Wednesday, December 8, 2010

ಹೊಸೂರಿನ ಶಿರಡಿ ಸಾಯಿಬಾಬಾ ಮಂದಿರ - ಶ್ರೀ ಶಿರಡಿ ಸಾಯಿಬಾಬಾ ಟೆಂಪಲ್ ಟ್ರಸ್ಟ್, ದ್ವಾರಕಾಮಾಯಿ ನಗರ, ಹೊಸ ಎ.ಎಸ್.ಟಿ.ಸಿ.ಪಕ್ಕದಲ್ಲಿ, ಹುಡ್ಕೋ, ಹೊಸೂರು-635 109. ತಮಿಳುನಾಡು - ಕೃಪೆ: ಸಾಯಿಅಮೃತಧಾರಾ.ಕಾಂ

ಈ ದೇವಾಲಯವು ತಮಿಳುನಾಡಿನ ಹೊಸೂರಿನಲ್ಲಿದೆ. ಈ ದೇವಾಲಯದ ವಿಶೇಷತೆಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ.

ದೇವಾಲಯದ ವಿಶೇಷತೆಗಳು:

  • ಈ ದೇವಾಲಯದ ಭೂಮಿ ಪೂಜೆಯನ್ನು ನವೆಂಬರ್ 2000 ದಲ್ಲಿ ಮಾಡಲಾಯಿತು. 
  • ಈ ದೇವಾಲಯವು 30ನೇ ಏಪ್ರಿಲ್ 2001 ರಂದು ಉದ್ಘಾಟನೆಗೊಂಡಿತು. 
  • ಶಿರಡಿ ಸಾಯಿಬಾಬಾರವರ ಸುಂದರ ಅಮೃತ ಶಿಲೆಯ ವಿಗ್ರಹವನ್ನು ಮಂದಿರದ ಒಳಗಡೆ ಕಾಣಬಹುದು. ಸಾಯಿಬಾಬಾರವರ ವಿಗ್ರಹದ ಮುಂದುಗಡೆ ಅಮೃತ ಶಿಲೆಯ ಪಾದುಕೆಗಳನ್ನು ಸ್ಥಾಪಿಸಲಾಗಿದೆ. ದೇವಾಲಯದ ದ್ವಾರದಲ್ಲಿ ಸಾಯಿಬಾಬಾರವರ ವಿಗ್ರಹದ ಎದುರುಗಡೆ ಇರುವಂತೆ ನಂದಾದೀಪವನ್ನು ಸ್ಥಾಪಿಸಲಾಗಿದೆ. ಅಲ್ಲದೇ, ಸಾಯಿಬಾಬಾರವರ ದೊಡ್ಡ ವಿಗ್ರಹದ ಎಡಭಾಗದಲ್ಲಿ ಅಮೃತ ಶಿಲೆಯ ಸಣ್ಣ ವಿಗ್ರಹವನ್ನು ಇರಿಸಲಾಗಿದೆ. 
  • ದೇವಾಲಯದ ಹೊರಭಾಗದಲ್ಲಿ ಸಾಯಿಬಾಬಾರವರ ವಿಗ್ರಹದ ಎದುರುಗಡೆ ಇರುವಂತೆ ಪವಿತ್ರ ತುಳಸಿ ಬೃಂದಾವನವನ್ನು ಇರಿಸಲಾಗಿದೆ. 
  • ತುಳಸಿ ಬೃಂದಾವನದ ಬಲಭಾಗದಲ್ಲಿ ಪವಿತ್ರ ಧುನಿಯನ್ನು ಸ್ಥಾಪಿಸಲಾಗಿದೆ. ಧುನಿಯ ಬಲಭಾಗದಲ್ಲಿ ದ್ವಾರಕಾಮಾಯಿ ಸಾಯಿಬಾಬಾರವರ ಆಳೆತ್ತರದ ಚಿತ್ರಪಟವನ್ನು ಇರಿಸಲಾಗಿದೆ. 
  • ಸಾಯಿಬಾಬಾರವರ ವಿವಿಧ ಭಂಗಿಯ ಚಿತ್ರಪಟಗಳನ್ನು ಮತ್ತು ಗಾಯತ್ರಿ ದೇವಿಯ ಚಿತ್ರಪಟವನ್ನು ಮಂದಿರದ ಒಳಗಡೆ ಇರಿಸಲಾಗಿದೆ. 
  • ಬೆಳ್ಳಿಯ ಗಣೇಶ, ಸಾಯಿಬಾಬಾ, ರಾಮ, ಲಕ್ಷ್ಮಣ, ಅಂಜನೇಯ ದೇವರುಗಳ ವಿಗ್ರಹವು ಮಂದಿರದಲ್ಲಿದ್ದು ಇವುಗಳನ್ನು ಪ್ರತಿನಿತ್ಯ ಅಭಿಷೇಕಕ್ಕೆ ಬಳಸಲಾಗುತ್ತದೆ. 

 ದೇವಾಲಯದ ಹೊರನೋಟ 

 ಸಾಯಿಬಾಬಾರವರ ಅಮೃತ ಶಿಲೆಯ ವಿಗ್ರಹ 

 ಪವಿತ್ರ ಪಾದುಕೆಗಳು 

 ಗಣಪತಿ ಮತ್ತು ಅಂಜನೇಯ ದೇವರ ಬೆಳ್ಳಿಯ ವಿಗ್ರಹಗಳು 

ದ್ವಾರಕಾಮಾಯಿ ಸಾಯಿಬಾಬಾರವರ ಆಳೆತ್ತರದ ಚಿತ್ರಪಟ

ದೇವಾಲಯದ ಕಾರ್ಯಚಟುವಟಿಕೆಗಳು: 


ದಿನನಿತ್ಯದ ಕಾರ್ಯಕ್ರಮಗಳು: 

ಆರತಿಯ ಸಮಯ 


ಆರತಿ
ಸಮಯ
ಕಾಕಡ ಆರತಿ
5:45 AM
 ಮಧ್ಯಾನ್ಹ ಆರತಿ
12:00 PM
ಧೂಪಾರತಿ
6:15 PM
ಶೇಜಾರತಿ
8:00 PM

ಪ್ರತಿನಿತ್ಯ ಬೆಳಿಗ್ಗೆ 7 ಘಂಟೆಗೆ  ಸಾಯಿಬಾಬಾರವರ ಬೆಳ್ಳಿಯ ವಿಗ್ರಹಕ್ಕೆ ಅಭಿಷೇಕವನ್ನು ಮಾಡಲಾಗುತ್ತದೆ. ಸೇವಾಶುಲ್ಕ 100/- ರುಪಾಯಿಗಳು.

ಪ್ರತಿ ಗುರುವಾರ ಸಾಯಿಬಾಬಾರವರ ಪಲ್ಲಕ್ಕಿ ಉತ್ಸವವನ್ನು ಸಂಜೆ 6:45 ಕ್ಕೆ ನೆರವೇರಿಸಲಾಗುತ್ತದೆ.

ಪ್ರತಿ ತಿಂಗಳ ಹುಣ್ಣಿಮೆಯಂದು ಸತ್ಯನಾರಾಯಣ ಪೂಜೆಯನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಸಾಮುಹಿಕ ಸತ್ಯನಾರಾಯಣ ಪೂಜೆಗೆ 25/- ರುಪಾಯಿಗಳ ಹಾಗೂ ಪ್ರತ್ಯೇಕವಾಗಿ ದಂಪತಿಗಳು ಪೂಜೆಗೆ ಕೂರಬೇಕಾದರೆ 300/- ರುಪಾಯಿಗಳ ಶುಲ್ಕವನ್ನು ಇರಿಸಲಾಗಿದೆ. 

ವಿಶೇಷ ಉತ್ಸವದ ದಿನಗಳು: 

  1. ದೇವಾಲಯದ ವಾರ್ಷಿಕೋತ್ಸವದ ದಿನ ಕುಂಭಾಭಿಷೇಕ ಕಾರ್ಯಕ್ರಮ. 
  2. ಗುರುಪೂರ್ಣಿಮೆ.
  3. ವಿಜಯದಶಮಿ.
 ದೇವಾಲಯದ ಸಾಮಾಜಿಕ ಕಾರ್ಯಚಟುವಟಿಕೆಗಳು:

  1. ವಿಶೇಷ ಉತ್ಸವದ ದಿನಗಳಂದು ಅನ್ನದಾನ ಕಾರ್ಯಕ್ರಮವಿರುತ್ತದೆ. 
  2. ದೇವಾಲಯದಲ್ಲಿ ಪ್ರತಿವರ್ಷ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಆಯೋಜಿಸಲಾಗುತ್ತದೆ. 

ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ: 

ವಿಳಾಸ: 

ಶ್ರೀ ಶಿರಡಿ ಸಾಯಿಬಾಬಾ ಟೆಂಪಲ್ ಟ್ರಸ್ಟ್
ದ್ವಾರಕಾಮಾಯಿ ನಗರ, ಹೊಸ ಎ.ಎಸ್.ಟಿ.ಸಿ.ಪಕ್ಕದಲ್ಲಿ
ಹುಡ್ಕೋ, ಹೊಸೂರು-635 109. ತಮಿಳುನಾಡು.

ಸಂಪರ್ಕಿಸಬೇಕಾದ ವ್ಯಕ್ತಿಗಳು: 

ಶ್ರೀ.ಜಿ.ಸತ್ಯಪ್ರಕಾಶ ರೆಡ್ಡಿ / ಶ್ರೀ.ಪಿ.ಸತ್ಯನಾರಾಯಣ ಮುರ್ತಿ


ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು: 


+91 80125 80826 / +91 94422 20822

ಈ ಮೇಲ್ ವಿಳಾಸ: 



ದೇವಾಲಯದ ಮಾರ್ಗಸೂಚಿ: 

ಥಳಿಯ ಹುಡ್ಕೋ ಎದುರುಗಡೆ ರಸ್ತೆ, ಬ್ಲೂ ಸ್ಟಾರ್ ಹತ್ತಿರ. ಈ ದೇವಾಲಯವು ಹೊಸ ಎ.ಎಸ್.ಟಿ.ಸಿ.ಪಕ್ಕದಲ್ಲಿ ಇರುತ್ತದೆ.

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment