Tuesday, March 29, 2011

ಚಿತ್ತೂರು ಜಿಲ್ಲೆಯ ಶಿರಡಿ ಸಾಯಿಬಾಬಾ ಮಂದಿರ - ಶ್ರೀ ಸದ್ಗುರು ಶಿರಡಿ ಸಾಯಿಬಾಬಾ ಸೇವಾ ಸಂಗಮ್, ಕರ್ವೇಟ್   ನಗರ-517 582,  ಚಿತ್ತೂರು ಜಿಲ್ಲೆ, ಆಂಧ್ರ ಪ್ರದೇಶ, ಭಾರತ - ಕೃಪೆ: ಸಾಯಿಅಮೃತಧಾರಾ.ಕಾಂ 

ದೇವಾಲಯದ ವಿಶೇಷತೆಗಳು: 

ಈ ಸಾಯಿಬಾಬಾ ಮಂದಿರವನ್ನು 1998 ರ ವಿಜಯದಶಮಿಯಂದು ಸಾಯಿಬಾಬಾರವರ ದೊಡ್ಡ ಚಿತ್ರಪಟವನ್ನು ಕರ್ವೇಟ್ ನಗರದ ಮುಖ್ಯ ಬೀದಿಗಳಲ್ಲಿ ಮೆರವಣಿಗೆಯಲ್ಲಿ ತಂದು ಸಾಯಿಬಾಲಾಜಿ ನಗರದ ಒಂದು ಸಣ್ಣ ಜೋಪಡಿಯಲ್ಲಿ ಸ್ಥಾಪಿಸುವ ಮುಖಾಂತರ ಪ್ರಾರಂಭಿಸಲಾಯಿತು. 

ಪ್ರಪ್ರಥಮವಾಗಿ ಶ್ರೀ.ಆರ್.ಎಸ್.ಸಿ.ಬೋಸ್ ರವರು ಅಧ್ಯಕ್ಷರಾಗಿ  ಮತ್ತು ಅಣ್ಣಮ್ ದಾಮೋದರಂ ರವರು ಕಾರ್ಯದರ್ಶಿಗಳಾಗಿ ಈ ಮಂದಿರವನ್ನು ಸ್ಥಳೀಯ ಸಾಯಿಭಕ್ತರ ಸಹಕಾರದೊಂದಿಗೆ ದಿನದಿಂದ ದಿನಕ್ಕೆ ಅಭಿವೃದ್ದಿ ಪಥದಲ್ಲಿ ಕೊಂಡೊಯ್ದರು. ಹಿಂದೆ ಇದ್ದ ಸಣ್ಣ ಮಂದಿರದ ಪಕ್ಕದಲ್ಲಿ ಇದ್ದ ಸ್ಥಳವನ್ನು ಖರೀದಿಸಿ ಒಂದು ಪ್ರಾರ್ಥನಾ ಮಂದಿರ, ಸತ್ಸಂಗ ಸ್ಥಳ ಮತ್ತು ಇತರ ಸೌಕರ್ಯಗಳನ್ನು ಒದಗಿಸಿದರು. 

ಈ ಮಂದಿರದಲ್ಲಿ ನಿಯಮಿತವಾಗಿ ಪ್ರತಿದಿನ 4 ಆರತಿಗಳನ್ನು, ಸಾಮುಹಿಕ ಸಾಯಿ ಸಚ್ಚರಿತ್ರೆ ಪಾರಾಯಣ, ಸಾಯಿ ಭಜನೆ, ನಿತ್ಯ ಅನ್ನದಾನ ಮತ್ತು ಉಚಿತ ಕಣ್ಣಿನ ತಪಾಸಣಾ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. 

2006ನೇ ಇಸವಿಯಲ್ಲಿ ಶ್ರೀ.ಆರ್.ಶ್ರೀರಾಮುಲು ನಾಯ್ಡು ಆವರು ಅಧ್ಯಕ್ಷರಾಗಿ, ಶ್ರೀ.ಎಸ್.ಎಸ್.ವರ್ಮರವರು ಕಾರ್ಯದರ್ಶಿಗಳಾಗಿ ಮತ್ತು ಅಣ್ಣಮ್ ದಾಮೋದರಂ ರವರು ಜಂಟಿ ಕಾರ್ಯದರ್ಶಿಗಳಾಗಿ ಹೊಸ ದೇವಸ್ಥಾನದ ಕಮಿಟಿಯೊಂದನ್ನು ರಚಿಸಿದರು. ಈ ಹೊಸ ಕಮಿಟಿಯು ಸಾಯಿಬಾಬಾರವರಿಗೆ ದೊಡ್ಡ ದೇವಾಲಯವನ್ನು ನಿರ್ಮಿಸುವಲ್ಲಿ ಯಶಸ್ವಿಯಾಯಿತು. ನಿತ್ಯ ಅನ್ನದಾನವನ್ನು ಕೂಡ ಪ್ರಾರಂಭಿಸಲಾಯಿತು. ಮಂದಿರದಲ್ಲಿ ಮಖರಾನಿ ಅಮೃತ ಶಿಲೆಯಿಂದ ಮಾಡಿದ ಆಳೆತ್ತರದ ಸಾಯಿಬಾಬಾ ವಿಗ್ರಹ, ಗಣಪತಿ, ದತ್ತಾತ್ರೇಯ, ನಂದಿ ಮತ್ತು ಕೂರ್ಮದ ವಿಗ್ರಹಗಳನ್ನು ಪ್ರತಿಷ್ಟಾಪಿಸಲಾಗಿದೆ. ಈ ಮಹೋನ್ನತ ಕಾರ್ಯಕ್ಕೆ ಸ್ಥಳೀಯ ಸಾಯಿಭಕ್ತರು ಉದಾರವಾಗಿ ದೇಣಿಗೆ ನೀಡಿ ಸಹಕಾರ ನೀಡಿದ್ದಾರೆ. 

ದೇವಾಲಯದ ಗೋಡೆಗಳ ಮೇಲೆ ಸಾಯಿಬಾಬಾರವರ ವಿವಿಧ ಭಂಗಿಗಳ ಆಳೆತ್ತರದ ಚಿತ್ರಪಟಗಳನ್ನು ತೂಗುಹಾಕಲಾಗಿದೆ. 

ದೇವಾಲಯದ ಮಹಾ ಕುಂಭಾಭಿಷೇಕವನ್ನು ಮತ್ತು ಸಾಯಿಬಾಬಾ ವಿಗ್ರಹದ ಪ್ರಾಣಪ್ರತಿಷ್ಟಾಪನೆಯನ್ನು ದೆಹಲಿಯ ಪರಮ ಪೂಜ್ಯ ಗುರೂಜಿ ಶ್ರೀ.ಚಂದ್ರ ಭಾನು ಸತ್ಪತಿಯವರು 26ನೇ ಆಗಸ್ಟ್ 2007 ರಂದು ಅತ್ಯಂತ ವೈಭವದಿಂದ ನೆರವೇರಿಸಿದರು. ತಿರುಪತಿಯ ಎಸ್.ವಿ.ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ.ಪಿ.ರಘುನಾಥ ರೆಡ್ಡಿ, ತಿರುಪತಿಯ ಶ್ರೀ.ಶಿರಡಿ ಸಾಯಿ ಕಲ್ಯಾಣಂ ಟ್ರಸ್ಟ್ ನ ಶ್ರೀ.ಪಿ.ಜಿ.ಪ್ರಸುನ ರವರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು. 








ದೇವಾಲಯದ ಕಾರ್ಯಚಟುವಟಿಕೆಗಳು:

ದಿನನಿತ್ಯದ ಕಾರ್ಯಕ್ರಮಗಳು: 

ಆರತಿಯ ಸಮಯ
ಕಾಕಡಾ ಆರತಿ : ಬೆಳಿಗ್ಗೆ 6 ಘಂಟೆಗೆ
ಮಂಗಳಾರತಿ (ಛೋಟಾ ಆರತಿ): ಬೆಳಿಗ್ಗೆ 8 ಘಂಟೆಗೆ
ಮಧ್ಯಾನ್ಹ ಆರತಿ: ಮಧ್ಯಾನ್ಹ 12:30 ಕ್ಕೆ
ಧೂಪಾರತಿ: ಸಂಜೆ 6:30 ಕ್ಕೆ
ಶೇಜಾರತಿ: ರಾತ್ರಿ 8 ಘಂಟೆಗೆ

ಪ್ರತಿನಿತ್ಯ ಬೆಳಗಿನ ಜಾವ 7:00 ಘಂಟೆಗೆ  ಸಾಯಿಬಾಬಾರವರ ವಿಗ್ರಹಕ್ಕೆ ಅಭಿಷೇಕ ಮಾಡಲಾಗುತ್ತದೆ. 
ಪ್ರತಿ ತಿಂಗಳ ಮೊದಲ ಗುರುವಾರ ಪಲ್ಲಕ್ಕಿ ಉತ್ಸವವನ್ನು ಹಮ್ಮಿಕೊಳ್ಳಲಾಗುತ್ತದೆ. 
ಪ್ರತಿ ಗುರುವಾರ ಧೂಪಾರತಿಯ ನಂತರ ಸಾಯಿಭಜನೆಯ ಕಾರ್ಯಕ್ರಮವಿರುತ್ತದೆ. 
ಪ್ರತಿದಿನ ಮಧ್ಯಾನ್ಹ ಆರತಿಯ ನಂತರ ಅನ್ನದಾನ ಕಾರ್ಯಕ್ರಮವಿರುತ್ತದೆ. 
ಪ್ರತಿದಿನ ಮಂದಿರದಲ್ಲಿ ಸಾಯಿ ಸಚ್ಚರಿತ್ರೆ ಮತ್ತು ಗುರುಚರಿತ್ರೆಯ ಪಾರಾಯಣವನ್ನು ಮಾಡಲಾಗುತ್ತದೆ. 
ಪ್ರತಿದಿನ ಸಂಜೆ 5 ಘಂಟೆಯಿಂದ 6 ಘಂಟೆಯವರೆಗೆ ಧ್ಯಾನ ತರಗತಿಯನ್ನು ನೆಡೆಸಲಾಗುತ್ತದೆ.

ವಿಶೇಷ ಉತ್ಸವದ ದಿನಗಳು:
  1. ಪ್ರತಿ ವರ್ಷದ 1ನೇ ಜನವರಿ - ಸಾಯಿಬಾಬಾರವರಿಗೆ ಹೂವಿನ ಅಲಂಕಾರ ಮತ್ತು ಅನ್ನದಾನ ಕಾರ್ಯಕ್ರಮ.
  2. ಯುಗಾದಿ - ಪಂಚಾಂಗ ಶ್ರವಣ, ಶ್ರೀ ಸಾಯಿ ಸಚ್ಚರಿತ್ರ ಪಾರಾಯಣ. 
  3. ಶ್ರೀರಾಮನವಮಿ - ಭಜನೆಯೊಂದಿಗೆ ಮೆರವಣಿಗೆ ಮತ್ತು ಚಂದನೋತ್ಸವ. 
  4. ಮಹಾಶಿವರಾತ್ರಿ - ಸತತ 24 ಘಂಟೆಗಳ ಕಾಲ "ಓಂ ಸಾಯಿ ಶ್ರೀ ಸಾಯಿ ಜಯ ಜಯ ಸಾಯಿ" ನಾಮ ಜಪ ಸಂಕೀರ್ತನ. 
  5. ಜುಲೈ ತಿಂಗಳ ಮೊದಲನೇ ಗುರುವಾರ - ಸಾಯಿ ಭಕ್ತರಿಂದ ಹಾಲಿನ ಅಭಿಷೇಕ. 
  6. 26ನೇ ಆಗಸ್ಟ್ - ದೇವಾಲಯದ ವಾರ್ಷಿಕೋತ್ಸವ, ಹೋಮ, ಹವನ ಕಾರ್ಯಕ್ರಮ, ವಿದ್ವಾಂಸರಿಂದ ಪ್ರವಚನ ಕಾರ್ಯಕ್ರಮ, ಸಾಯಿಬಾಬಾ ಭಜನೆ ಮತ್ತು ಸತ್ಸಂಗ. 
  7. ಗುರುಪೂರ್ಣಿಮೆ - ಗುರುಗೀತಾ ಪಾರಾಯಣ, ದಂಪತಿಗಳಿಂದ ಸಾಯಿ ಸತ್ಯವ್ರತದ ಆಚರಣೆ. 
  8. ಶ್ರೀ ಕೃಷ್ಣ ಜನ್ಮಾಷ್ಟಮಿ - ಶ್ರೀ ಸಾಯಿ ಸಚ್ಚರಿತ್ರ ಪಾರಾಯಣ, ಉಟ್ಟಿ ಉತ್ಸವ. 
  9. ಶ್ರೀ ವಿನಾಯಕ ಚತುರ್ಥಿ. 
  10. ವಿಜಯದಶಮಿ - ಶ್ರೀ ಸಾಯಿ ಸಚ್ಚರಿತ್ರ ಪಾರಾಯಣ ಮತ್ತು ಅನ್ನದಾನ ಕಾರ್ಯಕ್ರಮ. 
  11. ದತ್ತ ಜಯಂತಿ - ಶ್ರೀ ದತ್ತ ಚರಿತ್ರ ಪಾರಾಯಣ. 
  12. ಮುಕ್ಕೋಟಿ ಏಕಾದಶಿ - ವೈಕುಂಟ ದ್ವಾರ ಪ್ರವೇಶ, 24 ಘಂಟೆಗಳ ಕಾಲ "ಓಂ ಸಾಯಿ ಶ್ರೀ ಸಾಯಿ ಜಯ ಜಯ ಸಾಯಿ" ನಾಮ ಜಪ ಸಂಕೀರ್ತನ. 
ಸಾಮಾಜಿಕ ಕಾರ್ಯಚಟುವಟಿಕೆಗಳು: 
  1. ನಿಯಮಿತವಾಗಿ ದೇವಾಲಯದಲ್ಲಿ ಉಚಿತ ವೈದ್ಯಕೀಯ ಮತ್ತು ಕಣ್ಣಿನ ತಪಾಸಣೆಯ ಶಿಬಿರಗಳನ್ನು ಚೆನ್ನೈನ ಪ್ರತಿಷ್ಟಿತ ಶಂಕರ ನೇತ್ರಾಲಯದ ಸಹಕಾರದೊಂದಿಗೆ ನಡೆಸಿಕೊಂಡು ಬರುತ್ತಿದ್ದಾರೆ. 
  2. ದೇವಾಲಯದಲ್ಲಿ ಪ್ರತಿನಿತ್ಯ ಬಡವರಿಗೆ ಅನ್ನದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. 

ದೇಣಿಗೆಗೆ ಮನವಿ: 

ದೇವಾಲಯದ ಕಾರ್ಯಕಾರಿ ಸಮಿತಿಯವರು ಸಾಯಿಬಾಬಾ ದೇವಾಲಯದ ಪಕ್ಕದಲ್ಲಿ ಅನ್ನದಾನ ಮಂಟಪ ಮತ್ತು ಧ್ಯಾನ ಮಂದಿರವನ್ನು ನಿರ್ಮಿಸಲು ಆಲೋಚನೆಯನ್ನು ಮಾಡಿರುತ್ತಾರೆ. ಈ ಒಳ್ಳೆಯ ಕಾರ್ಯಕ್ಕಾಗಿ ದೇವಾಲಯಕ್ಕೆ ದೇಣಿಗೆಯನ್ನು ನೀಡಲು ಇಚ್ಚಿಸುವ ಸಾಯಿಭಕ್ತರು ಚೆಕ್ ಅಥವಾ ಡಿಡಿ ಮುಖಾಂತರ "ಶ್ರೀ ಸದ್ಗುರು ಶಿರಡಿ ಸಾಯಿಬಾಬಾ ಸೇವಾ ಸಂಗಮ್, ಕರ್ವೇಟ್ ನಗರ" ಇವರಿಗೆ ಸಂದಾಯವಾಗುವಂತೆ ನೀಡಬಹುದಾಗಿದೆ. 

ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ: 

ಸ್ಥಳ ಮತ್ತು ಮಾರ್ಗಸೂಚಿ: 
ಪುತ್ತೂರಿನಿಂದ ಚಿತ್ತೂರಿಗೆ ಹೋಗುವ ಮುಖ್ಯ ರಸ್ತೆಯಲ್ಲಿ 12 ಕಿಲೋಮೀಟರ್ ಗಳ ದೂರದಲ್ಲಿ ಸಾಯಿಮಂದಿರವಿದೆ. 

ವಿಳಾಸ: 
ಶ್ರೀ ಸದ್ಗುರು ಶಿರಡಿ ಸಾಯಿಬಾಬಾ ಸೇವಾ ಸಂಗಮ್, 
ಸಾಯಿ ಬಾಲಾಜಿ ನಗರ, ಬ್ರಾಹ್ಮಣರ ಬೀದಿ, 
ಕರ್ವೇಟ್   ನಗರ-517 582, 
ಚಿತ್ತೂರು ಜಿಲ್ಲೆ, ಆಂಧ್ರ ಪ್ರದೇಶ, ಭಾರತ.

ಸಂಪರ್ಕಿಸಬೇಕಾದ ವ್ಯಕ್ತಿಗಳು: 
ಶ್ರೀ.ಆರ್.ಶ್ರೀರಾಮುಲು ನಾಯ್ದು / ಶ್ರೀ.ಅಣ್ಣಂ ದಾಮೋದರಂ

ದೂರವಾಣಿ ಸಂಖ್ಯೆ: 
+91 97031 27803

ಈ ಮೇಲ್ ವಿಳಾಸ:
saidamuknr@yahoo.com


ಕನ್ನಡ ಅನುವಾದ: ಶ್ರೀಕಂಠ ಶರ್ಮ 

No comments:

Post a Comment