Tuesday, March 13, 2012

ಕೋಲಾರ ಜಿಲ್ಲೆಯ ಶಿರಡಿ ಸಾಯಿಬಾಬಾ ಮಂದಿರ - ಶ್ರೀ.ಶಿರಡಿ ಸಾಯಿಬಾಬಾ ಮಂದಿರ, ಶ್ರೀ ಶಿರಡಿ ಸಾಯಿಬಾಬಾ ಟೆಂಪಲ್ ಟ್ರಸ್ಟ್ (ನೋಂದಣಿ), ಅರಳೇರಿ ಮುಖ್ಯರಸ್ತೆ, ಅದರ್ಶನಗರ, ಮಾಲೂರು-563 130, ಕೋಲಾರ ಜಿಲ್ಲೆ, ಕರ್ನಾಟಕ - ಕೃಪೆ: ಸಾಯಿಅಮೃತಧಾರಾ.ಕಾಂ  

ದೇವಾಲಯದ ವಿಶೇಷತೆಗಳು: 

ಈ ದೇವಾಲಯವು ಕೋಲಾರ ಜಿಲ್ಲೆಯಲ್ಲಿರುವ ಮಾಲೂರು ಪಟ್ಟಣದ ಅರಳೇರಿ ಮುಖ್ಯರಸ್ತೆಯಲ್ಲಿರುವ ಆದರ್ಶನಗರದಲ್ಲಿರುತ್ತದೆ. ದೇವಾಲಯವು ಮಾಲೂರು ತಾಲ್ಲೂಕು ಕಚೇರಿಯ ಪಕ್ಕದಲ್ಲಿದ್ದು ಮಾಲೂರು ಬಸ್ ನಿಲ್ದಾಣದಿಂದ ಕೇವಲ 500 ಮೀಟರ್ ಗಳ ಅಂತರದಲ್ಲೂ ಹಾಗೂ ಮಾಲೂರು ರೈಲು ನಿಲ್ದಾಣದಿಂದ ಸುಮಾರು 1 ಕಿಲೋಮೀಟರ್ ಗಳ ಅಂತರದಲ್ಲೂ ಇರುತ್ತದೆ. 

ಈ ದೇವಾಲಯದ ಭೂಮಿ ಪೂಜೆಯನ್ನು ಫೆಬ್ರವರಿ 2008 ರಲ್ಲಿ ಮಾಡಲಾಯಿತು.  

ದೇವಾಲಯವಿರುವ ಸ್ಥಳ ಮತ್ತು ದೇವಾಲಯದ ಪಕ್ಕದಲ್ಲಿರುವ ಉದ್ಯಾನವನವಿರುವ ಸುಮಾರು 4500 ಚದರ ಅಡಿ ಸ್ಥಳವನ್ನು ಮಾಲೂರು ನಗರಸಭೆಯವರು ದೇವಾಲಯದ ಟ್ರಸ್ಟ್ ಗೆ ಮಂಜೂರು ಮಾಡಿರುತ್ತಾರೆ. 

ಈ ದೇವಾಲಯವನ್ನು 12ನೇ ಫೆಬ್ರವರಿ 2009 ರಂದು ಸಿದ್ಧಗಂಗಾ ಮಠದ ಸ್ವಾಮೀಜಿಗಳಾದ ಡಾ.ಶ್ರೀ.ಶ್ರೀ.ಶಿವಕುಮಾರ ಸ್ವಾಮೀಜಿಯವರ ಆಶೀರ್ವಾದದೊಂದಿಗೆ  ಟ್ರಸ್ಟ್ ನ ಸದಸ್ಯರುಗಳು ಸಾವಿರಾರು ಸ್ಥಳೀಯ ಸಾಯಿ ಭಕ್ತರ ಸಮ್ಮುಖದಲ್ಲಿ ಉದ್ಘಾಟನೆ ಮಾಡಿರುತ್ತಾರೆ. 

ಶ್ರೀ.ಶ್ರೀನಿವಾಸ ಮುರ್ತಿಯವರು ಈ ದೇವಾಲಯದ ಸಂಸ್ಥಾಪಕ ಅಧ್ಯಕ್ಷರಾಗಿರುತ್ತಾರೆ. ದೇವಾಲಯದ ದಿನನಿತ್ಯದ ಆಗು ಹೋಗುಗಳನ್ನು ಮತ್ತು ಅಭಿವೃದ್ಧಿ ಕಾರ್ಯಗಳನ್ನು ದೇವಾಲಯದ ಟ್ರಸ್ಟ್ ನ ಆಡಳಿತ ಮಂಡಳಿಯ ಸದಸ್ಯರುಗಳು ಬಹಳ ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ. 

ದೇವಾಲಯದಲ್ಲಿ ಸುಮಾರು 5 1/2  ಅಡಿ ಎತ್ತರದ ಶಿರಡಿ ಸಾಯಿಬಾಬಾರವರ ಸುಂದರ ಅಮೃತ ಶಿಲೆಯ ವಿಗ್ರಹವನ್ನು  ಪ್ರತಿಷ್ಟಾಪಿಸಲಾಗಿದೆ. ಸುಮಾರು 3  ಅಡಿ ಎತ್ತರದ ಪಂಚ ಲೋಹದ ಸಾಯಿಬಾಬಾ ವಿಗ್ರಹವನ್ನು ಸಾಯಿಬಾಬಾರವರ ಅಮೃತ ಶಿಲೆಯ ವಿಗ್ರಹದ ಪಕ್ಕದಲ್ಲಿ ಇರಿಸಲಾಗಿದ್ದು ಇದನ್ನು ವಿಶೇಷ ದಿನಗಳಲ್ಲಿ ಮತ್ತು ಉತ್ಸವದ ದಿನಗಳಲ್ಲಿ ಉತ್ಸವ ಮುರ್ತಿಯಂತೆ ಬಳಸಲಾಗುತ್ತಿದೆ. ಸುಮಾರು 1 1/2 ಅಡಿ ಎತ್ತರದ ಅಮೃತ ಶಿಲೆಯ ಸಾಯಿಬಾಬಾರವರ ವಿಗ್ರಹ, ಜರ್ಮನ್ ಬೆಳ್ಳಿಯಲ್ಲಿ ಮಾಡಿದ ಗಣಪತಿ ಮತ್ತು ರಾಧಾಕೃಷ್ಣ ದೇವರ ವಿಗ್ರಹಗಳು ಮತ್ತು ಅಮೃತ ಶಿಲೆಯ ಪಾದುಕೆಗಳನ್ನು ಕೂಡ ದೇವಾಲಯದಲ್ಲಿ ಸಾಯಿಭಕ್ತರು ನೋಡಬಹುದಾಗಿದೆ. 

ದೇವಾಲಯದ ಗರ್ಭಗುಡಿಯಲ್ಲಿ ಪಂಚಲೋಹದಲ್ಲಿ ಮಾಡಿದ ಸುಮಾರು 1 ಅಡಿ ಎತ್ತರದ  ಮಹಾವಿಷ್ಣುವಿನ ವಿಗ್ರಹವನ್ನು  ಇರಿಸಲಾಗಿದ್ದು ಇದನ್ನು ಪ್ರತಿ ತಿಂಗಳ ಹುಣ್ಣಿಮೆಯ ದಿನ ಶ್ರೀ.ಸಾಯಿ ಸತ್ಯನಾರಾಯಣ ವ್ರತದ ಸಂದರ್ಭದಲ್ಲಿ ಸಾಯಿಬಾಬಾರವರ ವಿಗ್ರಹದ ಜೊತೆಗೆ ಪೂಜೆಗೆ ಇರಿಸಲಾಗುತ್ತದೆ. 

ದೇವಾಲಯದ ಪ್ರವೇಶ ದ್ವಾರದ ಎಡಭಾಗದಲ್ಲಿ ಸುಮಾರು 2 1/2 ಅಡಿ ಎತ್ತರದ  ಕಪ್ಪು ಶಿಲೆಯ ಗಣಪತಿಯ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ. 












ದೇವಾಲಯದ ಕಾರ್ಯಚಟುವಟಿಕೆಗಳು:

ದಿನನಿತ್ಯದ ಕಾರ್ಯಕ್ರಮಗಳು:

ದೇವಾಲಯದ ಸಮಯ: 

ಬೆಳಿಗ್ಗೆ: 6 ರಿಂದ 11 ರವರೆಗೆ.   
ಸಂಜೆ: 5:30 ರಿಂದ 9 ರವರೆಗೆ.  

ಆರತಿಯ ಸಮಯ: 

ಬೆಳಿಗ್ಗೆ: 8 ಘಂಟೆಗೆ   
ಸಂಜೆ: 7:30 ಕ್ಕೆ  

ಪ್ರತಿದಿನ ಬೆಳಿಗ್ಗೆ 6:30 ರಿಂದ 8 ಘಂಟೆಯವರೆಗೆ ಸಾಯಿಬಾಬಾರವರ ಪಂಚಲೋಹ ವಿಗ್ರಹಕ್ಕೆ ಪಂಚಾಮೃತ ಅಭಿಷೇಕವನ್ನು ಮಾಡಲಾಗುತ್ತದೆ. ಸೇವಾ ಶುಲ್ಕ 250/- ರುಪಾಯಿಗಳು.  

ಪ್ರತಿ ತಿಂಗಳ ಹುಣ್ಣಿಮೆಯ ದಿನದಂದು ಸಂಜೆ 6 ಘಂಟೆಯಿಂದ 8 ಘಂಟೆಯವರೆಗೆ  ಶ್ರೀ ಸಾಯಿ ಸತ್ಯನಾರಾಯಣ ವ್ರತವನ್ನು ಆಚರಿಸಲಾಗುತ್ತದೆ. ಸೇವಾ ಶುಲ್ಕ 21/- ರುಪಾಯಿಗಳು.

ವಿಶೇಷ ಉತ್ಸವದ ದಿನಗಳು: 

ಪ್ರತಿ ವರ್ಷದ 12ನೇ ಫೆಬ್ರವರಿ ಯಂದು ದೇವಾಲಯದ ವಾರ್ಷಿಕೋತ್ಸವ. 
ಗುರುಪೂರ್ಣಿಮೆ. 
ವಿಜಯದಶಮಿ. 

ದೇಣಿಗೆಗೆ ಮನವಿ: 

ದೇವಾಲಯದ ಅಭಿವೃದ್ಧಿ ಕಾರ್ಯಗಳಿಗೆ ದೇಣಿಗೆಯನ್ನು ನೀಡಲು ಇಚ್ಚಿಸುವ ಸಾಯಿ ಭಕ್ತರು "ಶ್ರೀ ಶಿರಡಿ ಸಾಯಿಬಾಬಾ ಟೆಂಪಲ್ ಟ್ರಸ್ಟ್" ಉಳಿತಾಯ ಖಾತೆ ಸಂಖ್ಯೆ: 5907, ಕಾರ್ಪೋರೇಶನ್ ಬ್ಯಾಂಕ್, ಯಶವಂತಪುರ ಶಾಖೆ, ಶಾಖೆ ಸಂಖ್ಯೆ:0431, ಮಾಲೂರು, ಇವರಿಗೆ ಸಂದಾಯವಾಗುವಂತೆ ಹಣವನ್ನು ಸಂದಾಯ ಮಾಡಬಹುದಾಗಿದೆ. 

ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ: 

ಸ್ಥಳ: 

ತಾಲ್ಲೂಕು ಕಚೇರಿ ಪಕ್ಕದಲ್ಲಿ, ಆದರ್ಶ ನಗರ, ಅರಳೇರಿ ಮುಖ್ಯರಸ್ತೆ, ಮಾಲೂರು. 

ವಿಳಾಸ: 

ಶ್ರೀ.ಶಿರಡಿ ಸಾಯಿಬಾಬಾ ಮಂದಿರ, 
ಶ್ರೀ ಶಿರಡಿ ಸಾಯಿಬಾಬಾ ಟೆಂಪಲ್ ಟ್ರಸ್ಟ್ (ನೋಂದಣಿ), 
ಅರಳೇರಿ ಮುಖ್ಯರಸ್ತೆ, ಅದರ್ಶನಗರ, 
ಮಾಲೂರು-563 130, 
ಕೋಲಾರ ಜಿಲ್ಲೆ, ಕರ್ನಾಟಕ.

ಸಂಪರ್ಕಿಸಬೇಕಾದ ವ್ಯಕ್ತಿಗಳು: 

ಶ್ರೀ.ಶ್ರೀನಿವಾಸ ಮುರ್ತಿ - ಅಧ್ಯಕ್ಷರು / ಶ್ರೀ.ಸುಬ್ರಮಣ್ಯ ರೆಡ್ಡಿ - ಖಚಾಂಚಿ / ಶ್ರೀ.ಅಮರ್ ಸಿಂಗ್ - ಕಾರ್ಯದರ್ಶಿ 

ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು: 

+ 91 94481 51475  - ಶ್ರೀನಿವಾಸ ಮುರ್ತಿ / +91 94480 19116 - ಅಮರ್ ಸಿಂಗ್ / +91 98458 74776 – ಸುಬ್ರಮಣ್ಯ ರೆಡ್ಡಿ.

ಮಾರ್ಗಸೂಚಿ: 

ನೀವು ಬಸ್ ನಲ್ಲಿ ಬಂದರೆ, ಮಾಲೂರು ಬಸ್ ನಿಲ್ದಾಣದಲ್ಲಿ ಇಳಿಯುವುದು. ದೇವಾಲಯವು ಬಸ್ ನಿಲ್ದಾಣದಿಂದ ಕೇವಲ 500 ಮೀಟರ್ ಗಳ ಅಂತರದಲ್ಲಿದೆ. ರೈಲಿನಲ್ಲಿ ಬರುವುದಾದರೆ, ಮಾಲೂರು ರೈಲು ನಿಲ್ದಾಣದಲ್ಲಿ ಇಳಿಯುವುದು. ದೇವಾಲಯವು ಮಾಲೂರು ರೈಲು ನಿಲ್ದಾಣದಿಂದ ಸುಮಾರು 1 ಕಿಲೋಮೀಟರ್ ಗಳ ಅಂತರದಲ್ಲಿರುತ್ತದೆ. ರೈಲು ನಿಲ್ದಾಣದಿಂದ ಹೇರಳವಾಗಿ ಆಟೋಗಳು ಸಿಗುತ್ತವೆ. ದೇವಾಲಯವು ಕೋಲಾರ ಜಿಲ್ಲೆಯಲ್ಲಿರುವ ಮಾಲೂರು ಪಟ್ಟಣದ ಅರಳೇರಿ ಮುಖ್ಯರಸ್ತೆಯಲ್ಲಿರುವ ಆದರ್ಶನಗರದಲ್ಲಿರುತ್ತದೆ ಮತ್ತು ತಾಲ್ಲೂಕು ಕಚೇರಿಯ ಪಕ್ಕದಲ್ಲಿರುತ್ತದೆ. 

ಕನ್ನಡ ಅನುವಾದ: ಶ್ರೀಕಂಠ ಶರ್ಮ

 

No comments:

Post a Comment