Monday, December 13, 2010

ಬೆಂಗಳೂರಿನ ಸಾಯಿಬಾಬಾ ಮಂದಿರ - ಶ್ರೀ ಮುತ್ತುರಾಯಸ್ವಾಮಿ ಸನ್ನಿಧಿ ಮತ್ತು ಶ್ರೀ ಶಿರಡಿ ಸಾಯಿಬಾಬಾ ಸೇವಾ ಟ್ರಸ್ಟ್ (ನೋಂದಣಿ), ನಂ.50 , ಬಿ.ಎಂ.ಎಸ್.ಇಂಜಿನಿಯರಿಂಗ್ ಕಾಲೇಜ್ ಪಕ್ಕ, ಆವಲಹಳ್ಳಿ, ದೊಡ್ಡಬಳ್ಳಾಪುರ ಮುಖ್ಯರಸ್ತೆ, ಬೆಂಗಳೂರು-560 064. ಕರ್ನಾಟಕ - ಕೃಪೆ: ಸಾಯಿಅಮೃತಧಾರಾ.ಕಾಂ

ಈ ದೇವಾಲಯವು ಬೆಂಗಳೂರಿನಿಂದ ದೊಡ್ಡಬಳ್ಳಾಪುರಕ್ಕೆ ತೆರಳುವ ಮುಖ್ಯರಸ್ತೆಯಲ್ಲಿ ಇರುತ್ತದೆ. ಈ ದೇವಾಲಯದ ವಿಶೇಷತೆಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ:


ದೇವಾಲಯದ ವಿಶೇಷತೆಗಳು:

  • ಈ ದೇವಾಲಯವನ್ನು 25ನೇ ಅಕ್ಟೋಬರ್ 2007 ರಂದು ಸಾಯಿಮಾತಾ ಶ್ರೀಮತಿ.ಐ.ವಿ.ಸಂಪತ್ ಕುಮಾರಿಯವರು ಉದ್ಘಾಟಿಸಿದರು. 
  • ಈ ದೇವಾಲಯದಲ್ಲಿ ಶಿರಡಿ ಸಾಯಿಬಾಬಾರವರ ಅಮೃತ ಶಿಲೆಯ ಸುಂದರ ವಿಗ್ರಹವನ್ನು ಸಾಯಿಭಕ್ತರು ನೋಡಬಹುದು. ಅಲ್ಲದೇ, ದತ್ತಾತ್ರೇಯರ ಅಮೃತ ಶಿಲೆಯ ವಿಗ್ರಹ, ಕಪ್ಪು ಶಿಲೆಯ ಆಂಜನೇಯ, ಗಣಪತಿ, ಸುಬ್ರಮಣ್ಯ, ನವಗ್ರಹ, ನಾಗ ದೇವತೆಗಳ ವಿಗ್ರಹಗಳನ್ನು ಕೂಡ ಸಾಯಿಭಕ್ತರು ನೋಡಬಹುದು. 
  • ಸಾಯಿಬಾಬಾರವರ ವಿಗ್ರಹಕ್ಕೆ ಎದುರಾಗಿ ಅಮೃತ ಶಿಲೆಯ ನಂದಿಯ ವಿಗ್ರಹವನ್ನು ಶಿರಡಿಯಲ್ಲಿರುವಂತೆ ಸ್ಥಾಪಿಸಲಾಗಿದೆ. 
  • ಪವಿತ್ರ ಧುನಿ ಮಾ ಮತ್ತು ನಂದಾದೀಪವನ್ನು ಕೂಡ ಈ ಮಂದಿರದ ಹೊರ ಆವರಣದಲ್ಲಿ ಸ್ಥಾಪಿಸಲಾಗಿದೆ.
  • ದೇವಾಲಯದ ನೆಲಮಾಳಿಗೆಯಲ್ಲಿ ಧ್ಯಾನಮಂದಿರವನ್ನು ಸ್ಥಾಪಿಸಲಾಗಿದ್ದು ಅಲ್ಲಿ ಸಾಯಿಬಾಬಾರವರ ಅಮೃತ ಶಿಲೆಯ ವಿಗ್ರಹವನ್ನು ಸ್ಥಾಪಿಸಲಾಗಿದೆ. 

 ದೇವಾಲಯದ ರಾಜಗೋಪುರಗಳು 

 ಗಣೇಶನ ವಿಗ್ರಹ 

 ಆಂಜನೇಯನ ವಿಗ್ರಹ 

 ಸುಬ್ರಮಣ್ಯ ದೇವರ ವಿಗ್ರಹ 

 ನವಗ್ರಹಗಳು 

 ದತ್ತಾತ್ರೇಯ ದೇವರ ವಿಗ್ರಹ 

ಸಾಯಿಬಾಬಾರವರ ಸುಂದರ ಅಮೃತ ಶಿಲೆಯ ವಿಗ್ರಹ

ಸಾಯಿಬಾಬಾರವರ ಪಲ್ಲಕ್ಕಿ 

 ನಂದಿಯ ವಿಗ್ರಹ 

 ನಂದಾದೀಪ 

 ಪವಿತ್ರ ಧುನಿ ಮಾ

 ನಾಗ ದೇವರುಗಳ ವಿಗ್ರಹ 

ನೆಲಮಾಳಿಗೆಯ ಧ್ಯಾನ ಮಂದಿರದಲ್ಲಿರುವ ಸಾಯಿಬಾಬಾರವರ ಅಮೃತಶಿಲೆಯ ವಿಗ್ರಹ 

ದೇವಾಲಯದ ಕಾರ್ಯಚಟುವಟಿಕೆಗಳು:

ದಿನನಿತ್ಯದ ಕಾರ್ಯಕ್ರಮಗಳು:

ಆರತಿಯ ಸಮಯ:
ಕಾಕಡಾ ಆರತಿ: ಬೆಳಿಗ್ಗೆ 6:30 ಕ್ಕೆ  
ಮಧ್ಯಾನ್ಹ ಆರತಿ: ಮಧ್ಯಾನ್ಹ 12 ಘಂಟೆಗೆ
ಧೂಪಾರತಿ: ಸಂಜೆ 6 ಘಂಟೆಗೆ
ಶೇಜಾರತಿ: ರಾತ್ರಿ 8 ಘಂಟೆಗೆ


ಪ್ರತಿನಿತ್ಯ ಸಾಯಿಬಾಬಾರವರ ಪಂಚಲೋಹ ವಿಗ್ರಹಕ್ಕೆ ಕ್ಷೀರಾಭಿಷೇಕ ಮಾಡಲಾಗುತ್ತದೆ. ಸೇವಾಶುಲ್ಕ 101/- ರುಪಾಯಿಗಳು.

ಪ್ರತಿನಿತ್ಯ ಸಾಯಿಬಾಬಾರವರ ಪಂಚಲೋಹ ವಿಗ್ರಹಕ್ಕೆ ಪಂಚಾಮೃತ ಅಭಿಷೇಕ ಮಾಡಲಾಗುತ್ತದೆ. ಸೇವಾಶುಲ್ಕ 151/- ರುಪಾಯಿಗಳು.

ಈ ಮಂದಿರದಲ್ಲಿ ಶಾಶ್ವತ ಪೂಜೆಗೆ ಅವಕಾಶವಿದ್ದು ಅದರ ಸೇವಾ ಶುಲ್ಕ 2001/- ರುಪಾಯಿಗಳಾಗಿರುತ್ತದೆ.

ಪ್ರತಿ ತಿಂಗಳು ಸಂಕಷ್ಟ ಚತುರ್ಥಿಯನ್ನು ಸಂಜೆ 5:30 ರಿಂದ ಆಚರಿಸಲಾಗುತ್ತದೆ. ಸೇವಾ ಶುಲ್ಕ 51/- ರುಪಾಯಿಗಳು.

ಪ್ರತಿ ತಿಂಗಳ ಹುಣ್ಣಿಮೆಯಂದು ಬೆಳಿಗ್ಗೆ 9:30 ರಿಂದ ಸತ್ಯನಾರಾಯಣ ಪೂಜೆಯನ್ನು ಆಚರಿಸಲಾಗುತ್ತದೆ.ಸೇವಾ ಶುಲ್ಕ 51/- ರುಪಾಯಿಗಳು.

ವಿಶೇಷ ಉತ್ಸವದ ದಿನಗಳು:

  1. ಪ್ರತಿ ವರ್ಷದ 25ನೇ ಅಕ್ಟೋಬರ್ ದೇವಾಲಯದ ವಾರ್ಷಿಕೋತ್ಸವ.
  2. ಶ್ರೀರಾಮನವಮಿ. 
  3. ವಿಜಯದಶಮಿ (ಸಾಯಿಬಾಬಾ ಮಹಾಸಮಾಧಿ ದಿವಸ).
  4. ಗುರುಪೂರ್ಣಿಮೆ.
  5. ಹನುಮಜ್ಜಯಂತಿ. 

ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ:

ಸ್ಥಳ:  
ಬಿ.ಎಂ.ಎಸ್.ಇಂಜಿನಿಯರಿಂಗ್ ಕಾಲೇಜ್ ಪಕ್ಕ, ಎಂ.ಹೆಚ್.ಗೌಡ ಎಂಟರ್ ಪ್ರೈಸಸ್ - ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಎದುರು, ದೊಡ್ಡಬಳ್ಳಾಪುರ ಮುಖ್ಯರಸ್ತೆ.

ವಿಳಾಸ: 
ಶ್ರೀ ಮುತ್ತುರಾಯಸ್ವಾಮಿ ಸನ್ನಿಧಿ ಮತ್ತು ಶ್ರೀ ಶಿರಡಿ ಸಾಯಿಬಾಬಾ ಸೇವಾ ಟ್ರಸ್ಟ್ (ನೋಂದಣಿ), 
ನಂ.50 , ಬಿ.ಎಂ.ಎಸ್.ಇಂಜಿನಿಯರಿಂಗ್ ಕಾಲೇಜ್ ಪಕ್ಕ, 
ಆವಲಹಳ್ಳಿ, ದೊಡ್ಡಬಳ್ಳಾಪುರ ಮುಖ್ಯರಸ್ತೆ, ಬೆಂಗಳೂರು-560 064. ಕರ್ನಾಟಕ.

ಸಂಪರ್ಕಿಸಬೇಕಾದ ವ್ಯಕ್ತಿಗಳು:
ಶ್ರೀ.ಕೆ.ಸಿ.ಎಂ.ಗೌಡ - ಅಧ್ಯಕ್ಷರು / ಶ್ರೀ.ಸಂತೋಷ್ ಕುಮಾರ್ - ದೇವಾಲಯದ ಮ್ಯಾನೇಜರ್ 

ದೂರವಾಣಿ ಸಂಖ್ಯೆ: 
+91 93428 62303 / +91 76763 12606    

ಮಾರ್ಗಸೂಚಿ:  
ಆವಲಹಳ್ಳಿ ಬಸ್ ನಿಲ್ದಾಣದಲ್ಲಿ ಇಳಿಯುವುದು. ಈ ದೇವಾಲಯವು ಬಿ.ಎಂ.ಎಸ್.ಇಂಜಿನಿಯರಿಂಗ್ ಕಾಲೇಜ್ ಪಕ್ಕ, ಎಂ.ಹೆಚ್.ಗೌಡ ಎಂಟರ್ ಪ್ರೈಸಸ್ - ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಎದುರು, ದೊಡ್ಡಬಳ್ಳಾಪುರ ಮುಖ್ಯರಸ್ತೆಯಲ್ಲಿ ಇರುತ್ತದೆ. ಬಸ್ ಸಂಖ್ಯೆ 285 ರ ಎಲ್ಲಾ ಶ್ರೇಣಿಗಳು ಮತ್ತು ಬೆಂಗಳೂರಿನಿಂದ ದೊಡ್ಡಬಳ್ಳಾಪುರಕ್ಕೆ ತೆರಳುವ ಎಲ್ಲಾ ಬಸ್ ಗಳಿಗೆ ದೇವಾಲಯದ ಮುಂಭಾಗದಲ್ಲಿ ನಿಲುಗಡೆ ಇದೆ. 



ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment