Monday, July 20, 2015

ತುಮಕೂರು ಜಿಲ್ಲೆಯ ಶಿರಡಿ ಸಾಯಿಬಾಬಾ ಮಂದಿರ - ಶ್ರೀ ಶಿರಡಿ ಸಾಯಿಬಾಬಾ ಇಂಟರ್ ನ್ಯಾಷನಲ್ ಸರ್ವೀಸ್ ಫೌಂಡೆಶನ್ (ನೋಂದಣಿ), ಬೋರನಕಣಿವೆ ಗ್ರಾಮ, ಚಿಕ್ಕನಾಯಕನಹಳ್ಳಿ ತಾಲೂಕು, ತುಮಕೂರು ಜಿಲ್ಲೆ- 572 218,ಕರ್ನಾಟಕ, ಭಾರತ

ಮಂದಿರದ ವಿಶೇಷತೆಗಳು: 

ಈ ಶಿರಡಿ ಸಾಯಿಬಾಬಾ ಮಂದಿರವನ್ನು 1892ನೇ ಇಸವಿಯಲ್ಲಿ  ಅಂದಿನ ಮೈಸೂರು ಮಹಾರಾಜರಾದ ದಿವಂಗತ ಶ್ರೀ.ಜಯಚಾಮರಾಜ ಒಡೆಯರ್ ರವರ ಕಾಲದಲ್ಲಿ ಕರ್ನಾಟಕ ರಾಜ್ಯದ ತುಮಕೂರು  ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಬೋರನಕಣಿವೆ ಗ್ರಾಮದಲ್ಲಿ ಹರಿಯುವ ಸುವರ್ಣಮುಖಿ  ನದಿಗೆ ಅಡ್ಡವಾಗಿ ನಿರ್ಮಿಸಲಾದ ಬೋರನಕಣಿವೆ ಡ್ಯಾಂನ ಹಿನ್ನೀರಿನ ಹತ್ತಿರದಲ್ಲಿ ನಿರ್ಮಿಸಲಾಗಿದೆ. ಹುಳಿಯಾರ್ ಪಟ್ಟಣದಿಂದ ಸಿರಾ ಪಟ್ಟಣಕ್ಕೆ ತೆರಳುವ  ಮಾರ್ಗದಲ್ಲಿ ಸುಮಾರು 8 ಕಿಲೋಮೀಟರ್ ಕ್ರಮಿಸಿದರೆ ಮಂದಿರ ಸಿಗುತ್ತದೆ .
ಮಂದಿರದ ಭೂಮಿಪೂಜೆಯನ್ನು 10ನೇ ನವೆಂಬರ್ 2008 ರಂದು ನೆರವೇರಿಸಲಾಯಿತು.
ಈ ಮಂದಿರವನ್ನು 1ನೇ ಫೆಬ್ರವರಿ 2015 ದಂದು  ಮಹಾನ್ ಸಾಯಿ ಭಕ್ತರೂ ಹಾಗೂ  ಚನ್ನೈನ ಶಿರಡಿ ಸಾಯಿ ಟ್ರಸ್ಟ್ ನ   ಅಧ್ಯಕ್ಷರೂ ಆದ ಶ್ರೀ.ಕೆ.ವಿ.ರಮಣಿಯವರು ಮಂದಿರದ ಟ್ರಸ್ಟ್ ನ ಸದಸ್ಯರುಗಳು ಹಾಗೂ ಸಾವಿರಾರು ಸ್ಥಳೀಯ ಸಾಯಿ ಭಕ್ತರ ಸಮ್ಮುಖದಲ್ಲಿ  ಉದ್ಘಾಟಿಸಿರುತ್ತಾರೆ.
ಶ್ರೀ.ಬಿ. ವಿಠಲ್ ರವರು ಮಂದಿರದ ಸಂಸ್ಥಾಪಕ ಅಧ್ಯಕ್ಷರಾಗಿರುತ್ತಾರೆ. ಮಂದಿರದ ಟ್ರಸ್ಟ್ ಆದ ಶ್ರೀ ಶಿರಡಿ ಸಾಯಿಬಾಬಾ ಇಂಟರ್ ನ್ಯಾಷನಲ್ ಸರ್ವೀಸ್ ಫೌಂಡೆಶನ್ (ನೋಂದಣಿ) ಯ ಸದಸ್ಯರುಗಳು  ಮಂದಿರದ ದಿನ ನಿತ್ಯದ ಆಗುಹೋಗುಗಳನ್ನು ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಬಹಳ ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ.
ಈ ಮಂದಿರವನ್ನು ಮಂದಿರದ ಟ್ರಸ್ಟ್ ಗೆ ಸೇರಿರುವ 13 ಎಕರೆಯಷ್ಟು ವಿಶಾಲವಾದ ಸ್ಥಳದಲ್ಲಿ ನಿರ್ಮಾಣ ಮಾಡಲಾಗಿದ್ದು ಮಂದಿರದ ವಿಸ್ತೀರ್ಣವು 190'x110' ಚದರ ಅಡಿಯಷ್ಟಿರುತ್ತದೆ.

ಮಂದಿರದಲ್ಲಿ 5.6 ಅಡಿ ಎತ್ತರದ ಸುಂದರವಾದ ಅಮೃತಶಿಲೆಯಲ್ಲಿ ಮಾಡಿದ ಸಾಯಿಬಾಬಾರವರ ವಿಗ್ರಹವನ್ನು ಸಾಯಿ ಭಕ್ತರು ನೋಡಬಹುದು.  ಶಿರಡಿಯಲ್ಲಿ ಬಾಬಾರವರ ವಿಗ್ರಹದ ಎದುರುಗಡೆ ಇರುವಂತೆ ಈ ಮಂದಿರದಲ್ಲಿಯೂ  ಸಹ ಬಾಬಾರವರ ವಿಗ್ರಹದ ಎದುರುಗಡೆ ಅಮೃತಶಿಲೆಯ ನಂದಿ ಹಾಗೂ ಪಾದುಕೆಗಳನ್ನು  ಪ್ರತಿಷ್ಟಾಪಿಸಲಾಗಿದೆ. ಅಲ್ಲದೆ ಮಂದಿರದ ಪಕ್ಕದಲ್ಲಿ ನಿರ್ಮಿಸಲಾಗಿರುವ ದ್ವಾರಕಾಮಾಯಿಯಲ್ಲಿರುವ ಧುನಿಯ ಎದುರುಗಡೆ ಸುಂದರವಾದ ಅಮೃತಶಿಲೆಯಲ್ಲಿ ಮಾಡಿದ ಸಾಯಿಬಾಬಾರವರ ದ್ವಾರಕಾಮಾಯಿ ಭಂಗಿಯಲ್ಲಿರುವ  ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ. 




ಮಂದಿರದ ದಿನನಿತ್ಯದ ಕಾರ್ಯಕ್ರಮಗಳು 

ಮಂದಿರದ ಸಮಯ:

ಮಂದಿರವನ್ನು  ಪ್ರತಿದಿನ ಬೆಳಿಗ್ಗೆ 6:00 ರಿಂದ ರಾತ್ರಿ 08:30 ರವರೆಗೆ ಭಕ್ತರ ದರ್ಶನಕ್ಕಾಗಿ ತೆರೆದಿಡಲಾಗುತ್ತದೆ.

ಆರತಿಯ ಸಮಯ:

ಕಾಕಡಾ ಆರತಿ   : 6:00 AM
ಮಧ್ಯಾನ್ಹ ಆರತಿ : 12:00 
ಧೂಪಾರತಿ       :  6:00 PM
ಶೇಜಾರತಿ        :  8:00 PM

ಪ್ರತಿದಿನ ಮಂದಿರದಲ್ಲಿ ಧುನಿ ಪೂಜೆಯನ್ನು ನೆರವೇರಿಸಲಾಗುತ್ತದೆ.

ಪ್ರತಿ ಗುರುವಾರದಂದು ಬೆಳಿಗ್ಗೆ 8 ಗಂಟೆಗೆ ಸಾಯಿಬಾಬಾರವರ ಅಮೃತ ಶಿಲೆಯ ವಿಗ್ರಹಕ್ಕೆ ವಿಶೇಷ ಅಭಿಷೇಕವನ್ನು ನೆರವೇರಿಸಲಾಗುತ್ತದೆ. 

ಪ್ರತಿ ತಿಂಗಳ ಹುಣ್ಣಿಮೆಯ ದಿನದಂದು ಬೆಳಿಗ್ಗೆ 10:30 ರಿಂದ 11:45 ರವರಗೆ ಶ್ರೀ ಸತ್ಯನಾರಾಯಣ ಪೂಜೆಯನ್ನು ಹಮ್ಮಿಕೊಳ್ಳಲಾಗುತ್ತದೆ. ಸೇವಾ ಶುಲ್ಕ 20/- ರೂಪಾಯಿಯೆಂದು ನಿಗದಿಪಡಿಸಲಾಗಿದೆ.

ವಿಶೇಷ ಉತ್ಸವದ ದಿನಗಳು: 

1.ಪ್ರತಿ ವರ್ಷದ 1ನೇ ಫೆಬ್ರವರಿ ಮಂದಿರದ ವಾರ್ಷಿಕೋತ್ಸವ.
2. ಮಹಾ ಶಿವರಾತ್ರಿ.
3. ಆಷಾಢ ಏಕಾದಶಿ. 
4.ಗುರುಪೂರ್ಣಿಮೆ.
5.ವಿಜಯದಶಮಿ.
6.ದೀಪಾವಳಿ. 
7. ದತ್ತ ಜಯಂತಿ. 

ಮಂದಿರದ ಟ್ರಸ್ಟ್ ನ ಸಾಮಾಜಿಕ ಕಾರ್ಯ ಚಟುವಟಿಕೆಗಳು: 
ಮಂದಿರದ  ಟ್ರಸ್ಟ್ ನ ವತಿಯಿಂದ ನಿಯಮಿತವಾಗಿ ಉಚಿತ ವೈದ್ಯಕೀಯ ಶಿಬಿರ, ವೈದ್ಯಕೀಯ ಜಾಗೃತಿ ಶಿಬಿರ, ಅನಾಥಾಶ್ರಮಗಳಿಗೆ ದೇಣಿಗೆ ನೀಡುವುದು ಹಾಗೂ  ಸುತ್ತಮುತ್ತಲಿನ  ಗ್ರಾಮಗಳಲ್ಲಿ ವಾಸಿಸುತ್ತಿರುವ ಬಡ ಮಕ್ಕಳಿಗೆ ಶೈಕ್ಷಣಿಕ ಸಾಧನಗಳನ್ನು ವಿತರಿಸುವ  ಉತ್ತಮ ಕಾರ್ಯವನ್ನು  ಮಾಡಲಾಗುತ್ತಿದೆ. ಟ್ರಸ್ಟ್ ನ  ಆಡಳಿತ ಮಂಡಳಿಯು  ಅನ್ನ ದಾಸೋಹ ಹಾಲ್ ಒಂದನ್ನು  ನಿರ್ಮಿಸಿ ಅಲ್ಲಿ  ನಿತ್ಯ ಅನ್ನದಾನವನ್ನು ಮಾಡಬೇಕೆಂಬ ಮಹತ್ವಾಕಾಂಕ್ಷಿ ಯೋಜನೆಯನ್ನು ಹಾಕಿಕೊಂಡಿದೆ. 
ದೇಣಿಗೆಗೆ ಮನವಿ:
ಶ್ರೀ ಶಿರಡಿ ಸಾಯಿಬಾಬಾ ಇಂಟರ್ ನ್ಯಾಷನಲ್ ಸರ್ವೀಸ್ ಫೌಂಡೆಶನ್ (ನೋಂದಣಿ) ಯು ತಾನು ಹಮ್ಮಿಕೊಂಡಿರುವ ಎಲ್ಲ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಚಟುವಟಿಕೆಗಳಿಗೆ  ಉದಾರವಾದ  ದೇಣಿಗೆಯನ್ನು ನೀಡುವಂತೆ ಸಾಯಿ ಭಕ್ತರನ್ನು ಕೋರಿಕೊಳ್ಳುತ್ತದೆ. ದೇಣಿಗೆಯನ್ನು ನಗದು/ಚೆಕ್/ಡಿಡಿ ರೂಪದಲ್ಲಿ ಈ ಕೆಳಕಂಡ ಬ್ಯಾಂಕ್  ಅಕೌಂಟ್ ಗೆ ಸಂದಾಯ ಮಾಡಬಹುದಾಗಿರುತ್ತದೆ: 

ಅಕೌಂಟ್ ಹೆಸರು: ಶ್ರೀ ಶಿರಡಿ ಸಾಯಿಬಾಬಾ ಇಂಟರ್ ನ್ಯಾಷನಲ್ ಸರ್ವೀಸ್ ಫೌಂಡೆಶನ್ (ನೋಂದಣಿ)
ಬ್ಯಾಂಕ್: ಭಾರತೀಯ ಸ್ಟೇಟ್ ಬ್ಯಾಂಕ್, 
ಖಾತೆ ಸಂಖ್ಯೆ:  30681291749
ಐ.ಎಫ್.ಎಸ್.ಸಿ. ಕೋಡ್: SBIN0011289
ಶಾಖೆ: ಡಾ.ರಾಜಕುಮಾರ್ ರಸ್ತೆ, ರಾಜಾಜಿನಗರ, ಬೆಂಗಳೂರು
 
ಮಂದಿರದ ವಿಳಾಸ ಹಾಗೂ ಮಾರ್ಗಸೂಚಿ: 


ಸ್ಥಳ: 

ಈ ಶಿರಡಿ ಸಾಯಿಬಾಬಾ ಮಂದಿರವು ಕರ್ನಾಟಕ ರಾಜ್ಯದ ತುಮಕೂರು  ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಬೋರನಕಣಿವೆ ಗ್ರಾಮದಲ್ಲಿ ಹರಿಯುವ ಸುವರ್ಣಮುಖಿ  ನದಿಗೆ ಅಡ್ಡವಾಗಿ ನಿರ್ಮಿಸಲಾದ ಬೋರನಕಣಿವೆ ಡ್ಯಾಂನ ಹಿನ್ನೀರಿನ ಹತ್ತಿರದಲ್ಲಿ ನಿರ್ಮಿಸಲಾಗಿದೆ. ಹುಳಿಯಾರ್ ಪಟ್ಟಣದಿಂದ ಸಿರಾ ಪಟ್ಟಣಕ್ಕೆ ತೆರಳುವ  ಮಾರ್ಗದಲ್ಲಿ ಸುಮಾರು 8 ಕಿಲೋಮೀಟರ್ ಕ್ರಮಿಸಿದರೆ ಮಂದಿರ ಸಿಗುತ್ತದೆ .

ವಿಳಾಸ:

ಶ್ರೀ ಶಿರಡಿ ಸಾಯಿಬಾಬಾ ಇಂಟರ್ ನ್ಯಾಷನಲ್ ಸರ್ವೀಸ್ ಫೌಂಡೆಶನ್ (ನೋಂದಣಿ)
ಬೋರನಕಣಿವೆ ಗ್ರಾಮ, ಚಿಕ್ಕನಾಯಕನಹಳ್ಳಿ ತಾಲೂಕು, 
ತುಮಕೂರು  ಜಿಲ್ಲೆ- 572 218,
ಕರ್ನಾಟಕ, ಭಾರತ

ಸಂಪರ್ಕಿಸಬೇಕಾದ ವ್ಯಕ್ತಿಗಳು: 

ಶ್ರೀ.ಬಿ.ವಿಠಲ್/ಶ್ರೀ.ಎನ್.ರವೀಂದ್ರ

ದೂರವಾಣಿ ಸಂಖ್ಯೆ: 

98805 12226/90600 45100

ಮಂದಿರದ ಉದ್ಘಾಟನೆಯ ವಿಡಿಯೋಗಳು: 
 
ಕನ್ನಡ ಅನುವಾದ: ಶ್ರೀಕಂಠ ಶರ್ಮ 

No comments:

Post a Comment