Tuesday, December 14, 2010

ಸಾಯಿ ಭಜನ ಗಾಯಕಿ - ಶ್ರೀಮತಿ.ಸುವೇದಿತಾ  ಶ್ರೀಧರ್  - ಕೃಪೆ: ಸಾಯಿಅಮೃತಧಾರಾ.ಕಾಂ

ಶ್ರೀಮತಿ ಸುವೇದಿತಾ ಶ್ರೀಧರ್ ತಮ್ಮ "ಸಾಯಿ ಶಂಕರ ಭಜನ ವೃಂದ" ದ ಸದಸ್ಯರೊಂದಿಗೆ 

ಶ್ರೀಮತಿ ಸುವೇದಿತಾ ಶ್ರೀಧರ್ ರವರು ಶಿರಡಿ ಸಾಯಿಬಾಬಾರವರ ಅನನ್ಯ ಭಕ್ತರು ಮತ್ತು ಅತ್ಯುತ್ತಮ ಸಾಯಿ ಭಜನ ಗಾಯಕಿಯಾಗಿದ್ದಾರೆ. ಇವರು ಕರ್ನಾಟಕ ಶಾಸ್ತ್ರೀಯ ಸಂಗೀತದ ಶಿಕ್ಷಣವನ್ನು ಸರ್ಕಾರಿ ಸಂಗೀತ ಶಾಲೆಯಲ್ಲಿ ಶ್ರೀ.ನೂಕಾಲ ಸತ್ಯನಾರಾಯಣರವರ ಬಳಿ ಕಲಿತರು. ಇವರು "ಸಾಯಿ ಶಂಕರ ಭಜನ ವೃಂದ" ಎಂಬ ಭಜನ ವೃಂದವನ್ನು ಹುಟ್ಟುಹಾಕಿ ಅದರ ಅಡಿಯಲ್ಲಿ ಕರ್ನಾಟಕದ ಅನೇಕ ಶಿರಡಿ ಸಾಯಿಬಾಬಾ ಮಂದಿರಗಳಲ್ಲಿ ತಮ್ಮ ಭಜನ ವೃಂದದೊಡನೆ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಇವರು ತಮ್ಮ ಮನೆಯಲ್ಲೇ ಸೌಂದರ್ಯ ಲಹರಿ, ಸಂಸ್ಕೃತ ಶ್ಲೋಕಗಳು, ಸ್ತೋತ್ರಗಳು ಮತ್ತು ಸಾಯಿ ಭಜನೆಯ ತರಗತಿಗಳನ್ನು ಪ್ರತಿದಿನ ತಪ್ಪದೆ ನಡೆಸುತ್ತಿದ್ದಾರೆ. ಇವರು ಇತ್ತೀಚಿಗೆ ಡಿಸೆಂಬರ್ 2010 ರಲ್ಲಿ ಸೌಂದರ್ಯ ಲಹರಿ ಸಪ್ತಾಹ, ಗುರು ಮತ್ತು ದಶಶ್ಲೋಕಿ ಸುಪ್ರಭಾತ ಕಾರ್ಯಕ್ರಮಗಳನ್ನು ತಮ್ಮ ಮನೆಯಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಸಿದ್ದಾರೆ. ಇವರು ಅನೇಕ ಸಂಗೀತ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ, ಇವರು ಭಗವಾನ್ ಶ್ರೀ. ಸತ್ಯಸಾಯಿ ಬಾಬಾ ರವರ ಸಮ್ಮುಖದಲ್ಲಿ ಭಾಷಣವನ್ನು ಕೂಡ ಮಾಡಿರುತ್ತಾರೆ. 

ಇವರ ಸಂಪರ್ಕದ ವಿವರಗಳನ್ನು ಸಾಯಿ ಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ.

ಸಂಪರ್ಕದ ವಿವರಗಳು

ಗಾಯಕಿಯ ಹೆಸರು
ಸುವೇದಿತಾ ಶ್ರೀಧರ್
ವಿಳಾಸ
ಸಾಯಿ ಶಂಕರ ಭಜನ ವೃಂದ, ನಂ.1608/ಎ, ದೇವಿ ನಿಲಯಂ, 17ನೇ  ಮುಖ್ಯರಸ್ತೆ, 2ನೇ  ಹಂತ, ಜೆ.ಪಿ.ನಗರ, ಬೆಂಗಳೂರು-560 078. ಕರ್ನಾಟಕ.
ದೂರವಾಣಿ ಸಂಖ್ಯೆ
080-2658 3705 / +91 97420 59107
ಈ ಮೇಲ್ ವಿಳಾಸ
ಇಲ್ಲ
ವೆಬ್ ಸೈಟ್
ಇಲ್ಲ
ಆಲ್ಬಮ್ ಗಳು
ಇಲ್ಲ 
ಭಜನೆಗಳು
ಇಲ್ಲ


ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment