Thursday, May 31, 2012

ಸಾಯಿ ಸಮರ್ಥ ಟ್ರಸ್ಟ್ (ನೋಂದಣಿ), ಬೆಂಗಳೂರು ವತಿಯಿಂದ ದಕ್ಷಿಣ ಭಾರತದ ಅತಿ ದೊಡ್ದ ಶಿರಡಿ ಸಾಯಿಬಾಬಾ ಕಾರ್ಯಕ್ರಮ "ಸಾಯಿ ಅಮೃತ್ ಧಾರಾ" ಆಯೋಜನೆ - ಕೃಪೆ: ಸಾಯಿಅಮೃತಧಾರಾ.ಕಾಂ


ಸಾಯಿ ಸಮರ್ಥ ಟ್ರಸ್ಟ್ (ನೋಂದಣಿ), ಕೋರಮಂಗಲ, ಬೆಂಗಳೂರು ವತಿಯಿಂದ 15ನೇ ಜುಲೈ 2012, ಭಾನುವಾರ ದಂದು ಮಧ್ಯಾನ್ಹ 2:30 ರಿಂದ ಬೆಂಗಳೂರಿನ ಬಳ್ಳಾರಿ ರಸ್ತೆಯಲ್ಲಿರುವ ಪ್ಯಾಲೇಸ್ ಗ್ರೌಂಡ್ ನಲ್ಲಿ ದಕ್ಷಿಣ ಭಾರತದ ಅತಿ ದೊಡ್ದ ಶಿರಡಿ ಸಾಯಿಬಾಬಾ ಕಾರ್ಯಕ್ರಮ "ಸಾಯಿ ಅಮೃತ್ ಧಾರಾ"  ನಾಮಸಂಕೀರ್ತನೆ ಹಾಗೂ ವಿಶಾಲ ಸಾಯಿ ಭಜನ ಸಂಧ್ಯಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಶಿರಡಿಯಲ್ಲಿರುವ ಸಮಾಧಿ ಮಂದಿರದ ಪ್ರತಿರೂಪವನ್ನು ಮುಂಬೈ ನ ಪ್ರಖ್ಯಾತ ಕಲಾವಿದರ ತಂಡವು ಪುನರ್ ನಿರ್ಮಾಣ ಮಾಡುತ್ತಿರುವುದು ಈ ಬೃಹತ್ ಶಿರಡಿ ಸಾಯಿಬಾಬಾ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿರುತ್ತದೆ. ಕಾರ್ಯಕ್ರಮವು 15ನೇ ಜುಲೈ 2012, ಭಾನುವಾರ ದಂದು ಮಧ್ಯಾನ್ಹ 2:30 ಕ್ಕೆ  ತಾವು ಹಾಡಿರುವ ಶಿರಡಿ ಸಾಯಿಬಾಬಾರವರ ಆರತಿ ಹಾಗೂ ಭಜನೆಗಳಿಗೆ ಪ್ರಪಂಚದಾದ್ಯಂತ ಶಿರಡಿ ಸಾಯಿಭಕ್ತರ ಮನೆಮಾತಾಗಿರುವ ಶ್ರೀ.ಪ್ರಮೋದ್ ಮೇಧಿ ಯವರಿಂದ ಸಾಯಿಬಾಬಾರವರ ಪೂಜಾ ವಿಧಿವಿಧಾನಗಳು ಹಾಗೂ ಭಜನೆಯೊಂದಿಗೆ ಪ್ರಾರಂಭವಾಗುತ್ತದೆ. ಪ್ರಖ್ಯಾತ ಸಾಯಿ ಭಜನ ಗಾಯಕರಾದ ಶ್ರೀ.ಶೈಲೇಂದ್ರ ಭಾರತಿ ಹಾಗೂ ಯುವ ಸಾಯಿ ಭಜನ ಗಾಯಕರಾದ ಶ್ರೀ.ಪಂಕಜ್ ರಾಜ್ ರವರು ಸಾಯಿ ಭಜನ ಸಂಧ್ಯಾ ಕಾರ್ಯಕ್ರಮ ನೆಡೆಸಿಕೊಡಲಿದ್ದಾರೆ. 1977 ರಲ್ಲಿ ಬಿಡುಗಡೆಯಾದ ಮನೋಜ್ ಕುಮಾರ್ ರವರ ಸುಪ್ರಸಿದ್ಧ ಹಿಂದಿ ಚಲನಚಿತ್ರವಾದ "ಶಿರಡಿ ಕೇ ಸಾಯಿಬಾಬಾ" ನಲ್ಲಿ ಶಿರಡಿ ಸಾಯಿಬಾಬಾರವರ ಪಾತ್ರವನ್ನು ನಿರ್ವಹಿಸಿದ ಶ್ರೀ.ಸುಧೀರ್ ದಳವಿಯವರಿಂದ ವಿಶೇಷ ಅಭಿನಯ ಕಾರ್ಯಕ್ರಮವಿರುತ್ತದೆ. ಜಗದ್ವಿಖ್ಯಾತ ಚಿತ್ರಕಾರರಾದ ಹಾಗೂ ಏಷಿಯಾದ ಅತಿ ಎತ್ತರದ ಶಿರಡಿ ಸಾಯಿಬಾಬಾರವರ ಚಿತ್ರವನ್ನು ರಚಿಸಿದ ಹೆಗ್ಗಳಿಕೆಯಿರುವ ಶ್ರೀ.ನವನೀತ್ ಅಗ್ನಿಹೋತ್ರಿಯವರು ಹಾಡಿನ ಸಂದರ್ಭಕ್ಕೆ  ತಕ್ಕಂತೆ ಸ್ಥಳದಲ್ಲೇ ಸಾಯಿಬಾಬಾರವರ ಚಿತ್ರವನ್ನು ಬಿಡಿಸಲಿದ್ದಾರೆ. ಮುಂಬೈ ನ "ಕಲಾ ಸಾಧನ ತಂಡ" ದ ವತಿಯಿಂದ ರಂಗೋಲಿಯಲ್ಲಿ ಶಿರಡಿ ಸಾಯಿಬಾಬಾರವರ ಚಿತ್ರವನ್ನು ಬಿಡಿಸುವ ವಿಶೇಷ ಕಾರ್ಯಕ್ರಮವಿರುತ್ತದೆ.

ಕಾರ್ಯಕ್ರಮವು ಶಿರಡಿ ಸಾಯಿಬಾಬಾರವರಿಗೆ ವಿಶೇಷ ಆರತಿ ಬೆಳಗುವುದರೊಂದಿಗೆ ಮುಕ್ತಾಯವಾಗುತ್ತದೆ. ಕಾರ್ಯಕ್ರಮಕ್ಕೆ ಬರುವ ಎಲ್ಲಾ ಸಾಯಿ ಭಕ್ತರಿಗೂ ಮಹಾಪ್ರಸಾದದ ವ್ಯವಸ್ಥೆಯನ್ನು ಸಹ ಮಾಡಲಾಗಿದೆ.

ಕಾರ್ಯಕ್ರಮದ ಆಯೋಜಕರು ದಕ್ಷಿಣ ಭಾರತದ ಈ ಅತಿ ದೊಡ್ದ ಶಿರಡಿ ಸಾಯಿಬಾಬಾ ಕಾರ್ಯಕ್ರಮಕ್ಕೆ ಎಲ್ಲಾ ಸಾಯಿ ಭಕ್ತರ ಸಹಕಾರವನ್ನು ಕೋರುತ್ತಾರೆ. ಕಾರ್ಯಕ್ರಮಕ್ಕೆ ದೇಣಿಗೆ ನೀಡಲು ಅಥವಾ ಇನ್ನ್ಯಾವುದೇ ರೀತಿಯಲ್ಲಿ ಸಹಾಯವನ್ನು ಮಾಡಲು  ಇಚ್ಚಿಸುವ ಸಾಯಿಭಕ್ತರು ಶ್ರೀ.ಚಂದ್ರಕಾಂತ್ ಜಾಧವ್ - ದೂರವಾಣಿ ಸಂಖ್ಯೆ:+91 98453 52984 ಅಥವಾ ಶ್ರೀಮತಿ.ವಿದ್ಯಾ ಜಾಧವ್ - ದೂರವಾಣಿ ಸಂಖ್ಯೆ: +91 98452 47433 ಇ-ಮೈಲ್ ವಿಳಾಸ: saisamarthtrust@gmail.com ನ್ನು ಸಂಪರ್ಕಿಸಬೇಕೆಂದು ಕೋರಲಾಗಿದೆ.

ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಸಾಯಿ ಭಕ್ತರ ಅವಗಾಹನೆಗಾಗಿ ಈ ಕೆಳಗೆ ಲಗತ್ತಿಸಲಾಗಿದೆ:




ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment