Thursday, July 23, 2015

ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಗುರುಪೂರ್ಣಿಮೆ ಉತ್ಸವ -2015 ಆಚರಣೆ - ಪತ್ರಿಕಾ ಪ್ರಕಟಣೆ - ಕೃಪೆ: ಸಾಯಿಅಮೃತಧಾರಾ.ಕಾಂ

ಶ್ರೀ ಸಾಯಿಬಾಬಾ ಸಂಸ್ಥಾನವು  ಇದೇ ತಿಂಗಳ 30ನೇ ಜುಲೈ 2015, ಗುರುವಾರದಿಂದ  1ನೇ ಆಗಸ್ಟ್ 2015, ಶನಿವಾರ ದವರಗೆ ಗುರುಪೂರ್ಣಿಮೆ ಉತ್ಸವವನ್ನು ಅತ್ಯಂತ ವೈಭವದಿಂದ ಆಚರಿಸುತ್ತಿದ್ದು ಎಲ್ಲ ಸಾಯಿ ಭಕ್ತರು  ಹೆಚ್ಚಿನ  ಸಂಖ್ಯೆಯಲ್ಲಿ ಈ ಉತ್ಸವದಲ್ಲಿ ಪಾಲ್ಗೊಂಡು ಉತ್ಸವವನ್ನು  ಯಶಸ್ವಿಗೊಳಿಸಬೇಕೆಂದು ಶ್ರೀ ಸಾಯಿಬಾಬಾ ಸಂಸ್ಥಾನದ  ಕಾರ್ಯಕಾರಿ ಅಧಿಕಾರಿಗಳಾದ ಮಾತನಾಡಿದ ಶ್ರೀ.ರಾಜೇಂದ್ರ ಜಾಧವ್ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು. 

ಸುದ್ಧಿಗಾರರೊಂದಿಗೆ ಮಾತನಾಡಿದ ಶ್ರೀ.ರಾಜೇಂದ್ರ ಜಾಧವ್ ರವರು,  ಅನಾದಿ ಕಾಲದಿಂದಲೂ ಈ ಗುರು-ಶಿಷ್ಯರ ಬಾಂಧವ್ಯವು  ನಡೆದುಕೊಂಡು ಬಂದಿದ್ದು, ಗುರುವಿಗೆ ಕೃತಜ್ಞತೆಯನ್ನು ಸಲ್ಲಿಸುವ ಸಲುವಾಗಿ  ಪ್ರತಿ ವರ್ಷದ ಆಷಾಢ ಮಾಸದ ಹುಣ್ಣಿಮೆಯ  ದಿನದಂದು ಗುರುಪೂರ್ಣಿಮೆ ಉತ್ಸವವಾಗಿ  ಆಚರಿಸಲಾಗುತ್ತದೆ  ಎಂದು ತಿಳಿಸಿದರು. 

ಬಾಬಾರವರ ಅವತರಣ ಕಾಲದಿಂದಲೂ ಗುರು ಪೂರ್ಣಿಮೆ ಉತ್ಸವವನ್ನು ಅತ್ಯಂತ ವಿಜೃಂಭಣೆಯಿಂದ  ಆಚರಿಸಿಕೊಂಡು ಬರಲಾಗುತ್ತಿದೆ. ಅಂತೆಯೇ, ಇಂದಿಗೂ  ಈ  ಉತ್ಸವಕ್ಕೆ ಅಷ್ಟೇ ಹೆಚ್ಚಿನ ಪ್ರಾಮುಖ್ಯತೆಯನ್ನು  ನೀಡಲಾಗುತ್ತಿದ್ದು, ಎಣಿಕೆಯಿಲ್ಲದಷ್ಟು ಸಾಯಿ ಭಕ್ತರು ಸಾಯಿಬಾಬಾರವರ ಸಮಾಧಿಯ ದರ್ಶನಕ್ಕಾಗಿ ಶಿರಡಿಗೆ ಆಗಮಿಸುವ ಪರಿಪಾಠ ಇಟ್ಟುಕೊಂಡಿದ್ದಾರೆ. ಸಾಯಿ ಭಕ್ತರು ಈ ವರ್ಷದ ಉತ್ಸವದ ವಿವರಗಳಿಗಾಗಿ  ಈ  ಕೆಳಗೆ   ನೀಡಲಾಗಿರುವ ಆಮಂತ್ರಣ ಪತ್ರವನ್ನು ನೋಡಬಹುದಾಗಿರುತ್ತದೆ: 


30ನೇ ಜುಲೈ 2015, ಗುರುವಾರದಿಂದ  1ನೇ ಆಗಸ್ಟ್ 2015, ಶನಿವಾರ ದವರಗೆ ನಡೆಯುವ ಗುರುಪೂರ್ಣಿಮೆ ಉತ್ಸವಕ್ಕಾಗಿ ಶಿರಡಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಹರಿದು ಬರುವ ಕಾರಣ ಈ ದಿನಗಳಲ್ಲಿ ಆರತಿ ಮತ್ತು ದರ್ಶನದ ಪಾಸ್ ಗಳನ್ನು ವಿತರಿಸಲಾಗುವುದಿಲ್ಲವೆಂದು ಶ್ರೀ ಶ್ರೀ.ರಾಜೇಂದ್ರ ಜಾಧವ್ ಸುದ್ಧಿಗಾರರಿಗೆ ತಿಳಿಸಿದರು 

ರಾಜ್ಯದ ಹಾಗೂ ದೇಶದ ವಿವಿಧ ಭಾಗಗಳಿಂದ ಶಿರಡಿಗೆ ಬರುವ ಭಕ್ತರು ಹಾಗೂ ಮುಂಬೈ ಮತ್ತು ಪುಣೆಯಿಂದ ಶಿರಡಿಗೆ ಪಲ್ಲಕ್ಕಿಯನ್ನು ಹೊತ್ತುಕೊಂಡು ಬರುವ ಭಕ್ತರಿಗೆ ವಸತಿಯನ್ನು ಕಲ್ಪಿಸುವ ಉದ್ದೇಶದಿಂದ ದೇವಾಲಯದ ಆವರಣ, ಸಾಯಿ ಪ್ರಸಾದ ಭಕ್ತ ನಿವಾಸ ವಾಹನ ನಿಲುಗಡೆ ಸ್ಥಳ ಹಾಗೂ ಇನ್ನಿತರ ಕಡೆಗಳಲ್ಲಿ ಶಾಮಿಯಾನದ ವ್ಯವಸ್ಥೆಯನ್ನು ಮಾಡಲಾಗಿದೆ. ಈಗ ಮಳೆಗಾಲದ ಋತುಮಾನವಾಗಿರುವುದರಿಂದ ಶಾಮಿಯಾನಗಳ ಮೇಲೆ ಪ್ಲಾಸ್ಟಿಕ್ ಹಾಳೆಗಳನ್ನು ಹೊದ್ದಿಸಲಾಗುವುದು. ಸಾಯಿ ಆಶ್ರಮ - 2ನೇ ಹಂತದಲ್ಲಿ ಪಾದಯಾತ್ರಿಗಳಿಗೆ ಉಚಿತವಾಗಿ ಉಳಿದುಕೊಳ್ಳಲು ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಉತ್ಸವಕ್ಕೆ ಆಗಮಿಸುವ ಎಲ್ಲ ಸಾಯಿಭಕ್ತರಿಗೂ ಲಾಡು ಪ್ರಸಾದ ದೊರೆಯುವಂತೆ ಮಾಡಲು ಸುಮಾರು  250 ಕ್ವಿಂಟಾಲ್ ಸಕ್ಕರೆಯನ್ನು ಬಳಸಿ ಲಾಡುಗಳನ್ನು ತಯಾರಿಸಲಾಗುತ್ತಿದೆ ಎಂದು ಶ್ರೀ.ಜಾಧವ್ ತಿಳಿಸಿದರು. 

ಉತ್ಸವದ ಮೂರೂ ದಿನಗಳೂ ವಿವಿಧ ಕಲಾವಿದರುಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಉತ್ಸವದ ಮೊದಲನೇ ದಿನವಾದ 30ನೇ ಜುಲೈ 2015, ಗುರುವಾರ ದಂದು ಸಂಜೆ 4 ರಿಂದ 6 ರವರೆಗೆ ಶ್ರೀ.ಮಾಧವರಾವ್ ಅಜಗಾವಣಕರ್ ರವರಿಂದ ಕೀರ್ತನೆಯನ್ನು ಏರ್ಪಡಿಸಲಾಗಿದೆ. ಸಂಜೆ 7.00 ಗಂಟೆಗೆ ಭೂಪಾಲ್ ನ ಶ್ರದ್ಧಾ ಭಕ್ತಿ ಕಲ್ಯಾಣ್ ಸಂಸ್ಥಾನದ ವತಿಯಿಂದ ಸಾಯಿ ಭಜನೆಯ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ರಾತ್ರಿ 8 ಗಂಟೆಗೆ "ಶ್ರೀ ಸಾಯಿ ಮಹಿಮಾ ಗುಣಗಾನ" ಎಂಬ ಹರಿಕಥೆಯನ್ನು ನಾಸಿಕ್ ನ ಹರಿ ಭಕ್ತಪರಾಯಣ ಪಂಡಿತ್ ದೇವರಾವಜಿ ಕುಲಮೇತೆಯವರಿಂದ ಏರ್ಪಡಿಸಲಾಗಿದೆ ಹಾಗೂ ರಾತ್ರಿ 9ಗಂಟೆಗೆ ಹುಬ್ಬಳ್ಳಿಯ ಶ್ರೀ ಸಾಯಿ ದರ್ಬಾರ್ ಆರ್ಕೆಷ್ಟ್ರಾ ತಂಡದಿಂದ "ಏಕ ಶ್ಯಾಮ್ ಸಾಯಿ ಕಾ ನಾಮ್" ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. 

ಉತ್ಸವದ ಎರಡನೇ  ದಿನವಾದ 31ನೇ ಜುಲೈ 2015, ಶುಕ್ರವಾರ ದಂದು ಸಂಜೆ 4 ರಿಂದ 6 ರವರೆಗೆ ಶ್ರೀ.ಮಾಧವರಾವ್ ಅಜಗಾವಣಕರ್ ರವರಿಂದ ಕೀರ್ತನೆಯನ್ನು ಏರ್ಪಡಿಸಲಾಗಿದೆ. ಸಂಜೆ 7.00 ಗಂಟೆಗೆ ಥಾಣೆಯ ಶ್ರೀ ರೇಣುಕಾ ಕಲಾಮಂಚ್ ನ ವತಿಯಿಂದ ಭಜನಿ ಬರೂದ್  ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ರಾತ್ರಿ 8 ಗಂಟೆಗೆ ಕೇರಳದ ಶ್ರೀ.ತಿರುವೈಳವಾಮಲ ಗೋಪಿಯವರಿಂದ ಪಂಚವಾದ್ಯ ಸಂಗೀತವನ್ನು ಏರ್ಪಡಿಸಲಾಗಿದೆ ಹಾಗೂ ರಾತ್ರಿ 9 ಗಂಟೆಗೆ ಮಲೇಶಿಯಾದ ವಿ.ನೌಶಮಿ ತಂಡದಿಂದ "ಏಕ ಶ್ಯಾಮ್ ಸಾಯಿ ಕಾ ನಾಮ್" ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. 

ಉತ್ಸವದ ಕೊನೆಯ ದಿನವಾದ 1ನೇ ಆಗಸ್ಟ್ 2015, ಶುಕ್ರವಾರ ದಂದು ಬೆಳಿಗ್ಗೆ 10.30 ಕ್ಕೆ ಶ್ರೀ.ಮಾಧವರಾವ್ ಅಜಗಾವಣಕರ್ ರವರಿಂದ ಗೋಪಾಲಕಾಲ ಕೀರ್ತನೆ ಮತ್ತು ದಹಿಹಂಡಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಸಂಜೆ 7.00 ಗಂಟೆಗೆ ಭೂಪಾಲ್ ನ ಶ್ರೀ.ಸುಮಿತ್ ಪೋಂಡಾರವರಿಂದ ಶ್ರೀ ಸಾಯಿ ಅಮೃತಕಥಾವನ್ನು ಏರ್ಪಡಿಸಲಾಗಿದೆ. ರಾತ್ರಿ 8 ಗಂಟೆಗೆ ನವದೆಹಲಿಯ ಶ್ರೀಮತಿ.ವನಿತಾ ಬಜಾಜ್ ರವರಿಂದ ಸಾಯಿ ಭಜನೆಯ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಮತ್ತು ರಾತ್ರಿ 9 ಗಂಟೆಗೆ ನಾಸಿಕ್ ನ ಶ್ರೀ.ಪಂಢರಿನಾಥ್ ರವ್ಜಿ  ಜಾಧವ್ ರವರಿಂದ ಅಭಂಗ್ ಮತ್ತು ಸಾಯಿ ಭಜನೆಯ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. 

ಉತ್ಸವದ ಅಂಗವಾಗಿ ದೆಹಲಿಯ ಶ್ರೀ.ಗೌತಮ್ ಸಹಿನಿ ಮತ್ತು ಶ್ರೀ.ಅನುಪ್ ಜೋಷಿಯವರುಗಳು ನೀಡಿರುವ ಉದಾರವಾದ ದೇಣಿಗೆಯ ಸಹಾಯದಿಂದ ಸಮಾಧಿ ಮಂದಿರ ಮತ್ತು ಅದರ ಸುತ್ತಮುತ್ತಲೂ ಹೂವಿನ ಅಲಂಕಾರವನ್ನು ಹಮ್ಮಿಕೊಳ್ಳಲಾಗಿದೆ. ಮುಂಬೈನ ಸಾಯಿರಾಜ್ ಡೆಕೋರೇಟರ್ಸ್ ನ ವತಿಯಿಂದ ದೇವಾಲಯದ ಪ್ರಾಂಗಣವನ್ನು ಸುಂದರ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗುತ್ತಿದೆ.

ಉತ್ಸವದ ಎಲ್ಲಾ ಮೂರು ದಿನಗಳೂ ಬರುವ ಎಲ್ಲಾ ಸಾಯಿ ಭಕ್ತರಿಗೂ ಸಾಯಿ ಪ್ರಸಾದಾಲಯದಲ್ಲಿ ಉಚಿತ ಪ್ರಸಾದ ಭೋಜನವನ್ನು ಏರ್ಪಡಿಸಲಾಗಿದೆ. ಲಕ್ನೌ ನ ಶ್ರೀ.ವಿಕ್ರಮ್ ಕಪೂರ್, ಹೈದರಾಬಾದ್ ನ ಶ್ರೀಮತಿ.ಶಿವಾನಿ ದತ್ತಾ, ಮುಂಬೈನ ಶ್ರೀ.ಅಧ್ಯಾನ್ ನಾರಂಗ್, ಶ್ರೀ.ರಾಜಗೋಪಾಲ್ ನಟರಾಜನ್, ಶ್ರೀಮತಿ.ಗಿರಿಜಾ ದೊರೈಸ್ವಾಮಿ, ಬೆಂಗಳೂರಿನ ಶ್ರೀ.ಮಾಕಂ ರಾಧಾಕೃಷ್ಣ ಅಮರನಾಥ್, ವಿಜಯವಾಡದ ಶ್ರೀಮತಿ.ರತ್ನ ಮಾಣಿಕ್ಯಂ, ಮುಂಬೈನ ಶ್ರೀ.ನವೀನ ಸಿಂಗ್, ಬೆಂಗಳೂರಿನ ಶ್ರೀಮತಿ.ಭಾಗ್ಯವತಿ ಮತ್ತು ಶ್ರೀ ಚತುರ್ಭುಜ ವರ್ಮ ಹಾಗೂ ಶ್ರೀ.ಗೌರವ್ ಭಾರದ್ವಾಜ್ , ಸಿಕಂದರಾಬಾದ್ ನ ಶ್ರೀ.ಕೆ.ರಾಮಮೂರ್ತಿ ಮತ್ತು ಶ್ರೀಮತಿ.ಮಾಧವಿ, ತಿರುಪತಿಯ ಶ್ರೀ.ಭಟ್ಯಾಲಾ ಚಂಗಲ ರಾಯಡು, ಹೈದರಾಬಾದ್ ನ ಶ್ರೀ.ಸುರೇಶ ರೆಡ್ಡಿ, ಮುಂಬೈನ ಶ್ರೀ.ಸುನೀಲ್ ಅಗರವಾಲ್, ಅಹಮದಾಬಾದ್ ನ ಶ್ರೀಮತಿ.ರಾಜಶ್ರೀ ಪಟೇಲ್, ಭೂಪಾಲ್ ನ ಶ್ರೀ.ದೇವ್ ಸುಮನ್ ಶರ್ಮ, ಹೈದರಾಬಾದ್ ನ ಶ್ರೀಮತಿ.ಕಲಾ ಗೋಣಿ ವಾಸು, ದೆಹಲಿಯ ಶ್ರೀ.ದೀಪಕ್ ಸೇರು, ಹೈದರಾಬಾದ್ ನ ಶ್ರೀಮತಿ.ಸುಶೀಲಾದೇವಿ ಜಿ.ಮಸಾನಿ ಗೋಂದಿಯಾ ಮತ್ತು ಶ್ರೀಮತಿ.ಸಹನಾ - ಈ ಎಲ್ಲಾ ಮಹನೀಯರುಗಳು ಈ ಉಚಿತ ಪ್ರಸಾದ ಭೋಜನಕ್ಕೆ ಉದಾರವಾಗಿ ದೇಣಿಗೆಯನ್ನು ನೀಡಿರುತ್ತಾರೆ. ಸಮಾಧಿ ಮಂದಿರದ ಪ್ರಾಂಗಣದ ಮೂರು ಸ್ಥಳಗಳಲ್ಲಿ, ಸರತಿ ಸಾಲಿನ ಕಾಂಪ್ಲೆಕ್ಸ್ ನಲ್ಲಿ ಹಾಗೂ ಸಾಯಿ ಆಶ್ರಮದಲ್ಲಿ ಪ್ರಥಮ ಚಿಕಿತ್ಸಾ ಘಟಕಗಳನ್ನು ಸ್ಥಾಪಿಸಲಾಗಿದೆ. ತುರ್ತು ಸಂದರ್ಭವನ್ನು ಗಮನದಲ್ಲಿಟ್ಟುಕೊಂಡು ಸಮಾಧಿ ಮಂದಿರದ ಪ್ರಾಂಗಣದಲ್ಲಿ ಆಂಬ್ಯುಲೆನ್ಸ್ ಸೇವೆಯ ವ್ಯವಸ್ಥೆ ಮಾಡಲಾಗಿದೆ ಮತ್ತು ತಜ್ಞ ವೈದ್ಯರ ತಂಡಗಳನ್ನು ರಚಿಸಲಾಗಿದ್ದು ಸರತಿ ಸಾಲಿನ ಕಾಂಪ್ಲೆಕ್ಸ್ ನಲ್ಲಿ ಅವರುಗಳು  ಇಪ್ಪತ್ತನಾಲ್ಕು ಗಂಟೆಗಳೂ ಎರಡು ಪಾಳಿಗಳಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. 

ಈ ವರ್ಷದ ಗುರುಪೂರ್ಣಿಮೆ ಉತ್ಸವವನ್ನು ಅತ್ಯಂತ ಯಶಸ್ವಿಯಾಗಿ ನಡೆಯುವಂತೆ  ಮಾಡುವಲ್ಲಿ ಶ್ರೀ ಶಿರಡಿ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷರು ಮತ್ತು  ಮುಖ್ಯ ಜಿಲ್ಲಾ ನ್ಯಾಯಾಧೀಶರೂ ಆದ ಶ್ರೀ.ವಿನಯ್ ಜೋಷಿ, ಶ್ರೀ ಸಾಯಿಬಾಬಾ ಸಂಸ್ಥಾನದ  ತ್ರಿ-ಸದಸ್ಸ ಸಮಿತಿಯ ಸದಸ್ಯರು ಮತ್ತು ಜಿಲ್ಲಾ ಕಲೆಕ್ಟರ್ ಶ್ರೀ.ಅನಿಲ್ ಕಾವಡೆ, ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ರಾಜೇಂದ್ರ ಜಾಧವ್, ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆ, ಎಲ್ಲಾ ಕಾರ್ಯ ನಿರ್ವಾಹಕ ಅಧಿಕಾರಿಗಳು, ಎಲ್ಲಾ ವಿಭಾಗೀಯ ಮುಖ್ಯಸ್ಥರು ಮತ್ತು ಶ್ರೀ  ಶಿರಡಿ ಸಾಯಿಬಾಬಾ ಸಂಸ್ಥಾನದ ಎಲ್ಲಾ ಸಿಬ್ಬಂದಿ ವರ್ಗದವರೂ ಹೆಚ್ಚಿನ ಶ್ರಮವಹಿಸಿ ಕಾರ್ಯ  ನಿರ್ವಹಿಸಿರುತ್ತಾರೆ. 


ಮರಾಠಿಯಿಂದ ಆಂಗ್ಲ ಭಾಷೆಗೆ: ಶ್ರೀ.ನಾಗರಾಜ್ ಅನ್ವೇಕರ್, ಬೆಂಗಳೂರು
ಆಂಗ್ಲ ಭಾಷೆಯಿಂದ ಕನ್ನಡಕ್ಕೆ:  ಶ್ರೀಕಂಠ ಶರ್ಮ



No comments:

Post a Comment