Wednesday, March 30, 2011

ರಾಮನಗರ ಜಿಲ್ಲೆಯ ಸಾಯಿಬಾಬಾ ಮಂದಿರ - ಶ್ರೀ ಶಿರಡಿ ಸಾಯಿಬಾಬಾ ಮಂದಿರ, ಶ್ರೀ ಕೋದಂಡ ರಾಮ ಸ್ವಾಮಿ ದೇವಸ್ಥಾನ, ಬಿಡದಿ ಮುಖ್ಯ ರಸ್ತೆ, ಬಿಡದಿ-562 109, ರಾಮನಗರ ಜಿಲ್ಲೆ, ಕರ್ನಾಟಕ  - ಕೃಪೆ: ಸಾಯಿಅಮೃತಧಾರಾ.ಕಾಂ 

ದೇವಾಲಯದ ವಿಶೇಷತೆಗಳು: 

ಈ ದೇವಾಲಯ ಮತ್ತು ವಿಮಾನಗೋಪುರವನ್ನು 4ನೇ ಫೆಬ್ರವರಿ 2004 ರಂದು ಕರ್ನಾಟಕ ವಿಧಾನ ಪರಿಷತ್ ನ ಅಂದಿನ ಉಪ ಸಭಾಪತಿಯಾದ ಶ್ರೀ.ವಿ.ಆರ್.ಸುದರ್ಶನ್ ರವರು ಉದ್ಘಾಟಿಸಿದರು. 

ಕಪ್ಪು ಶಿಲೆಯ ಗಣಪತಿ, ಶ್ರೀರಾಮ ಪರಿವಾರ, ನಾಗದೇವರುಗಳು, ಅಶ್ವಥನಾರಾಯಣ, ನವಗ್ರಹ, ವೆಂಕಟೇಶ್ವರ, ಅಯ್ಯಪ್ಪ ಮತ್ತು ಅಮೃತ ಶಿಲೆಯ ಸಾಯಿಬಾಬಾರವರ ವಿಗ್ರಹಗಳನ್ನು ದೇವಾಲಯದಲ್ಲಿ ನೋಡಬಹುದು. 

ದಶಾವತಾರ ವಿಗ್ರಹಗಳನ್ನು ದೇವಾಲಯದ ವಿಮಾನಗೋಪುರದ ಮೇಲೆ ಬಹಳ ಸುಂದರವಾಗಿ ಕೆತ್ತಲಾಗಿದೆ. 






ದೇವಾಲಯದ ಕಾರ್ಯಚಟುವಟಿಕೆಗಳು: 

ದಿನನಿತ್ಯದ ಕಾರ್ಯಕ್ರಮಗಳು: 

ದೇವಾಲಯದ ಸಮಯ
ಬೆಳಿಗ್ಗೆ: 6:30 AM ಇಂದ 8:30 AM ವರೆಗೆ  
ಸಂಜೆ: 6:30 PM ಇಂದ 8:00 PM ವರೆಗೆ

ಪ್ರತಿ ಶನಿವಾರ ಬೆಳಿಗ್ಗೆ 7 ಘಂಟೆಗೆ  ಕೋದಂಡರಾಮ ದೇವರಿಗೆ ಮತ್ತು ಶಿರಡಿ ಸಾಯಿಬಾಬಾರವರಿಗೆ ಪಂಚಾಮೃತ ಅಭಿಷೇಕವನ್ನು ಮಾಡಲಾಗುತ್ತದೆ. 

ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ: 

ಸ್ಥಳ:

ಬಿಡದಿ ಮುಖ್ಯ ರಸ್ತೆ, ಬಿಡದಿ ಬಸ್ ನಿಲ್ದಾಣದ ಬಳಿ. 

ವಿಳಾಸ: 

ಶ್ರೀ ಶಿರಡಿ ಸಾಯಿಬಾಬಾ ಮಂದಿರ, 
ಶ್ರೀ ಕೋದಂಡ ರಾಮಸ್ವಾಮಿ ದೇವಸ್ಥಾನ, 
ಬಿಡದಿ ಮುಖ್ಯ ರಸ್ತೆ, ಬಿಡದಿ-562 109, 
ರಾಮನಗರ ಜಿಲ್ಲೆ, ಕರ್ನಾಟಕ

ಸಂಪರ್ಕಿಸಬೇಕಾದ ವ್ಯಕ್ತಿಗಳು: 
ಶ್ರೀ.ಶ್ರೀನಿವಾಸ್ ಆಚಾರ್ - ಅರ್ಚಕರು. 

ದೂರವಾಣಿ ಸಂಖ್ಯೆ: 

+91 80 7282042 
ಮಾರ್ಗಸೂಚಿ: 

ಬಿಡದಿ ಬಸ್ ನಿಲ್ದಾಣದಲ್ಲಿ ಇಳಿದು ಹಿಂಭಾಗದ ಬಿಡದಿ ಮುಖ್ಯ ರಸ್ತೆಯಲ್ಲಿ 2 ನಿಮಿಷ ನಡೆದರೆ ದೇವಾಲಯ ಸಿಗುತ್ತದೆ. ಮೆಜಿಸ್ಟಿಕ್, ಮಾರುಕಟ್ಟೆ ಮತ್ತು ಶಿವಾಜಿನಗರದಿಂದ ಬಿಡದಿಗೆ ಹೋಗುವ ಎಲ್ಲ ಬಸ್ ಗಳು ಬಿಡದಿ ಬಸ್ ನಿಲ್ದಾಣದಲ್ಲಿ ನಿಲ್ಲುತ್ತವೆ. 

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment