Tuesday, September 25, 2012

ಜಾರ್ಖಂಡ್ ರಾಜ್ಯದ ಶಿರಡಿ ಸಾಯಿಬಾಬಾ ಮಂದಿರ - ಸಿದ್ಧಿದಾತ ಸಾಯಿ ಮಂದಿರ, ಎಂಎ-65, ಆದಿತ್ಯಪುರ - 1, ಜಮಶೆಡ್ ಪುರ -  831 013, ಜಾರ್ಖಂಡ್, ಭಾರತ -  ಕೃಪೆ: ಸಾಯಿಅಮೃತಧಾರಾ.ಕಾಂ

ದೇವಾಲಯದ ವಿಶೇಷತೆಗಳು:

ಈ ದೇವಾಲಯವು ಜಾರ್ಖಂಡ್ ರಾಜ್ಯದ ಜಮಶೆಡ್ ಪುರ ಪಟ್ಟಣದ ಆದಿತ್ಯಪುರ-ಕಂಡ್ರಾ ರಸ್ತೆಯಲ್ಲಿರುವ ಕಾಂತಾ ಮೈದಾನದ ಎದುರುಗಡೆ ಹಾಗೂ ಆಶಿಯಾನಾ ಟ್ರೇಡ್ ಸೆಂಟರ್ ನಿಂದ ಸುಮಾರು 1/4 ಕಿಲೋಮೀಟರ್ ದೂರದಲ್ಲಿ ಇರುತ್ತದೆ.

ದೇವಾಲಯದ ಭೂಮಿಪೂಜೆಯನ್ನು ಜನವರಿ 2007 ನೇ ಇಸವಿಯಲ್ಲಿ ನೆರವೇರಿಸಲಾಯಿತು.

ದೇವಾಲಯವನ್ನು ಸಂಸ್ಥಾಪಕರಾದ ಶ್ರೀ.ಮನೋಹರ್ ಚಬ್ರಾರವರ ವಸತಿ ಸಂಕೀರ್ಣದ ಪಕ್ಕದಲ್ಲಿರುವ 30 x 30 ಖಾಲಿ ಜಾಗದಲ್ಲಿ ನಿರ್ಮಾಣ ಮಾಡಲಾಗಿದೆ.

ದೇವಾಲಯದ ಉದ್ಘಾಟನೆಯನ್ನು 13ನೇ ಏಪ್ರಿಲ್ 2008 ರಂದು ಸಾವಿರಾರು ಸ್ಥಳೀಯ ಸಾಯಿ ಭಕ್ತರ ಸಮ್ಮುಖದಲ್ಲಿ ದೇವಾಲಯದ ಸಂಸ್ಥಾಪಕರಾದ ಶ್ರೀ.ಮನೋಹರ್ ಚಬ್ರಾರವರು ನೆರವೇರಿಸಿರುತ್ತಾರೆ.

ಶ್ರೀ.ಮನೋಹರ್ ಚಬ್ರಾರವರು ದೇವಾಲಯದ ಸಂಸ್ಥಾಪಕ ಅಧ್ಯಕ್ಷರಾಗಿರುತ್ತಾರೆ. ಇವರೇ ಸ್ವತಃ ದೇವಾಲಯದ ದಿನನಿತ್ಯದ ಆಗುಹೋಗುಗಳನ್ನು ಮತ್ತು ಅಭಿವೃದ್ಧಿ ಕಾರ್ಯಗಳನ್ನು ಬಹಳ  ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ.

ದೇವಾಲಯದಲ್ಲಿ 3 ಅಡಿ ಎತ್ತರದ ಸಿಮೆಂಟ್ ನಿಂದ ಮಾಡಲ್ಪಟ್ಟ ಸುಂದರ ಸಾಯಿಬಾಬಾರವರ ವಿಗ್ರಹವನ್ನು ಸ್ಥಾಪಿಸಲಾಗಿದೆ.







ದೇವಾಲಯದ ಕಾರ್ಯಚಟುವಟಿಕೆಗಳು:

ದಿನನಿತ್ಯದ ಕಾರ್ಯಕ್ರಮಗಳು:

ದೇವಾಲಯದ ಸಮಯ:

ಬೆಳಿಗ್ಗೆ : 6:00 ರಿಂದ ರಾತ್ರಿ 9:30 ರವರೆಗೆ.

ಆರತಿಯ ಸಮಯ:

ಕಾಕಡಾ ಆರತಿ :06:00 ಗಂಟೆ
ಛೋಟಾ ಆರತಿ :07:30 ಗಂಟೆ
ಮಧ್ಯಾನ್ಹ ಆರತಿ:12:00 ಗಂಟೆ
ಧೂಪಾರತಿ     :06:00 ಗಂಟೆ
ಶೇಜಾರತಿ      :09:15 ಗಂಟೆ


ಪ್ರತಿ ತಿಂಗಳ ಮೊದಲ ಹಾಗೂ ಕೊನೆಯ ಗುರುವಾರಗಳಂದು ಸಾಯಿಬಾಬಾರವರ ವಿಗ್ರಹಕ್ಕೆ ಮಂಗಳ ಸ್ನಾನವನ್ನು ಬೆಳಿಗ್ಗೆ 7:00 ಗಂಟೆಗೆ ನೆರವೇರಿಸಲಾಗುತ್ತದೆ.

ಪ್ರತಿ ಗುರುವಾರ ಸಂಜೆ 6:00 ಗಂಟೆಯಿಂದ ರಾತ್ರಿ 9:00 ಗಂಟೆಯವರೆಗೆ ಸಾಯಿ ಭಜನೆ/ಕೀರ್ತನೆಗಳು ನೆಡೆಯುತ್ತವೆ. ಕಾರ್ಯಕ್ರಮದ ಕೊನೆಯಲ್ಲಿ ಎಲ್ಲಾ ಸಾಯಿ ಭಕ್ತರಿಗೂ ಮಹಾಪ್ರಸಾದವನ್ನು ವಿತರಿಸಲಾಗುತ್ತದೆ.

ಪ್ರತಿ ಗುರುವಾರ ಹಾಗೂ ಭಾನುವಾರಗಳಂದು ಮಂದಿರಕ್ಕೆ ಬರುವ ಎಲ್ಲಾ ಸಾಯಿ ಭಕ್ತರಿಗೂ ಮಹಾಪ್ರಸಾದವನ್ನು ವಿತರಿಸಲಾಗುತ್ತದೆ.


ವಿಶೇಷ ಉತ್ಸವದ ದಿನಗಳು:

ಪ್ರತಿವರ್ಷದ 13ನೇ ಏಪ್ರಿಲ್ ದೇವಾಲಯದ ವಾರ್ಷಿಕೋತ್ಸವ.
ಗುರುಪೂರ್ಣಿಮೆ.
ವಿಜಯದಶಮಿ.
ಹೋಳಿ ಹುಣ್ಣಿಮೆಯ ಹಿಂದಿನ ಭಾನುವಾರದಂದು ಹೋಳಿ ಮಿಲನ ಉತ್ಸವ.
ಪ್ರತಿ ವರ್ಷದ 15ನೇ ಆಗಸ್ಟ್ ಅಖಂಡ ಸಾಯಿ ಸಚ್ಚರಿತ್ರೆಯ ಪಾರಾಯಣ.
ಪ್ರತಿ ವರ್ಷದ 31ನೇ ಡಿಸೆಂಬರ್ ಹೊಸ ವರ್ಷದ ಆಚರಣೆ.


ಸಾಮಾಜಿಕ ಕಾರ್ಯಚಟುವಟಿಕೆಗಳು:

ಪ್ರತಿ ಭಾನುವಾರ ಬೆಳಿಗ್ಗೆ 9:00 ಗಂಟೆಯಿಂದ ಮಧ್ಯಾನ್ಹ 2:00 ಗಂಟೆಯವರೆಗೆ ಪರಿಣತ ಹೋಮಿಯೋಪತಿ ವೈದ್ಯರು ರೋಗಿಗಳನ್ನು ತಪಾಸಣೆ  ಮಾಡಿ ಅವರಿಗೆ ಉಚಿತ ಎಲೆಕ್ಟ್ರೋ ಹೋಮಿಯೋಪತಿ ಚಿಕಿತ್ಸೆಯನ್ನು ನೀಡುವ ವ್ಯವಸ್ಥೆಯನ್ನು ಮಾಡಲಾಗಿದೆ. 

ಪ್ರತಿ ಭಾನುವಾರ ಸಂಜೆ ದೇವಾಲಯದ "ಸಾಯಿ ಭಕ್ತ ಮಂಡಳ" ಭಜನ ತಂಡದಿಂದ ನಗರದ ವಿವಿಧ ಸಾಯಿ ಭಕ್ತರ ಮನೆಗಳಲ್ಲಿ ಸಾಯಿ ಭಜನೆ / ಪ್ರವಚನಗಳ ಮೂಲಕ  ಸಾಯಿ ಪ್ರಚಾರವನ್ನು ಹಮ್ಮಿಕೊಳ್ಳಲಾಗುತ್ತಿದೆ.

ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ:


ಸ್ಥಳ:
ಕಾಂತಾ ಮೈದಾನದ ಎದುರುಗಡೆ, ಆಶಿಯಾನಾ ಟ್ರೇಡ್ ಸೆಂಟರ್ ನ ಹತ್ತಿರ, ಆದಿತ್ಯಪುರ-ಕಂಡ್ರಾ ರಸ್ತೆ.
.

ವಿಳಾಸ:
ಸಿದ್ಧಿದಾತ ಸಾಯಿ ಮಂದಿರ,
ಎಂಎ-65, ಆದಿತ್ಯಪುರ - 1,
ಜಮಶೆಡ್ ಪುರ -  831 013,
ಜಾರ್ಖಂಡ್, ಭಾರತ

ಸಂಪರ್ಕಿಸಬೇಕಾದ ವ್ಯಕ್ತಿಗಳು:
ಶ್ರೀ.ಮನೋಹರ್ ಚಬ್ರಾ - ಅಧ್ಯಕ್ಷರು

ದೂರವಾಣಿ ಸಂಖ್ಯೆಗಳು:
+91 93343 63851 / +91 657 6542540 (ಸ್ಥಿರ ದೂರವಾಣಿ)


ಇ ಮೇಲ್ ವಿಳಾಸ:
ashokaartpress@rediffmail.com


ಮಾರ್ಗಸೂಚಿ:
ಈ ದೇವಾಲಯವು ಜಾರ್ಖಂಡ್ ರಾಜ್ಯದ ಜಮಶೆಡ್ ಪುರ ಪಟ್ಟಣದ ಆದಿತ್ಯಪುರ-ಕಂಡ್ರಾ ರಸ್ತೆಯಲ್ಲಿರುವ ಕಾಂತಾ ಮೈದಾನದ ಎದುರುಗಡೆ ಹಾಗೂ ಆಶಿಯಾನಾ ಟ್ರೇಡ್ ಸೆಂಟರ್ ನಿಂದ ಸುಮಾರು 1/4 ಕಿಲೋಮೀಟರ್ ದೂರದಲ್ಲಿ ಇರುತ್ತದೆ.

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment