Tuesday, March 22, 2011

ಸಾಯಿ ಭಜನ ಗಾಯಕ - ಶ್ರೀ.ರವಿರಾಜ್ ನಸೇರಿ - ಕೃಪೆ: ಸಾಯಿಅಮೃತಧಾರಾ.ಕಾಂ  


ಶ್ರೀ.ರವಿರಾಜ್ ನಸೇರಿ ಯವರು ಮಧ್ಯಪ್ರದೇಶದ ಚಿನ್ದ್ವಾರಾ ದಲ್ಲಿ 2ನೇ ಜೂನ್ 1957 ರಂದು ಜನಿಸಿದರು. ಇವರ ತಂದೆ ದಿವಂಗತ ಶ್ರೀ.ನೀಲಕಂಠ ರೈ ಆತ್ಮರಾಮ ನಸೇರಿ ಮತ್ತು ತಾಯಿ ದಿವಂಗತ ಶ್ರೀಮತಿ.ವಿಮಲಾ ನಸೇರಿಯವರು. ಇವರು ಬಹಳ ದೊಡ್ಡ ಕುಟುಂಬದಲ್ಲಿ ಜನಿಸಿದರು. ಇವರಿಗೆ ಆರು ಜನ ಸಹೋದರರು ಮತ್ತು ಒಬ್ಬಳು ಸಹೋದರಿ. ಇವರ ಸಹೋದರ ಮತ್ತು ಸಹೋದರಿಯ ಕುಟುಂಬ ವರ್ಗದವರು ನಾಗಪುರ ಮತ್ತು ಚಿನ್ದ್ವಾರದಲ್ಲಿ ಬೇರೆ ಬೇರೆಯಾಗಿ ವಾಸಿಸುತ್ತಿದ್ದಾರೆ. ಇವರು ಎಂ.ಕಾಂ ಮತ್ತು ಎಂ.ಎ.ಎಕನಾಮಿಕ್ಸ್ ವಿಭಾಗದಲ್ಲಿ ಪದವಿಯನ್ನು ಚಿನ್ದ್ವಾರದಲ್ಲಿ ಅಭ್ಯಾಸ ಮಾಡಿ ಗಳಿಸಿರುತ್ತಾರೆ. 

ಇವರ ಕುಟುಂಬದವರೆಲ್ಲ ವ್ಯವಸಾಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ಇವರ ಕುಟುಂಬದಲ್ಲಿ ಇವರೊಬ್ಬರೇ ಸಂಗೀತ ಕ್ಷೇತ್ರದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿರುತ್ತಾರೆ. ಈ ದಿನ ತಾವು ಏನೇ ಸಾಧನೆ ಅಥವಾ ಯಶಸ್ಸನ್ನು ಗಳಿಸಿದ್ದರೂ ಅದರ ಕೀರ್ತಿ ತಮ್ಮ ತಂದೆ ತಾಯಿಗಳಿಗೆ ಮತ್ತು ಶಿರಡಿ ಸಾಯಿಬಾಬಾರವರಿಗೆ ಸಲ್ಲಬೇಕು ಎಂದು ಅತ್ಯಂತ ವಿನಯಪೂರ್ವಕವಾಗಿ ಶ್ರೀ.ರವಿರಾಜ್ ನಸೇರಿಯವರು ಹೇಳುತ್ತಾರೆ. 

ಶ್ರೀ.ರವಿರಾಜ್ ನಸೇರಿಯವರು ಕಳೆದ 28 ಕ್ಕೂ ಹೆಚ್ಚು ವರ್ಷಗಳಿಂದ ಪ್ರಪಂಚದಾದ್ಯಂತ ಸಾಯಿ ಭಜನೆಯ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದಾರೆ.ಸ್ವತಃ ತಾವೇ ಹಾಡುಗಳನ್ನು ರಚಿಸಿ, ಅದಕ್ಕೆ ರಾಗಗಳನ್ನು ಹಾಕಿ ಹಾಡುವುದು ಶ್ರೀ.ರವಿರಾಜ್ ನಸೇರಿಯವರಿಗೆ ದೈವದತ್ತವಾಗಿ ಬಂದಿರುವ ಒಂದು ಕಲೆ ಎಂದರೆ ತಪ್ಪಾಗಲಾರದು. 


ಪ್ರಸ್ತುತ ಶ್ರೀ.ರವಿರಾಜ್ ನಸೇರಿಯವರು ತಮ್ಮ ಧರ್ಮಪತ್ನಿ ಶ್ರೀಮತಿ.ಅರ್ಚನ ರವಿರಾಜ್ ನಸೇರಿ, ಮಗ ಸಾಯಿ ಕಿರಣ್ ಮತ್ತು ಮಗಳು ಸೈಲಿಯೊಂದಿಗೆ ಚಿನ್ದ್ವಾರದಲ್ಲಿ ಸುಖೀ ಜೀವನವನ್ನು ನಡೆಸುತ್ತಿದ್ದಾರೆ. 


ಶ್ರೀ.ರವಿರಾಜ್ ನಸೇರಿಯವರು ಪ್ರಖ್ಯಾತ ಗಜಲ್ ಮತ್ತು ಸಾಯಿ ಭಜನ ಗಾಯಕರು. ಇವರು ಭಾರತದ ಅನೇಕ ಕಡೆಗಳಲ್ಲಷ್ಟೇ ಅಲ್ಲದೆ ಅಮೇರಿಕ, ಇಂಗ್ಲೆಂಡ್, ಕೆನಡ, ಮಲೇಶಿಯ, ಮಾರಿಷಸ್, ಸೌತ್ ಆಫ್ರಿಕಾ, ಟಾನ್ಜೇನಿಯ ಮತ್ತು ನೇಪಾಳ್ ದೇಶಗಳಲ್ಲಿ ತಮ್ಮ ಸಾಯಿ ಭಜನೆಯ ಕಾರ್ಯಕ್ರಮಗಳನ್ನು ನೀಡಿ ಜನರನ್ನು ರಂಜಿಸಿದ್ದಾರೆ. 

ಶ್ರೀ.ರವಿರಾಜ್ ನಸೇರಿಯವರು ಮುಂಬೈ ದೂರದರ್ಶನ, ಸಂಸ್ಕಾರ್, ಸೋನಿ ಮತ್ತಿತರ ಪ್ರತಿಷ್ಟಿತ ವಾಹಿನಿಗಳಲ್ಲಿ ತಮ್ಮ ಭಜನೆ ಮತ್ತು ಗಜಲ್ ಕಾರ್ಯಕ್ರಮಗಳನ್ನು ತಪ್ಪದೆ ನೀಡುತ್ತಾ ಬಂದಿದ್ದಾರೆ. ಶ್ರೀ.ರವಿರಾಜ್ ನಸೇರಿಯವರು ಇದುವರೆವಿಗೂ ಸುಮಾರು 500ಕ್ಕೂ ಹೆಚ್ಚು ಭಜನೆಗಳನ್ನು ರಚಿಸಿದ್ದಾರೆ ಮತ್ತು 120ಕ್ಕೂ ಹೆಚ್ಚು ದೇಶಗಳಲ್ಲಿ ಇವರ ಭಜನೆಯ ಕೇಳುಗರನ್ನು ಹೊಂದಿದ್ದಾರೆ. ಶ್ರೀ.ರವಿರಾಜ್ ನಸೇರಿಯವರು ಇದುವರೆವಿಗೂ ಸುಮಾರು 25ಕ್ಕೂ ಹೆಚ್ಚು ಸಾಯಿ ಭಜನೆಯ ಸಿಡಿಗಳು ಮತ್ತು 5 ಡಿವಿಡಿ ಗಳನ್ನೂ ಕೂಡ ಹೊರತಂದಿದ್ದಾರೆ. 

ಶ್ರೀ.ರವಿರಾಜ್ ನಸೇರಿಯವರು ಶಿರಡಿ ಸಾಯಿಬಾಬಾ ಸಂಸ್ಥಾನ, ಮುಂಬೈನ ಸಿದ್ಧಿ ವಿನಾಯಕ ಮಂದಿರ, ತುಳಜಾಪುರ ಭವಾನಿ ದೇವಾಲಯಗಲ್ಲಿ ಅನೇಕ ಬಾರಿ ತಮ್ಮ ಭಜನೆಯ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಅಲ್ಲದೆ, ಪುಟ್ಟಪರ್ತಿಯ ಪ್ರಶಾಂತಿ ನಿಲಯಂ ನಲ್ಲಿ ಕೂಡ ಅನೇಕ ಕಾರ್ಯಕ್ರಮಗಳನ್ನು ನೀಡಿ ಸತ್ಯ ಸಾಯಿಬಾಬಾ ರವರ ಕೃಪೆಗೆ ಪಾತ್ರರಾಗಿದ್ದಾರೆ. 

ಪ್ರಸ್ತುತ ಶ್ರೀ.ರವಿರಾಜ್ ನಸೇರಿಯವರು 1008 ಸಾಯಿ ಭಜನೆಗಳನ್ನು ರಚಿಸಿ ಅದಕ್ಕೆ ಸಂಗೀತ ಸಂಯೋಜನೆ ಮಾಡುವ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಈ 1008  ಸಾಯಿ ಭಜನೆಗಳನ್ನು ಅತಿ ಶೀಘ್ರದಲ್ಲಿ ಸಿ.ಡಿ.ರೂಪದಲ್ಲಿ ಭಾರತ ಮತ್ತು ಪ್ರಪಂಚದಾದ್ಯಂತ ಬಿಡುಗಡೆ ಮಾಡುವ ಯೋಚನೆ ಶ್ರೀ.ರವಿರಾಜ್ ನಸೇರಿಯವರದು. 

