Thursday, June 14, 2012

ಚನ್ನೈ ನ ಶಿರಡಿ ಸಾಯಿಬಾಬಾ ಮಂದಿರ - ನೂತನ ಶಿರಡಿ ಸಾಯಿ ಬ್ರಹ್ಮ ಪೀಠಂ, ಸಾಯಿ ಬ್ರಹ್ಮ ಮಿಷನ್ ಚಾರಿಟಬಲ್ ಟ್ರಸ್ಟ್ (ನೋಂದಣಿ), ನಂ.135, ಮುಖ್ಯ ರಸ್ತೆ, ಗೋಮತಿಪುರಂ, ತಿರುನಿನ್ರವೂರು-602 024, ತಿರುವೆಲ್ಲೂರು ಜಿಲ್ಲೆ, ಚನ್ನೈ, ತಮಿಳುನಾಡು, ಭಾರತ -  ಕೃಪೆ: ಸಾಯಿಅಮೃತಧಾರಾ.ಕಾಂ

ದೇವಾಲಯದ ವಿಶೇಷತೆಗಳು:

ಈ ದೇವಾಲಯವು ಚನ್ನೈನ ತಿರುವೆಲ್ಲೂರು ಜಿಲ್ಲೆಯ ತಿರುನಿನ್ರವೂರು ಪಟ್ಟಣದ ಗೋಮತಿಪುರಂ ಮುಖ್ಯರಸ್ತೆಯಲ್ಲಿ ಇರುತ್ತದೆ. ತಿರುನಿನ್ರವೂರು ಪಟ್ಟಣವು ಚನ್ನೈ ಸೆಂಟ್ರಲ್ - ಆವಡಿ ಆರಕ್ಕೋನಂ ರೈಲ್ವೇ ಮಾರ್ಗದಲ್ಲಿರುತ್ತದೆ. ದೇವಾಲಯವು ಆವಡಿಯಿಂದ 6 ಕಿಲೋಮೀಟರ್ ಮತ್ತು ತಿರುನಿನ್ರವೂರು ಬಸ್  ನಿಲ್ದಾಣದಿಂದ ಹಾಗೂ ರೈಲು ನಿಲ್ದಾಣದಿಂದ ಕೇವಲ 1 ಕಿಲೋಮೀಟರ್ ದೂರದಲ್ಲಿ ಇರುತ್ತದೆ.

ದೇವಾಲಯದ ಉದ್ಘಾಟನೆಯನ್ನು 6ನೇ ಸೆಪ್ಟೆಂಬರ್ 1998 ರಂದು ಅಲ್ಲಾ ಮಾಲಿಕ್ ಶ್ರೀ ಸಂತಾನ ಸಾಯಿಬಾಬಾ ಗುರೂಜಿಯವರು ನೆರವೇರಿಸಿರುತ್ತಾರೆ.

ಶ್ರೀ.ಆರ್.ಸಂತಾನ  ಕೃಷ್ಣನ್ ರವರು ದೇವಾಲಯದ ಸಂಸ್ಥಾಪಕ ಅಧ್ಯಕ್ಷರಾಗಿರುತ್ತಾರೆ. ದೇವಾಲಯದ ಟ್ರಸ್ಟ್ ನ ಆಡಳಿತ  ಮಂಡಳಿಯ ಪದಾಧಿಕಾರಿಗಳು ದೇವಾಲಯದ ದಿನನಿತ್ಯದ ಆಗುಹೋಗುಗಳನ್ನು ಮತ್ತು ಅಭಿವೃದ್ಧಿ ಕಾರ್ಯಗಳನ್ನು ಬಹಳ  ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ.

ದೇವಾಲಯವನ್ನು 15 ವರ್ಷಗಳ ಹಿಂದೆ ಸ್ಥಾಪಿಸಲಾಗಿದ್ದು, ಇಲ್ಲಿ ಮೊದಲಿಗೆ 3x3 ಗರ್ಭಗುಡಿಯಲ್ಲಿ ಕಪ್ಪುಶಿಲೆಯ ಸಾಯಿಬಾಬಾರವರ ವಿಗ್ರಹ, ದ್ವಾರಕಾಮಾಯಿ ಹಾಗೂ ಪವಿತ್ರ ಧುನಿಯನ್ನು ಸ್ಥಾಪನೆ ಮಾಡಲಾಯಿತು. 2009ನೇ ಇಸವಿಯಲ್ಲಿ ಕಪ್ಪುಶಿಲೆಯ ಸಾಯಿಬಾಬಾರವರ ವಿಗ್ರಹದ ಬದಲಿಗೆ ಸಾಯಿಭಕ್ತರೊಬ್ಬರು ಕಾಣಿಕೆಯಾಗಿ ನೀಡಿದ 5 ಅಡಿ ಎತ್ತರದ ಸುಂದರ ಅಮೃತಶಿಲೆಯ ವಿಗ್ರಹವನ್ನು ಪ್ರತಿಷ್ಟಾಪಿಸಲಾಯಿತು. ಜೂನ್ 2011 ರಲ್ಲಿ ಕಪ್ಪು ಶಿಲೆಯ ರಾಘವೇಂದ್ರ ಸ್ವಾಮಿಯವರ ವಿಗ್ರಹವನ್ನು ಪ್ರತಿಷ್ಟಾಪಿಸಲಾಯಿತು.

ದೇವಾಲಯದಲ್ಲಿ ದ್ವಾರಕಾಮಾಯಿ, ಗುರುಸ್ಥಾನ ಮತ್ತು ಪವಿತ್ರ ಧುನಿಯನ್ನು ಕೂಡ ಪ್ರತಿಷ್ಟಾಪಿಸಲಾಗಿರುತ್ತದೆ.

ದೇವಾಲಯದಲ್ಲಿ ಮರದ ಪಲ್ಲಕ್ಕಿಯಿದ್ದು ಇದನ್ನು ಪ್ರತಿ ಗುರುವಾರ ಪಲ್ಲಕ್ಕಿ ಉತ್ಸವದ ಸಂದರ್ಭದಲ್ಲಿ ಬಳಸಲಾಗುತ್ತದೆ.









ದೇವಾಲಯದ ಕಾರ್ಯಚಟುವಟಿಕೆಗಳು:

ದಿನನಿತ್ಯದ ಕಾರ್ಯಕ್ರಮಗಳು:

ದೇವಾಲಯದ ಸಮಯ:

ಬೆಳಿಗ್ಗೆ : 6 ಗಂಟೆಯಿಂದ 12 ಗಂಟೆಯವರೆಗೆ.
ಸಂಜೆ 5:30 ರಿಂದ 8:30 ರವರೆಗೆ.

ಆರತಿಯ ಸಮಯ:

ಪ್ರತಿ ಭಾನುವಾರ ಮಧ್ಯಾನ್ಹ 12 ಗಂಟೆಗೆ ವಿಶೇಷ ಆರತಿಯ ಕಾರ್ಯಕ್ರಮವಿರುತ್ತದೆ.

ಪ್ರತಿ ಗುರುವಾರ ಸಂಜೆ 7:45 ರವರೆಗೆ ಸಾಯಿ ಭಜನೆಯ ಕಾರ್ಯಕ್ರಮವಿರುತ್ತದೆ. ಭಜನೆಯ ನಂತರ ಪಲ್ಲಕ್ಕಿ ಉತ್ಸವ ಹಮ್ಮಿಕೊಳ್ಳಲಾಗುತ್ತದೆ. ಪಲ್ಲಕ್ಕಿ ಉತ್ಸವದ ನಂತರ ಶೇಜಾರತಿಯನ್ನು ಮಾಡಲಾಗುತ್ತದೆ ಹಾಗೂ ಪ್ರಸಾದವನ್ನು ವಿತರಿಸಲಾಗುತ್ತದೆ.

ಪ್ರತಿ ಭಾನುವಾರ ಬೆಳಿಗ್ಗೆ 10:30 ಕ್ಕೆ ಸಾಯಿಬಾಬಾರವರ ವಿಗ್ರಹಕ್ಕೆ ವಿಶೇಷ ಅಭಿಷೇಕವನ್ನು ಮಾಡಲಾಗುತ್ತದೆ. ಮಧ್ಯಾನ್ಹ 12 ಗಂಟೆಗೆ ವಿಶೇಷ ಆರತಿಯ ಕಾರ್ಯಕ್ರಮವಿರುತ್ತದೆ. ಆರತಿಯ ನಂತರ ಸುಮಾರು 100 ಜನರಿಗೆ ಅನ್ನ ಸಂತರ್ಪಣೆಯನ್ನು ಮಾಡಲಾಗುತ್ತದೆ.

ವಿಶೇಷ ಉತ್ಸವದ ದಿನಗಳು:

ಪ್ರತಿವರ್ಷ  ೬ನೇ ಸೆಪ್ಟೆಂಬರ್ ದೇವಾಲಯದ ವಾರ್ಷಿಕೋತ್ಸವ.

ದೇವಾಲಯದ ಸಾಮಾಜಿಕ ಕಾರ್ಯಚಟುವಟಿಕೆಗಳು:

ದೇವಾಲಯದಲ್ಲಿ ಪ್ರತಿ ಭಾನುವಾರ ಮಧ್ಯಾನ್ಹ ಆರತಿಯ ನಂತರ ಅನ್ನದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ.

ದೇವಾಲಯದ ಹತ್ತಿರ ಇರುವ ವೃದ್ಧಾಶ್ರಮದ ಸುಮಾರು 50 ಜನರಿಗೆ ಉಚಿತವಾಗಿ ಮಹಾಪ್ರಸಾದವನ್ನು ಕಳುಹಿಸಿಕೊಡಲಾಗುತ್ತಿದೆ.

ದೇಣಿಗೆಗೆ ಮನವಿ:

ದೇವಾಲಯದ ವಿಸ್ತರಣೆ ಕಾರ್ಯವನ್ನು ಕೈಗೆತ್ತಿಕೊಂಡಿರುವುದರಿಂದ ದೇವಾಲಯವನ್ನು ತಾತ್ಕಾಲಿಕವಾಗಿ ಮೊದಲನೆ ಮಹಡಿಗೆ ಸ್ಥಳಾಂತರಿಸಲಾಗಿದೆ. ಅನೇಕ ಸಾಯಿಭಕ್ತರ ಸಹಕಾರದಿಂದ ದೇವಾಲಯದ ವಿಸ್ತರಣೆ ಕಾರ್ಯವು 29ನೇ ಸೆಪ್ಟೆಂಬರ್ 2011 ರಂದು ಪ್ರಾರಂಭವಾಗಿರುತ್ತದೆ.  ದೇವಾಲಯದ ರಾಜಗೋಪುರದ ನಿರ್ಮಾಣದ ಕೆಲಸ ಬಹುತೇಕ ಪೂರ್ಣಗೊಂಡಿದ್ದು ಧ್ಯಾನಮಂದಿರಕ್ಕೆ ಧುನಿಯನ್ನು ವಿಸ್ತರಿಸುವ ಕೆಲಸ ಭರದಿಂದ ಸಾಗುತ್ತಿದೆ. ಅಷ್ಟೇ ಅಲ್ಲದೆ, ಶ್ರೀ ಆಂಜನೇಯ ಸ್ವಾಮಿ , ಶ್ರೀ ಗಣಪತಿ ಹಾಗೂ ಈಗಾಗಲೇ ಸ್ಥಾಪಿಸಲಾಗಿರುವ ಶಿರಡಿ ಸಾಯಿಬಾಬಾ, ರಾಘವೇಂದ್ರ ಸ್ವಾಮಿಯ ದೇವಾಲಯಗಳನ್ನು ದೇವಾಲಯದಲ್ಲಿ ಒಂದೇ ಸೂರಿನಡಿಯಲ್ಲಿ ಸ್ಥಾಪಿಸಲು ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಮೇಲಿನ ಈ ಮಹತ್ ಕಾರ್ಯಕ್ಕಾಗಿ ಹಾಗೂ ಕುಂಭಾಭಿಷೇಕ ಕಾರ್ಯಕ್ರಮಗಳಿಗಾಗಿ ದೇಣಿಗೆಯ ಅಗತ್ಯವಿರುತ್ತದೆ. ಸಾಯಿ ಬ್ರಹ್ಮ ಮಿಷನ್ ಚಾರಿಟಬಲ್ ಟ್ರಸ್ಟ್ (ನೋಂದಣಿ) ಯು ದೇವಾಲಯದ ಅಭಿವೃದ್ಧಿ ಕಾರ್ಯಗಳಿಗಾಗಿ ಸಾಯಿಭಕ್ತರುಗಳು ದೇಣಿಗೆಯನ್ನು ನೀಡಬೇಕೆಂದು ಮನವಿ ಮಾಡಿಕೊಳ್ಳುತ್ತದೆ. ದೇಣಿಗೆಯನ್ನು  ನೀಡಲು  ಇಚ್ಚಿಸುವ  ಸಾಯಿಭಕ್ತರು ನಗದು /ಚೆಕ್ /ಡಿಡಿ ರೂಪದಲ್ಲಿ "ಸಾಯಿ ಬ್ರಹ್ಮ ಮಿಷನ್ ಚಾರಿಟಬಲ್ ಟ್ರಸ್ಟ್ (ನೋಂದಣಿ)" ಇವರಿಗೆ  ಸಂದಾಯವಾಗುವಂತೆ ಈ ಕೆಳಕಂಡ ಬ್ಯಾಂಕ್ ಖಾತೆಗೆ ಹಣವನ್ನು ಸಂದಾಯ ಮಾಡಬಹುದಾಗಿದೆ.

ಭಾರತೀಯ ಸ್ಟೇಟ್ ಬ್ಯಾಂಕ್, ಪಡಿ ಶಾಖೆ - ಬ್ರಾಂಚ್ ಕೋಡ್ - 05083, - ಖಾತೆ ಸಂಖ್ಯೆ 30248221094 ಐ.ಎಫ್.ಎಸ್.ಸಿ. ಕೋಡ್ - SBIN0005083.


ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ:


ಸ್ಥಳ:
ದೇವಾಲಯವು ಆವಡಿಯಿಂದ 6 ಕಿಲೋಮೀಟರ್ ಮತ್ತು ತಿರುನಿನ್ರವೂರು ಬಸ್  ನಿಲ್ದಾಣದಿಂದ ಹಾಗೂ ರೈಲು ನಿಲ್ದಾಣದಿಂದ ಕೇವಲ 1 ಕಿಲೋಮೀಟರ್ ದೂರದಲ್ಲಿ ಇರುತ್ತದೆ.

ವಿಳಾಸ:
ನೂತರ ಶಿರಡಿ ಸಾಯಿ ಬ್ರಹ್ಮ ಪೀಠಂ,
ಸಾಯಿ ಬ್ರಹ್ಮ ಮಿಷನ್ ಚಾರಿಟಬಲ್ ಟ್ರಸ್ಟ್ (ನೋಂದಣಿ),
ನಂ.135, ಮುಖ್ಯ ರಸ್ತೆ, ಗೋಮತಿಪುರಂ,
ತಿರುನಿನ್ರವೂರು-602 024,
ತಿರುವೆಲ್ಲೂರು ಜಿಲ್ಲೆ, ಚನ್ನೈ,
ತಮಿಳುನಾಡು, ಭಾರತ

ಸಂಪರ್ಕಿಸಬೇಕಾದ ವ್ಯಕ್ತಿಗಳು:
ಶ್ರೀ.ಆರ್.ಸಂತಾನಕೃಷ್ಣನ್ / ಶ್ರೀ.ಎಸ್.ರಂಗನಾಥನ್ (ಸಾಯಿ ಸ್ಮರಣಾನಂದ).

ದೂರವಾಣಿ ಸಂಖ್ಯೆಗಳು:
+91 44  2634 1087- ಸ್ಥಿರ ದೂರವಾಣಿ / +91 98845 10345 - ಶ್ರೀ.ಎಸ್.ರಂಗನಾಥನ್  / +91 91760 32229 – ಶ್ರೀ.ಆರ್.ಸಂತಾನಕೃಷ್ಣನ್



ಇ ಮೇಲ್ ವಿಳಾಸ:  


ಮಾರ್ಗಸೂಚಿ: 
ತಿರುನಿನ್ರವೂರು ಬಸ್ ನಿಲ್ದಾಣ ಅಥವಾ ರೈಲು ನಿಲ್ದಾಣದಲ್ಲಿ ಇಳಿಯುವುದು. ದೇವಾಲಯವು  ದೇವಾಲಯವು ತಿರುನಿನ್ರವೂರು ಬಸ್  ನಿಲ್ದಾಣದಿಂದ ಹಾಗೂ ರೈಲು ನಿಲ್ದಾಣದಿಂದ ಕೇವಲ 1 ಕಿಲೋಮೀಟರ್ ದೂರದಲ್ಲಿ ಇರುತ್ತದೆ.

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment