Tuesday, October 2, 2012

ಅನಂತಪುರ ಜಿಲ್ಲೆಯ ಶಿರಡಿ ಸಾಯಿಬಾಬಾ ಮಂದಿರ - ಸಾಯಿ ಸ್ವರೂಪ್ ಶಿರಡಿ ಸಾಯಿ ಮಂದಿರ, ಸಾಯಿನಗರ, ಸಿದ್ಧಯ್ಯ ಗುಟ್ಟ, ಆರ್ ಅಂಡ್ ಬಿ ಇನ್ಸ್ಪೆಕ್ಷನ್ ಬಂಗ್ಲೆ ಹತ್ತಿರ,  ಧರ್ಮಾವರಂ - 515 671, ಅನಂತಪುರ ಜಿಲ್ಲೆ, ಆಂಧ್ರಪ್ರದೇಶ, ಭಾರತ -  ಕೃಪೆ: ಸಾಯಿಅಮೃತಧಾರಾ.ಕಾಂ

ದೇವಾಲಯದ ವಿಶೇಷತೆಗಳು:

ಈ ದೇವಾಲಯವು ಆಂಧ್ರಪ್ರದೇಶ ರಾಜ್ಯದ ಅನಂತಪುರ ಜಿಲ್ಲೆಯ ಧರ್ಮಾವರಂ ಪಟ್ಟಣದ ಸಿದ್ಧಯ್ಯ ಗುಟ್ಟ ರಸ್ತೆಯಲ್ಲಿರುವ ಸಾಯಿನಗರದಲ್ಲಿ ಇರುತ್ತದೆ.  ದೇವಾಲಯವು ಆರ್ ಅಂಡ್ ಬಿ ಇನ್ಸ್ಪೆಕ್ಷನ್ ಬಂಗ್ಲೆ ಹತ್ತಿರವಿದ್ದು ಧರ್ಮಾವರಂ  ಬಸ್ ನಿಲ್ದಾಣದಿಂದ ಕೇವಲ 5 ನಿಮಿಷಗಳ ನಡಿಗೆಯ ಅಂತರದಲ್ಲಿ ಇರುತ್ತದೆ.

ದೇವಾಲಯವನ್ನು ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯದ ಟ್ರಸ್ಟ್ ನವರು ದಾನವಾಗಿ ನೀಡಿರುವ ಸ್ಥಳದಲ್ಲಿ ನಿರ್ಮಾಣ ಮಾಡಲಾಗಿದೆ.

ದೇವಾಲಯದ ಉದ್ಘಾಟನೆಯನ್ನು 17ನೇ ಮಾರ್ಚ್ 2003 ರಂದು ಅನಂತಪುರ ಜಿಲ್ಲೆಯ ಪರಿಗಿಯ ಅವಧೂತರಾದ ಶ್ರೀ.ಚೈತನ್ಯ ಸ್ವಾಮೀಜಿಯವರು ಸಾವಿರಾರು ಸ್ಥಳೀಯ ಸಾಯಿ ಭಕ್ತರ  ಸಮ್ಮುಖದಲ್ಲಿ  ನೆರವೇರಿಸಿರುತ್ತಾರೆ.

ಶ್ರೀ.ಗುರು ನಾರಾಯಣ ಶರ್ಮರವರು ದೇವಾಲಯದ ಸಂಸ್ಥಾಪಕ ಅಧ್ಯಕ್ಷರಾಗಿರುತ್ತಾರೆ. ಇವರು ದೇವಾಲಯದ ದಿನನಿತ್ಯದ ಆಗುಹೋಗುಗಳನ್ನು ಮತ್ತು ಅಭಿವೃದ್ಧಿ ಕಾರ್ಯಗಳನ್ನು ಬಹಳ  ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ.

ದೇವಾಲಯದ ಗರ್ಭಗುಡಿಯಲ್ಲಿ 3 ಅಡಿ ಎತ್ತರದ ಸುಂದರ ಅಮೃತಶಿಲೆಯ ಸಾಯಿಬಾಬಾರವರ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ.

ಸಾಯಿಬಾಬಾರವರ ವಿಗ್ರಹದ ಎದುರುಗಡೆ ಶಿರಡಿಯಲ್ಲಿ ಇರುವಂತೆ ಅಮೃತಶಿಲೆಯ ನಂದಿಯ ವಿಗ್ರಹವನ್ನು ಮತ್ತು ಪವಿತ್ರ ಪಾದುಕೆಗಳನ್ನು ಪ್ರತಿಷ್ಟಾಪಿಸಲಾಗಿದೆ.

ಪ್ರತಿ ಗುರುವಾರ ಹಾಗೂ ವಿಶೇಷ ಉತ್ಸವದ ದಿನಗಳಂದು ಪಲ್ಲಕ್ಕಿ ಉತ್ಸವಕ್ಕೆ ಬಳಸಲಾಗುವ ಮರದ ಪಲ್ಲಕ್ಕಿಯನ್ನು ಕೂಡ ಮಂದಿರದ ಒಳಗಡೆ ನೋಡಬಹುದು.







ದೇವಾಲಯದ ಕಾರ್ಯಚಟುವಟಿಕೆಗಳು:

ದಿನನಿತ್ಯದ ಕಾರ್ಯಕ್ರಮಗಳು:

ದೇವಾಲಯದ ಸಮಯ:

ಬೆಳಿಗ್ಗೆ        : 7:30 ರಿಂದ 9:30 ರವರೆಗೆ.
ಮಧ್ಯಾನ್ಹ    : 12:30 ರಿಂದ 1:00 ರವರೆಗೆ.
ಸಂಜೆ         : 6:30 ರಿಂದ ರಾತ್ರಿ 8:30 ರವರೆಗೆ.

ಆರತಿಯ ಸಮಯ:

ಕಾಕಡಾ ಆರತಿ : 7:30 ಗಂಟೆ.
ಮಧ್ಯಾನ್ಹ ಆರತಿ: 12:30 ಗಂಟೆ.
ಧೂಪಾರತಿ     : 6:30 ಗಂಟೆ.
ಶೇಜಾರತಿ      : 8:30 ಗಂಟೆ.

ಪ್ರತಿದಿನ ಬೆಳಿಗ್ಗೆ 7:30 ಕ್ಕೆ ಸಾಯಿಬಾಬಾರವರ ಅಮೃತಶಿಲೆಯ ವಿಗ್ರಹಕ್ಕೆ ಪಂಚಾಮೃತ ಅಭಿಷೇಕವನ್ನು ಮಾಡಲಾಗುತ್ತದೆ. ಸೇವಾ ಶುಲ್ಕ 125/- ರೂಪಾಯಿಗಳು.

ಪ್ರತಿದಿನ ಸಾಯಿಬಾಬಾರವರಿಗೆ ಅರ್ಚನೆಯನ್ನು ಮಾಡಲಾಗುತ್ತದೆ. ಸೇವಾ ಶುಲ್ಕ 10/- ರೂಪಾಯಿಗಳು.

ಪ್ರತಿ ಗುರುವಾರದಂದು ಹಾಗೂ ವಿಶೇಷ ಉತ್ಸವದ ದಿನಗಳಂದು ಸಾಯಂಕಾಲ 6:45 ರಿಂದ 7:00 ರವರೆಗೆ ಪಲ್ಲಕ್ಕಿ ಉತ್ಸವವನ್ನು ನಡೆಸಲಾಗುತ್ತದೆ.


ವಿಶೇಷ ಉತ್ಸವದ ದಿನಗಳು:

ಗುರುಪೂರ್ಣಿಮೆ - ಅನ್ನದಾನವನ್ನು ಹಮ್ಮಿಕೊಳ್ಳಲಾಗುತ್ತದೆ.


ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ:


ಸ್ಥಳ:
ಆರ್ ಅಂಡ್ ಬಿ ಇನ್ಸ್ಪೆಕ್ಷನ್ ಬಂಗ್ಲೆ ಹತ್ತಿರ, ಸಿದ್ಧಯ್ಯ ಗುಟ್ಟ, ಸಾಯಿನಗರ, ಧರ್ಮಾವರಂ.

ವಿಳಾಸ:
ಸಾಯಿ ಸ್ವರೂಪ್ ಶಿರಡಿ ಸಾಯಿ ಮಂದಿರ
ಸಾಯಿನಗರ, ಸಿದ್ಧಯ್ಯ ಗುಟ್ಟ,
ಆರ್ ಅಂಡ್ ಬಿ ಇನ್ಸ್ಪೆಕ್ಷನ್ ಬಂಗ್ಲೆ ಹತ್ತಿರ, 
ಧರ್ಮಾವರಂ - 515 671,
ಅನಂತಪುರ ಜಿಲ್ಲೆ,
ಆಂಧ್ರಪ್ರದೇಶ, ಭಾರತ

ಸಂಪರ್ಕಿಸಬೇಕಾದ ವ್ಯಕ್ತಿಗಳು:
ಶ್ರೀ.ಗುರು ನಾರಾಯಣ್ ಶರ್ಮ 

ದೂರವಾಣಿ ಸಂಖ್ಯೆಗಳು:
+ 91 80198 67690  

ಮಾರ್ಗಸೂಚಿ: 
ಧರ್ಮಾವರಂ ಬಸ್ ನಿಲ್ದಾಣದಲ್ಲಿ ಇಳಿಯುವುದು. ದೇವಾಲಯವು ಆರ್ ಅಂಡ್ ಬಿ ಇನ್ಸ್ಪೆಕ್ಷನ್ ಬಂಗ್ಲೆ ಹತ್ತಿರವಿರುತ್ತದೆ ಹಾಗೂ ಧರ್ಮಾವರಂ  ಬಸ್ ನಿಲ್ದಾಣದಿಂದ ಕೇವಲ 5 ನಿಮಿಷಗಳ ನಡಿಗೆಯ ಅಂತರದಲ್ಲಿ ಇರುತ್ತದೆ.

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment