Thursday, April 25, 2013

ಅನನ್ಯ ಸಾಯಿ ಭಕ್ತೆ ಹಾಗೂ ಶ್ರೀ ಶಿವಸಾಯಿ ಟ್ರಸ್ಟ್, ಚನ್ನೈನ ಅಧ್ಯಕ್ಷೆ ಶ್ರೀಮತಿ.ಸುಗುಣ ಮುತ್ತುವೆಂಕಟರಾಮನ್ ವಿಧಿವಶ - ಕೃಪೆ: ಸಾಯಿಅಮೃತಧಾರಾ.ಕಾಂ

ಅನನ್ಯ ಸಾಯಿ ಭಕ್ತೆ ಹಾಗೂ ಶ್ರೀ ಶಿವಸಾಯಿ ಟ್ರಸ್ಟ್, ಚನ್ನೈನ ಅಧ್ಯಕ್ಷೆ ಶ್ರೀಮತಿ.ಸುಗುಣ ಮುತ್ತುವೆಂಕಟರಾಮನ್ ಇದೇ ತಿಂಗಳ 25ನೇ ಏಪ್ರಿಲ್ 2013 ರಂದು ಮಧ್ಯಾನ್ಹ 3:20 ಕ್ಕೆ ಚನ್ನೈನ ಮೈಲಾಪುರಂ ನ ತಮ್ಮ ನಿವಾಸದಲ್ಲಿ ವಿಧಿವಶರಾದರೆಂದು ತಿಳಿಸಲು ವಿಷಾದಿಸುತ್ತೇವೆ.

   ಬಂಗಾರಪೇಟೆಯ ಕಾರ್ಯಕ್ರಮವೊಂದರಲ್ಲಿ ದೀಪವನ್ನು ಬೆಳಗುತ್ತಿರುವ  ಶ್ರೀಮತಿ.ಸುಗುಣ ಮುತ್ತುವೆಂಕಟರಾಮನ್

ಇವರು ಪ್ರಖ್ಯಾತ ಸಾಯಿಭಕ್ತರಾದ ಹಾಗೂ "ಮಹಾನ್ ಸಾಯಿದಾಸನ್" ಎಂದು ಕರೆಯಲ್ಪಡುತ್ತಿದ್ದ ದಿವಂಗತ ಡಾಕ್ಟರ್ ಮುತ್ತುವೆಂಕಟರಾಮನ್ ರವರ ಧರ್ಮಪತ್ನಿ. ಶ್ರೀ.ಮುತ್ತುವೆಂಕಟರಾಮನ್ ರವರು 100 ಅಡಿ ಎತ್ತರದ ಶಿರಡಿ ಸಾಯಿಬಾಬಾರವರ ವಿಗ್ರಹವನ್ನು ಹಾಗೂ ಅದರ ಸುತ್ತಲೂ ಸರ್ವಧರ್ಮ ಸಮನ್ವಯದ ಸಂಕೇತವಾಗಿ ಹಿಂದೂ, ಮುಸ್ಲಿಮ್ ಹಾಗೂ ಕ್ರೈಸ್ತ ಧರ್ಮದ ದೇವಾಲಯಗಳನ್ನು ನಿರ್ಮಾಣ ಮಾಡುವ ಕನಸನ್ನು ಹೊಂದಿದ್ದರು.

ಶ್ರೀಮತಿ.ಸುಗುಣ ಮುತ್ತುವೆಂಕಟರಾಮನ್ ರವರು ತಮ್ಮ ಪತಿಯ ಕೊನೆಯ ಆಸೆಯನ್ನು ನೆರವೇರಿಸಲು ಹಗಲೂ ರಾತ್ರಿ ಶ್ರಮಿಸುತ್ತಿದ್ದರು. ಅಲ್ಲದೇ, ಕೇವಲ ಕಳೆದ ವಾರವಷ್ಟೇ ಅಂದರೆ 23ನೇ ಏಪ್ರಿಲ್ 2013, ಮಂಗಳವಾರದಂದು ತಿರುವಳ್ಳೂರು ಜಿಲ್ಲೆಯ ಪೂಂಡಿ ಅಂಚೆ, ಗ್ರಿನ್ವೆಲ್ನಾಥಮ್, ಸೆಂಡ್ರಾಯನಪಾಳ್ಯಂ  ಗ್ರಾಮದಲ್ಲಿ    ದೇವಾಲಯ, ಚರ್ಚ್ ಹಾಗೂ ಮಸೀದಿಯಿಂದ ಸುತ್ತುವರಿಯಲ್ಪಡುವ 100 ಅಡಿ ಎತ್ತರದ ಗ್ರಾನೈಟ್ ಶಿಲೆಯಲ್ಲಿ ಕೆತ್ತನೆ ಮಾಡಿದ ಸಾಯಿಬಾಬಾ ದೇವಾಲಯದ ಭೂಮಿಪೂಜೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದರು ಎಂಬುದನ್ನು ಬ್ಲಾಗ್ ನ ವಾಚಕರು ಇಲ್ಲಿ ಸ್ಮರಿಸಬಹುದು.

www.saiamrithadhara.com ಮತ್ತು ಅದರ ಸಹಯೋಗಿ ಕನ್ನಡ ಬ್ಲಾಗ್ ಆದ http://www.saiamrithavani.blogspot.in/ ನ ತಂಡದ ಸದಸ್ಯರುಗಳು ಶ್ರೀಮತಿ.ಸುಗುಣ ಮುತ್ತುವೆಂಕಟರಾಮನ್ ರವರ ಈ ಅಕಾಲಿಕ ಮರಣಕ್ಕೆ ತೀವ್ರ ದುಃಖವನ್ನು ವ್ಯಕ್ತಪಡಿಸುತ್ತಾರೆ. ಅಲ್ಲದೇ, ಈ ಅಕಾಲಿಕ ಮರಣದ ದುಃಖವನ್ನು ಭರಿಸುವ ಶಕ್ತಿಯನ್ನು ಶ್ರೀ ಶಿವಸಾಯಿ ಟ್ರಸ್ಟ್, ಚನ್ನೈನ ಸದಸ್ಯರುಗಳಿಗೆ ನೀಡಲೆಂದು ಮತ್ತು ಶ್ರೀಮತಿ.ಸುಗುಣ ಮುತ್ತುವೆಂಕಟರಾಮನ್ ಹಾಗೂ ಡಾ.ಮುತ್ತುವೆಂಕಟರಾಮನ್ ರವರ ಬಹಳ ವರ್ಷಗಳ ಆಸೆಯಾದ 100 ಅಡಿ ಎತ್ತರದ ಗ್ರಾನೈಟ್ ಶಿಲೆಯಲ್ಲಿ ಕೆತ್ತನೆ ಮಾಡಿದ ಸಾಯಿಬಾಬಾ ದೇವಾಲಯವನ್ನು ತಿರುವಳ್ಳೂರು ಜಿಲ್ಲೆಯ ಪೂಂಡಿ ಅಂಚೆ, ಗ್ರಿನ್ವೆಲ್ನಾಥಮ್, ಸೆಂಡ್ರಾಯನಪಾಳ್ಯಂ  ಗ್ರಾಮದಲ್ಲಿ ಅತಿ ಶೀಘ್ರದಲ್ಲಿ ಪೂರ್ಣಗೊಳಿಸಲು ಶಕ್ತಿ ನೀಡಲೆಂದು ಶಿರಡಿ ಸಾಯಿಬಾಬಾರವರಲ್ಲಿ ಅತ್ಯಂತ ವಿನಯದಿಂದ ಬೇಡಿಕೊಳ್ಳುತ್ತೇವೆ.

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment