Friday, March 4, 2011

ಸಾಯಿ ಭಜನ ಗಾಯಕ - ಶ್ರೀ.ಎಸ್.ರಾಜಾ ದಂಡಪಾಣಿ - ಕೃಪೆ: ಸಾಯಿಅಮೃತಧಾರಾ.ಕಾಂ


ಶ್ರೀ.ಎಸ್.ರಾಜಾ ದಂಡಪಾಣಿಯವರು 15ನೇ ಜುಲೈ 1962 ರಂದು ಜನಿಸಿದರು. ಇವರ ತಂದೆ ದಿವಂಗತ ಶ್ರೀ.ಎಸ್.ಆರ್.ಸುಂದರ್ ರವರು ಮತ್ತು ತಾಯಿ ಶ್ರೀಮತಿ.ನಾರಾಯಣಮ್ಮ ನವರು. ಇವರು ಬಿ.ಕಾಂ (ಎಲ್.ಎಲ್.ಬಿ) ಪದವಿಯನ್ನು ಗಳಿಸಿರುತ್ತಾರೆ. ಇವರು ತಮ್ಮ ಸಂಗೀತದ ಪಯಣವನ್ನು 16ನೇ ವಯಸ್ಸಿನಲ್ಲೇ ಪ್ರಾರಂಭಿಸಿದರು. ಇವರ ತಂದೆಯವರು ಖ್ಯಾತ ಹಾರ್ಮೋನಿಯಂ ವಿದ್ವಾಂಸರಾಗಿದ್ದರು ಮತ್ತು ಇವರಿಗೆ ಸಂಗೀತದ ಮೊದಲ ಶಿಕ್ಷಣವನ್ನು ನೀಡಿದರು. ನಂತರ ಇವರು ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ದಾಸರ ಪದಗಳನ್ನು ಸಂಗೀತ ವಿದ್ವಾನ್ ಶ್ರೀ.ಜನಾರ್ದನ್ ರವರ ಬಳಿ ಕಲಿತರು. ನಂತರದ ದಿನಗಳಲ್ಲಿ ಹಾರ್ಮೋನಿಯಂ ವಾದನ ಮತ್ತು ಭಜನ ಗಾಯನವನ್ನು ಮತ್ತೊಬ್ಬ ಸಂಗೀತ ವಿದ್ವಾಂಸರಾದ ಶ್ರೀ.ನಾರಾಯಣಸ್ವಾಮಿಯವರ ಬಳಿ ಕಲಿತರು. 

ಶ್ರೀ.ಎಸ್.ರಾಜಾ ದಂಡಪಾಣಿಯವರು 8 ಭಾರತೀಯ ಭಾಷೆಗಳಾದ ಕನ್ನಡ, ತೆಲುಗು, ತಮಿಳು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ ಮತ್ತು ಪಂಜಾಬಿ ಭಾಷೆಗಳಲ್ಲಿ ಸಾಯಿ ಭಜನೆಗಳನ್ನು ನಿರರ್ಗಳವಾಗಿ ಮತ್ತು ಸುಶ್ರಾವ್ಯವಾಗಿ ಹಾಡಬಲ್ಲವರಾಗಿದ್ದಾರೆ.

ಶ್ರೀ.ಎಸ್.ರಾಜಾ ದಂಡಪಾಣಿಯವರು 1981ನೇ ಇಸವಿಯಿಂದ ತಮ್ಮ ಭಜನೆಯ ಕಾರ್ಯಕ್ರಮಗಳನ್ನು ಪ್ರಾರಂಭಿಸಿ ಬೆಂಗಳೂರು, ಮೈಸೂರು, ಚೆನ್ನೈ ಮತ್ತು ಮುಂಬೈ ನಗರಗಳ ಅನೇಕ ಸಾಯಿ ಮಂದಿರಗಳಲ್ಲಿ ತಮ್ಮ ಭಜನೆಯ ಕಾರ್ಯಕ್ರಮಗಳನ್ನು ನೀಡಿದ್ದಾರೆ. 

ಶ್ರೀ.ಎಸ್.ರಾಜಾ ದಂಡಪಾಣಿಯವರು ಚೆನ್ನೈನ ವಂಡವಾಸಿಯ ಕಾಳಿಯಮ್ಮ ದೇವಸ್ಥಾನ ಮತ್ತು ಚೆನ್ನೈನ ಸಾಯಿ ಬಾಬಾ ಮಂದಿರಗಳಲ್ಲಿ ನೀಡಿದ ಭಜನೆ ಕಾರ್ಯಕ್ರಮಕ್ಕಾಗಿ ಪುರಸ್ಕಾರವನ್ನು ಪಡೆದಿರುತ್ತಾರೆ. 

ಶ್ರೀ.ಎಸ್.ರಾಜಾ ದಂಡಪಾಣಿಯವರ ಸಂಪರ್ಕದ ವಿವರಗಳನ್ನು ಸಾಯಿ ಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ. 

ವಿಳಾಸ: 
ನಂ.37,ಚಿಕ್ಕ ಬಜಾರ್ ರಸ್ತೆ, 
ಶಿವಾಜಿನಗರ ,ಬೆಂಗಳೂರು-560 051, ಕರ್ನಾಟಕ.

ದೂರವಾಣಿ: 
+91 98862 77790


ಕನ್ನಡ ಅನುವಾದ:ಶ್ರೀಕಂಠ ಶರ್ಮ

No comments:

Post a Comment