Friday, June 7, 2013

ಭರವಸೆಯ ಸಾಯಿ ಭಜನ ಗಾಯಕ ಶ್ರೀ.ದಾಸ್ ಆರುಣಿ - ಕೃಪೆ: ಸಾಯಿಅಮೃತಧಾರಾ.ಕಾಂ

 

ಶ್ರೀ.ದಾಸ್ ಆರುಣಿಯವರು ಶಿರಡಿ ಸಾಯಿಬಾಬಾರವರ ಅನನ್ಯ ಭಕ್ತರು ಹಾಗೂ ನವದೆಹಲಿಯ ಗಂಧರ್ವ ಮಹಾವಿದ್ಯಾಲಯದಿಂದ ತರಬೇತಿಯನ್ನು ಪಡೆದ ಸಾಯಿ ಭಜನ  ಗಾಯಕರು.

ಇವರು 4ನೇ ಮಾರ್ಚ್ 1982 ರಂದು ಶ್ರೀಮತಿ.ಮಾಧುರಿ ಹಾಗೂ ಶ್ರೀ.ಅನಿಲ್ ಕುಮಾರ್ ಸಿನ್ಹಾ ರವರ  ಪುತ್ರನಾಗಿ ಬಿಹಾರ ರಾಜ್ಯದ ಗಯಾ ಪಟ್ಟಣದಲ್ಲಿ ಸಂಗೀತಗಾರರ ವಂಶದಲ್ಲಿ ಜನಿಸಿರುತ್ತಾರೆ. ಇವರು ಭಾರತೀಯ ಶಾಸ್ತ್ರೀಯ ಸಂಗೀತದಲ್ಲಿ ಎರಡು ವರ್ಷಗಳ ಡಿಪ್ಲೊಮಾವನ್ನು ನವದೆಹಲಿಯ ಗಂಧರ್ವ ಮಹಾವಿದ್ಯಾಲಯದಿಂದ ಗಳಿಸಿರುತ್ತಾರೆ.

ಶ್ರೀ ದಾಸ್ ಆರುಣಿಯವರನ್ನು ಇವರ ತಂದೆ ತಾಯಿಗಳು ಸಂಪೂರ್ಣ ಸಂಗೀತಮಯ ವಾತಾವರಣದಲ್ಲಿ ಬೆಳಿಸಿದರು. ಆದ ಕಾರಣ, ತಮ್ಮ ಶಾಲಾ ದಿನಗಳಿಂದಲೇ ಇವರು ಸಂಗೀತಕ್ಕೆ ಆಕರ್ಷಿತರಾಗಿದ್ದಷ್ಟೇ ಅಲ್ಲದೆ, ತಮ್ಮ ಮನೆಯವರ ಹಾಗೂ ಸ್ನೇಹಿತರ ಮುಂದೆ ತಮ್ಮ ಮಧುರ ಧ್ವನಿಯಲ್ಲಿ ಹಾಡಿ ಅವರುಗಳ ಮೆಚ್ಚಿಗೆಯನ್ನು ಪಡೆದಿದ್ದರು.

ಇವರು ಶಿರಡಿ ಸಾಯಿಬಾಬಾರವರ ಆಶೀರ್ವಾದದಿಂದ ಸಂಗೀತವನ್ನು ತಮ್ಮ ವೃತ್ತಿಯನ್ನಾಗಿ ಸ್ವೀಕರಿಸಿ 2003ನೇ ಇಸವಿಯಿಂದ ಸಾಯಿ ಭಜನೆಯ ಕಾರ್ಯಕ್ರಮಗಳನ್ನು ನೀಡಲು ಪ್ರಾರಂಭಿಸಿದರು. ಇವರು ತಮ್ಮ ಮೊದಲನೇ ಸಾಯಿ ಭಜನೆಯ ಕಾರ್ಯಕ್ರಮವನ್ನು ನವದೆಹಲಿಯ ಕಮಾನಿ ಆಡಿಟೋರಿಯಂನಲ್ಲಿ ನೀಡಿದರು.

ಸಾಯಿಭಜನ ಗಾಯಕರಾಗಿ ಇವರು ಭಾರತದ ಅನೇಕ ಕಡೆಗಳಲ್ಲಿ 500 ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನೀಡಿರುತ್ತಾರೆ. 2012ನೇ ಇಸವಿಯಲ್ಲಿ ಲಕ್ನೌನಲ್ಲಿ ಹಾಗೂ 2013ನೇ ಇಸವಿಯಲ್ಲಿ ಗಜಿಯಾಬಾದ್ ಮತ್ತು ಲೂಧಿಯಾನಾದಲ್ಲಿ ನೀಡಿದ ಕಾರ್ಯಕ್ರಮಗಳು ಅವುಗಳಲ್ಲಿ ಪ್ರಮುಖವಾದ ಕಾರ್ಯಕ್ರಮಗಳಾಗಿರುತ್ತವೆ.  

ಇವರು ಸುಪ್ರಸಿದ್ಧ ಸಾಯಿಬಾಬಾ ಚಿತ್ರಕಾರರಾದ ಶ್ರೀ.ನವನೀತ್ ಅಗ್ನಿಹೋತ್ರಿ ಹಾಗೂ ಶ್ರೀ.ಅಮಾನ್ ಮೈಂಗಿಯವರ ಮಾರ್ಗದರ್ಶನದಲ್ಲಿ ಸಾಯಿ ಗ್ಲೋರಿ ಪ್ರೊಡಕ್ಷನ್ಸ್ ಲಾಂಛನದಡಿಯಲ್ಲಿ SORRY SAI ಎಂಬ ಧ್ವನಿಸುರಳಿಯಲ್ಲಿ ಪ್ರಪ್ರಥಮ ಬಾರಿಗೆ ಹಾಡಿದ್ದಾರೆ.

ಇವರು ಶ್ರೀಮತಿ.ವಿಷ್ಣುಪ್ರಿಯ ಅವರನ್ನು ವಿವಾಹವಾಗಿದ್ದು ಇವರಿಗೆ ಆರ್ಣವ್ ಎಂಬ ಮಗನಿದ್ದಾನೆ. ಪ್ರಸ್ತುತ ಇವರು ತಮ್ಮ  ತಂದೆ,ತಾಯಿ,ಮಗ ಹಾಗೂ ಧರ್ಮಪತ್ನಿಯೊಂದಿಗೆ ನವದೆಹಲಿಯಲ್ಲಿರುವ ತಮ್ಮ ಸ್ವಗೃಹದಲ್ಲಿ ಸುಖೀ ಜೀವನವನ್ನು ನಡೆಸುತ್ತಿದ್ದಾರೆ.

ಶ್ರೀ.ದಾಸ್ ಆರುಣಿಯವರ ಸಂಪರ್ಕದ ವಿವರಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ನೀಡಲಾಗಿದೆ:


ವಿಳಾಸ:

ಶ್ರೀ.ದಾಸ್ ಆರುಣಿ
ಆರ್.ಜೆಡ್.32, ಬಿ-ರಸ್ತೆ ನಂ.7,
ರಘು ನಗರ,
ನವದೆಹಲಿ - 110 045,ಭಾರತ.

ದೂರವಾಣಿ ಸಂಖ್ಯೆ:

+91 99900 90271/+91 99993 82004

ಇ-ಮೈಲ್ ವಿಳಾಸ:

Das.aaruni@gmail.com

ಫೇಸ್ ಬುಕ್ ವಿಳಾಸ :

das.aaruni@facebook.com

ಅಂತರ್ಜಾಲ ತಾಣ:

www.saisursangam.com/sangam/dasaaruni


ಧ್ವನಿಸುರಳಿಗಳು:

SORRY SAI

ಸಾಯಿ ಭಜನೆಯ ವೀಡಿಯೋ:



ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment