Monday, October 1, 2012

ಅನಂತಪುರ ಜಿಲ್ಲೆಯ ಶಿರಡಿ ಸಾಯಿಬಾಬಾ ಮಂದಿರ - ಶ್ರೀ ಶಿರಡಿ ಸಾಯಿಬಾಬಾ ಮಂದಿರ, ಶ್ರೀ ಶಿರಡಿ ಸಾಯಿಬಾಬಾ ಸೇವಾ ಸಮಿತಿ ಟ್ರಸ್ಟ್ (ನೋಂದಣಿ), ಪುಟ್ಟಪರ್ತಿ ರಸ್ತೆ, ಸಾಯಿನಗರ, ಧರ್ಮಾವರಂ - 515 671, ಅನಂತಪುರ ಜಿಲ್ಲೆ, ಆಂಧ್ರಪ್ರದೇಶ, ಭಾರತ -  ಕೃಪೆ: ಸಾಯಿಅಮೃತಧಾರಾ.ಕಾಂ

ದೇವಾಲಯದ ವಿಶೇಷತೆಗಳು:

ಈ ದೇವಾಲಯವು ಆಂಧ್ರಪ್ರದೇಶ ರಾಜ್ಯದ ಅನಂತಪುರ ಜಿಲ್ಲೆಯ ಧರ್ಮಾವರಂ ಪಟ್ಟಣದ ಪುಟ್ಟಪರ್ತಿ ರಸ್ತೆಯಲ್ಲಿರುವ ಸಾಯಿನಗರದಲ್ಲಿ ಇರುತ್ತದೆ.  ದೇವಾಲಯವು ಜವಾಹರ್ ಆಂಗ್ಲ ಮಾಧ್ಯಮಿಕ ಶಾಲೆಯ ಎದುರುಗಡೆ ಹಾಗೂ ಧರ್ಮಾವರಂ  ಬಸ್ ನಿಲ್ದಾಣದಿಂದ ಕೇವಲ 5 ನಿಮಿಷಗಳ ನಡಿಗೆಯ ಅಂತರದಲ್ಲಿ ಇರುತ್ತದೆ.

ದೇವಾಲಯದ ಟ್ರಸ್ಟ್ ಅನ್ನು 1993ನೇ ಇಸವಿಯಲ್ಲಿ ನೋಂದಣಿ ಸಂಖ್ಯೆ:339/93 ರ ಅಡಿಯಲ್ಲಿ ನೋಂದಣಿ ಮಾಡಲಾಗಿರುತ್ತದೆ.

ದೇವಾಲಯದ ಭೂಮಿಪೂಜೆಯನ್ನು 1998ನೇ ಇಸವಿಯಲ್ಲಿ ನೆರವೇರಿಸಲಾಯಿತು.

ದೇವಾಲಯದ ಉದ್ಘಾಟನೆಯನ್ನು 22ನೇ ಏಪ್ರಿಲ್ 1999 ರಂದು ತಮಿಳುನಾಡು ರಾಜ್ಯದ ಕರೂರಿನ ಪ್ರಖ್ಯಾತ ಸಂತರಾದ ಶ್ರೀ.ನರಸಿಂಹ ಬಾಬಾರವರು ದೇವಾಲಯದ ಟ್ರಸ್ಟ್ ನ ಸದಸ್ಯರು ಹಾಗೂ ಸಾವಿರಾರು ಸ್ಥಳೀಯ ಸಾಯಿ ಭಕ್ತರ  ಸಮ್ಮುಖದಲ್ಲಿ  ನೆರವೇರಿಸಿರುತ್ತಾರೆ.

ಶ್ರೀ.ಈ.ನಾರಾಯಣ ರೆಡ್ಡಿಯವರು ದೇವಾಲಯದ ಸಂಸ್ಥಾಪಕ ಅಧ್ಯಕ್ಷರಾಗಿರುತ್ತಾರೆ. ದೇವಾಲಯದ ಟ್ರಸ್ಟ್ ನ ಆಡಳಿತ  ಮಂಡಳಿಯ ಪದಾಧಿಕಾರಿಗಳು ದೇವಾಲಯದ ದಿನನಿತ್ಯದ ಆಗುಹೋಗುಗಳನ್ನು ಮತ್ತು ಅಭಿವೃದ್ಧಿ ಕಾರ್ಯಗಳನ್ನು ಬಹಳ  ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ.

ದೇವಾಲಯದ ಗರ್ಭಗುಡಿಯಲ್ಲಿ 5.5 ಅಡಿ ಎತ್ತರದ ಸುಂದರ ಅಮೃತಶಿಲೆಯ ಸಾಯಿಬಾಬಾರವರ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ.

ಸಾಯಿಬಾಬಾರವರ ವಿಗ್ರಹದ ಎದುರುಗಡೆ ಶಿರಡಿಯಲ್ಲಿ ಇರುವಂತೆ ಅಮೃತಶಿಲೆಯ ನಂದಿಯ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ.

ನಂದಿಯ ವಿಗ್ರಹದ ಹತ್ತಿರದಲ್ಲಿ ಮರದ ಉಯ್ಯಾಲೆಯನ್ನು ಇರಿಸಲಾಗಿದ್ದು ಅದರಲ್ಲಿ ಸಾಯಿಬಾಬಾರವರ ಸುಂದರ ಭಾವಚಿತ್ರವನ್ನು ಇರಿಸಲಾಗಿದೆ.

ಸಾಯಿಬಾಬಾರವರ ವಿಗ್ರಹವಿರುವ ಮಂಟಪದ ಬಲಭಾಗದಲ್ಲಿ ಸುಂದರ ಪಂಚಲೋಹದ ಸಾಯಿಬಾಬಾರವರ ವಿಗ್ರಹವನ್ನು ಮೂರು ಮೆಟ್ಟಿಲುಗಳ ಮೇಲೆ ಇರಿಸಲಾಗಿದೆ.

ಪ್ರತಿ ಗುರುವಾರ ಹಾಗೂ ವಿಶೇಷ ಉತ್ಸವದ ದಿನಗಳಂದು ಪಲ್ಲಕ್ಕಿ ಉತ್ಸವಕ್ಕೆ ಬಳಸಲಾಗುವ ಮರದ ಪಲ್ಲಕ್ಕಿಯನ್ನು ಕೂಡ ಮಂದಿರದ ಒಳಗಡೆ ನೋಡಬಹುದು.

ಸಾಯಿಬಾಬಾ ಮಂದಿರದ ಹೊರಗಡೆಯ ಎರಡೂ ಬದಿಗಳಲ್ಲಿ ನಿರ್ಮಿಸಲಾಗಿರುವ ಪುಟ್ಟ ಗುಡಿಗಳಲ್ಲಿ ಅಮೃತಶಿಲೆಯ ಗಣಪತಿ ಹಾಗೂ ದತ್ತಾತ್ರೇಯರ ವಿಗ್ರಹಗಳನ್ನು ಪ್ರತಿಷ್ಟಾಪಿಸಲಾಗಿದೆ.

ಸಾಯಿಬಾಬಾ ದೇವಾಲಯದ ಎದುರುಗಡೆ ಹಾಗೂ ಭೋಜನ ಶಾಲೆಯ ಪಕ್ಕದಲ್ಲಿರುವ ಸ್ಥಳದಲ್ಲಿ ದ್ವಾರಕಾಮಾಯಿಯನ್ನು ನಿರ್ಮಾಣ ಮಾಡಲಾಗಿದ್ದು ಅಲ್ಲಿ ಪವಿತ್ರ ಧುನಿಯನ್ನು ಇರಿಸಲಾಗಿದೆ. ಧುನಿಯ ಎದುರುಗಡೆ ದ್ವಾರಕಾಮಾಯಿ ಸಾಯಿಬಾಬಾರವರ ಆಳೆತ್ತರದ ಭಾವಚಿತ್ರ, ಅಮೃತಶಿಲೆಯ ಪಾದುಕೆ, ಆಮೆ ಮತ್ತು ಬೀಸುವ ಕಲ್ಲನ್ನು ಇರಿಸಲಾಗಿದೆ.

ದೇವಾಲಯದ ಕಚೇರಿಯ ಪಕ್ಕದಲ್ಲಿ ಚಾವಡಿಯನ್ನು ನಿರ್ಮಿಸಲಾಗಿದ್ದು ಅಲ್ಲಿ ಕಲ್ಲಿನ ಮೇಲೆ ಕುಳಿತಿರುವ ಸಾಯಿಬಾಬಾರವರ ಆಳೆತ್ತರದ ಭಾವಚಿತ್ರವನ್ನು ಇರಿಸಲಾಗಿದೆ. ಅಲ್ಲದೆ, ಮರದ ಮಂಚ ಹಾಗೂ ಕುರ್ಚಿಯನ್ನು ಸಹ ಚಾವಡಿಯಲ್ಲಿ ಇರಿಸಲಾಗಿದೆ.

ಚಾವಡಿಯ ಪಕ್ಕದಲ್ಲಿರುವ ಧ್ಯಾನಮಂದಿರದಲ್ಲಿ 3 ಅಡಿ ಎತ್ತರದ ಅಮೃತಶಿಲೆಯ ದ್ವಾರಕಾಮಾಯಿ ಸಾಯಿಬಾಬಾರವರ ವಿಗ್ರಹವನ್ನು ಸ್ಥಾಪಿಸಲಾಗಿದೆ.

ದೇವಾಲಯದ ಆವರಣದ ಮುಂಭಾಗದಲ್ಲಿ ನಿರ್ಮಿಸಲಾಗಿರುವ ಪುಟ್ಟ ದೇವಾಲಯದಲ್ಲಿ 5 ಅಡಿ ಎತ್ತರದ ಕಪ್ಪು ಶಿಲೆಯ ಹನುಮಂತನ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ.

ದೇವಾಲಯದ ಆವರಣದ ಮುಂಭಾಗದಲ್ಲಿರುವ ಪವಿತ್ರ ಬೇವಿನ ಮರದ ಕೆಳಗಡೆ ಅಮೃತಶಿಲೆಯ ದತ್ತಾತ್ರೇಯರ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ. ಅಲ್ಲದೆ, ಅಮೃತಶಿಲೆಯ ನಂದಿ ಹಾಗೂ ಪಾದುಕೆಗಳನ್ನು ದತ್ತಾತ್ರೇಯ ವಿಗ್ರಹದ ಎದುರುಗಡೆ ಸ್ಥಾಪಿಸಲಾಗಿದೆ.

ಸಾಯಿಬಾಬಾ ದೇವಾಲಯದ ಬಲಭಾಗದಲ್ಲಿರುವ ಸ್ಥಳದಲ್ಲಿ ಭೋಜನ ಶಾಲೆಯನ್ನು ನಿರ್ಮಿಸಲಾಗಿದ್ದು ಈ ಶಾಲೆಗೆ ಖ್ಯಾತ ಸಾಯಿ ಭಕ್ತರಾದ ಚನ್ನೈನ ಶ್ರೀ.ಕೆ.ವಿ.ರಮಣಿಯವರ ಜ್ಞಾಪಕಾರ್ಥವಾಗಿ  "ಶ್ರೀ.ಕೆ.ವಿ.ರಮಣಿ ಬ್ಲಾಕ್" ಎಂದು ಹೆಸರಿಡಲಾಗಿದೆ.

ದೇವಾಲಯದ ಎದುರುಗಡೆ ಇರುವ ವಿಶಾಲವಾದ ಖಾಲಿ ಜಾಗದಲ್ಲಿ ಉಚಿತ ವೃದ್ಧಾಶ್ರಮ ಮತ್ತು ಅನಾಥಾಶ್ರಮವನ್ನು ಸ್ಥಾಪಿಸಲಾಗಿದೆ. 



























ದೇವಾಲಯದ ಕಾರ್ಯಚಟುವಟಿಕೆಗಳು:

ದಿನನಿತ್ಯದ ಕಾರ್ಯಕ್ರಮಗಳು:

ದೇವಾಲಯದ ಸಮಯ:

ಬೆಳಿಗ್ಗೆ : 5 ರಿಂದ 12:30 ರವರೆಗೆ.
ಸಂಜೆ : 5 ರಿಂದ 8:30 ರವರೆಗೆ.

ಆರತಿಯ ಸಮಯ:

ಕಾಕಡಾ ಆರತಿ : 5:00 ಗಂಟೆ.
ಮಧ್ಯಾನ್ಹ ಆರತಿ: 12:00 ಗಂಟೆ.
ಧೂಪಾರತಿ     : 6:30 ಗಂಟೆ.
ಶೇಜಾರತಿ      : 8:00 ಗಂಟೆ.

ಪ್ರತಿದಿನ ಬೆಳಿಗ್ಗೆ ಸಾಯಿಬಾಬಾರವರ ಪಂಚಲೋಹ ವಿಗ್ರಹಕ್ಕೆ ಪಂಚಾಮೃತ ಅಭಿಷೇಕವನ್ನು ಮಾಡಲಾಗುತ್ತದೆ. ಸೇವಾ ಶುಲ್ಕ 158/- ರೂಪಾಯಿಗಳು.

ಪ್ರತಿದಿನ ಸಾಯಿಬಾಬಾರವರಿಗೆ ಅರ್ಚನೆಯನ್ನು ಮಾಡಲಾಗುತ್ತದೆ. ಸೇವಾ ಶುಲ್ಕ 10/- ರೂಪಾಯಿಗಳು.

ದೇವಾಲಯದಲ್ಲಿ ಶಾಶ್ವತ ಪೂಜೆಗೆ ಅವಕಾಶವಿರುತ್ತದೆ. ಸೇವಾ ಶುಲ್ಕ 1116/- ರೂಪಾಯಿಗಳು.

ದೇವಾಲಯದಲ್ಲಿ ಶಾಶ್ವತ ಪ್ರಸಾದ ವಿನಿಯೋಗ ಸೇವೆಗೆ ಅವಕಾಶವಿರುತ್ತದೆ. ಸೇವಾ ಶುಲ್ಕ 5116/- ರೂಪಾಯಿಗಳು.

ದೇವಾಲಯದಲ್ಲಿ ಅನ್ನದಾನಕ್ಕೆ ದೇಣಿಗೆಯನ್ನು ಸ್ವೀಕರಿಸಲಾಗುತ್ತದೆ. ಒಂದು ದಿನಕ್ಕೆ ಸೇವಾ ಶುಲ್ಕ (ಗುರುವಾರ ಹೊರತುಪಡಿಸಿ) 1000/- ರೂಪಾಯಿಗಳು.  ಗುರುವಾರದಂದು 5116/- ರೂಪಾಯಿಗಳ ಸೇವಾ ಶುಲ್ಕವಿರುತ್ತದೆ.

ದೇವಾಲಯದಲ್ಲಿ ವಾಹನ ಪೂಜೆಗೆ ಅವಕಾಶವಿರುತ್ತದೆ. ಸೇವಾ ಶುಲ್ಕ - ದ್ವಿಚಕ್ರ ವಾಹನಕ್ಕೆ 25/- ರೂಪಾಯಿಗಳು, ನಾಲ್ಕು ಚಕ್ರ ವಾಹನಕ್ಕೆ 58/-  ರೂಪಾಯಿಗಳು ಹಾಗೂ ಅದಕ್ಕೆ ಮೇಲ್ಪಟ್ಟ ವಾಹನಗಳಿಗೆ 116/- ರೂಪಾಯಿಗಳು.

ಪ್ರತಿ ತಿಂಗಳ ಹುಣ್ಣಿಮೆಯಂದು ಬೆಳಿಗ್ಗೆ 8:00  ರಿಂದ ಮಧ್ಯಾನ್ಹ 1:00 ಗಂಟೆಯವರೆಗೆ ಸತ್ಯನಾರಾಯಣ ಪೂಜೆಯನ್ನು ಹಮ್ಮಿಕೊಳ್ಳಲಾಗುತ್ತದೆ. ಸೇವಾ ಶುಲ್ಕ 158/- ರೂಪಾಯಿಗಳು.

ವಿಶೇಷ ಉತ್ಸವದ ದಿನಗಳು:

ಹೊಸವರ್ಷದ ಆಚರಣೆ.
ಶಿವರಾತ್ರಿ.
ಯುಗಾದಿ.
ಶ್ರೀರಾಮನವಮಿ.
ಪ್ರತಿವರ್ಷ  22ನೇ ಏಪ್ರಿಲ್ ದೇವಾಲಯದ ವಾರ್ಷಿಕೋತ್ಸವ.
ಹನುಮಾನ್ ಜಯಂತಿ.
ಗುರುಪೂರ್ಣಿಮೆ.
ಗೋಕುಲಾಷ್ಟಮಿ.
ವಿನಾಯಕ ಚತುರ್ಥಿ.
ವಿಜಯದಶಮಿ.
ದೀಪಾವಳಿ.
ಕಾರ್ತೀಕ ಪೂರ್ಣಿಮೆ.
ದತ್ತ ಜಯಂತಿ.
ಮುಕ್ಕೋಟಿ ಏಕಾದಶಿ.

ದೇವಾಲಯದ ಸಾಮಾಜಿಕ ಕಾರ್ಯಚಟುವಟಿಕೆಗಳು:

ದೇವಾಲಯದಲ್ಲಿ ಪ್ರತಿದಿನ  ಮಧ್ಯಾನ್ಹ ಆರತಿಯ ನಂತರ ದೇವಾಲಯಕ್ಕೆ ಬರುವ ಎಲ್ಲಾ ಸಾಯಿ ಭಕ್ತರಿಗೂ ಅನ್ನದಾನ ಮಾಡಲಾಗುತ್ತಿದೆ.

ಪ್ರತಿ ವರ್ಷ ಮೂರು ಬಾರಿ ದೇವಾಲಯದ ಆವರಣದಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗುತ್ತಿದೆ.

ದೇವಾಲಯದ ಟ್ರಸ್ಟ್ ನ ವತಿಯಿಂದ ದೇವಾಲಯದ ಆವರಣದಲ್ಲಿ ಉಚಿತ ವೃದ್ಧಾಶ್ರಮ (20 ಜನ ವೃದ್ಧರು) ಹಾಗೂ ಅನಾಥಾಶ್ರಮ (4 ಮಕ್ಕಳು) ವನ್ನು ನಡೆಸಲಾಗುತ್ತಿದೆ.

ದೇವಾಲಯದ ಟ್ರಸ್ಟ್ ಅನಾಥಾಶ್ರಮದ ಮಕ್ಕಳ ವಿದ್ಯಾಭ್ಯಾಸದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡಿದೆ.

ದೇವಾಲಯದ ವಾರ್ಷಿಕೋತ್ಸವದ ದಿನದಂದು ಸುಮಾರು 30,000 ಭಕ್ತರಿಗೆ ಅನ್ನ ಸಂತರ್ಪಣೆಯನ್ನು ಮಾಡಲಾಗುತ್ತಿದೆ. 


ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ:


ಸ್ಥಳ:
ಜವಾಹರ್ ಆಂಗ್ಲ ಮಾಧ್ಯಮಿಕ ಶಾಲೆಯ ಎದುರುಗಡೆ, ಪುಟ್ಟಪರ್ತಿ ರಸ್ತೆ, ಸಾಯಿನಗರ, ಧರ್ಮಾವರಂ.
.

ವಿಳಾಸ:
ಶ್ರೀ ಶಿರಡಿ ಸಾಯಿಬಾಬಾ ಮಂದಿರ
ಶ್ರೀ ಶಿರಡಿ ಸಾಯಿಬಾಬಾ ಸೇವಾ ಸಮಿತಿ ಟ್ರಸ್ಟ್ (ನೋಂದಣಿ),
ಪುಟ್ಟಪರ್ತಿ ರಸ್ತೆ, ಸಾಯಿನಗರ,
ಧರ್ಮಾವರಂ - 515 671,
ಅನಂತಪುರ ಜಿಲ್ಲೆ,
ಆಂಧ್ರಪ್ರದೇಶ, ಭಾರತ

ಸಂಪರ್ಕಿಸಬೇಕಾದ ವ್ಯಕ್ತಿಗಳು:
ಶ್ರೀ.ಬಿ.ಸೂರ್ಯಪ್ರಕಾಶ್/ಶ್ರೀ.ಕೆ.ಎಲ್.ರಾಜಪ್ಪ/ಶ್ರೀ.ಕೆ.ಮುಕುಂದ/ಶ್ರೀ.ಕೆ.ವೀರನಾರಾಯಣ/ಶ್ರೀ.ಜೆ.ಸೂರ್ಯನಾರಾಯಣ/ ಶ್ರೀ.ಡಿ.ಬಿ.ರಾಮರಾವ್ / ಶ್ರೀ.ರಾಮಲಿಂಗಯ್ಯ/ಶ್ರೀ.ಜಿ.ಪ್ರಕಾಶ ಗುಪ್ತಾ/ಶ್ರೀ.ಕೆ.ರಾಮಣ್ಣ.

ದೂರವಾಣಿ ಸಂಖ್ಯೆಗಳು:
+ 91 8559 221 555, 320 296 - ಸ್ಥಿರ ದೂರವಾಣಿ / +91 94419 45857 / +91 98482 96209 /+91 98482 31880 / +91 94409 26433 / +91 93466 61297 



ಮಾರ್ಗಸೂಚಿ: 
ಧರ್ಮಾವರಂ ಬಸ್ ನಿಲ್ದಾಣದಲ್ಲಿ ಇಳಿಯುವುದು. ದೇವಾಲಯವು ಜವಾಹರ್ ಆಂಗ್ಲ ಮಾಧ್ಯಮಿಕ ಶಾಲೆಯ ಎದುರುಗಡೆ ಹಾಗೂ ಧರ್ಮಾವರಂ  ಬಸ್ ನಿಲ್ದಾಣದಿಂದ ಕೇವಲ 5 ನಿಮಿಷಗಳ ನಡಿಗೆಯ ಅಂತರದಲ್ಲಿ ಇರುತ್ತದೆ.


ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment