಗಳನ್ನು ನಂದಿಯ ವಿಗ್ರಹವನ್ನು ಕೂಡ ಸ್ಥಾಪಿಸಲಾಗಿದೆ.













ದೇವಾಲಯದ ಕಾರ್ಯಚಟುವಟಿಕೆಗಳು:

ದಿನನಿತ್ಯದ ಕಾರ್ಯಕ್ರಮಗಳು:

ಆರತಿಯ ಸಮಯ:

ಕಾಕಡಾ ಆರತಿ - ಬೆಳಿಗ್ಗೆ 6 ಘಂಟೆಗೆ
ಮಧ್ಯಾನ್ಹ ಆರತಿ - ಮಧ್ಯಾನ್ಹ 12 ಘಂಟೆಗೆ
ಧೂಪಾರತಿ - ಸಂಜೆ 6 ಘಂಟೆಗೆ
ಶೇಜಾರತಿ - ರಾತ್ರಿ 8 ಘಂಟೆಗೆ

ಪ್ರತಿ ಸೋಮವಾರದಂದು ಶಿವಲಿಂಗಕ್ಕೆ ವಿಶೇಷ ಅಭಿಷೇಕ, ಸಹಸ್ರನಾಮ ಅರ್ಚನೆ ಮತ್ತು ಪೂಜೆಯನ್ನು ಬೆಳಿಗ್ಗೆ 9 ಘಂಟೆಗೆ ಮಾಡಲಾಗುತ್ತದೆ.

ಪ್ರತಿ ಮಂಗಳವಾರದಂದು ಸುಬ್ರಮಣ್ಯ ಮತ್ತು ಅಯ್ಯಪ್ಪ ದೇವರುಗಳಿಗೆ ವಿಶೇಷ ಅಭಿಷೇಕ ಮತ್ತು ಅರ್ಚನೆಯನ್ನು ಬೆಳಿಗ್ಗೆ 9 ಘಂಟೆಗೆ ಮಾಡಲಾಗುತ್ತದೆ.

ಪ್ರತಿ ಬುಧವಾರದಂದು ಬಲಮುರಿ ಗಣಪತಿಗೆ ವಿಶೇಷ ಅಭಿಷೇಕ ಮತ್ತು ಅರ್ಚನೆಯನ್ನು ಬೆಳಿಗ್ಗೆ 9 ಘಂಟೆಗೆ ಮಾಡಲಾಗುತ್ತದೆ.

ಪ್ರತಿ ಗುರುವಾರದಂದು ಕಾಕಡಾ ಆರತಿಯ ನಂತರ ವಿಶೇಷ ಅಭಿಷೇಕ, ಅರ್ಚನೆ, ಪೂಜೆ ಮತ್ತು ಅಲಂಕಾರಗಳನ್ನು ದೇವಾಲಯದಲ್ಲಿರುವ ಎಲ್ಲ ದೇವರ ವಿಗ್ರಹಗಳಿಗೆ ಮಾಡಲಾಗುತ್ತದೆ. ಬೆಳಗಿನ ಜಾವ ವಿಷ್ಣು ಸಹಸ್ರನಾಮ ಪಠಣವನ್ನು ಮಾಡಲಾಗುತ್ತದೆ. ದಿನನಿತ್ಯದಂತೆ ಗುರುಸ್ಥಾನಕ್ಕೆ ಮತ್ತು ಪವಿತ್ರ ಬೇವಿನ ಮರಕ್ಕೆ ಧೂಪಾರತಿಯನ್ನು ಮಾಡಲಾಗುತ್ತದೆ. ಸಂಜೆ ಧೂಪಾರತಿಯ ನಂತರ ವಿಶೇಷ ಭಜನೆ, ಪಲ್ಲಕ್ಕಿ ಉತ್ಸವ ಕಾರ್ಯಕ್ರಮವಿರುತ್ತದೆ. ಅಲ್ಲದೆ, ಶೇಜಾರತಿಯ ನಂತರ ಮಹಾಪ್ರಸಾದವನ್ನು ದೇವಾಲಯಕ್ಕೆ ಬರುವ ಎಲ್ಲ ಭಕ್ತರಿಗೂ ವಿತರಿಸಲಾಗುತ್ತದೆ.

ಪ್ರತಿ ಶುಕ್ರವಾರದಂದು ವಿಶೇಷ ಅಭಿಷೇಕ, ಕುಂಕುಮಾರ್ಚನೆ, ದೇವಿ ಅಷ್ಟೋತ್ತರ ಮತ್ತು ಲಲಿತಾಸಹಸ್ರನಾಮವನ್ನು ದೇವಾಲಯದಲ್ಲಿರುವ ಶ್ರೀಚಕ್ರದ ವಿಗ್ರಹಕ್ಕೆ ಬೆಳಿಗ್ಗೆ 10:30 ರಿಂದ 12:00 ಘಂಟೆಯ ನಡುವೆ ಮಾಡಲಾಗುತ್ತದೆ.

ಪ್ರತಿ ಶನಿವಾರದಂದು ಬೆಳಿಗ್ಗೆ 8:30 ಕ್ಕೆ ಗಣಪತಿಯ ವಿಗ್ರಹಕ್ಕೆ ವಿಶೇಷ ಅಭಿಷೇಕ, ಅರ್ಚನೆ ಮತ್ತು ಪೂಜೆಯನ್ನು ಮಾಡಲಾಗುತ್ತದೆ. ಸಂಜೆಯ ಧೂಪಾರತಿಯ ನಂತರ ಅಯ್ಯಪ್ಪ ಸ್ವಾಮಿಗೆ ವಿಶೇಷ ಪೂಜೆಯನ್ನು ಮಾಡಲಾಗುತ್ತದೆ. 

ಪ್ರತಿ ಭಾನುವಾರದಂದು ಬೆಳಗಿನ ಕಾಕಡಾ ಆರತಿಯ ನಂತರ 6:30 ಕ್ಕೆ ದೇವಾಲಯದಲ್ಲಿರುವ ಎಲ್ಲ ದೇವರುಗಳ ವಿಗ್ರಕ್ಕೆ ವಿಶೇಷ ಅಭಿಷೇಕ, ಅರ್ಚನೆ ಮತ್ತು ಪೂಜೆಯನ್ನು ನೆರವೇರಿಸಲಾಗುತ್ತದೆ.

ಪ್ರತಿ ತಿಂಗಳ ಹುಣ್ಣಿಮೆಯಂದು ಸಂಜೆ 6 ಘಂಟೆಗೆ ಸತ್ಯನಾರಾಯಣ ಪೂಜೆಯನ್ನು ಹಮ್ಮಿಕೊಳ್ಳಲಾಗುತ್ತದೆ.

ಪ್ರತಿ ತಿಂಗಳ ಚೌತಿಯಂದು ಸಂಕಷ್ಟ ಗಣಪತಿ ವ್ರತವನ್ನು ಸಂಜೆ 6 ಘಂಟೆಗೆ ಹಮ್ಮಿಕೊಳ್ಳಲಾಗುತ್ತದೆ.

ವಿಶೇಷ ಉತ್ಸವದ ದಿನಗಳು:
  1. ಪ್ರತಿ ವರ್ಷದ 14ನೇ ಸೆಪ್ಟೆಂಬರ್ ದೇವಾಲಯದ ವಾರ್ಷಿಕೋತ್ಸವ.
  2. ವೈಕುಂಠ ಏಕಾದಶಿ.
  3. ಶಿವರಾತ್ರಿ.
  4. ಮಕರ ಸಂಕ್ರಾಂತಿ.
  5. ಶ್ರೀ ರಾಮನವಮಿ - ಹಳ್ಳಿಯ ಸುತ್ತಲೂ ಪಲ್ಲಕ್ಕಿಯ ಉತ್ಸವ.
  6. ಗುರುಪೂರ್ಣಿಮೆ.
  7. ವಿಜಯದಶಮಿ.
ದೇವಾಲಯದ ಸಾಮಾಜಿಕ ಕಾರ್ಯಚಟುವಟಿಕೆಗಳು:

ದೇವಾಲಯದ ಹಿಂಭಾಗದಲ್ಲಿ ಲಕ್ಷ್ಮಿ ವೆಂಕಟೇಶ್ವರ ಕಲ್ಯಾಣ ಮಂಟಪ ಎಂಬ ಮದುವೆಯ ಮನೆಯನ್ನು ನಿರ್ಮಿಸಲಾಗಿದ್ದು ಈ ಸ್ಥಳವನ್ನು ಬಡವರಿಗೆ ಅತ್ಯಂತ  ಕಡಿಮೆ ದರದಲ್ಲಿ ಮದುವೆ ಮತ್ತು ಇತರ ವಿಶೇಷ ಸಮಾರಂಭಗಳಿಗೆ ನೀಡಲಾಗುತ್ತಿದೆ.

ಕಲ್ಯಾಣ ಮಂಟಪದ ಪಕ್ಕದಲ್ಲಿ 4 ಅತಿಥಿ ಕೋಣೆಗಳನ್ನು ನಿರ್ಮಿಸಲಾಗಿದ್ದು ಇದನ್ನು ದೂರದಿಂದ ದರ್ಶನಕ್ಕೆ ಬರುವ ಸಾಯಿ ಭಕ್ತರಿಗೆ ಉಳಿದುಕೊಳ್ಳಲು ಉಚಿತವಾಗಿ ನೀಡಲಾಗುತ್ತಿದೆ.

ಪ್ರತಿ ವರ್ಷ ಸರಿ ಸುಮಾರು 100 ಜನ ಸಾಯಿ ಭಕ್ತರನ್ನು ಉಚಿತವಾಗಿ ದೇವಾಲಯದ ವತಿಯಿಂದ ಶಿರಡಿ ಯಾತ್ರೆಗೆ ಕರೆದುಕೊಂಡು ಹೋಗಲಾಗುತ್ತದೆ.

ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ:

ಸ್ಥಳ:
5ನೇ ಕಿಲೋಮೀಟರ್, ಭಟ್ರೇನಹಳ್ಳಿ, ವಿಜಯಪುರ ಹೋಬಳಿ.

ವಿಳಾಸ:
ಶ್ರೀ ಸಾಯಿನಾಥ ಜ್ಞಾನ ಮಂದಿರ
ಭಟ್ರೇನಹಳ್ಳಿ (ಮಳ್ಳೂರು), ವಿಜಯಪುರ ಹೋಬಳಿ, 
ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ-562 135, ಕರ್ನಾಟಕ.

ಸಂಪರ್ಕಿಸಬೇಕಾದ ವ್ಯಕ್ತಿಗಳು:
ಶ್ರೀ.ಎಂ.ಏನ್.ವೆಂಕಟೇಶಪ್ಪ / ಶ್ರೀ.ಎಂ.ಏನ್.ನಾರಾಯಣಸ್ವಾಮಿ / ಶ್ರೀ.ಎಂ.ಅಮರನಾಥ / ಶ್ರೀ.ಕೆ.ಎಸ್.ಮುನಿನಾರಾಯಣಪ್ಪ / ಶ್ರೀ.ಲಕ್ಷ್ಮೀಪತಿ-ಅರ್ಚಕರು

ದೂರವಾಣಿ ಸಂಖ್ಯೆಗಳು:
+ 91 98450 73333 / +91 98805 07896 / +91 99455 15800 / +91 96117 29295

ಮಾರ್ಗಸೂಚಿ:
ಈ ದೇವಾಲಯವು ವಿಜಯಪುರ ಮತ್ತು ಶಿಡ್ಲಘಟ್ಟ ಮುಖ್ಯರಸ್ತೆಯಲ್ಲಿರುವ ಭಟ್ರೇನಹಳ್ಳಿ ಎಂಬ ಸ್ಥಳದಲ್ಲಿದೆ. ಈ ದೇವಾಲಯವು ವಿಜಯಪುರದಿಂದ 5 ಕಿಲೋಮೀಟರ್ ಮತ್ತು ದೇವನಹಳ್ಳಿಯಿಂದ 14 ಕಿಲೋಮೀಟರ್ ಅಂತರದಲ್ಲಿರುತ್ತದೆ. ಶಿಡ್ಲಘಟ್ಟಕ್ಕೆ ಹೋಗುವ ಎಲ್ಲ ಬಸ್ ಗಳು ಸಾಯಿಬಾಬಾ ಮಂದಿರದ ಎದುರುಗಡೆ ನಿಲ್ಲುತ್ತದೆ. ವಿಜಯಪುರ ಬಸ್ ನಿಲ್ದಾಣದಿಂದ ದೇವಾಲಯವು ಸುಮಾರು 3 ಕಿಲೋಮೀಟರ್ ಗಳ ಅಂತರದಲ್ಲಿದೆ.



ಕನ್ನಡ ಅನುವಾದ:ಶ್ರೀಕಂಠ ಶರ್ಮ

No comments:

Post a Comment