ಇವರ ಕೆಲವು ಸಾಧನೆಯ ಮೈಲಿಗಲ್ಲುಗಳನ್ನು ಈ ಕೆಳಗೆ ನೀಡಲಾಗಿದೆ. 
  1. 21ನೇ ನವೆಂಬರ್ 2008 ರಿಂದ 27ನೇ ನವೆಂಬರ್ 2008 ರವರೆಗೆ ಇಂಗ್ಲೆಂಡ್ ನಲ್ಲಿ ಸಾಯಿ ಭಜನ ಸಂಧ್ಯಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಈ ಕಾರ್ಯಕ್ರಮವನ್ನು ಸಾವಿರಾರು ಸಾಯಿ ಭಕ್ತರು ವೀಕ್ಷಿಸಿದರು. 
  2. 5ನೇ ಏಪ್ರಿಲ್ 2008 ರಂದು ಚಂಡಿಘಡದಲ್ಲಿ ಅನೇಕ ಪ್ರತಿಷ್ಟಿತ ವ್ಯಕ್ತಿಗಳ ಸಮ್ಮುಖದಲ್ಲಿ ವಿಶೇಷ ಗಜಲ್ ಕಾರ್ಯಕ್ರಮ.
  3. 17ನೇ ಮಾರ್ಚ್ 2008 ರಿಂದ 24ನೇ ಮಾರ್ಚ್ 2008 ರ ವರೆಗೆ ಡರ್ಬಾನ್ ನಲ್ಲಿ ನಡೆದ ವಿಶೇಷ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿ ಸುಮಾರು 9000 ಕ್ಕೂ ಹೆಚ್ಚು ಸಭಿಕರನ್ನು ರಂಜಿಸಿದರು. 
  4. ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ರವರಿಂದ ಸನ್ಮಾನಿತರಾಗಿರುತ್ತಾರೆ. 
  5. ಸೆಪ್ಟೆಂಬರ್ 2000 ಇಸವಿಯಲ್ಲಿ ನ್ಯೂಯಾರ್ಕ್ ಮತ್ತು ನ್ಯೂಜೆರ್ಸಿಯಲ್ಲಿ ನಡೆದ ಯುನೈಟೆಡ್ ನೇಷನ್ಸ್ ಕಾನ್ಫರೆನ್ಸ್ ನಲ್ಲಿ ತಮ್ಮ ಕಾರ್ಯಕ್ರಮವನ್ನು ನೀಡಿ ಸಭಿಕರನ್ನು ರಂಜಿಸಿದ್ದಾರೆ. 
  6.  1987 ರಲ್ಲಿ ಅಂದಿನ ರಾಷ್ಟ್ರಪತಿ ಶ್ರೀ.ಗ್ಯಾನಿ ಜೈಲ್ ಸಿಂಗ್ ರವರ ಸಮ್ಮುಖದಲ್ಲಿ ರಾಷ್ಟ್ರಪತಿ ಭವನದಲ್ಲಿ ಒರಿಸ್ಸಾ ದಿನಾಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಭಿಕರನ್ನು ರಂಜಿಸಿರುತ್ತಾರೆ.
 
ಶ್ರೀ.ರವಿರಾಜ್ ನಸೇರಿಯವರ ಸಂಪರ್ಕದ ವಿವರಗಳನ್ನು ಸಾಯಿ ಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ. 
ಗಾಯಕರ ಹೆಸರು  ಶ್ರೀ.ರವಿರಾಜ್ ನಸೇರಿ
ವಿಳಾಸ 
ಡಿ-702,  ಸಿಲ್ವರ್ ಟವರ್, ಟಾಕುರ್ ಬಹುಮಹಡಿ ಕಟ್ಟಡ, ಕಂಡಿವ್ಲಿ (ಪೂರ್ವ ), ಮುಂಬೈ-400  101, ಮಹಾರಾಷ್ಟ್ರ, ಭಾರತ.
ದೂರವಾಣಿ  (R) +91 022 2854 4001
(Cell) +91 098923 06173
ಈಮೈಲ್  naseryravi@hotmail.com, rssr_002@yahoo.co.in
ಅಂತರ್ಜಾಲ ಇಲ್ಲ. 
ಅಲ್ಬಮ್ ಗಳು
ಮುಖ ದರ್ಶನ, ಸಾಯಿ ಅಭಿಲಾಷ,ಗಾಡ್  ಇನ್ ಇಂಡಿಯ, ಸಾಯಿ  ಪಾದುಕ, ಸತ್ಯ ದೀಪ ,ಪ್ರೇಮದಕ್ಷಿಣಾ, ಭಕ್ತಿ ಸಮರ್ಪಣ ಮತ್ತು ಇನ್ನು ಹಲವಾರು ಆಲ್ಬಮ್ ಗಳು.
ಭಜನೆಗಳು   
ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment