Sunday, December 22, 2013

ಚಿನ್ನದ ನಾಡು ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿ ಪ್ರಪ್ರಥಮ ಬಾರಿಗೆ ಶ್ರೀ ಬಬ್ಲೂ ದುಗ್ಗಲ್ ಮತ್ತು ತಂಡದವರಿಂದ ಶ್ರೀ ಸಾಯಿ ಸಚ್ಚರಿತ್ರೆ ಆಧಾರಿತ ನೃತ್ಯ ನಾಟಕ "ಏಕ್ ಶಾಮ್ ಸಾಯಿ ಕೇ ನಾಮ್" ನ ಆಯೋಜನೆ - ಕೃಪೆ: ಸಾಯಿಅಮೃತಧಾರಾ.ಕಾಂ

ಚಿನ್ನದ ನಾಡು ಎಂಬ ಹೆಗ್ಗಳಿಕೆಗೆ ಪಾತ್ರವಾದ ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿ ಪ್ರಪ್ರಥಮ ಬಾರಿಗೆ ಶಿರಡಿಯ ಬಳಿಯ ಶ್ರೀರಾಮಪುರದ ಖ್ಯಾತ ನಾಟಕ ತಂಡವಾದ ಶ್ರೀ ಬಬ್ಲೂ ದುಗ್ಗಲ್ ಮತ್ತು ತಂಡದವರಿಂದ ಶ್ರೀ ಸಾಯಿ ಸಚ್ಚರಿತ್ರೆ ಆಧಾರಿತ ನೃತ್ಯ ನಾಟಕ "ಏಕ್ ಶಾಮ್ ಸಾಯಿ ಕೇ ನಾಮ್" ಅನ್ನು ಮುಂದಿನ ತಿಂಗಳ 16ನೇ ಜನವರಿ 2014, ಗುರುವಾರದಂದು ಸಂಜೆ 4:00 ಘಂಟೆಯಿಂದ  ರಾತ್ರಿ 8:30 ರವರೆಗೆ ಬಂಗಾರಪೇಟೆಯ ಕೆ.ಜಿ.ಎಫ್. ಮುಖ್ಯರಸ್ತೆಯಲ್ಲಿರುವ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದೆ.

ಈ ಕಾರ್ಯಕ್ರಮವನ್ನು ಶ್ರೀ ಶಿರಡಿ ಸಾಯಿ ಡ್ರಾಮಾ ಸೇವಾ ಸಮಿತಿ, ಬಂಗಾರಪೇಟೆ, ಶ್ರೀ ಅಯ್ಯಪ್ಪ ದೇವಾಲಯ ಸೇವಾ ಸಮಿತಿ (ನೋಂದಣಿ), ಬಂಗಾರಪೇಟೆ, ಶ್ರೀ ಸಾಯಿ ಸಮರ್ಥ ಟ್ರಸ್ಟ್, ಬೆಂಗಳೂರು ಹಾಗೂ ಶ್ರೀ ಶಿವ ಸಾಯಿ ಟ್ರಸ್ಟ್, 100 ಫೀಟ್ ಬಾಬಾ, ತಿರುವಲಂಗಾಡು, ಚನ್ನೈ ಜಂಟಿಯಾಗಿ ಆಯೋಜಿಸಿದೆ. 


ಸಾಯಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಸುಂದರ ನೃತ್ಯ ನಾಟಕವನ್ನು ವೀಕ್ಷಿಸಿ ಸಾಯಿಬಾಬಾರವರ ಕೃಪೆಗೆ ಪಾತ್ರರಾಗಬೇಕೆಂದು ಮೇಲಿನ ಟ್ರಸ್ಟ್ ಗಳ ಸಮಿತಿಯ ಎಲ್ಲಾ ಸದಸ್ಯರುಗಳು ವಿನಂತಿ ಮಾಡಿಕೊಳ್ಳುತ್ತಾರೆ.

ಈ ನೃತ್ಯ ನಾಟಕವನ್ನು www.shirdisaibhaktmandal.com ನ ಮುಖಾಂತರವಾಗಿ ಅಂತರ್ಜಾಲ ತಾಣದಲ್ಲಿ ನೇರವಾಗಿ ಕೂಡ ವೀಕ್ಷಿಸಬಹುದಾಗಿದೆ. 

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment