Wednesday, December 18, 2013

ಸಾಯಿ ಭಜನ ಗಾಯಕ ಹಾಗೂ ಗೀತ ರಚನಕಾರ ಶ್ರೀ.ಎಂ.ವೀರಭದ್ರಪ್ಪ - ಕೃಪೆ: ಸಾಯಿಅಮೃತಧಾರಾ.ಕಾಂ

 


ಶ್ರೀ.ಎಂ.ವೀರಭದ್ರಪ್ಪ ನವರು ಶಿರಡಿ ಸಾಯಿಬಾಬಾರವರ ಅನನ್ಯ ಭಕ್ತರು ಹಾಗೂ ಖ್ಯಾತ ಸಾಯಿಭಜನ ಗಾಯಕ ಹಾಗೂ ಗೀತ ರಚನಕಾರರು. 

ಇವರು  1ನೇ ಜುಲೈ 1952 ರಂದು ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಅಧೋನಿಯಲ್ಲಿ ಜನಿಸಿರುತ್ತಾರೆ.

ಇವರು 1972 ನೇ ಇಸವಿಯಲ್ಲಿ ತಿರುಪತಿಯ ಶ್ರೀ ವೆಂಕಟೇಶ್ವರ ವಿಶ್ವವಿದ್ಯಾಲಯದಿಂದ ಬಿ.ಕಾಂ ಪದವಿಯನ್ನು ಗಳಿಸಿರುತ್ತಾರೆ. ಅಲ್ಲದೇ  ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ, ಚನ್ನೈನಿಂದ  ಹಿಂದಿ ಪ್ರವೇಶಿಕ ಪದವಿಯನ್ನು ಸಹ ಗಳಿಸಿದ್ದಾರೆ.

ಇವರು ಬೆಂಗಳೂರಿನ ಎಸ್.ವಿ. ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಆಡಿಟಿಂಗ್ ಸಂಸ್ಥೆಯಲ್ಲಿ ಕಳೆದ 40 ವರ್ಷಗಳಿಂದ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

ಇವರು ಭಜನೆಯನ್ನು ಹಾಡುವುದಷ್ಟೇ ಅಲ್ಲದೇ ಗೀತ ರಚನೆಯಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇವರು ಕನ್ನಡ, ತೆಲುಗು, ಹಿಂದಿ ಹಾಗೂ ತಮಿಳು ಭಾಷೆಗಳಲ್ಲಿ ಸಾಯಿ ಭಜನೆಯನ್ನು ಸುಶ್ರಾವ್ಯವಾಗಿ ಹಾಡಬಲ್ಲವರಾಗಿದ್ದಾರೆ.

ಸಾಯಿಭಜನ ಗಾಯಕರಾಗಿ ಇವರು ಶಿರಡಿ ಸಾಯಿಬಾಬಾ ಸಂಸ್ಥಾನದಲ್ಲಿ 3 ಬಾರಿ ಸಾಯಿ ಭಜನೆಯ ಕಾರ್ಯಕ್ರಮವನ್ನು ನೀಡಿದ್ದಾರೆ. ಬೆಂಗಳೂರಿನ ಜಯನಗರ 9ನೇ ಬಡಾವಣೆಯ ಸಾಯಿ ಮಂದಿರ ಹಾಗೂ ಅಲಸೂರಿನ ಕೇಂಬ್ರಿಡ್ಜ್ ಬಡಾವಣೆಯ ಸಾಯಿ ಮಂದಿರಗಳಲ್ಲಿ ಸಾಯಿ ಭಜನೆಯ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದಾರೆ. ಅಲ್ಲದೇ, ಬಿಟಿಎಂ ಬಡಾವಣೆಯ ಸಾಯಿ ಮಂದಿರ ಹಾಗೂ ಜಯನಗರ ಪೂರ್ವ ಬಡಾವಣೆಯ ಶ್ರೀ ಶಿರಡಿ ಸಾಯಿ ಧನ್ವಂತರಿ ಧ್ಯಾನ ಮಂದಿರಗಳಲ್ಲಿ "ಸಾಯಿ ನಾಮ ಜಪ" ಕಾರ್ಯಕ್ರಮಗಳನ್ನು ನಿಯಮಿತವಾಗಿ ನೀಡುತ್ತಾ ಬಂದಿದ್ದಾರೆ.

ಇವರು ಶ್ರೀಮತಿ.ಎಂ.ವಿ.ನೀಲವೇಣಿ ಅವರನ್ನು ವಿವಾಹವಾಗಿದ್ದು ಇವರಿಗೆ  ಶ್ರೀ.ಎಂ.ವಿ.ಶಿವರಾಜ್ ಹಾಗೂ ಕುಮಾರಿ. ಎಂ.ವಿ. ಸ್ವಪ್ನ ಎಂಬ ಹೆಸರಿನ ಇಬ್ಬರು ಮಕ್ಕಳಿದ್ದಾರೆ.

ಪ್ರಸ್ತುತ ಇವರು ತಮ್ಮ  ತಾಯಿ, ಧರ್ಮಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಬೆಂಗಳೂರಿನ ಅರಕೆರೆ ಬಡಾವಣೆಯಲ್ಲಿರುವ ತಮ್ಮ ಸ್ವಗೃಹದಲ್ಲಿ ಸುಖೀ ಜೀವನವನ್ನು ನಡೆಸುತ್ತಿದ್ದಾರೆ.

ಶ್ರೀ.ಎಂ.ವೀರಭದ್ರಪ್ಪ ನವರ ಸಂಪರ್ಕದ ವಿವರಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ನೀಡಲಾಗಿದೆ:


ವಿಳಾಸ:
ಶ್ರೀ.ಎಂ.ವೀರಭದ್ರಪ್ಪ
ನಂ.9, ಶ್ರೀ ಆದಿ ಬಸವೇಶ್ವರ ನಿಲಯ,
ಚಾಮುಂಡೇಶ್ವರಿ ಬಡಾವಣೆ,
ಅರಕೆರೆ,ಬನ್ನೇರುಘಟ್ಟ ರಸ್ತೆ,
ಬೆಂಗಳೂರು - 560 076,
ಕರ್ನಾಟಕ, ಭಾರತ



ದೂರವಾಣಿ ಸಂಖ್ಯೆ:

 +91 99869 52737/ +91 80 2648 1163

ಇ-ಮೈಲ್ ವಿಳಾಸ:




ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment