Sunday, May 27, 2012

ಶ್ರೀ.ಸಾಯಿನಾಥ ಮಾಧ್ಯಮಿಕ ಶಾಲೆಯ ನೃತ್ಯ ಶಿಕ್ಷಕ ಹಾಗೂ ಸುಪ್ರಸಿದ್ಧ ಚಾವಡಿ ಉತ್ಯವದ ನೃತ್ಯ ಆಯೋಜಕ - ಶ್ರೀ.ಕದಂ ಗೋರಕ್ಷ ಪಂಢರಿನಾಥ - ಕೃಪೆ: ಸಾಯಿಅಮೃತಧಾರಾ.ಕಾಂ


ಶ್ರೀ. ಕದಂ ಗೋರಕ್ಷ ಪಂಢರಿನಾಥ ರವರು ಶಿರಡಿ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ ನೆಡೆಸುತ್ತಿರುವ ಶ್ರೀ.ಸಾಯಿನಾಥ ಮಾಧ್ಯಮಿಕ ಶಾಲೆಯಲ್ಲಿ ನೃತ್ಯ ಶಿಕ್ಷಕರು.ಇವರು ಉತ್ತಮ ಗಾಯಕರು ಹಾಗೂ ನೃತ್ಯಪಟುಗಳೂ ಆಗಿರುತ್ತಾರೆ. ಇವರು 7ನೇ ಸೆಪ್ಟೆಂಬರ್ 1963 ರಂದು ಮಹಾರಾಷ್ಟ್ರದ ಅಹಮದ್ ನಗರದಲ್ಲಿ ದಿವಂಗತ ಶ್ರೀ.ಪಂಢರಿನಾಥ ಹಾಗೂ ದಿವಂಗತ ಶ್ರೀಮತಿ.ಸೋನು ಬಾಯಿಯವರ ಮಗನಾಗಿ ಜನ್ಮ ತಳೆದರು.

ಶ್ರೀ. ಕದಂ ಗೋರಕ್ಷ ಪಂಢರಿನಾಥ ರವರು ಅಹಮದ್ ನಗರದ ಪ್ರಗತ್ ಕಲಾ ಮಹಾವಿದ್ಯಾಲಯದಿಂದ ಕಲಾ ಮಾಸ್ಟರ್ ಡಿಪ್ಲೋಮಾ ಗಳಿಸಿರುತ್ತಾರೆ. ಪ್ರಸ್ತುತ ಇವರು ಶಿರಡಿ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ ನೆಡೆಸುತ್ತಿರುವ ಶ್ರೀ.ಸಾಯಿನಾಥ ಮಾಧ್ಯಮಿಕ ಶಾಲೆಯಲ್ಲಿ ನೃತ್ಯ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇವರು ಮತ್ತು ಇವರ ಧರ್ಮಪತ್ನಿ ಶ್ರೀಮತಿ.ಸುನಂದಾ ರವರು ಕಳೆದ ೩೦ ವರ್ಷಗಳಿಂದಲೂ ಪ್ರತಿ ಗುರುವಾರ, ವಿಶೇಷ ಉತ್ಸವದ ಸಂದರ್ಭಗಳಲ್ಲಿ ಮತ್ತು ಹಬ್ಬದ ದಿನಗಳಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ ನ ವತಿಯಿಂದ ನಡೆಸುವ ಜಗತ್ ಪ್ರಸಿದ್ಧ "ಚಾವಡಿ ಉತ್ಸವ" ದಲ್ಲಿ ಶ್ರೀ.ಸಾಯಿನಾಥ ಮಾಧ್ಯಮಿಕ ಶಾಲೆಯ ಮಕ್ಕಳು ಮಾಡುವ ನೃತ್ಯದ ಮೇಲ್ವಿಚಾರಣೆಯನ್ನು ಅತ್ಯಂತ ಮುತುವರ್ಜಿ ವಹಿಸಿ ನೋಡಿಕೊಳ್ಳುತ್ತಿದ್ದಾರೆ.

ಶ್ರೀ. ಕದಂ ಗೋರಕ್ಷ ಪಂಢರಿನಾಥ ಮತ್ತು ಅವರ ಧರ್ಮಪತ್ನಿ ಶ್ರೀಮತಿ.ಸುನಂದಾ ರವರು ಪ್ರತಿ ಗುರುವಾರ ಸಂಜೆ 5 ರಿಂದ 6 ರವರೆಗೆ ಸುಮಾರು 125 ಕ್ಕೂ ಹೆಚ್ಚು ಶ್ರೀ.ಸಾಯಿನಾಥ ಮಾಧ್ಯಮಿಕ ಶಾಲೆಯ ಮಕ್ಕಳಿಗೆ ಭಜನೆ, ಹಾಡುಗಳು ಹಾಗೂ ನೃತ್ಯವನ್ನು ಹೇಳಿಕೊಡುತ್ತಾರೆ. ಅಲ್ಲದೆ, ಉತ್ಸವದ ಸಂದರ್ಭಗಳಲ್ಲಿ ಮತ್ತು ಹಬ್ಬದ ದಿನಗಳಲ್ಲಿ, ಆಯಾ ಸಂದರ್ಭಕ್ಕೆ ತಕ್ಕಂತೆ ವೇಷಭೂಷಣಗಳನ್ನು ಮಕ್ಕಳಿಗೆ ಹಾಕಿ ಅವರನ್ನು ಅಣಿ ಮಾಡುತ್ತಾರೆ. ಅಲ್ಲದೆ, ಪ್ರತಿ ಗುರುವಾರ ಹಾಗೂ ಹಬ್ಬದ ದಿನಗಳಲ್ಲಿ ನೆಡೆಯುವ ಜಗತ್ ಪ್ರಸಿದ್ಧ "ಚಾವಡಿ ಉತ್ಸವ" ದಲ್ಲಿ ಮಕ್ಕಳ ಹತ್ತಿರವೇ ಇದ್ದು ಮಾರ್ಗದರ್ಶನ ಮಾಡುತ್ತಾರೆ.

ಶ್ರೀ.ಸಾಯಿನಾಥ ಮಾಧ್ಯಮಿಕ ಶಾಲೆಯ ಮಕ್ಕಳು ಪ್ರತಿ ಗುರುವಾರ ಸಂಜೆ 7 ಗಂಟೆಗೆ ಸರಿಯಾಗಿ ಶಿರಡಿಯ ಸಮಾಧಿ ಮಂದಿರದ ಮಧ್ಯದ ಹಾಲ್ ನಲ್ಲಿ ಸೇರಿ ನೃತ್ಯವನ್ನು ಆರಂಭಿಸುತ್ತಾರೆ. ಸುಮಾರು 8:30 ಕ್ಕೆ ಚಾವಡಿ ಉತ್ಸವವು ಸಮಾಧಿ ಮಂದಿರದಿಂದ ಪ್ರಾರಂಭವಾಗುತ್ತದೆ. ಉತ್ಸವವು ಸಮಾಧಿ ಮಂದಿರದಿಂದ ಹೊರಟು ದ್ವಾರಕಾಮಾಯಿಗೆ ತೆರಳಿ ಅಲ್ಲಿಂದ ಚಾವಡಿ ಸೇರುತ್ತದೆ. ಚಾವಡಿಯಲ್ಲಿ ಸಾಯಿಬಾಬಾರವರಿಗೆ ಆರತಿ ಮಾಡಲಾಗುತ್ತದೆ. ನಂತರ ಉತ್ಸವವು ಚಾವಡಿಯಿಂದ ಹೊರಟು ಶಿರಡಿ ಗ್ರಾಮದ ಪ್ರದಕ್ಷಿಣೆ ಮಾಡಿದ ನಂತರ ಪುನಃ ಸಮಾಧಿ ಮಂದಿರಕ್ಕೆ ಬಂದು ಸೇರುತ್ತದೆ. ಹೀಗೆ ಸುಮಾರು 3 ಗಂಟೆಯ ಕಾಲ ಉತ್ಸವ ಕಾರ್ಯಕ್ರಮ ನಡೆಯುತ್ತದೆ. ಈ ರೀತಿಯಲ್ಲಿ ಸತತ 3 ಗಂಟೆಗಳ ಕಾಲ ಮಕ್ಕಳು ವಿವಿಧ ಭಜನೆಗಳಿಗೆ, ಹಾಡುಗಳಿಗೆ ಎಡೆಬಿಡದೆ ನೃತ್ಯ ಮಾಡುತ್ತಾರೆ. ಶ್ರೀ ಕದಂ ಮಾಸ್ಟರ್ ರವರ ಮಾರ್ಗದರ್ಶನದಲ್ಲಿ ನೃತ್ಯ ಮಾಡುವ ಆ ಎಳೆಯ ಮಕ್ಕಳ ನೃತ್ಯವನ್ನು ನೋಡಲು ಎರಡು ಕಣ್ಣುಗಳು ಸಾಲದು ಎಂದರೆ ಉತ್ಪ್ರೇಕ್ಷೆಯಲ್ಲ!!! 



ಅಷ್ಟೇ ಅಲ್ಲದೇ, 1991 ನೇ ಇಸವಿಯಿಂದ ಪ್ರತಿದಿನ ಬೆಳಗಿನ ಜಾವ 1000 ಕ್ಕೂ ಹೆಚ್ಚು ಸಾಯಿಭಕ್ತರ ಮೊಬೈಲ್ ಗಳಿಗೆ  ಸಾಯಿಬಾಬಾರವರ ಅತ್ಯುತ್ತಮ ಸಂದೇಶಗಳನ್ನು ತಪ್ಪದೇ ಕಳುಹಿಸುತ್ತಾರೆ. 




ಪ್ರತಿಯೊಬ್ಬ ಸಾಯಿಭಕ್ತರು ತಮ್ಮ ನಿತ್ಯ ಜೀವನದಲ್ಲಿ ಶಿರಡಿ ಸಾಯಿಬಾಬಾರವರ ಅತ್ಯುತ್ತಮ ಸಂದೇಶವಾದ "ಶ್ರದ್ಧೆ" ಮತ್ತು "ಸಬೂರಿ" ಯನ್ನು ಅಳವಡಿಸಿಕೊಳ್ಳಬೇಕೆಂದು ಶ್ರೀ. ಕದಂ ಗೋರಕ್ಷ ಪಂಢರಿನಾಥ ರವರು ಕೇಳಿಕೊಳ್ಳುತ್ತಾರೆ. 



ಪ್ರಸ್ತುತ ಇವರು ತಮ್ಮ ಧರ್ಮಪತ್ನಿ ಶ್ರೀಮತಿ.ಸುನಂದಾ ಹಾಗೂ ತಮ್ಮ ಇಬ್ಬರು ಮಕ್ಕಳಾದ ಶ್ರೀ.ಪ್ರಸಾದ್ ಹಾಗೂ ಹೃಷೀಕೇಷ್ ರವರೊಂದಿಗೆ ಶಿರಡಿಯ ತಮ್ಮ ಸ್ವಗೃಹದಲ್ಲಿ ಸುಖೀಜೀವನವನ್ನು ನಡೆಸುತ್ತಿದ್ದಾರೆ. 






ಶ್ರೀ. ಕದಂ ಗೋರಕ್ಷ ಪಂಢರಿನಾಥ ರವರ ಸಂಪರ್ಕದ ವಿವರಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ನೀಡಲಾಗಿದೆ: 

ವಿಳಾಸ:

ನಂ.11, ಚಾರಿ, ನೀಮಗಾವ್ ವಾಡಿ,
ಹೆಲಿಪ್ಯಾಡ್ ರಸ್ತೆ, ಶಿರಡಿ,
ರಹತಾ ತಾಲ್ಲೂಕ್, ಅಹಮದ್ ನಗರ ಜಿಲ್ಲೆ,
ಮಹಾರಾಷ್ಟ್ರ, ಭಾರತ.

ದೂರವಾಣಿ ಸಂಖ್ಯೆ:

+91 99750  13888

ಇ-ಮೈಲ್ ವಿಳಾಸ:

kadamgoraksha@gmail.com

ಚಾವಡಿ ಉತ್ಸವದ ನೃತ್ಯದ ವೀಡಿಯೋಗಳು: 

















ಕನ್ನಡ ಅನುವಾದ: ಶ್ರೀಕಂಠ ಶರ್ಮ 

No comments:

Post a Comment