Wednesday, May 18, 2011

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಶಿರಡಿ ಸಾಯಿಬಾಬಾ ಮಂದಿರ - ಶಿರಡಿ ಸಾಯಿ ಮಂದಿರ, ಶ್ರೀ ಶಿರಡಿ ಸಾಯಿ ಟ್ರಸ್ಟ್ (ನೋಂದಣಿ), ಸೂಲಿಬೆಲೆ-562 129, ಹೊಸಕೋಟೆ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಕರ್ನಾಟಕ.  

ದೇವಾಲಯದ ವಿಶೇಷತೆಗಳು: 
ಈ ದೇವಾಲಯವು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಿಂದ ದೇವನಹಳ್ಳಿಗೆ ತೆರಳುವ ಮಧ್ಯಭಾಗದಲ್ಲಿ ಸೂಲಿಬೆಲೆ ಗ್ರಾಮದಲ್ಲಿರುತ್ತದೆ. ಹೊಸಕೋಟೆ ಮತ್ತು ದೇವನಹಳ್ಳಿಯಿಂದ 16 ಕಿಲೋಮೀಟರ್ ಸಮಾನಾಂತರ ದೂರದಲ್ಲಿದೆ. 

ದೇವಾಲಯದ ಭೂಮಿಪೂಜೆಯನ್ನು 2002 ನೇ ಇಸವಿಯಲ್ಲಿ ಮಾಡಲಾಯಿತು. 

ಈ ದೇವಾಲಯವನ್ನು 29ನೇ ಮೇ 2006 ರಂದು ಆದಿಚುಂಚನಗಿರಿ ಮಠದ ಸ್ವಾಮೀಜಿಯವರಾದ ಶ್ರೀ.ಶ್ರೀ.ಶ್ರೀ.ಬಾಲಗಂಗಾಧರನಾಥ ಸ್ವಾಮೀಜಿಯವರು ಉದ್ಘಾಟಿಸಿದರು. 

ಈ ದೇವಾಲಯವನ್ನು ಶ್ರೀ.ಜನಾರ್ದನ ರೆಡ್ಡಿಯವರು ಪ್ರಾರಂಭಿಸಿರುತ್ತಾರೆ. ಶ್ರೀ.ಸುರೇಶರವರು ದೇವಾಲಯದ ಎಲ್ಲಾ ಕಾರ್ಯಚಟುವಟಿಕೆಗಳನ್ನು ನೋಡಿಕೊಳ್ಳುತ್ತಾರೆ. 

ಸಾಯಿಬಾಬಾ ದೇವಾಲಯದಲ್ಲಿ ನಾಲ್ಕೂವರೆ ಅಡಿ ಎತ್ತರದ ಸುಂದರ ಅಮೃತ ಶಿಲೆಯ ಸಾಯಿಬಾಬಾರವರ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ. ನಿತ್ಯ ಅಭಿಷೇಕಕ್ಕೆ ಮತ್ತು ಗುರುವಾರದ ಪಲ್ಲಕ್ಕಿ ಉತ್ಸವಕ್ಕೆ ಪಂಚಲೋಹದ ಸಾಯಿಬಾಬಾರವರ ವಿಗ್ರಹವನ್ನು ಉಪಯೋಗಿಸಲಾಗುತ್ತಿದೆ. ಪಂಚಲೋಹ ವಿಗ್ರಹವನ್ನು ಅಮೃತ ಶಿಲೆಯ ಸಾಯಿಬಾಬಾ ವಿಗ್ರಹದ ಮುಂಭಾಗದಲ್ಲಿ ನೋಡಬಹುದು. ಅಮೃತ ಶಿಲೆಯ ಪವಿತ್ರ ಪಾದುಕೆಗಳನ್ನು ಸಾಯಿಬಾಬಾ ವಿಗ್ರಹದ ಕೆಳಗಡೆ ಸ್ಥಾಪಿಸಲಾಗಿದೆ. ಅಮೃತ ಶಿಲೆಯ ನಂದಿಯ ವಿಗ್ರಹವನ್ನು ಶಿರಡಿಯಲ್ಲಿ ಇರುವಂತೆ ಸಾಯಿಬಾಬಾರವರ ವಿಗ್ರಹದ ಎದುರುಗಡೆ ಸ್ಥಾಪಿಸಲಾಗಿದೆ. 

ಅಮೃತ ಶಿಲೆಯ ಗಣೇಶ ಮತ್ತು ದತ್ತಾತ್ರೇಯ ವಿಗ್ರಹಗಳನ್ನು ಸಾಯಿಬಾಬಾ ದೇವಾಲಯದ ಹೊರಗಡೆ ಎರಡೂ ಬದಿಯಲ್ಲಿ ಪ್ರತಿಷ್ಟಾಪಿಸಲಾಗಿದೆ. 

ಶಿವಲಿಂಗ (ಕಾಶಿ ವಿಶ್ವೇಶ್ವರ) ಮತ್ತು ಪಾರ್ವತಿ ದೇವಿಯ ದೇವಾಲಯವು ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆಗೆ ಸೇರಿದ್ದು ಅದರ ಉಸ್ತುವಾರಿಯನ್ನು ಕೂಡ ಸಾಯಿಬಾಬಾ ದೇವಾಲಯದ ಟ್ರಸ್ಟ್ ನವರೇ ವಹಿಸಿಕೊಂಡಿರುತ್ತಾರೆ. 








ದೇವಾಲಯದ ಕಾರ್ಯಚಟುವಟಿಕೆಗಳು: 

ದಿನನಿತ್ಯದ ಕಾರ್ಯಕ್ರಮಗಳು:

ಆರತಿಯ ಸಮಯ: 
ಕಾಕಡಾ ಆರತಿ - ಬೆಳಿಗ್ಗೆ 6:00 ಘಂಟೆಗೆ 
ಮಧ್ಯಾನ್ಹ ಆರತಿ - ಮಧ್ಯಾನ್ಹ 12 ಘಂಟೆಗೆ 
ಧೂಪಾರತಿ - ಸಂಜೆ 6 ಘಂಟೆಗೆ 
ಶೇಜಾರತಿ - ರಾತ್ರಿ 8 ಘಂಟೆಗೆ 

ಸಾಯಿಬಾಬಾರವರ ಪಂಚಲೋಹ ವಿಗ್ರಹಕ್ಕೆ ಪ್ರತಿನಿತ್ಯ ಕ್ಷೀರಾಭಿಷೇಕ (51/- ರುಪಾಯಿಗಳು)  ಮತ್ತು ಪಂಚಾಮೃತ ಅಭಿಷೇಕ (151/- ರುಪಾಯಿಗಳು)ವನ್ನು ತಪ್ಪದೆ ಮಾಡಲಾಗುತ್ತದೆ. 

ಪ್ರತಿ ತಿಂಗಳ ಹುಣ್ಣಿಮೆಯಂದು ಬೆಳಿಗ್ಗೆ 10 ಘಂಟೆಯಿಂದ 12 ಘಂಟೆಯವರೆಗೆ ಸತ್ಯನಾರಾಯಣ ಪೂಜೆಯನ್ನು ಆಚರಿಸಲಾಗುತ್ತದೆ. ಸೇವಾಶುಲ್ಕ 25/- ರುಪಾಯಿಗಳು.

ದೇವಾಲಯಕ್ಕೆ ಬರುವ ಎಲ್ಲಾ ಭಕ್ತರಿಗೆ ಪ್ರತಿನಿತ್ಯ ಪ್ರಸಾದ ವಿನಿಯೋಗದ ವ್ಯವಸ್ಥೆಯನ್ನು ಮಾಡಲಾಗಿದೆ. 

ವಿಶೇಷ ಉತ್ಸವದ ದಿನಗಳು:
  1. ದೇವಾಲಯದ ವಾರ್ಷಿಕೋತ್ಸವ ಪ್ರತಿ ವರ್ಷ 29ನೇ ಮೇಯಂದು. 
  2. ಶ್ರೀರಾಮನವಮಿ - ಹಳ್ಳಿಯ ಸುತ್ತಲೂ ಪಲ್ಲಕ್ಕಿ ಉತ್ಸವವನ್ನು ಕೊಂಡೊಯ್ಯಲಾಗುತ್ತದೆ. 
  3. ಶ್ರೀಕೃಷ್ಣ ಜನ್ಮಾಷ್ಟಮಿ. 
  4. ಗುರು ಪೂರ್ಣಿಮೆ. 
  5. ದತ್ತ ಜಯಂತಿ.
  6. ವಿಜಯದಶಮಿ. 
ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ: 

ಸ್ಥಳ: 
ಸೂಲಿಬೆಲೆ ಪೋಲಿಸ್ ಠಾಣೆ ಮತ್ತು ವಿದ್ಯುತ್ ಶಕ್ತಿ ಇಲಾಖೆಯ ಹತ್ತಿರ.

ವಿಳಾಸ: 
ಶಿರಡಿ ಸಾಯಿ ಮಂದಿರ,
ಶ್ರೀ ಶಿರಡಿ ಸಾಯಿ ಟ್ರಸ್ಟ್ (ನೋಂದಣಿ),
ಸೂಲಿಬೆಲೆ-562 129,
ಹೊಸಕೋಟೆ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಕರ್ನಾಟಕ.

ಸಂಪರ್ಕಿಸಬೇಕಾದ ವ್ಯಕ್ತಿಗಳು: 
ಶ್ರೀ.ಜನಾರ್ಧನ ರೆಡ್ಡಿ  / ಶ್ರೀ.ಸುರೇಶ  /  ಶ್ರೀ.ರಾಮಮೋಹನ್ - ಅರ್ಚಕರು

ದೂರವಾಣಿ ಸಂಖ್ಯೆಗಳು: 
+ 91 93422 01225 / +91 99804 17361

ಮಾರ್ಗಸೂಚಿ: 
ಸೂಲಿಬೆಲೆ ಪೋಲಿಸ್ ಠಾಣೆ ಮತ್ತು ವಿದ್ಯುತ್ ಶಕ್ತಿ ಇಲಾಖೆಯ ಬಸ್ ನಿಲ್ದಾಣದಲ್ಲಿ ಇಳಿದು 2 ನಿಮಿಷ ನಡೆದರೆ ದೇವಾಲಯ ಸಿಗುತ್ತದೆ. ಹೊಸಕೋಟೆಯಿಂದ ದೇವನಹಳ್ಳಿಗೆ ತೆರಳುವ ಎಲ್ಲಾ ಬಸ್ ಗಳಿಗೆ ಸೂಲಿಬೆಲೆಯಲ್ಲಿ ನಿಲುಗಡೆ ಇರುತ್ತದೆ. ಹೊಸಕೋಟೆ ಮತ್ತು ದೇವನಹಳ್ಳಿಯಿಂದ 16 ಕಿಲೋಮೀಟರ್ ಸಮಾನಾಂತರ ದೂರದಲ್ಲಿ ಸೂಲಿಬೆಲೆ ಇರುತ್ತದೆ.



ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment