Friday, March 4, 2011

ಬೆಂಗಳೂರಿನ ಸಾಯಿಬಾಬಾ ಸತ್ಸಂಗ ಕೇಂದ್ರ - ಶ್ರೀ.ಶಿರಡಿ ಸಾಯಿಬಾಬಾ ಸತ್ಸಂಗ, ಓಂ ರಾಜರಾಜೇಶ್ವರಿ ಡಿವೈನ್ ಎನರ್ಜಿ ಹೀಲಿಂಗ್ ಸೆಂಟರ್, ನಂ.115, 80 ಅಡಿ ರಸ್ತೆ, ಸೀತಾ ವೃತ್ತದ ಬಳಿ, ಎಸ್.ಬಿ.ಎಂ.ಕಾಲೋನಿ, ಬೆಂಗಳೂರು-560 050. ಕರ್ನಾಟಕ - ಕೃಪೆ: ಸಾಯಿಅಮೃತಧಾರಾ.ಕಾಂ 

ಸತ್ಸಂಗದ ವಿಶೇಷತೆಗಳು: 

ಈ ಸತ್ಸಂಗ ಕೇಂದ್ರವನ್ನು ಅಕ್ಟೋಬರ್ 2002 ರಲ್ಲಿ ಪ್ರಾರಂಭಿಸಲಾಯಿತು. 

ಸಾಯಿಬಾಬಾರವರ ಒಂದು ದೊಡ್ಡದಾದ ಮತ್ತು ಮತ್ತೊಂದು ಚಿಕ್ಕದಾದ ಸುಂದರ ಅಮೃತ ಶಿಲೆಯ ವಿಗ್ರಹಗಳು, ಸಾಯಿಬಾಬಾರವರ ಪಾದುಕೆಗಳು (ಸಾಂಕೇತಿಕ) ಮತ್ತು ಪಲ್ಲಕ್ಕಿಯನ್ನು ಸತ್ಸಂಗ ಕೇಂದ್ರದಲ್ಲಿ ನೋಡಬಹುದು. 









ಸತ್ಸಂಗ ಕೇಂದ್ರದ ಕಾರ್ಯ ಚಟುವಟಿಕೆಗಳು: 

ಕಾರ್ಯಕ್ರಮ ವಿವರ: 

ಪ್ರತಿ ಗುರುವಾರ ಸಂಜೆ 7 ಘಂಟೆಯಿಂದ 8:30 ರವರೆಗೆ ಸಾಯಿಬಾಬಾ ಭಜನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. 

ವಿಶೇಷ ಉತ್ಸವದ ದಿನಗಳು: 

ಈ ಸತ್ಸಂಗ ಕೇಂದ್ರದಲ್ಲಿ ಗುರುಪೂರ್ಣಿಮೆಯನ್ನು ಬಹಳ ವಿಶೇಷವಾಗಿ ಆಚರಿಸಲಾಗುತ್ತದೆ. 

ಸಾಮಾಜಿಕ ಕಾರ್ಯಚಟುವಟಿಕೆಗಳು: 

ಈ ಸತ್ಸಂಗ ಕೇಂದ್ರದ ಮೇಲ್ವಿಚಾರಕಿಯಾದ ಶ್ರೀಮತಿ.ಎಸ್.ಎ.ರಾಜರಾಜೇಶ್ವರಿಯವರು ಖ್ಯಾತ ರೇಕಿ ಶಾಸ್ತ್ರ ತಜ್ಞೆ / ಪರ್ಯಾಯ ಚಿಕಿತ್ಸಾ ಪದ್ಧತಿ ಚಿಕಿತ್ಸಕರು / ಮಕ್ಕಳ ಮತ್ತು ತಂದೆ ತಾಯಿಯರ ಸಲಹೆಗಾರ್ತಿ ಯಾಗಿದ್ದು ಈ ಸತ್ಸಂಗಕ್ಕೆ ಬರುವ ಅನೇಕ ಮಕ್ಕಳು, ತಂದೆ ತಾಯಿಯರು ಮತ್ತು ಸಾಯಿ ಭಕ್ತರಿಗೆ ಸೂಕ್ತ ಸಲಹೆ ಮತ್ತು ಮಾರ್ಗದರ್ಶನವನ್ನು ಕಳೆದ ಹತ್ತು ವರ್ಷಗಳಿಂದ ನೀಡುತ್ತಾ ಬಂದಿರುತ್ತಾರೆ. 

ಸತ್ಸಂಗದ ವಿಳಾಸ ಮತ್ತು ಮಾರ್ಗಸೂಚಿ

ಸ್ಥಳ: 
ಸೀತಾ ವೃತ್ತದ ಬಸ್ ನಿಲ್ದಾಣದ ಎದುರುಗಡೆ

ವಿಳಾಸ: 
ಶ್ರೀ.ಶಿರಡಿ ಸಾಯಿಬಾಬಾ ಸತ್ಸಂಗ,
ಓಂ ರಾಜರಾಜೇಶ್ವರಿ ಡಿವೈನ್ ಎನರ್ಜಿ ಹೀಲಿಂಗ್ ಸೆಂಟರ್,
ನಂ.115, 80 ಅಡಿ ರಸ್ತೆ, ಸೀತಾ ವೃತ್ತದ ಬಳಿ,
ಎಸ್.ಬಿ.ಎಂ.ಕಾಲೋನಿ, ಬೆಂಗಳೂರು-560 050. ಕರ್ನಾಟಕ.

ಸಂಪರ್ಕಿಸಬೇಕಾದ ವ್ಯಕ್ತಿ: 
ಶ್ರೀಮತಿ.ಎಸ್.ಎ.ರಾಜರಾಜೇಶ್ವರಿ

ದೂರವಾಣಿ ಸಂಖ್ಯೆ:
+91 80 2679 9192 / +91 81234 56009

ಈ ಮೇಲ್ ವಿಳಾಸ:
ordehc@yahoo.co.in

ಮಾರ್ಗಸೂಚಿ:
ಸೀತಾ ವೃತ್ತದ ಬಸ್ ನಿಲ್ದಾಣದಲ್ಲಿ ಇಳಿಯುವುದು. ಸತ್ಸಂಗ ಕೇಂದ್ರವು ಬಸ್ ನಿಲ್ದಾಣದ ಎದುರುಗಡೆ ಇದೆ . ಹೊಸಕೆರೆ ಹಳ್ಳಿ ಮತ್ತು ಕತ್ತರಿಗುಪ್ಪೆಗೆ ತೆರಳುವ ಎಲ್ಲ ಬಸ್ ಗಳು ಇಲ್ಲಿ ನಿಲ್ಲುತ್ತವೆ.

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment