Friday, June 21, 2013

  ಬೆಂಗಳೂರಿನ ಶಿರಡಿ ಸಾಯಿಬಾಬಾ ಮಂದಿರ - ಶ್ರೀ ಸಾಯಿ ಚೈತನ್ಯ ಮಂಡಳಿ (ನೋಂದಣಿ) ಮಂದಿರ ಟ್ರಸ್ಟ್, ಶ್ರೀ ಸತ್ಯನಾರಾಯಣ ದೇವಾಲಯದ ಎದುರುಗಡೆ, ಹುಳಿಮಾವು ಕೆರೆಯ ಪಕ್ಕ, ಹುಳಿಮಾವು, ಬನ್ನೇರುಘಟ್ಟ ರಸ್ತೆ, ಬೆಂಗಳೂರು -560 0 76, ಕರ್ನಾಟಕ, ಭಾರತ -  ಕೃಪೆ: ಸಾಯಿಅಮೃತಧಾರಾ.ಕಾಂ

ದೇವಾಲಯದ ವಿಶೇಷತೆಗಳು:

ಈ ದೇವಾಲಯವು ಕರ್ನಾಟಕ ರಾಜ್ಯದ ಬೆಂಗಳೂರು ನಗರದ ಹುಳಿಮಾವು ಬಡಾವಣೆಯ ಶ್ರೀ ಸತ್ಯನಾರಾಯಣ ದೇವಾಲಯದ ಎದುರುಗಡೆ ಹಾಗೂ ಹುಳಿಮಾವು ಕೆರೆಯ ಪಕ್ಕದಲ್ಲಿ ಇರುತ್ತದೆ. ದೇವಾಲಯವನ್ನು 2400 ಚದರ ಅಡಿ ವಿಸ್ತಾರವಾದ ಟ್ರಸ್ಟ್ ನ ಸ್ವಂತ ಸ್ಥಳದಲ್ಲಿ ನಿರ್ಮಿಸಲಾಗಿದೆ. 

ದೇವಾಲಯದ ಭೂಮಿಪೂಜೆಯನ್ನು 15ನೇ ನವೆಂಬರ್ 2012 ರಂದು ನೆರವೇರಿಸಲಾಯಿತು.

ದೇವಾಲಯದ ಉದ್ಘಾಟನೆಯನ್ನು 23ನೇ ಮೇ 2013 ರಂದು  ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ದೊಡ್ಡೇರಿ ಗ್ರಾಮದ ಶ್ರೀ ಸತ್ ಉಪಾಸಿ, ತುಮಕೂರಿನ ದತ್ತ ಅವಧೂತ ಆಶ್ರಮದ ಶ್ರೀ ಗುರು ಕನ್ನೇಶ್ವರ ದತ್ತ, ಶ್ರೀ ತನ್ಮಯಾನಂದ ರವರುಗಳು ಸಾವಿರಾರು ಸ್ಥಳೀಯ ಸಾಯಿ ಭಕ್ತರ ಸಮ್ಮುಖದಲ್ಲಿ ನೆರವೇರಿಸಿರುತ್ತಾರೆ.

ದೇವಾಲಯದ ಟ್ರಸ್ಟ್ ನ ಆಡಳಿತ ಮಂಡಳಿಯ ಸದಸ್ಯರುಗಳು ದೇವಾಲಯದ ದಿನನಿತ್ಯದ ಆಗುಹೋಗುಗಳನ್ನು ಮತ್ತು ಅಭಿವೃದ್ಧಿ ಕಾರ್ಯಗಳನ್ನು ಬಹಳ  ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ.

ದೇವಾಲಯದ ಮೊದಲನೇ ಅಂತಸ್ತಿನಲ್ಲಿ ನಿರ್ಮಿಸಲಾಗಿರುವ  ಗರ್ಭಗುಡಿಯಲ್ಲಿ  5.4  ಅಡಿ ಎತ್ತರದ ಸುಂದರ ಅಮೃತಶಿಲೆಯ ಸಾಯಿಬಾಬಾರವರ ವಿಗ್ರಹವನ್ನು ಸ್ಥಾಪಿಸಲಾಗಿದೆ. ಅಲ್ಲದೆ, ಬೆಳ್ಳಿಯ ಸಾಯಿಬಾಬಾರವರ ವಿಗ್ರಹ ಮತ್ತು ಅಮೃತಶಿಲೆಯ ಪಾದುಕೆಗಳನ್ನು ಕೂಡ ದೇವಾಲಯದಲ್ಲಿ ಸ್ಥಾಪಿಸಲಾಗಿದೆ.ಗರ್ಭಗುಡಿಯ ಹಿಂಭಾಗವನ್ನು ಶಿರಡಿಯ ಸಮಾಧಿ ಮಂದಿರದಲ್ಲಿ ಇರುವಂತೆ ಮರಳು ಕಲ್ಲಿನಿಂದ ನಿರ್ಮಿಸಲಾಗಿದೆ.

ದೇವಾಲಯದಲ್ಲಿ  ಮರದ ಪಲ್ಲಕ್ಕಿ ಇದ್ದು ಇದನ್ನು ಗುರುವಾರದಂದು ಹಾಗೂ ವಿಶೇಷ ಉತ್ಸವದ ದಿನಗಳಂದು ಪಲ್ಲಕಿ ಪಲ್ಲಕ್ಕಿ ಉತ್ಸವದ ಸಮಯದಲ್ಲಿ ಬಳಸಲಾಗುತ್ತದೆ.

ದೇವಾಲಯದ ಕೆಳಮಹಡಿಯಲ್ಲಿ ಧ್ಯಾನ ಮಂದಿರವನ್ನು ನಿರ್ಮಿಸಲಾಗಿದ್ದು ಇಲ್ಲಿ 2.5 ಅಡಿ ಎತ್ತರದ ದ್ವಾರಕಾಮಾಯಿ ಸಾಯಿಬಾಬಾರವರ ಸುಂದರ ಅಮೃತಶಿಲೆಯ ವಿಗ್ರಹವನ್ನು ಸ್ಥಾಪಿಸಲಾಗಿದೆ.

 


 
 

 








ದೇವಾಲಯದ ಕಾರ್ಯಚಟುವಟಿಕೆಗಳು:

ದಿನನಿತ್ಯದ ಕಾರ್ಯಕ್ರಮಗಳು:


ದೇವಾಲಯದ ಸಮಯ:

ಬೆಳಿಗ್ಗೆ : 6:30 ರಿಂದ 12:30.
ಸಂಜೆ : 6:00  ರಿಂದ 9:00.

ಆರತಿಯ ಸಮಯ:

ಕಾಕಡಾ ಆರತಿ : 06:30 ಗಂಟೆ
ಮಧ್ಯಾನ್ಹ ಆರತಿ:12:00 ಗಂಟೆ
ಧೂಪಾರತಿ     : 06:00 ಗಂಟೆ
ಶೇಜಾರತಿ      : 08:00 ಗಂಟೆ


ಪ್ರತಿದಿನ ಬೆಳಿಗ್ಗೆ 7:00 ರಿಂದ 8:00 ರವರೆಗೆ ಸಾಯಿಬಾಬಾರವರ ಅಮೃತಶಿಲೆಯ ವಿಗ್ರಹಕ್ಕೆ  ಕ್ಷೀರಾಭಿಷೇಕವನ್ನು ಮಾಡಲಾಗುತ್ತದೆ. ಸೇವಾ ಶುಲ್ಕ 108/- ರೂಪಾಯಿಗಳು.

ಪ್ರತಿ ಗುರುವಾರ ಸಾಯಿಬಾಬಾರವರ ಬೆಳ್ಳಿಯ ವಿಗ್ರಹಕ್ಕೆ ಪಂಚಾಮೃತ ಅಭಿಷೇಕವನ್ನು ಬೆಳಿಗ್ಗೆ 8:00 ರಿಂದ 9:00 ರವರೆಗೆ ಮಾಡಲಾಗುತ್ತದೆ. ಸೇವಾಶುಲ್ಕ 250/- ರೂಪಾಯಿಗಳು.

ಪ್ರತಿದಿನ ಸಾಯಿಬಾಬಾರವರಿಗೆ ಅರ್ಚನೆಯನ್ನು ಮಾಡಲಾಗುತ್ತದೆ. ಸೇವಾಶುಲ್ಕ 15/- ರೂಪಾಯಿಗಳು.

ದೇವಾಲಯದಲ್ಲಿ ನಿತ್ಯಾನ್ನದಾನ  ಸೇವೆಯನ್ನು ಮಾಡಲು ಅವಕಾಶವಿರುತ್ತದೆ. ಸೇವಾಶುಲ್ಕ 1116/- ರೂಪಾಯಿಗಳು.

ಪ್ರತಿ ಗುರುವಾರ ಸಾಯಿಬಾಬಾರವರಿಗೆ ಪಲ್ಲಕ್ಕಿ ಮತ್ತು ಅನ್ನದಾನ ಸೇವೆಯನ್ನು ಮಾಡಲು ಅವಕಾಶವಿರುತ್ತದೆ. ಸೇವಾಶುಲ್ಕ 2500/- ರೂಪಾಯಿಗಳು.

ಪ್ರತಿ ಗುರುವಾರ ಸಾಯಿಬಾಬಾರವರಿಗೆ ಪಲ್ಲಕ್ಕಿ ಉತ್ಸವ ಸೇವೆಯನ್ನು ಸಂಜೆ 7:30 ರಿಂದ 8:30 ರವರೆಗೆ ಮಾಡಲಾಗುತ್ತದೆ. ಸೇವಾಶುಲ್ಕ  1008/- ರೂಪಾಯಿಗಳು.  

ದೇವಾಲಯದಲ್ಲಿ ಶಾಶ್ವತ ಸೇವೆಯನ್ನು ಮಾಡಲು ಅವಕಾಶವಿರುತ್ತದೆ. ಸೇವಾ ಶುಲ್ಕ 5004/- ರೂಪಾಯಿಗಳು.

ವಿಶೇಷ ಉತ್ಸವದ ದಿನಗಳು:

ಪ್ರತಿವರ್ಷದ 23 ನೇ ಮೇ ದೇವಾಲಯದ ವಾರ್ಷಿಕೋತ್ಸವ.
ಶ್ರೀರಾಮನವಮಿ.
ಗುರುಪೂರ್ಣಿಮೆ.
ವಿಜಯದಶಮಿ.

ಸಾಮಾಜಿಕ ಕಾರ್ಯಚಟುವಟಿಕೆಗಳು:

ಪ್ರತಿದಿನ  ಬೆಳಿಗ್ಗೆ ಹಾಗೂ ರಾತ್ರಿ ಮಂದಿರಕ್ಕೆ ಬರುವ ಎಲ್ಲಾ ಸಾಯಿ ಭಕ್ತರಿಗೆ ಮಹಾ ಪ್ರಸಾದ ವಿನಿಯೋಗ ಸೇವೆಯನ್ನು ಮಾಡಲಾಗುತ್ತದೆ.

ದೇಣಿಗೆಗೆ ಮನವಿ:

ದೇವಾಲಯದ ದಿನಿನಿತ್ಯ ಎರಡು ಬಾರಿ ಮಾಡಲಾಗುತ್ತಿರುವ ಅನ್ನದಾನ ಸೇವೆಗಾಗಿ, ದಿನನಿತ್ಯದ ಆಗುಹೋಗುಗಳಿಗಾಗಿ, ಸಾಮಾಜಿಕ ಕಾರ್ಯಚಟುವಟಿಕೆಗಳಿಗಾಗಿ ಹಾಗೂ ಅಭಿವೃದ್ಧಿ ಕಾರ್ಯಗಳಿಗಾಗಿ   ದೇಣಿಗೆಯನ್ನು ಸ್ವೀಕರಿಸಲಾಗುತ್ತದೆ. ದೇಣಿಗೆಯನ್ನು ನೀಡಲು ಬಯಸುವ ಸಾಯಿಭಕ್ತರು "ಶ್ರೀ ಸಾಯಿ ಚೈತನ್ಯ ಮಂಡಳಿ (ನೋಂದಣಿ) ಮಂದಿರ ಟ್ರಸ್ಟ್", ಇಂಡಿಯನ್ ಓವರ್ಸೀಸ್ ಬ್ಯಾಂಕ್, ಬನಶಂಕರಿ, 2ನೇ ಹಂತ, ಬೆಂಗಳೂರು, ಖಾತೆ ಸಂಖ್ಯೆ: 129801000011511 ಇವರಿಗೆ ಸಂದಾಯವಾಗುವಂತೆ ಹಣವನ್ನು ನಗದು, ಚೆಕ್ ಅಥವಾ ಡಿಮ್ಯಾಂಡ್ ಡ್ರಾಫ್ಟ್ ಮುಖಾಂತರವಾಗಿ ಕಳುಹಿಸಬಹುದಾಗಿದೆ.

ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ:


ಸ್ಥಳ:
ಶ್ರೀ ಸತ್ಯನಾರಾಯಣ ದೇವಾಲಯದ ಎದುರುಗಡೆ ಹಾಗೂ ಹುಳಿಮಾವು ಕೆರೆಯ ಪಕ್ಕ.


ವಿಳಾಸ:
ಶ್ರೀ ಸಾಯಿ ಚೈತನ್ಯ ಮಂಡಳಿ (ನೋಂದಣಿ) ಮಂದಿರ ಟ್ರಸ್ಟ್, 
ಶ್ರೀ ಸತ್ಯನಾರಾಯಣ ದೇವಾಲಯದ ಎದುರುಗಡೆ,
ಹುಳಿಮಾವು ಕೆರೆಯ ಪಕ್ಕ, ಹುಳಿಮಾವು, ಬನ್ನೇರುಘಟ್ಟ ರಸ್ತೆ, 
ಬೆಂಗಳೂರು -560 0 76, ಕರ್ನಾಟಕ, ಭಾರತ.

ಸಂಪರ್ಕಿಸಬೇಕಾದ ವ್ಯಕ್ತಿಗಳು:
ಶ್ರೀ.ಕೋಮಲ್ ರೂಪ್ / ಶ್ರೀಮತಿ.ಪದ್ಮಾವತಿ/ಶ್ರೀಮತಿ.ಜಯಶ್ರೀ/ಶ್ರೀ.ಭಾಸ್ಕರ್

ದೂರವಾಣಿ ಸಂಖ್ಯೆಗಳು:
+91 99010 01010/+91 97421 01010/+91 98861 24547/+91 98441 33777

ಇ-ಮೈಲ್ ವಿಳಾಸ:
natarajnagaraj.nn@gmail.com

ಮಾರ್ಗಸೂಚಿ:
ಈ ದೇವಾಲಯವು ಬೆಂಗಳೂರು ನಗರದ ಹುಳಿಮಾವು ಬಡಾವಣೆಯ ಶ್ರೀ ಸತ್ಯನಾರಾಯಣ ದೇವಾಲಯದ ಎದುರುಗಡೆ ಹಾಗೂ ಹುಳಿಮಾವು ಕೆರೆಯ ಪಕ್ಕದಲ್ಲಿ ಇರುತ್ತದೆ.ಹುಳಿಮಾವು ಬಸ್ ನಿಲ್ದಾಣದಿಂದ ಕೇವಲ 200 ಮೀಟರ್ ಗಳ ಅಂತರದಲ್ಲಿರುತ್ತದೆ. ಮೆಜಿಸ್ಟಿಕ್ ಮತ್ತು ಮಾರುಕಟ್ಟೆಯಿಂದ ಹೇರಳವಾಗಿ ಬಸ್ ಗಳು ದೊರೆಯುತ್ತವೆ.

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment