Friday, September 7, 2012

ಬೆಂಗಳೂರಿನ ಶಿರಡಿ ಸಾಯಿಬಾಬಾ ಮಂದಿರ - ಸಾಯಿ ಸ್ಮರಣ್ ಭಜನ ಮಂಡಳಿ, "ಸಾಯಿ ಸಂಸಾರ್", 1/2, 1ನೇ ಬ್ಲಾಕ್, ತ್ಯಾಗರಾಜನಗರ, ಸಾಯಿ ಆಧ್ಯಾತ್ಮಿಕ ಕೇಂದ್ರದ ಹತ್ತಿರ, ಬೆಂಗಳೂರು - 560 028, ಕರ್ನಾಟಕ, ಭಾರತ -  ಕೃಪೆ: ಸಾಯಿಅಮೃತಧಾರಾ.ಕಾಂ

ದೇವಾಲಯದ ವಿಶೇಷತೆಗಳು:

ಈ ದೇವಾಲಯವು ಕರ್ನಾಟಕ ರಾಜ್ಯದ ಬೆಂಗಳೂರಿನ ತ್ಯಾಗರಾಜನಗರ ಬಡಾವಣೆಯಲ್ಲಿದೆ. ದೇವಾಲಯವು ನರಸಿಂಹರಾಜ ಕಾಲೋನಿಯ ಬಸ್ ನಿಲ್ದಾಣದಿಂದ ನಡಿಗೆಯ ಅಂತರದಲ್ಲಿದೆ.

ಈ ದೇವಾಲಯವನ್ನು ಭಜನ ಮಂಡಳಿಯ ಸದಸ್ಯರ ಹಣಕಾಸಿನ ನೆರವಿನೊಂದಿಗೆ ನಿರ್ಮಿಸಲಾಯಿತು.

ದೇವಾಲಯದ ಉದ್ಘಾಟನೆಯನ್ನು 15ನೇ ಮಾರ್ಚ್ 2007 ರಂದು ಬೆಂಗಳೂರಿನ ರಾಮಕೃಷ್ಣ ಯೋಗಾಶ್ರಮದ ಶ್ರೀ.ಯೋಗೇಶ್ವರಾನಂದ ಸ್ವಾಮೀಜಿಯವರು ಸಾವಿರಾರು ಸಾಯಿ ಭಕ್ತರ ಸಮ್ಮುಖದಲ್ಲಿ ನೆರವೇರಿಸಿರುತ್ತಾರೆ. ಬೆಂಗಳೂರಿನ ಚಿನ್ಮಯ ಮಿಷನ್ ನ ಶ್ರೀ.ಬ್ರಹ್ಮಾನಂದ ಸ್ವಾಮೀಜಿಯವರು 16ನೇ ಮಾರ್ಚ್ 2007 ರಂದು ಪ್ರವಚನ ಕಾರ್ಯಕ್ರಮವನ್ನು ನೀಡಿದರು.

ಶ್ರೀ.ವಿ.ಪಿ.ಕಾಮತ್ ರವರು ದೇವಾಲಯದ ಸಂಸ್ಥಾಪಕ ಅಧ್ಯಕ್ಷರಾಗಿರುತ್ತಾರೆ. ಶ್ರೀ.ವಿ.ಪಿ.ಕಾಮತ್ ಹಾಗೂ ಅವರ ಧರ್ಮಪತ್ನಿ ಶ್ರೀಮತಿ.ವಂದನಾ ಕಾಮತ್ ರವರು ದೇವಾಲಯದ ದಿನನಿತ್ಯದ ಆಗುಹೋಗುಗಳನ್ನು ಮತ್ತು ಅಭಿವೃದ್ಧಿ ಕಾರ್ಯಗಳನ್ನು ಬಹಳ  ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ.

ದೇವಾಲಯದಲ್ಲಿ  ಪುಟ್ಟದಾದ ಅಮೃತಶಿಲೆಯ ಸಾಯಿಬಾಬಾರವರ ವಿಗ್ರಹವನ್ನು ಸ್ಥಾಪಿಸಲಾಗಿದೆ. ಸಾಯಿಬಾಬಾರವರ ವಿಗ್ರಹದ ಎದುರುಗಡೆ ಇರುವಂತೆ ಅಮೃತಶಿಲೆಯ ಪಾದುಕೆಗಳನ್ನು ಸ್ಥಾಪಿಸಲಾಗಿದೆ.

ದೇವಾಲಯದ ಎಡಭಾಗದಲ್ಲಿ ಅಮೃತಶಿಲೆಯ ದತ್ತಾತ್ರೇಯ ವಿಗ್ರಹ ಸ್ಥಾಪಿಸಲಾಗಿದೆ. ಅಲ್ಲದೇ, ದ್ವಾರಕಾಮಾಯಿ ಸಾಯಿಬಾಬಾರವರ ಆಳೆತ್ತರದ ಭಾವಚಿತ್ರ ಮತ್ತು ನಂದಾದೀಪವನ್ನು ಸಹ ಇರಿಸಲಾಗಿದೆ. 

ದೇವಾಲಯದ ಬಲಭಾಗದಲ್ಲಿ ಕಲ್ಲಿನ ಮೇಲೆ ಕುಳಿತಿರುವ ಸಾಯಿಬಾಬಾರವರ ಆಳೆತ್ತರದ ಭಾವಚಿತ್ರವನ್ನು ತೂಗುಹಾಕಲಾಗಿದೆ.

ಸಾಯಿಬಾಬಾರವರ ಅಮೃತಶಿಲೆಯ ವಿಗ್ರಹದ ಎದುರು ಭಾಗದಲ್ಲಿ ಕಪ್ಪು ಶಿಲೆಯ ಗಣೇಶ, ಶಿವಲಿಂಗ ಮತ್ತು ಈಶ್ವರ ದೇವರುಗಳ ವಿಗ್ರಹಗಳನ್ನು ಸ್ಥಾಪಿಸಲಾಗಿದೆ.

ಶಿರಡಿಯ ಅತ್ಯಂತ ಪುರಾತನ ಚಿತ್ರಗಳು, ಸಾಯಿಬಾಬಾರವರ ಹಳೆಯ ಚಿತ್ರಗಳು, ಸಾಯಿ ಮಹಾಭಕ್ತರ ಚಿತ್ರಗಳು, ಮತ್ತು ಸಾಯಿಬಾಬಾರವರು ಉಪಯೋಗಿಸುತ್ತಿದ್ದ ವಸ್ತುಗಳ ಚಿತ್ರಗಳನ್ನು ದೇವಾಲಯದಲ್ಲಿ ತೂಗುಹಾಕಲಾಗಿದೆ.

ಪ್ರತಿ ಗುರುವಾರದಂದ ಪಲ್ಲಕ್ಕಿ ಉತ್ಸವದ ಸಂದರ್ಭದಲ್ಲಿ ಬಳಸಲಾಗುವ ಮರದ ಪಲ್ಲಕ್ಕಿಯನ್ನು ಕೂಡ ದೇವಾಲಯದಲ್ಲಿ ನೋಡಬಹುದು.










ದೇವಾಲಯದ ಕಾರ್ಯಚಟುವಟಿಕೆಗಳು:

ದಿನನಿತ್ಯದ ಕಾರ್ಯಕ್ರಮಗಳು:

ದೇವಾಲಯದ ಸಮಯ:

ಬೆಳಿಗ್ಗೆ : 6:30 ರಿಂದ 12:00.
ಸಂಜೆ : 6:00  ರಿಂದ 8:00.

ಪ್ರತಿ ವರ್ಷ ಮಹಾ ಶಿವರಾತ್ರಿ ಹಾಗೂ ಕಾರ್ತೀಕ ಮಾಸದ ಸಂದರ್ಭದಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ.

ಪ್ರತಿ ವರ್ಷ ಶ್ರೀರಾಮನವಮಿ, ಗುರುಪೂರ್ಣಿಮಾ ಮತ್ತು ವಿಜಯದಶಮಿಯ ಸಂದರ್ಭಗಳಲ್ಲಿ ಸಾಮೊಹಿಕ ಅಭಿಷೇಕ ಹಾಗೂ ಪ್ರಖ್ಯಾತ ಭಜನ ಗಾಯಕರುಗಳಿಂದ ವಿಶೇಷ ಭಜನೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ.

ವಿಶೇಷ ಉತ್ಸವದ ದಿನಗಳು:

ಶ್ರೀರಾಮನವಮಿ.
ಗುರುಪೂರ್ಣಿಮೆ.
ವಿಜಯದಶಮಿ.

ಸಾಮಾಜಿಕ ಕಾರ್ಯಚಟುವಟಿಕೆಗಳು:

ದೇವಾಲಯದ ವತಿಯಿಂದ ನಿಯಮಿತವಾಗಿ ಬಡ ಶಾಲಾ ವಿದ್ಯಾರ್ಥಿಗಳ ಪುಸ್ತಕ ಹಾಗೂ ಶಾಲಾ ಶುಲ್ಕವನ್ನು ಭರಿಸಲಾಗುತ್ತಿದೆ.

ದೇವಾಲಯಕ್ಕೆ ಬರುವ ಶ್ರೀ.ಜಗದೀಶ್ ಬಂಗೇರಾ ಎಂಬ ಬಡ ಸಾಯಿಭಕ್ತರ ಎರಡು ತಿಂಗಳ ಮಗುವಿನ ಹೃದಯ ಶಸ್ತ್ರಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಈ ದೇವಾಲಯದ ಸದಸ್ಯರು ಹಾಗೂ ಅವರ ಸ್ನೇಹಿತರು ಭರಿಸಿರುತ್ತಾರೆ. ಸಾಯಿಬಾಬಾರವರ ಆಶೀರ್ವಾದದಿಂದ ಮಗುವು ಸಂಪೂರ್ಣ ಗುಣಮುಖವಾಗಿ ಆರೋಗ್ಯದಿಂದಿರುತ್ತದೆ.

ಈ ಮಂದಿರಕ್ಕೆ ನಿಯಮಿತವಾಗಿ ಬರುತ್ತಿದ್ದ ಶ್ರೀ.ವಿಶ್ವನಾಥ್ ಆಲಿಯಾಸ್ ಕಪೂರ್ ಜಿ ಎಂಬ ಸಾಯಿ ಭಕ್ತರು 29ನೇ ನವೆಂಬರ್ 2013 ರಂದು ತಮ್ಮ ಆರ್ಥಿಕ ಹಾಗೂ ಇತರ ವೈಯಕ್ತಿಕ ಕಾರಣಗಳಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡರು. ಅವರು ಬಹಳ ವಯಸ್ಸಾಗಿ ಹಾಗೂ ಖಾಯಿಲೆಯಿಂದ ಬಳಲುತ್ತಿದ್ದ ತಾಯಿ ಹಾಗೂ ತಂಗಿಯನ್ನು ಬಿಟ್ಟು ಹೊರಟು ಹೋದರು. ಅವರಿಬ್ಬರನ್ನು ನೋಡಿಕೊಳ್ಳಲು ಯಾರೂ ದಿಕ್ಕಿರಲಿಲ್ಲ. ಅವರ ಹಿರಿಯ ಅಣ್ಣನವರು ಈ ಹಿಂದೆಯೇ ಸಂಸಾರವನ್ನು ತ್ಯಜಿಸಿ ಬೇರೆ ಕಡೆಯಲ್ಲಿ ವಾಸಿಸುತ್ತಿದ್ದರು. ಶ್ರೀ.ವಿಶ್ವನಾಥ್ ರವರು ದಯನೀಯವಾಗಿ ಸಾವನ್ನಪ್ಪಿದ ಮೇಲೆ ಅವರ ದೇಹವನ್ನು ಪಡೆಯಲು ಸಹ ಯಾರೂ ಮುಂದೆ ಬರಲಿಲ್ಲ. ಆಗ ಸಾಯಿ ಸ್ಮರಣ ಭಜನ ಮಂಡಳಿಯ ಸದಸ್ಯರೆಲ್ಲರೂ ಮುಂದೆ ಬಂದು ಒಗ್ಗಟ್ಟಿನಿಂದ ಒಂದೆಡೆ ಸೇರಿ ಚರ್ಚೆ ಮಾಡಿ ವಿಶ್ವನಾಥ್ ರವರ ಪಾರ್ಥಿವ ಶರೀರದ ಅಂತ್ಯಕ್ರಿಯೆಗಳನ್ನು ನೆರವೇರಿಸಿದರು. ನಂತರ ಗುಂಪಿನ ಸದಸ್ಯರೆಲ್ಲರೂ ತಮ್ಮ ಕೈಲಾದಷ್ಟು ಹಣವನ್ನು ಸಂಗ್ರಹ ಮಾಡಿ ಒಟ್ಟು 4.3 ಲಕ್ಷಕ್ಕೂ ಹೆಚ್ಚು ಹಣವನ್ನು ಸಂಗ್ರಹಿಸಿದರು. ಈ ಮೊತ್ತದಿಂದ ಶ್ರೀ.ವಿಶ್ವನಾಥ್ ರವರ ತಾಯಿ ಹಾಗೂ ತಂಗಿಯನ್ನು ಎರಡು ಬೇರೆ ಬೇರೆ ಆಶ್ರಮಗಳಲ್ಲಿ ದಾಖಲಿಸಿದರು. ಈ ರೀತಿಯಲ್ಲಿ ಗುಂಪಿನ ಸದಸ್ಯರು ತಮ್ಮ ಪ್ರೀತಿಯ ಗುರುಗಳಾದ ಶ್ರೀ ಶಿರಡಿ ಸಾಯಿಬಾಬಾರವರ ತತ್ವವಾದ "ಮಾನವ ಸೇವೆಯೇ ಮಾಧವ ಸೇವೆ" ಯನ್ನು ಚಾಚೂತಪ್ಪದೆ ಪಾಲಿಸಿ ಮಾನವತೆಯನ್ನು ಮೆರೆದರು. 

ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ:


ಸ್ಥಳ:
ಸಾಯಿ ಆಧ್ಯಾತ್ಮಿಕ ಕೇಂದ್ರದ ಹತ್ತಿರ, ತ್ಯಾಗರಾಜನಗರ, ಬೆಂಗಳೂರು.
.

ವಿಳಾಸ:
ಸಾಯಿ ಸ್ಮರಣ್ ಭಜನ ಮಂಡಳಿ,
"ಸಾಯಿ ಸಂಸಾರ್", 1/2, 1ನೇ ಬ್ಲಾಕ್,
ತ್ಯಾಗರಾಜನಗರ, ಸಾಯಿ ಆಧ್ಯಾತ್ಮಿಕ ಕೇಂದ್ರದ ಹತ್ತಿರ,
ಬೆಂಗಳೂರು - 560 028,
ಕರ್ನಾಟಕ, ಭಾರತ

ಸಂಪರ್ಕಿಸಬೇಕಾದ ವ್ಯಕ್ತಿಗಳು:
ಶ್ರೀ.ವಿ.ಪಿ.ಕಾಮತ್  / ಶ್ರೀಮತಿ.ವಂದನಾ ಕಾಮತ್

ದೂರವಾಣಿ ಸಂಖ್ಯೆಗಳು:
+91 80 2676 3897 / +91 97417 22422



ಮಾರ್ಗಸೂಚಿ:
ನರಸಿಂಹರಾಜಾ ಕಾಲೋನಿ ಬಸ್ ನಿಲ್ದಾಣದಲ್ಲಿ ಇಳಿಯುವುದು. ಬೆಂಗಳೂರು ಬಸ್ ನಿಲ್ದಾಣದಿಂದ ಬಸ್ ಸಂಖ್ಯೆ 31  ಹಾಗೂ ಬನಶಂಕರಿ ಮತ್ತು ಚಿಕ್ಕಲ್ಲಸಂದ್ರಕ್ಕೆ ಹೋಗುವ ಎಲ್ಲಾ ಬಸ್ ಗಳು ನರಸಿಂಹರಾಜಾ ಕಾಲೋನಿ ಬಸ್ ನಿಲ್ದಾಣದಲ್ಲಿ   ನಿಲ್ಲುತ್ತವೆ. ದೇವಾಲಯವು ನರಸಿಂಹರಾಜಾ ಕಾಲೋನಿ ಬಸ್ ನಿಲ್ದಾಣದಿಂದ ನಡಿಗೆಯ ಅಂತರದಲ್ಲಿರುತ್ತದೆ. 

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment