Tuesday, December 7, 2010

ಬೆಂಗಳೂರಿನ ಸಾಯಿಬಾಬಾ ಮಂದಿರ - ಶ್ರೀ ಸಮರ್ಥ ಸದ್ಗುರು ಶ್ರೀ ಶಿರಡಿ ಸಾಯಿಬಾಬಾ ಭಕ್ತ ಮಂಡಳಿ ಟ್ರಸ್ಟ್ (ನೋಂದಣಿ), ನಂ.16, ಅರ್ಮುಗಂ ಮೊದಲಿಯಾರ್ ರಸ್ತೆ (ಎ.ಎಂ.ರಸ್ತೆ), ಕಲಾಸಿಪಾಳ್ಯಂ, ಬೆಂಗಳೂರು-560 002 - ಕೃಪೆ: ಸಾಯಿಅಮೃತಧಾರಾ.ಕಾಂ

ಈ ದೇವಾಲಯವು ಬೆಂಗಳೂರು ದಕ್ಷಿಣ ತಾಲ್ಲೂಕಿನ ಅತ್ಯಂತ ಜನಭರಿತ ಪ್ರದೇಶವಾದ ಕಲಾಸಿಪಾಳ್ಯಂನಲ್ಲಿದೆ.  ಈ ದೇವಾಲಯದ ವಿಶೇಷತೆಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ. 

ದೇವಾಲಯದ ವಿಶೇಷತೆಗಳು:

  • ಈ ದೇವಾಲಯವನ್ನು ಮೇ 1947 ರಲ್ಲಿ ಬೆಂಗಳೂರಿನ ಸಾಯಿ ಆಧ್ಯಾತ್ಮಿಕ ಕೇಂದ್ರದ ಸಂಸ್ಥಾಪಕರಾದ ದಿವಂಗತ ಶ್ರೀ.ಸಾಯಿಪಾದಾನಂದ ರಾಧಾಕೃಷ್ಣ ಸ್ವಾಮಿಜಿಯವರು ಉದ್ಘಾಟನೆ ಮಾಡಿದರು. ಈ ಮಂದಿರದಲ್ಲಿ ದ್ವಾರಕಾಮಾಯಿ ಸಾಯಿಬಾಬಾ  ಮತ್ತು ಸಾಯಿಬಾಬಾರವರ ಚಿತ್ರದ ಹಿಂದೆ "ಓಂ" ಅಕ್ಷರ ಬರೆದಿರುವ ಅತ್ಯಂತ ಪುರಾತನವಾದ ಆಳೆತ್ತರದ ಚಿತ್ರಪಟ ಇರಿಸಲಾಗಿದೆ. ಅಲ್ಲದೇ, ಈ ಮಂದಿರದಲ್ಲಿ 1995 ರ ವರೆಗೆ ಸಾಯಿಬಾಬಾರವರ ಈ ಎರಡು ಚಿತ್ರಪಟಗಳನ್ನು ಮತ್ತು ಮರದಿಂದ ಮಾಡಲ್ಪಟ್ಟ ಸಾಯಿಬಾಬಾರವರ ಸುಂದರ ಉತ್ಸವ ವಿಗ್ರಹಗಳನ್ನು ಪೂಜೆ ಮಾಡಲಾಗುತ್ತಿತ್ತು. 
  • ಸಾಯಿಬಾಬಾರವರ ಸುಂದರ ಅಮೃತ ಶಿಲೆಯ ವಿಗ್ರಹವನ್ನು 16ನೇ ಫೆಬ್ರವರಿ 1995 ರಂದು ಸಿದ್ದಗಂಗಾ ಮಠದ ಸ್ವಾಮೀಜಿಯವರು ಉದ್ಘಾಟಿಸಿದರು. 
  • ಮಂದಿರದಲ್ಲಿ ಪಂಚಲೋಹದ ಸಾಯಿಬಾಬಾರವರ ವಿಗ್ರಹವಿದ್ದು ಅದನ್ನು ಪ್ರತಿನಿತ್ಯ ಅಭಿಷೇಕಕ್ಕೆ ಬಳಸಲಾಗುತ್ತಿದೆ. 

ದೇವಾಲಯದ ನಾಮಫಲಕ ಮತ್ತು ಹೊರನೋಟ 

ದೇವಾಲಯದ ಗೋಪುರ

 ಸಾಯಿಬಾಬಾರವರ ಸುಂದರ ಅಮೃತಶಿಲೆಯ ವಿಗ್ರಹ  

 ಸಾಯಿಬಾಬಾರವರ ಅಮೃತಶಿಲೆಯ ವಿಗ್ರಹ 

 ದ್ವಾರಕಾಮಾಯಿ ಸಾಯಿಬಾಬಾರವರ ಚಿತ್ರಪಟ

 ಮರದಲ್ಲಿ ಮಾಡಿದ ಸಾಯಿಬಾಬಾರವರ ಉತ್ಸವದ ವಿಗ್ರಹಗಳು 

 1947 ಇಸವಿಯಿಂದ ಮಂದಿರದಲ್ಲಿರುವ ಅತ್ಯಂತ ಅಪರೂಪದ ಸಾಯಿಬಾಬಾರವರ ಚಿತ್ರಪಟ 

ದೇವಾಲಯದ ಕಾರ್ಯಚಟುವಟಿಕೆಗಳು: 

ದಿನನಿತ್ಯದ ಕಾರ್ಯಕ್ರಮಗಳು: 

ಆರತಿಯ ಸಮಯ
ಆರತಿ
ಸಮಯ
ಬೆಳಗಿನ ಆರತಿ
9:00 AM
ರಾತ್ರಿ ಆರತಿ
8:00 PM

ಪ್ರತಿನಿತ್ಯ ಪಂಚಲೋಹದ ಸಾಯಿಬಾಬಾರವರ ವಿಗ್ರಹಕ್ಕೆ ಅರ್ಚನೆ, ಕ್ಷೀರಾಭಿಷೇಕ ಮತ್ತು ಪಂಚಾಮೃತ ಅಭಿಷೇಕವನ್ನು ಮಾಡಲಾಗುತ್ತದೆ. ಈ ಸೇವೆಗಳಿಗೆ ದೇವಾಲಯದ ಟ್ರಸ್ಟ್ ನವರು ಯಾವುದೇ ರೀತಿಯ ಶುಲ್ಕವನ್ನು ನಿಗದಿಪಡಿಸಿರುವುದಿಲ್ಲ. 

ದೇವಾಲಯದಲ್ಲಿ ನಡೆಯುವ ವಿಶೇಷ ಉತ್ಸವದ ದಿನಗಳು:

  1. ದೇವಾಲಯದ ವಾರ್ಷಿಕೋತ್ಸವ ಪ್ರತಿ ವರ್ಷದ ಮಾಘ ಮಾಸದ ಕೃಷ್ಣ ಪಕ್ಷದ ಪ್ರಥಮ ತಿಥಿಯಂದು (ಫೆಬ್ರವರಿ)
  2. ಶ್ರೀರಾಮನವಮಿ 
  3. ಗುರು ಪೂರ್ಣಿಮೆ 
  4. ಸಾಯಿಬಾಬಾರವರ ಉತ್ಸವ ವಿಗ್ರಹಗಳ ರಥೋತ್ಸವ ಪ್ರತಿ ವರ್ಷದ ವೈಶಾಖ ಮಾಸದ ಹುಣ್ಣಿಮೆಯಂದು (ಮೇ) 
  5. ವಿಜಯದಶಮಿ (10 ದಿನಗಳ ಉತ್ಸವ)

ಗುರುಪೂರ್ಣಿಮೆ ಮತ್ತು ರಥೋತ್ಸವದ ದಿನಗಳಲ್ಲಿ ದೇವಾಲಯಕ್ಕೆ ಬರುವ ಎಲ್ಲಾ ಭಕ್ತರಿಗೂ ಅನ್ನ ಸಂತರ್ಪಣೆ ನಡೆಸಲಾಗುತ್ತದೆ.

ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ: 

ವಿಳಾಸ: 

 ಶ್ರೀ ಸಮರ್ಥ ಸದ್ಗುರು ಶ್ರೀ ಶಿರಡಿ ಸಾಯಿಬಾಬಾ ಭಕ್ತ ಮಂಡಳಿ ಟ್ರಸ್ಟ್ (ನೋಂದಣಿ)
ನಂ.16, ಅರ್ಮುಗಂ ಮೊದಲಿಯಾರ್ ರಸ್ತೆ (ಎ.ಎಂ.ರಸ್ತೆ),
ಕಲಾಸಿಪಾಳ್ಯಂ, ಬೆಂಗಳೂರು-560 002.

ಸಂಪರ್ಕಿಸಬೇಕಾದ ವ್ಯಕ್ತಿ:

ಶ್ರೀ.ಆರ್.ಕೃಷ್ನೋಜಿ ರಾವ್

ದೂರವಾಣಿ ಸಂಖ್ಯೆ: 


080-2670 4258 

ಮಾರ್ಗಸೂಚಿ: 
ಕಲಾಸಿಪಾಳ್ಯಂ ಬಸ್ ನಿಲ್ದಾಣದಲ್ಲಿ ಇಳಿದು 5 ನಿಮಿಷ ನಡೆದರೆ ಈ ಮಂದಿರ ಸಿಗುತ್ತದೆ. ಈ ಮಂದಿರವು ಶ್ರೀ.ದ್ರೌಪದಮ್ಮ ಧರ್ಮರಾಯಸ್ವಾಮಿ ಮಂದಿರದ ಬಳಿ ಇರುತ್ತದೆ. 

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment