Saturday, May 12, 2012

ತಮಿಳು ಶ್ರೀ ಸಾಯಿ ಸಚ್ಚರಿತ್ರೆ ಧ್ವನಿಸುರಳಿ ಬಿಡುಗಡೆ - ಕೃಪೆ: ಸಾಯಿಅಮೃತಧಾರಾ.ಕಾಂ 



ತಮಿಳು ಮಾತನಾಡುವ ಶಿರಡಿ ಸಾಯಿಬಾಬಾ ಭಕ್ತರಿಗೊಂದು ಸಿಹಿ ಸುದ್ದಿ! ಶ್ರೀ.ಗೋವಿಂದ್ ರಘುನಾಥ್ ದಾಬೋಲ್ಕರ್ ರವರ ಶ್ರೀ ಸಾಯಿ ಸಚ್ಚರಿತ್ರೆಯು ಈಗ ತಮಿಳು ಗದ್ಯ ಹಾಗೂ ಆಡಿಯೋ ಡಿವಿಡಿ ರೂಪದಲ್ಲಿ ಹೊರಬಂದಿದೆ. 

ಈ ತಮಿಳು ಗದ್ಯ ಹಾಗೂ ಆಡಿಯೋ ಡಿವಿಡಿ ಯನ್ನು ಕಳೆದ ತಿಂಗಳು 14ನೇ ಏಪ್ರಿಲ್ 2012,ಶನಿವಾರ ದಂದು ಚನ್ನೈನಲ್ಲಿ ನಡೆದ ಸರಳ ಸಮಾರಂಭದಲ್ಲಿ ಬಿಡುಗಡೆ ಮಾಡಲಾಯಿತು. 



ಈ ತಮಿಳು ಶ್ರೀ ಸಾಯಿ ಸಚ್ಚರಿತ್ರೆಯ ಅನುವಾದವನ್ನು ಚನ್ನೈನ ಶ್ರೀ.ಪಿ.ಅಯ್ಯಪ್ಪನ್ ರವರು ಮಾಡಿರುತ್ತಾರೆ. ಈ ಸಾಯಿ  ಸಚ್ಚರಿತ್ರೆಯಲ್ಲಿ ಲೇಖಕರು ತಿರುಪ್ಪಾವೈನ ನುಡಿಗಟ್ಟುಗಳನ್ನು ಬಳಸಿರುವುದು ಒಂದು ವಿಶೇಷ.ಲೇಖಕರು ಇದನ್ನು ಪುಸ್ತಕ ರೂಪದಲ್ಲಿ ಪ್ರಕಟಿಸದೇ ಎಲ್ಲರಿಗೂ ಅನುಕೂಲವಾಗಲೆಂದು ತಮಿಳು ಗದ್ಯ ಹಾಗೂ ಆಡಿಯೋ ಡಿವಿಡಿ ರೂಪದಲ್ಲಿ ಹೊರತಂದು ಆಸಕ್ತಿ ಇರುವ ಸಾಯಿಭಕ್ತರಿಗೆ ಉಚಿತವಾಗಿ ನೀಡುತ್ತಿದ್ದಾರೆ. ಸಚ್ಚರಿತ್ರೆಯನ್ನು ಓದುವಾಗ  ಮತ್ತು ಕೇಳುವಾಗ ಅನೇಕ ಕಡೆ  ತಾವು  ಅತ್ಯಂತ  ಭಾವುಕರಾಗಿ  ಪುನಃ  ಅದೇ  ಭಾಗವನ್ನು  ಮತ್ತೆ ಮತ್ತೆ ಕೇಳಿದ್ದಾಗಿ ಹೇಳುವ ಲೇಖಕರು ಸಾಯಿ ಭಕ್ತರಿಗೂ  ಕೂಡ  ಅದೇ  ರೀತಿ  ಅನುಭವವಾಗುವುದರಲ್ಲಿ  ಯಾವುದೇ ಸಂಶಯ  ಇಲ್ಲ  ಎಂದು  ನುಡಿಯುತ್ತಾರೆ. ಈ ಪುಸ್ತಕವು 900 ಪುಟಗಳನ್ನು ಮತ್ತು 53 ಅಧ್ಯಾಯಗಳನ್ನು ಹೊಂದಿರುತ್ತದೆ.

ಸಾಯಿ ಭಕ್ತರು ಈ ತಮಿಳು ಗದ್ಯ ಹಾಗೂ ಆಡಿಯೋವನ್ನು ಅತ್ಯಂತ ಶ್ರದ್ಧೆ ಮತ್ತು ಭಕ್ತಿಯಿಂದ ಕೇಳಿ ಶಿರಡಿ ಸಾಯಿಬಾಬಾರವರ ಕೃಪೆಗೆ ಪಾತ್ರರಾಗಬೇಕೆಂದು ಲೇಖಕರು ಮನವಿ ಮಾಡಿಕೊಳ್ಳುತ್ತಾರೆ. ಅಲ್ಲದೇ, ಶ್ರೀ ಸಾಯಿ ಸಚ್ಚರಿತ್ರೆಯನ್ನು ಆಲಿಸಿದ ನಂತರ ಭಕ್ತರು ಅವರ ಅನುಭವಗಳನ್ನು ತಮ್ಮೊಂದಿಗೆ ಹಂಚಿಕೊಳ್ಳಬೇಕೆಂದು  ಲೇಖಕರು ಮನವಿ ಮಾಡಿಕೊಳ್ಳುತ್ತಾರೆ.

ಲೇಖಕರ ಸಂಪರ್ಕದ ವಿವರಗಳನ್ನು ಸಾಯಿ ಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ನೀಡಲಾಗಿದೆ: 

ಶ್ರೀ.ಪಿ.ಅಯ್ಯಪ್ಪನ್ - ಲೇಖಕರು, 
ಎಸ್-1, ರಾವ್ ಶಂಕರ ಅಪಾರ್ಟ್ಮೆಂಟ್ಸ್, 
37, ಕಾಮರಾಜಾರ್ ರಸ್ತೆ, 
ತಂಬಾರಮ್ ಪಶ್ಚಿಮ, 
ಚನ್ನೈ- 600 045, 
ತಮಿಳುನಾಡು, ಭಾರತ, 
ದೂರವಾಣಿ ಸಂಖ್ಯೆಗಳು: +91 44 2226 3871 / +91 94440 49061 

ಕನ್ನಡ ಅನುವಾದ: ಶ್ರೀಕಂಠ ಶರ್ಮ 








No comments:

Post a Comment