Tuesday, October 2, 2012

ಅನಂತಪುರ ಜಿಲ್ಲೆಯ ಶಿರಡಿ ಸಾಯಿಬಾಬಾ ಮಂದಿರ - ಶ್ರೀ ಶಿರಡಿ ಸಾಯಿ ದಿವ್ಯ ಮಂದಿರಮ್, 25-640-1, ಯಶೋದ ಕಾನ್ಸೆಪ್ಟ್ ಶಾಲೆ ಎದುರುಗಡೆ, ಪುಟ್ಟಪರ್ತಿ ಮುಖ್ಯರಸ್ತೆ, ಯರ್ರಗುಂಟ, ಧರ್ಮಾವರಂ - 515 671, ಅನಂತಪುರ ಜಿಲ್ಲೆ, ಆಂಧ್ರಪ್ರದೇಶ, ಭಾರತ -  ಕೃಪೆ: ಸಾಯಿಅಮೃತಧಾರಾ.ಕಾಂ

ದೇವಾಲಯದ ವಿಶೇಷತೆಗಳು:

ಈ ದೇವಾಲಯವು ಆಂಧ್ರಪ್ರದೇಶ ರಾಜ್ಯದ ಅನಂತಪುರ ಜಿಲ್ಲೆಯ ಧರ್ಮಾವರಂ ಪಟ್ಟಣದ ಪುಟ್ಟಪರ್ತಿ ಮುಖ್ಯ ರಸ್ತೆಯಲ್ಲಿರುವ ಯರ್ರಗುಂಟದಲ್ಲಿ ಇರುತ್ತದೆ.  ದೇವಾಲಯವು ಯಶೋದ ಕಾನ್ಸೆಪ್ಟ್ ಶಾಲೆ ಎದುರುಗಡೆ ಇದ್ದು ಧರ್ಮಾವರಂ  ಬಸ್ ನಿಲ್ದಾಣದಿಂದ ಸುಮಾರು 3 ಕಿಲೋಮೀಟರ್ ಗಳ ಅಂತರದಲ್ಲಿ ಇರುತ್ತದೆ.

ದೇವಾಲಯವನ್ನು ಸ್ಥಳೀಯ ಗ್ರಾಮ ಪಂಚಾಯಿತಿಯಿಂದ ನೀಡಲಾಗಿರುವ 10 ಸೆಂಟ್ ವಿಸ್ತೀರ್ಣದ ಸ್ವಂತ ಸ್ಥಳದಲ್ಲಿ ನಿರ್ಮಾಣ ಮಾಡಲಾಗಿದೆ.

ದೇವಾಲಯದ ಉದ್ಘಾಟನೆಯನ್ನು 20ನೇ ಫೆಬ್ರವರಿ 2003 ರಂದು ಅನಂತಪುರ ಜಿಲ್ಲೆಯ ಶ್ರೀ.ಸ್ವರೂಪಾನಂದ ಸ್ವಾಮೀಜಿಯವರು ಸಾವಿರಾರು ಸ್ಥಳೀಯ ಸಾಯಿ ಭಕ್ತರ  ಸಮ್ಮುಖದಲ್ಲಿ  ನೆರವೇರಿಸಿರುತ್ತಾರೆ.

ಶ್ರೀ.ಎಂ.ಸಂಜೀವಪ್ಪನವರು ದೇವಾಲಯದ ಸಂಸ್ಥಾಪಕ ಅಧ್ಯಕ್ಷರಾಗಿರುತ್ತಾರೆ. ಇವರು ದೇವಾಲಯದ ದಿನನಿತ್ಯದ ಆಗುಹೋಗುಗಳನ್ನು ಮತ್ತು ಅಭಿವೃದ್ಧಿ ಕಾರ್ಯಗಳನ್ನು ಬಹಳ  ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ.

ದೇವಾಲಯದ ಗರ್ಭಗುಡಿಯಲ್ಲಿ 2 ಅಡಿ ಎತ್ತರದ ಸುಂದರ ಅಮೃತಶಿಲೆಯ ಸಾಯಿಬಾಬಾರವರ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ.

ಸಾಯಿಬಾಬಾರವರ ವಿಗ್ರಹದ ಎದುರುಗಡೆ ಶಿರಡಿಯಲ್ಲಿ ಇರುವಂತೆ ಕಪ್ಪುಶಿಲೆಯ ನಂದಿಯ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ.

ಅಲ್ಲದೇ, ಕಪ್ಪು ಶಿಲೆಯ ಗಣಪತಿ, ಶಿವಲಿಂಗ ಹಾಗೂ ನವಗ್ರಹ ದೇವರುಗಳನ್ನು ಕೂಡ ಮಂದಿರದ ಆವರಣದಲ್ಲಿ ಪ್ರತಿಷ್ಟಾಪಿಸಲಾಗಿದೆ.











ದೇವಾಲಯದ ಕಾರ್ಯಚಟುವಟಿಕೆಗಳು:

ದಿನನಿತ್ಯದ ಕಾರ್ಯಕ್ರಮಗಳು:

ದೇವಾಲಯದ ಸಮಯ:

ಬೆಳಿಗ್ಗೆ        : 6:00  ರಿಂದ 12:00 ರವರೆಗೆ.
ಸಂಜೆ        : 6:00  ರಿಂದ ರಾತ್ರಿ 10:00 ರವರೆಗೆ.

ಆರತಿಯ ಸಮಯ:

ಕಾಕಡಾ ಆರತಿ : 6:00 ಗಂಟೆ.
ಮಧ್ಯಾನ್ಹ ಆರತಿ:12:00 ಗಂಟೆ.
ಧೂಪಾರತಿ     : 6:00 ಗಂಟೆ
ಶೇಜಾರತಿ      : 10:00 ಗಂಟೆ.

ಪ್ರತಿದಿನ ಬೆಳಿಗ್ಗೆ 6:30 ಕ್ಕೆ ಸಾಯಿಬಾಬಾ ಹಾಗೂ ನವಗ್ರಹ ದೇವರುಗಳಿಗೆ ಅರ್ಚನೆ, ಪಂಚಾಮೃತ ಅಭಿಷೇಕ ಮಾಡಲಾಗುತ್ತದೆ. ಯಾವುದೇ ಸೇವಾ ಶುಲ್ಕವನ್ನು ನಿಗದಿಪಡಿಸಲಾಗಿರುವುದಿಲ್ಲ.

ವಿಶೇಷ ಉತ್ಸವದ ದಿನಗಳು:

ಶಿವರಾತ್ರಿ.
ದೇವಾಲಯದ ವಾರ್ಷಿಕೋತ್ಸವ ಪ್ರತಿ ವರ್ಷ 23ನೇ ನವೆಂಬರ್.
ಗುರುಪೂರ್ಣಿಮೆ.
ವಿಜಯದಶಮಿ.


ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ:


ಸ್ಥಳ:
ಯಶೋದ ಕಾನ್ಸೆಪ್ಟ್ ಶಾಲೆ ಎದುರುಗಡೆ, ಪುಟ್ಟಪರ್ತಿ ಮುಖ್ಯರಸ್ತೆ, ಯರ್ರಗುಂಟ, ಧರ್ಮಾವರಂ.


ವಿಳಾಸ:
ಶ್ರೀ ಶಿರಡಿ ಸಾಯಿ ದಿವ್ಯ ಮಂದಿರಮ್
25-640-1, ಯಶೋದ ಕಾನ್ಸೆಪ್ಟ್ ಶಾಲೆ ಎದುರುಗಡೆ,
ಪುಟ್ಟಪರ್ತಿ ಮುಖ್ಯರಸ್ತೆ, ಯರ್ರಗುಂಟ,
ಧರ್ಮಾವರಂ - 515 671,
ಅನಂತಪುರ ಜಿಲ್ಲೆ,
ಆಂಧ್ರಪ್ರದೇಶ, ಭಾರತ

ಸಂಪರ್ಕಿಸಬೇಕಾದ ವ್ಯಕ್ತಿ:
ಶ್ರೀ.ಎಂ.ಸಂಜೀವಪ್ಪ

ದೂರವಾಣಿ ಸಂಖ್ಯೆ:
+ 91 88975 04532


ಮಾರ್ಗಸೂಚಿ: 
ಧರ್ಮಾವರಂ ಬಸ್ ನಿಲ್ದಾಣದಲ್ಲಿ ಇಳಿಯುವುದು. ದೇವಾಲಯವು ಯಶೋದ ಕಾನ್ಸೆಪ್ಟ್ ಶಾಲೆಯ ಎದುರುಗಡೆ ಹಾಗೂ ಧರ್ಮಾವರಂ  ಬಸ್ ನಿಲ್ದಾಣದಿಂದ ಸುಮಾರು 3 ಕಿಲೋಮೀಟರ್ ಗಳ ಅಂತರದಲ್ಲಿ ಇರುತ್ತದೆ.

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment